ಸಂಗ್ರಹಿತ
TAPTA MUDREYA MELE KANUNU MUDRE (ತಪ್ತ ಮುದ್ರೆಯ ಮೇಲೆ ಕಾನೂನು ಮುದ್ರೆ)
ಇಂದು "ಮೂಢ ನಂಬಿಕೆ ನಿಷೇಧ ಕಾನೂನು" ಎಂದೇ ಪ್ರಚಾರ ಪಡೆದಿರುವ "ಕರ್ನಾಟಕ ಅಮಾನವೀಯ ದುಷ್ಟ ಪದ್ದತಿಗಳು ಹಾಗೂ ವಾಮಾಚಾರ, ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ, ೨೦೧೭" ವಿಧಾನಸಭೆಯಲ್ಲಿ ಅನುಮೋದನೆ ಪಡೆಯಲು ಚರ್ಚೆಗೆ ಬಂದಿತ್ತು.
ಆ ವಿಧೇಯಕದಲ್ಲಿ "ಅಮಾನವೀಯ, ದುಷ್ಟ ಪದ್ದತಿಗಳು ಮತ್ತು ವಾಮಾಚಾರಗಳು" ಯಾವುವು ಎಂಬುದರ ಪಟ್ಟಿಯಲ್ಲಿ ಇರುವ "ದೇಹಕ್ಕೆ ಬಿಸಿ ಮಾಡಿದ ವಸ್ತುವನ್ನು ಮುಟ್ಟಿಸುವುದರ ಮೂಲಕ ಆತನಿಗೆ ನೋವುಂಟು ಮಾಡುವುದು" ಎಂಬ ಪ್ರಸ್ತಾವನೆ ಕೆಲವರಲ್ಲಿ ಗೊಂದಲವುಂಟು ಮಾಡಿತ್ತು. ಮಧ್ವ ಸಂಪ್ರದಾಯದಲ್ಲಿ "ತಪ್ತ ಮುದ್ರಾಧಾರಣ" ಎಂದಿರುವ ಪದ್ಧತಿಯಲ್ಲಿ ಪ್ರತಿ ವರ್ಷವೂ ಬಿಸಿ ಮಾಡಿದ 'ಚಕ್ರ ಶಂಖ"ಗಳ ಲಾಂಛನವನ್ನು ಗುರುಗಳ ಹಸ್ತದಿಂದ ಶರೀರದ ಭಾಗಗಳ ಮೇಲೆ ಮುದ್ರಾಧಾರಣೆಯ ಮೂಲಕ ಹಾಕಿಸಿಕೊಳ್ಳುವುದು ಪರಂಪರೆಗಳಿಂದ ಬಂದಿರುವ ಪದ್ಧತಿ. ಈ ಕಾಯ್ದೆಯಿಂದ ಶತಶತಮಾನಗಳಿಂದ ಶ್ರದ್ಧೆ-ನಂಬಿಕೆಯ ಆಧಾರದಲ್ಲಿ ನಡೆದು ಬಂದಿರುವ ತಮ್ಮ ಈ ಪದ್ಧತಿಯನ್ನೂ ಎಲ್ಲಿ ನಿಷೇಧಿಸಲಾಗುವುದೋ ಎಂಬ ಆತಂಕವನ್ನು ನನ್ನಲ್ಲಿ ಅನೇಕರು ವ್ಯಕ್ತಪಡಿಸಿದ್ದರು. ಆದ್ದರಿಂದ ಇಂದು ಈ ವಿಧೇಯಕದ ಚರ್ಚೆಯ ಸಮಯದಲ್ಲಿ ತಿದ್ದುಪಡಿಯೊಂದನ್ನು ಮಂಡಿಸಿ "ಧರ್ಮಾಚರಣೆಗಳಿಗೆ ಅನುಸಾರವಾಗಿ ಮಕ್ಕಳ ಕಿವಿಗಳು ಮತ್ತು ಮೂಗು ಚುಚ್ಚುವುದು ಹಾಗೂ ಜೈನ ಸಂಪ್ರದಾಯದ ಕೇಶಲೋಚನದಂತಹ ಧಾರ್ಮಿಕ ಆಚರಣೆ" ಗೆ ಈ ಅಧಿನಿಯಮದಲ್ಲಿರುವುದಾವುದೂ ಅನ್ವಯವಾಗತಕ್ಕದ್ದಲ್ಲ ಎಂದು ಕಾಯ್ದೆಯಲ್ಲಿರುವುದರ ಜೊತೆಗೆ "ಮಧ್ವ ಸಂಪ್ರದಾಯದ ಮುದ್ರಾಧಾರಣೆ" ಯನ್ನೂ ಸೇರಿಸುವಂತೆ ಸರಕಾರವನ್ನು ಒಪ್ಪಿಸುವಲ್ಲಿ ಯಶಸ್ವಿಯಾದೆ. ಸರಕಾರವೂ "ಧಾರ್ಮಿಕ ಆಚರಣೆಯಲ್ಲಿ ನಡೆಯುತ್ತಾ ಬಂದಿರುವ ಆಚರಣೆಗಳಿಗೆ ಈ ಕಾಯ್ದೆಯ ಅಧಿನಿಯಮಗಳು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಗೊಳಿಸಿರುವುದನ್ನು ಇಲ್ಲಿ ತಿಳಿಸಲು ಇಚ್ಛಿಸುತ್ತೇನೆ. ಎಂದು ಶ್ರೀ ಎಸ್ ಸುರೇಶ್ ಕುಮಾರ್ ಅವರು ವಿಧಾನ ಸಭೆಯಲ್ಲಿ ಮಂಡಿಸಿದ ವಿಧೇಯಕ ಮುದ್ರಾಧಾರಣೆಯನ್ನು ಮುಂದುವರಿಸುವದಕ್ಕೆ ಸರಕಾರದ ಮುದ್ರೆ ಬಿದ್ದಿದೆ. |
▼
No comments:
Post a Comment