ಸಂಗ್ರಹಿತ ಶ್ರಾದ್ಧದಲ್ಲಿ ಅಗ್ನಿಗೆ ಆಹುತಿ ಶ್ರಾದ್ಧ ಭಾಗ :-೦೩
ಆಶ್ವಯುಜ ಬಹುಳ ಚತುದ೯ಶೀ ಹಾಗೂ ಅಮಾವಾಸ್ಯೆಯ ದಿನ ಆಕಾಶ ದೀಪವನಿಡುವ ಒಂದು ಉದ್ದೇಶ ಯಮಲೋಕದಿಂದ ಭಾದ್ರಪದ ಬಹುಳದಲ್ಲಿ ಬಂದ ಪಿತೃಗಳು ಅಂದು ಮರಳಿ ಯಮಲೋಕಕ್ಕೆ ಹೋಗುವರು. ಅವರಿಗೆ ದಾರಿ ಕಾಣಲು ಈ ಯಮದೀಪ ಅಥವಾ ದಾರಿದೀಪ (ಆಕಾಶ ದೀಪವನ್ನು ಮನೆಯಿಂದ ಹೊರಗೆ,ನಾಲ್ಕು ದಾರಿ ಸೇರುವಲ್ಲಿ ಇಡಬೇಕ .*ಶ್ರಾದ್ಧ*:- -ನಿಮಿರಾಜನು ಶ್ರಾದ್ಧ ಪ್ರಾರಂಭಿಸಿದ ನಂತರ ಎಲ್ಲಾ ಮಹರ್ಷಿಗಳೂ ಶ್ರಾದ್ಧ ವಿಧಿಗೆ ಅನುಸಾರವಾಗಿ " ಪಿತೃಯಜ್ಞ " ಮಾಡಲು ಆರಂಭಿಸಿದರು. ಹೀಗೆ ಶ್ರಾದ್ಧ ಮಾಡುವವರ ಸಂಖ್ಯೆ ಬೆಳೆದಂತೆ ದೇವತೆಗಳು ಮತ್ತು ಪಿತೃಗಳು ಅಜೀರ್ಣ ರೋಗದಿಂದ ಪೀಡಿತರಾದರು. ಅತಿಯಾದ ಶ್ರಾದ್ಧಾನ್ನ ಭೋಜನದಿಂದ ಪೀಡಿತರಾದ ಅವರು ಅಜೀರ್ಣ ರೋಗ ಪರಿಹಾರೋಪಾಯವನ್ನು ಕಂಡುಕೊಳ್ಳಲು ಸೋಮನ ಬಳಿಗೆ ಹೋಗಿ ಅವನಲ್ಲಿ ತಮ್ಮ ಅಜೀರ್ಣ ರೋಗದ ಕುರಿತು ತಿಳಿಸಿ ನಿವಾರಣೋಪಾಯ ಕೇಳಿದರು. ಆಗ ಸೋಮನು...ದೇವತೆಗಳೇ! ನೀವು ಶ್ರೇಯಸ್ಸನ್ನು ಬಯಸುವವರಾಗಿದ್ದರೆ, ಈಗಲೇ ಬ್ರಹ್ಮ ಭವನಕ್ಕೆ ಹೋಗಿ ಶ್ರೀ ಚತುರ್ಮುಖ ಬ್ರಹ್ಮದೇವರನ್ನು ಪ್ರಾರ್ಥಿಸಿರಿ. ಎಂದನು.
ಸೋಮನು ತಿಳಿಸಿದಂತೆ ದೇವತೆಗಳು ಮೇರು ಶಿಖರದಲ್ಲಿ ವಿರಾಜಮಾನರಾದ ಶ್ರೀ ಬ್ರಹ್ಮದೇವರ ಬಳಿಗೆ ಬಂದು ತಮ್ಮ ಕಷ್ಟವನ್ನು ನಿವೇದಿಸಿದರು.
" ಪೂಜ್ಯರೇ! ನಾವು ಅಪಾರವಾದ ಶ್ರಾದ್ಧಾನ್ನವನ್ನು ಉಂಡು ಅಜೀರ್ಣ ರೋಗದಿಂದ ಕಷ್ಟ ಪಡುತ್ತಿದ್ದೇವೆ. ನಮ್ಮ ವಿಷಯದಲ್ಲಿ ಕೃಪೆ ತೋರಬೇಕು " ಎಂದರು. ಆಗ ಶ್ರೀ ಚತುರ್ಮುಖ ಬ್ರಹ್ಮದೇವರು....
ದೇವತೆ ಮತ್ತು ಪಿತೃಗಳಿಗೆ ನನ್ನ ಸಮೀಪದಲ್ಲಿರುವ ಈ ಅಗ್ನಿದೇವನು ನಿಮಗೆ ಶ್ರೇಯಸ್ಸನ್ನು ಉಂಟು ಮಾಡುತ್ತಾನೆ! ಎಂದು ಹೇಳಲು ಅಗ್ನಿಯು ದೇವತೆಗಳನ್ನು ಸಂತೈಸುತ್ತಾ...
