Monday, February 04, 2019

MAIN DOOR & Rangavalli, Shankhanaada, Sandhyaadeepa (ತಲೆಬಾಗಿಲು ,ರಂಗವಲ್ಲಿ, ಶಂಖನಾದ,ಸಂಧ್ಯಾ ದೀಪ )

                                                                                                                                                                    ಸಂಗ್ರಹಿತ 
MAIN DOOR & Rangavalli, Shankhanaada, Sandhyaadeepa (ತಲೆಬಾಗಿಲು ,ರಂಗವಲ್ಲಿ, ಶಂಖನಾದ ,ಸಂಧ್ಯಾ ದೀಪ )
ಹೊಸ್ತಿಲ ರಂಗೋಲಿ.‌.

ಮನುಷ್ಯನ ದೇಹಕ್ಕೆ ತಲೆ ಹೇಗೆ ಶ್ರೇಷ್ಠ ನೋ ಹಾಗೆ ಮನೆಗೆ ಮುಂಬಾಗಿಲು ಶ್ರೇಷ್ಠ .ಅದನ್ನು ನಾವು ತಲೆಬಾಗಿಲು ಅಂತಾನೇ ಕರಿತೇವೆ. ಮನೆ ಕಟ್ಟುವಾಗ ನಾವು ಎರಡು ಸಲ ಮೂಹುರ್ತ ನೋಡತೇವೆ . ಒಂದು ಭೂಮಿ ಪೂಜೆ , ಇನ್ನೊಂದು ಚೌಕಟ್ಟು ಪೂಜೆಗೆ  ಅಷ್ಟು ಮಹತ್ವ ಇದೆ ಆ ತಲೆ ಬಾಗಿಲಿಗೆ  ಯಾವಾಗಬೇಕೊ ಆವಾಗ  ಕೂಡಿಸಬಾರದು  ಚೌಕಟ್ಟು ಕೂಡಿಸುವಾಗ ಸ್ಥಿರ ಲಗ್ನ ವಿರಬೇಕು , ಶುಭ ತಿಥಿ ,ವಾರ ಮತ್ತು ನಕ್ಷತ್ರ ಗಳಿದ್ದಾಗ  ಮಾತ್ರ    ಮುತ್ತು.,ರತ್ನ ,ಹವಳ ಬಂಗಾರ ಮತ್ತು ಬೆಳ್ಳಿ  , ಹಾಲು ತುಪ್ಪವನ್ನು ಹಾಕಿ  ಬ್ರಾಹ್ಮಣರು ಮಂತ್ರಗಳೊಂದಿಗೆ  ವಾಸ್ತು ಪುರುಷನ  ಆಹ್ವಾನ ಮಾಡಿಕೊಳ್ಳತಾರೆ . ಅದಕ್ಕೆ ಅಷ್ಟು ಮಹತ್ವವಿದೆ ಆ ಮುಂಬಾಗಿಲು ಚೌಕಟ್ಟು ಹೊಸ್ತಿಲಕ್ಕೆ..‌ಅದಕ್ಕೆ ದಿನಾಲೂ ತೊಳೆದು ರಂಗವಲ್ಲಿ ಹಾಕಿದಾಗ  ಲಕ್ಷೀ ಪ್ರಸನ್ನತೆ ದೊರೆಯುತ್ತದೆ. ಯಾವ ದುಷ್ಟ ಶಕ್ತಿ ಕೂಡಾ ರಂಗವಲ್ಲಿ ದಾಟಿ ಒಳಗಡೆ ಬರೊದಿಲ್ಲ.  ನಿಮಗೆ ಗೊತ್ತಿರಬಹುದು  ಮನೆಯಲ್ಲಿ ಶ್ರಾದ್ಧ ದಿನ ನಾವು  ಬಾಗಿಲಿಗೆ ರಂಗೋಲಿಯನ್ನು  ಹಾಕುವದಿಲ್ಲ ಕಾರಣ  ಪಿತ್ರಗಳನ್ನು ಆಹ್ವಾಹನ ಮಾಡಿರುತ್ತೇವೆ.  