Sunday, July 07, 2019

Effectiveness by HAVANA (ಹವನಾದಿಗಳ ಫಲ)

ಸಂಗ್ರಹಿತ 
Effectiveness by YADNYA (ಹವನಾದಿಗಳ ಫಲ)

ನಾವು ಮಾಡುವ ಹೋಮ ಹವನಾದಿಗಳು ಏಕೆ ಪೂರ್ಣ ಫಲ ಕೊಡುವುದಿಲ್ಲ ? ನಾವು ಮಾಡುವ ಕರ್ಮಗಳಲ್ಲಿ ಕರ್ಮಾನುಷ್ಠಾನ ಲೋಪಗಳು ಅನೇಕ. ಅನುಸಂಧಾನ ವಿರುವುದಿಲ್ಲ. ಪುರೋಹಿತರಿಗೆ ಹಣ ಕೊಟ್ಟು ಎಲ್ಲವೂ ಸಿದ್ದವಾದ ಹೋಮದ ಮುಂದೆ ಕೂತು ಮೊಬೈಲ್ ಮತ್ತು ಇತರರ ಜೊತೆ ಮಾತಾಡುತ್ತ , ಕರ್ಮಾಧ್ಯಕ್ಷ ನಾದ ಶ್ರೀಹರಿಯನ್ನು ಸ್ಮರಿಸದೆ , ಪುರೋಹಿತರು ಹೇಳುವ ಮಂತ್ರಗಳಲ್ಲಿ ಗಮನವಿಲ್ಲದೆ ಹೋಮ ಮಾಡಿದರೆ, ಯಾವ ಫಲ ಸಿಕ್ಕಿತು ? ನಿಷ್ಪಲ ಎಂದು ಸ್ಮೃತಿಗಳು ಹೇಳುತ್ತವೆ. 
ಹತಂ ಜ್ಞಾನಂ ಕ್ರಿಯಾಹೀನಮ್ ಹತಸ್ಥ್ವಜ್ಞಾನಿನಾಮ್ ಕ್ರಿಯ:|                                      ಕರ್ಮಾನುಷ್ಠಾನ ಇದ್ದು ಜ್ಞಾನವಿದ್ದರೆ ನಿಷ್ಪಲ. ಮತ್ತು ಜ್ಞಾನವಿದ್ದು ಕರ್ಮಾನುಷ್ಠಾನ ವಿಲ್ಲದೆ ಅದು ಕೂಡ ಪ್ರಾಯೋಜನ ಇಲ್ಲ. ಇನ್ನು ಅನೇಕರು, ಹೋಮಗಳನ್ನ weekend ಮಾಡಿಬಿಡೋಣ. ಯಾಕೆ ಎಂದರೆ ಎಲ್ಲರಿಗೂ ರಜ. ಕರೆದರೆ ಎಲ್ಲರೂ ಬರ್ತಾರೆ ಎನ್ನುವ ಯೋಚನೆ. ಆಗಲಿ, ಆದರೆ ಮೊದಲು ಎಲ್ಲರೂ ಮಾಡಬೇಕಾದ ಕರ್ತವ್ಯ ಭೂಮಿಯಲ್ಲಿ ಅಗ್ನಿ ಇದಿಯಾ ಎನ್ನುವದು. ತಾವು ಅಂದುಕೊಂಡ date  ನಲ್ಲಿ ಭೂಮಿಯಲ್ಲಿ ಅಗ್ನಿ ಇರಬೇಕು. ಇಲ್ಲವಾದರೆ, ತಾವು ಹೋಮ ಮಾಡಿಸಿದ್ದು ನೀರಿನಲ್ಲಿ ಹೋಮನೆ ಸರಿ.ಅದು ಅಪ್ರಯೋಜನ. ಪಂಚಾಂಗಗಳಲ್ಲಿ ಭೂಮಿಯಲ್ಲಿ ಅಗ್ನಿಯ ಬಗ್ಗೆ ಮಾಡುವ calculation ಕೊಟ್ಟಿರುತ್ತಾರೆ. ಅದನ್ನು ತಪ್ಪದೆ ನೋಡಿ ಹೋಮ ಮಾಡುವ ದಿನಾಂಕ ನಿರ್ಧರಿಸಿ.
                   ಇನ್ನು, ಹೋಮ ಭೂಮಿಯಲ್ಲಿ (ground  floor  ) ಮಾಡುವುದು ಉತ್ತಮ ಫಲ. ಆದರೆ ಇಂದಿನಕಾಲದಲ್ಲಿ ಎಲ್ಲರೂ apartment ನಲ್ಲಿ ಇರೋದರಿಂದ, ಅಥವಾ ಕೆಲವು ಮಠಗಳಲ್ಲಿ first / second floor ನಲ್ಲಿ ಮಾಡಿಸಿದರೆ ಅದು ಮಾಧ್ಯಮ ಅಥವಾ ಅಧಮ ಫಲವನ್ನು ಕೊಡುತ್ತದೆ.   