ಮಹಾಭಾರತ ಅನುಶಾಸನ ಪರ್ವದಲ್ಲಿ.....
ಸಹಿತಾಸ್ತಾತ ಭೋಕ್ಷ್ಯಾಮೋ ನಿವಾಪೇ ಸಮುಪಸ್ಥಿತೇ ।
ಜರಯಿಷ್ಯಥ ಚಾಪ್ಯನ್ನಂ ಮಯಾಸಾಧ೯೦ ನ ಸಂಶಯಃ।।
ದೇವ ಪಿತೃಗಳೇ! ಶ್ರಾದ್ಧದ ಸಮಯದಲ್ಲಿ ನಾವೆಲ್ಲರೂ ಸೇರಿಯೇ ಭೋಜನವನ್ನು ಮಾಡೋಣ! ನಮ್ಮೊಡನೆ ಭೋಜನ ಮಾಡುವ ನೀವು ಶ್ರಾದ್ಧಾನ್ನವನ್ನು ಅರಗಿಸಿಕೊಳ್ಳುವಿರಿ. ಇದರಲ್ಲಿ ಸಂಶಯವಿಲ್ಲ!
ಆಗ್ನಿಯ ಈ ಮಾತನ್ನು ಕೇಳಿ ಪಿತೃ ದೇವತೆಗಳು ನಿಶ್ಚಿಂತರಾದರು. ಮುಂದೆ ಇದೇ ಕಾರಣದಿಂದ ಶ್ರಾದ್ಧ ಕಾಲದಲ್ಲಿ ಅಗ್ನಿಗೆ ಆಹುತಿ ಕೊಡುವುದು ವಾಡಿಕೆಯಾಗಿ ಬಂತು. ಆಹುತಿ ಕೊಡುವ ಕ್ರಮ....
ಸೋಮಾಯೇತಿ ಚ ವಕ್ತವ್ಯ೦ ತಥಾ ಪಿತೃಮತೇತಿ ಚ ।
ಪಿಂಡ ಪ್ರಧಾನ ಮಾಡುವ ಮೊದಲು ಅಗ್ನಿಗೂ ಹಾಗೂ ಸೋಮನಿಗೂ ಆಹುತಿಯನ್ನು ಕೊಡಬೇಕು ಮಂತ್ರ.....
ಅಗ್ನಯೇ ಕವ್ಯವಾಹನಾಯ ಸ್ವಧಾ ನಮಃ ।
ಸೋಮಾಯ ಪಿತೃಮತೇ ಸ್ವಧಾ ನಮಃ ।।
ಹೀಗೆ ಅಗ್ನಿಗೆ ಹವಿರ್ಭಾಗವನ್ನು ಕೊಟ್ಟು ನಂತರ ಪಿತೃಗಳಿಗೆ ಪಿಂಡಪ್ರಧಾನ ಮಾಡಬೇಕು. ಅಂತಹ ಪಿಂಡವನ್ನು ಬ್ರಹ್ಮ ರಾಕ್ಷಸರು ಮೈಲಿಗೆ ಮಾಡುವುದಿಲ್ಲ. ಓಡಿ ಹೋಗುತ್ತಾರೆ. ನಂತರ ಮೊದಲು ತಂದೆಗೆ ಪಿಂಡ ಪ್ರದಾನವನ್ನು ಮಾಡಬೇಕು. ನಂತರ ಪಿತಾಮಹನಿಗೆ, ತದನಂತರ ಪ್ರಪಿತಾಮಹನಿಗೆ ಪಿಂಡ ಪ್ರದಾನ ಮಾಡಬೇಕು. ಇದನ್ನೇ " ಶ್ರಾದ್ಧವಿಧಿ " ಎನ್ನುತ್ತಾರೆ. ಶ್ರಾದ್ಧದಲ್ಲಿ ಒಂದೊಂದು ಪಿಂಡವನ್ನು ಇಡುವಾಗಲೂ ಏಕಾಗ್ರಚಿತ್ತದಿಂದ ಮನಸ್ಸಿನಲ್ಲಿ " ಭಗವತ್ಸ್ವರೂಪ ಚಿಂತನೆ ಮಾಡುತ್ತಿರಬೇಕು. "ಪಿತ್ರಂತಗ೯ತ ರೂಪ" ವನ್ನು ಉಚ್ಛರಿಸುತ್ತಿರಬೇಕು.