ಪಿತ್ರಗಳು ಬರುತ್ತಾರೆ ಅಂತ  ಅದಕ್ಕೆ ಬಾಗಿಲಿಗೆ ರಂಗೋಲಿ ಹಾಕುವದರಿಂದ ಆಪತ್ತುಗಳು ದೂರವಾಗುತ್ತವೆ. ದಯವಿಟ್ಟು ಎಲ್ಲ ಹೆಣ್ಣು ಮಕ್ಕಳು ದಿನಾಲೂ ಹೊಸ್ತಿಲು ತೊಳೆದು ರಂಗೋಲಿ ಬಿಡಿಸಿ ...‌
ಹೊಸ್ತಿಲಿಗೆ ರಂಗೋಲಿ ಹಾಕುವಕ್ರಮ...‌
ಹೊಸ್ತಿಲವನ್ನು  ನಾವು ಎರಡು ಭಾಗವನ್ನಾಗಿ ಮಾಡಿದಾಗ , ಒಂದು ಎಡ ಮತ್ತು ಬಲ ಮದ್ಯೆ ಒಳ ಬರುತ್ತಿರುವ ಹಾಗೆ ಗೌರಿ ಪಾದ  ಎಡಕ್ಕೆ ಹನ್ನೆರಡು ಎಳೆ ಮತ್ತು ಬಲಕ್ಕೆ ಹನ್ನೆರಡು ಎಳೆ ಒಟ್ಟು ಇಪ್ಪತ್ತುನಾಲ್ಕು ಎಳೆಗಳನ್ನು ಬಿಡಿಸಬೇಕು . ಯಾಕೆ ಇಪ್ಪತ್ತನಾಲ್ಕು ಅಂದರೆ ಅವು ಭಗವನ್ನಾಮಗಳು . ನಂತರ  ಎರಡು ಶಂಖ  ,ಎರಡು ಚಕ್ರ  ಶಂಖ ಚಕ್ರ  ವಿಷ್ಣವಿನ ಲಾಂಛನಗಳು  ಎಲ್ಲಿ ಶಂಖ ಚಕ್ರ ವಿರುತ್ತೊ ಅಲ್ಲಿ ವಿಷ್ಣು ಇರತ್ತಾನೆ , ಎಲ್ಲಿ ವಿಷ್ಣು  ಇರುತ್ತಾನೆಯೋ ಅಲ್ಲಿ ಸಾಕ್ಷಾತ್ ಲಕ್ಷೀ ವಾಸವಿರುತ್ತೆ. ನಂತರ , ನಾಲ್ಕು ಸ್ವಸ್ತಿಕ  ಎಡಕ್ಕೆ ಎರಡು ಮತ್ತು ಬಲಕ್ಕೆ  ಎರಡು ಹಾಕಬೇಕು. ಅಥವಾ ಹೊಸ್ತಿಲ ಮಧ್ಯದಲ್ಲಿ ಒಂದೇ ಒಂದು ಸ್ವಸ್ತಿಕವನ್ನೂ ತೆಗೆಯಬಹುದು .  ಸ್ವಸ್ತಿಕ ಯಾಕೆ ಅಂದರೆ ಮನೆ ಸ್ವಸ್ತವಾಗಿರುತ್ತೆ. ಸ್ವಸ್ತಿಕ ವನ್ನು ದಾಟಿ ಹೋದಾಗ  ನಾವು ಎಲ್ಲೇ ಇರಲಿ  ಸ್ವ‌ಸ್ಥವಾಗಿರಲಿ ಅಂತ .  ಹೊಸ್ತಿಲಿನ ರಂಗೋಲಿ ಮುಗಿಸಿ ಬಾಗಿಲಿನ  ಎಡ ಮತ್ತು ಬಲ ಚಿತ್ರದಲ್ಲಿ ನೋಡಿ   ಅಲ್ಲಿ  ಬಲ ಜಯ  ಮತ್ತು ಎಡಗಡೆ ವಿಜಯ  ಹಾಕಬೇಕು ಅಲ್ಲಿ ಕೂಡಾ ಶಂಖ ಚಕ್ರ ಗದೆ ಮತ್ತು ಕಮಲವನ್ನು ಬಿಡಿಸಬೇಕು. ಯಾಕೆ ಅಂದರ ನಾವು ಮನೆಯಲ್ಲಿ ವಿಷ್ಣುವಿನ ಪೂಜೆ ಮಾಡುತ್ತೇವೆ  ಅಂದ ಮೇಲೆ ಜಯ ವಿಜಯರು ಬಾಗಿಲಲ್ಲಿ ಇರಲೇ ಬೇಕು... 