ಹೋಮಕ್ಕೆ ಬೇಕಾದ ದ್ರವ್ಯಗಳನ್ನು ಆದಷ್ಟು ತಾವೇ ಹೋಗಿ ತಂದರೆ ಪುಣ್ಯ ಹೆಚ್ಚು. ಇಂದಿನ ಕಾಲದಲ್ಲಿ ಎಲ್ಲವೂ package ನಲ್ಲಿ ಬರುತ್ತದೆ ಎಂದು ಹೇಳುವುದು ಪುಣ್ಯ ಪಡೆಯುವ ಭಾಗ್ಯ ತಪ್ಪಿತು.
                    ಪುರೋಹಿತರು ತಾವು ಮಾಡುವ ಮಂತ್ರ ಉಚ್ಚಾರಣೆ ಬಗ್ಗೆ ಮನಸ್ಸಿರಬೇಕು.ಇಲ್ಲಿ ಬೇಗ ಮುಗಿಸಬೇಕು ಇನ್ನೊಂದು ಕಡೆ ಹೋಗಬೇಕು ಎನ್ನುವ ಪುರೋಹಿತರನ್ನು ಕರೆಯಬೇಡಿರಿ. ಸಾವಧಾನವಾಗಿ ಶ್ರೀಹರಿ ಸ್ಮರಣೆ ಮಾಡಿಸುತ್ತಾ ಎಲ್ಲರಿಗೂ ತಿಳಿಸುತ್ತಾ ಮಾಡುವ ಪುರೋಹಿತರನ್ನು ಕರೆಯಿರಿ. ಎಲ್ಲವೂ urgent ನಲ್ಲಿ ಮಾಡಿಸಿದರೆ ಫಲ ಸಿಗುವುದಿಲ್ಲ. ಯಜ್ಞದಲ್ಲಿ ಮಾಡುವ ಸರ್ವವೂ ಸ್ವಂತ ಹಣದಲ್ಲೇ ಮಾಡುವುದು ಉತ್ತಮ. ಇನ್ನೊಬ್ಬರಿಂದ ಸಂಗ್ರಹಿಸಿದ ಹಣದಿಂದ ಮಾಡಿದ ಹೋಮ ನಿಷ್ಪಲ.
               ಅಗ್ನಿಮಂಡಲ ಮಧ್ಯದಲ್ಲಿರುವವನು ಲಕ್ಷ್ಮಿ ಸಮೇತ ನಾರಾಯಣನ್ನು ಧ್ಯಾನಿಸುತ್ತ ಹೋಮವನ್ನು ಮಾಡಬೇಕು. ಆ ಶ್ರೀಹರಿಯು ಕೊಡಲಿಯನ್ನು ಪಿಡಿದು ಪರಶುರಾಮ ರೂಪದಿಂದ ನಾವು ಮಾಡುವ ಹೋಮವನ್ನು ಸ್ವೀಕಾರಮಾಡುತ್ತಾನೆ ಎನ್ನುವ ಜ್ಞಾನದಿಂದ ಕರ್ಮಮಾಡಬೇಕು. ಇಲ್ಲದಿದ್ದರೆ ಯಾವುದೊ ದೈತ್ಯರು ಬಂದು ಆಹುತಿ ಯನ್ನು ತೊಗಂದು ಹೋಗುತ್ತಾರೆ. ಎಚ್ಚರ ವಿರಲಿ.
                     ಯಜಮಾನನ ಮಗನಾಗಲಿ, ಹೆಂಡತಿಯಾಗಲಿ , ಸಹೋದರನಾಗಲಿ ಶಿಷ್ಯನಾಗಲಿ ಪುರೋಹಿತನಾಗಲಿ ಯಜಮಾನನಿಂದ ಅನುಜ್ಞೆಯನ್ನು ಪಡೆದು ಹೋಮವನ್ನು ಮಾಡಬಹುದು. ಆದರೆ ಯಜಮಾನನೇ ಶುದ್ಧನಾಗಿ ಹೋಮಮಾಡಿದರೆ ಹೆಚ್ಚಿನ ಫಲ ಕೊಡುವಂತದ್ದು.   
ಹೋಮಕುಂಡ ಇಟ್ಟಿಗೆ ಇಂದ ಮಾಡಿದ್ದು ಶ್ರೇಷ್ಠ. ಕಬ್ಬಿಣದ ಹೋಮಕುಂಡ ಬೇಡ.
ಹೋಮದಲ್ಲಿ ಇರುವ ಅಗ್ನಿಗೆ ಏಳು ನಾಲಿಗೆಗಳು ತಿಳಿಯಬೇಕು. ಹಿರಣ್ಯಾ, ಕನಕಾ,ರಕ್ತಾ,ಕೃಷ್ಣಾ,ಸುಪ್ರಭಾ, ಅತಿರಿಕ್ತಾ, ಬಹುರೂಪಾ. ವಿಷ್ಣುಸಹಸ್ರನಾಮದಲ್ಲಿ ಸಪ್ತಜಿಹ್ವ ಎಂದು ತಿಳಿಸಿದ್ದಾರೆ. ಹೋಮ ಎಂದರೆ ಇದು ವಿಷ್ಣುಪೂಜೆ ಎನ್ನುವ ಅನುಸಂಧಾನ ಬೇಕು. 