ನಂತರ  ತುಳಸಿ ಮುಂದೆ ತುಳಸಿ ಯಲ್ಲಿ ಸಾಕ್ಷಾತ್ ವಿಷ್ಣುವೇ ವಾಸವಾಗಿರುತ್ತಾನೆ . ಅಂದ ಮೇಲೆ  ತುಳಸಿ ಮುಂದೆ ಪದ್ಮವನ್ನು ಶಂಖ ಚಕ್ರ ಆಕಳ ಪಾದ ಹಾಕಿ . ಒಂದು ಹೊತ್ತಾದರೂ ತುಳಸಿ ಮುಂದೆ ದೀಪ ಹಚ್ಚಿ . ನಿಮಗೆ ಸಮಯವಿಲ್ಲದಿದ್ದರೂ ಕೆಲವು ನಿಯಮಗಳನ್ನಾದರೂ ಪಾಲಿಸಿ  ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತೆ. ಹಣದಿಂದ ನಾವು ಎನೆಲ್ಲ ಕೊಂಡು ಕೊಳ್ಳಬಹುದು ಆದರೆ  ಮನಸ್ಸಿಗೆ ಶಾಂತಿ ನೆಮ್ಮದಿ ಯನ್ನಲ್ಲ  ಅದು ಸಿಗಬೇಕು ಅಂದರೆ ನಮ್ಮ ಪೂರ್ವಜರು ಹೇಳಿಕೊಟ್ಟ ಸಂಪ್ರದಾಯ ಗಳನ್ನು ಆಚರಿಸಿದಾಗ ಮಾತ್ರ ಸಾದ್ಯ 
ಶಂಖನಾದ  ಮತ್ತು ಸಂಧ್ಯಾ ದೀಪಗಳ ಮಹತ್ವ.

ಹಿಂದೆ ಅನೇಕ ಮನೆಗಳಲ್ಲಿ ಈ ಮೂರು ವಿಚಾರವು ಕಡ್ಡಾಯವಾದ ಸಂಪ್ರದಾಯವಾಗಿತ್ತು. ಆದರೆ ಈಗ ಅದು ಕೆಲ ಮನೆಗಳನ್ನು ಬಿಟ್ಟರೆ ಈಗ ಇದು ನಶಿಸಿಹೋಗುತ್ತಿದೆ. ಇದೊಂದು ಜಾತಿಯ, ಧರ್ಮದ, ಸಂಪ್ರದಾಯಸ್ತರ ಮನೆಗಳವರ ಕರ್ಮ, ಎಂದು ಕೆಲವರು ಹೇಳಿಕೊಂಡರೆ ಇನ್ನು ಕೆಲವರು ಇದೊಂದು ಮೂಢನಂಬಿಕೆ ಎಂದೂ ಹೇಳಿದ್ದುಂಟು. ಮತ್ತೆ ಕೆಲವರು ಪುರುಸೊತ್ತಿಲ್ಲ, ವ್ಯವಸ್ತೆಗಳಿಲ್ಲ ಎಂದು ನೆಪ ಹೇಳುವುದೂ ಇದೆ. ಒಟ್ಟಿನಲ್ಲಿ ಯಾವ್ಯಾವುದೋ ಕಾರಣಗಳಿಂದ ಈ ಸಂಪ್ರದಾಯವು ಇಲ್ಲವಾಗುತ್ತಿದೆ. ಅಂದರೆ ಇದರ ಮಹತ್ವವು ಗೊತ್ತಾಗದೆ ಇದ್ದುದೂ ಒಂದು ಕಾರಣವಿರಬಹುದು. 
ರಂಗವಲ್ಲಿ: 
ಇದು ಶುಭ ಸೂಚಕ. ಈ ಕೆಲಸ ಮಾಡುವುದರಿಂದ ಒಂದು ಕ್ಷಣ, ನಿತ್ಯದ ದುಃಖಾದಿಗಳನ್ನು ಮರೆಯುವ ಕ್ಷಣವೂ ಆಗುತ್ತದೆ. ಇದನ್ನು ನೋಡುವವರ ಮನಸ್ಸೂ ಸಂತೋಷಗೊಳ್ಳುತ್ತದೆ. ಇವುಗಳೆಲ್ಲಾ ಮನಸ್ಸಿಗೆ ನೀಡುವ treatment ಆಗುತ್ತದೆ. ಒಂದೆಡೆ ಚಿಕಿತ್ಸೆಯಾದರೆ ಇನ್ನೊಂದೆಡೆ ಪಾರಮಾರ್ಥಿಕ ವಿಚಾರವೂ ಇಲ್ಲಿದೆ. ನಾವು ಬರೆಯುವ ಆ ರಂಗೋಲಿಯ ಚಿತ್ರಕ್ಕೆ ರಷ್ಮಿಗಳಿವೆ. ಇದು ಕಣ್ಣಿಗೆ ಕಾಣದ ದೇವತಾ ಶಕ್ತಿಗಳ (Transparent body ) ಆಕರ್ಷಣೆಗೆ ಒಂದು ಆಕರ್ಷಣಾ ಬಿಂದುವಾಗುತ್ತದೆ. ನೀವು ಪೂಜೆ ಯಜ್ಞಾದಿಗಳಲ್ಲಿ ಬರೆಯುವ ಮಂಡಲಗಳನ್ನು ನೋಡಿರಬಹುದು. ದೇವತಾರಾಧನಂ ಮಂಡಲಂ. ಅಂದರೆ ದೇವತೆಗಳ ಆವಾಸಸ್ಥಾನವೇ ಪಂಚವರ್ಣಗಳ(ನೈಸರ್ಗೀಕ ವರ್ಣಗಳು.ಈಗಿನ chemical ವರ್ಣಗಳಲ್ಲ) ಮಂಡಲ. 
ಶಂಖ ನಾದ: 
ಸೂರ್ಯೋದಯಾತ್ಪೂರ್ವ,ಸೂರ್ಯಾಸ್ತಮದ ನಂತರ ಐದು ಸಲ ಶಂಖ ಊದುವುದರಿಂದ ಬಾಹ್ಯ ದುಷ್ಟ ಶಕ್ತಿಗಳು ದುರ್ಬಲವಾಗುತ್ತದೆ. ಇದರ ನಾದೋತ್ಪತ್ತಿಯು ಓಂಕಾರ ಸ್ವರೂಪದಲ್ಲಿದೆ. ಎಲ್ಲಿ ಓಂಕಾರ ಸ್ವರವೇಳುತ್ತದೋ ಅದು ಸಕಲ ಆರ್ತನಾದಗಳನ್ನೂ ನಾಶಮಾಡುತ್ತದೆ. ಇದೊಂದು ರೀತಿಯ noise pollution control ಆಗುತ್ತದೆ. ಇದರ ಧ್ವನಿಗೆ ಇದರ ಆರ್ತಧ್ವನಿಗಳು ಮಾಯವಾಗುತ್ತದೆ. (vanishing) . ಹಾಗಾಗಿ ಶಂಖದ್ವನಿಯು ಒಂದು ರೀತಿಯ ಶುಭವೂ, ಜೀವನದಲ್ಲಿ ದುಷ್ಟ ಶಕ್ತಿಗಳನ್ನು ಓಡಿಸುವ ರಣೋತ್ಸಾಹವೂ ಆಗುತ್ತದೆ. 