ಸಪ್ತಜಿಹ್ವ ಅವಿಜ್ಞಾಯ ಯಾ: ಕುರ್ಯಾದಗ್ನಿ ಸನ್ನಿಧೌ |
ಹೋಮೋ ನಿಷ್ಪಲತಾಮ್ ಯಾತಿ ಹೋತಾ ತು ನರಕಂ ವ್ರಜೇತ್ || 
                  ಹೀಗೆ ಅಗ್ನಿಯ ಏಳು ನಾಲಿಗೆಯ ಸ್ಮರಣೆ , ವಿಷ್ಣುವಿನ ಸ್ಮರಣೆ ಇಲ್ಲದೆ ಮಾಡಿದ ಯಜ್ಞ ನಿಷ್ಪಲ ಮತ್ತು ಮಾಡುವ ಯಜಮಾನ ನರಕವನ್ನು ಹೊಂದುತ್ತಾನೆ ಎಂದು ಸ್ಮೃತಿಗಳು ತಿಳಿಸುತ್ತವೆ.

                  ಹೋಮದಲ್ಲಿ ಪುರೋಹಿತರಿಗೆ ದಕ್ಷಿಣವನ್ನು ಚೆನ್ನಾಗಿ ಕೊಡಬೇಕು. ಜಿಪುಣತನ ಬೇಡ.  ದಕ್ಷಿಣೆ ಇಲ್ಲದೆ ಪೂರ್ಣ ಫಲ ಇಲ್ಲ. ಹೋಮದ್ರವ್ಯಗಲ್ಲಿ ಪಾತ್ರಗಳಲ್ಲಿ steel ಬಳಿಕೆ ಬೇಡ. ಅದರಲ್ಲಿ ಕಲಿ ಇರುತ್ತಾನೆ.
ಪ್ರಾಣಾಯಾಮಕಾಲದಲ್ಲಿ ವಾಯುದೇವರ ಸ್ಮರಣೆ ಅತ್ಯಗತ್ಯ. ಅವರೇ ನಿಂತು ಈ ಯಜ್ಞವನ್ನು ನಡಿಸಿಕೊಡಬೇಕೆಂದು ಕೇಳುವುದು ಅನಿವಾರ್ಯ. ಈ ಅನುಸಂಧಾನವಿಲ್ಲದೆ ಅಗ್ನಿಯ ಮತ್ತು ವಿಷ್ಣು ಕೃಪೆ ಸಿಗುವುದಿಲ್ಲ.

 ಕೃಷ್ಣಾರ್ಪಣಮಸ್ತು

No comments:

Post a Comment