ಸಂಧ್ಯಾ ದೀಪಾರಾಧನೆ: 
ಮುಸ್ಸಂಜೆ ಅಂದರೆ ಸಂಧ್ಯಾಕಾಲದಲ್ಲಿ ತುಳಸಿಗೆ ದೀಪವಿಡುವ ಕ್ರಮ. ಇದರಿಂದ ಕೂಡಾ pollution control ಆಗುತ್ತದೆ. Ozone ಪದರವು ಸರಿಮಾಡುವ ಶಕ್ತಿ ಇದಕ್ಕಿದೆ.ಶರೀರದ ಶ್ವಾಸಕೋಶ, ಹೃದಯದ ಕೋಶವನ್ನು ರಕ್ಷಿಸುತ್ತದೆ. ಪ್ರತೀ ಕ್ಷಣದಲ್ಲೂ ದುಷ್ಟ ಶಕ್ತಿಗಳು ಮನುಷ್ಯನ ಆಯುಷ್ಯ ಹರಣಕ್ಕೆ ಪ್ರಯತ್ನಿಸುತ್ತಾ ಇರುತ್ತದೆ. ಅದಕ್ಕಾಗಿ ಇದರ ಒಳ ಪ್ರವೇಷದ ಪ್ರತಿಬಂಧಕ್ಕಾಗಿ ಈ ದೀಪಾರಾಧನೆಯು ಸಹಕಾರಿ. ಇದರ ಅಭಿಮಾನಿ ದೇವತೆ ಅಶ್ವಿನೀ ದೇವತೆಗಳು. ಇವರು ಪ್ರಕೃತಿಯ ವೈದ್ಯರು. ಇವರ ಅನುಗ್ರಹವಿದ್ದರೆ ಆರೋಗ್ಯ ಪೂರ್ಣ ಜೀವನವು ಲಭಿಸುತ್ತದೆ. ಎಳ್ಳೆಣ್ಣೆ( ತಿಲತೈಲ) ದೀಪವು ಅತ್ಯಂತ ಶ್ರೇಷ್ಟ. ತಿಲವು ಶನಿಯ ಧಾನ್ಯ. ಅದರ ಎಣ್ಣೆಯೂ ಶನಿಗೆ ಪ್ರಿಯ. ಶನಿಯೇ ಆಯುಷ್ಯ ಕಾರಕ. ಇವನ ಅನುಗ್ರಹವಿಲ್ಲದಿದ್ದರೆ ಶನಿಯು ಆಯುಷ್ಯಕ್ಕೆ ಮಾರಕವೂ ಆಗುತ್ತಾನೆ. ಬಾಹ್ಯ ದುಷ್ಟ ಶಕ್ತಿಗಳು ಮಾರಕವಾಗಿದ್ದರೂ, ಈ ದೀಪ ಜ್ವಾಲೆಯ ಸ್ಪರ್ಷದಿಂದ ಕಾರಕವಾಗುತ್ತದೆ. ಅಂದರೆ ಕೆಟ್ಟದ್ದರಿಂದಲೂ ಒಳಿತನ್ನು ಪಡೆಯಬಹುದು ಎಂದರ್ಥ. 
ಈ ಮೂರು ವಿಧಿಗಳು ನಮ್ಮ ಜೀವನಕ್ಕೆ ಬೇಕಾದ ರಕ್ಷಣೆಗಳನ್ನು ನೀಡುತ್ತದೆ. ಇದು ನಮ್ಮ ಜೀವನದ ಒಂದು ಪ್ರಮುಖ ಕ್ರಿಯೆಯಾಗಿದ್ದಾಗ ಇದರಿಂದ ಒಳಿತಾಗುತ್ತದೆ.ಮಾನಸಿಕವಾಗಿ, ದೈಹಿಕವಾಗಿ, ಪಾರಮಾರ್ಥಿಕವಾಗಿ ಒಳಿತಾಗುವ ಈ ನಿತ್ಯಕ್ರಿಯೆ  ಆಗುತ್ತದೆ. 

No comments:

Post a Comment