" ದರ್ಭೆಯು ಹಾಸುವ ಕ್ರಮ "
" ಶ್ರೀ ಯೋಗಿ ಯಾಜ್ಞವಲ್ಕ್ಯರ ವಚನ "
ಅಪಾ೦ ಹ್ಯಪೂರ್ವವನ್ಮ೦ತ್ರೈರಾಸ್ತೀರ್ಯ ಚ ಕುಶಾನ್ಬಹೂನ್ ।
ಪಾಗಗ್ರೇಷು ಸುರಾನ್ ಸಮ್ಯಗ್ದಕ್ಷಿಣಾಗ್ರೇಷು ವೈ ಪಿತ್ರೂನ್ ।।
ದರ್ಭೆಯ ತುದಿಯನ್ನು ಪೂರ್ವಾಭಿಮುಖವಾಗಿ ಹಾಸಿ ದೇವತೆಗಳನ್ನು ದಕ್ಷಿಣಾಭಿಮುಖವಾಗಿ ಹಾಸಿ ಪಿತೃಗಳನ್ನೂ ಉದ್ಧೇಶಿಸಿ ಆಯಾ ಮಂತ್ರಗಳಿಂದ ತರ್ಪಣವನ್ನು ಕೊಡಬೇಕು!!
" ಶುಚಿಯಾದ ಭೂಮಿಯಿಲ್ಲದಿರುವಾಗ ಜಲದಲ್ಲಿ ತರ್ಪಣವನ್ನು ಕೊಡಬೇಕು "
" ಶ್ರೀ ವಿಷ್ಣು ವಚನ "
ಯತ್ರಾಶುಚಿ ಸ್ಥಲಂ ವಾ ಸ್ಯಾದುದಕೇ ದೇವತಾಃ ಪಿತ್ರೂನ್ ।
ತರ್ಪಯೇತ್ತು ಯಥಾ ಕಾಮಮಪ್ಸು ಸರ್ವಂ ಪ್ರತಿಷ್ಠಿತಮ್ ।।
ಯಾವ ಸ್ಥಳದಲ್ಲಿ ಭೂಮಿಯು ಅಶುಚಿಯಾಗಿದೆಯೋ ಆ ಸ್ಥಳದಲ್ಲಿ ದೇವತೆಗಳಿಗೂ, ಪಿತೃಗಳಿಗೂ ನೀರಿನಲ್ಲೇ ತರ್ಪಣವನ್ನು ಕೊಡಬಹುದು. ನೀರಿನಲ್ಲಿಯೇ ಎಲ್ಲ ಸನ್ನಿಧಾನವೂ ಇರುತ್ತದೆ.
" ಶ್ರೀ ಕಾರ್ಷ್ಣಾಜಿನಿ ವಚನ "
ದೇವತಾನಾ೦ ಪಿತ್ರೂಣಾ೦ ಚ ಜಲೇ ದದ್ಯಾಜ್ಜಲಾಂಜಲೀಮ್ ।
ಅಸಂಸ್ಕೃತ ಪ್ರಮೀತಾನಾ೦ ಸ್ಥಾನೇ ದದ್ಯಾಜ್ಜಲಂ ಪುನಃ ।।
ದೇವತೆಗಳಿಗೂ, ಪಿತೃಗಳಿಗೂ ನೀರಿನಲ್ಲಿ ತರ್ಪಣವನ್ನು ಕೊಡಬೇಕು. ಕೆಲವರು ಸತ್ತಾಗ ಅವರಿಗೆ ಅಗ್ನಿ ಸಂಸ್ಕಾರವು ನಡೆದಿರುವುದಿಲ್ಲ. ಅವರಿಗೆ ಭೂಮಿಯಲ್ಲಿ ಒಂದೇ ಒಂದು ತರ್ಪಣವನ್ನು ಕೊಡಬೇಕು.
" ಅಸಂಸ್ಕೃತ ಪ್ರಮೀತರಿಗೆ ಕೊಡುವ ತರ್ಪಣಕ್ಕೆ ಮಂತ್ರ "
ಅಸಂಸ್ಕೃತ ಪ್ರಮೀತಾ ಯೇ ತ್ಯಾಗಿನ್ಯೋ ಯಾ ಕುಲಸ್ತ್ರಯಃ।
ಅಗ್ನಿದಗ್ಧಾಶ್ಚ ಯೇ ಜಾತಾ ಯೇ ವಾ ದಗ್ಧಾ: ಕುಲೇ ಮಮ ।
ಭೂಮೌ ದತ್ತೇನ ತೋಯೇನ ತೃಪ್ತಾ ಯಾಂತು ಪರಾಂ ಗತಿಮ್ ।।
" ಶ್ರಾದ್ಧ ಕುರಿತು ಮತ್ತಷ್ಟು ಮಾಹಿತಿ "
ಪವಿತ್ರಕ್ಕೆ 3 ದರ್ಭೆ,
1. ಆರಂಭದಲ್ಲಿ 1 ಪವಿತ್ರ ಧಾರಣೆ, ಪಾದಪ್ರಕ್ಷಾಲನ ನಂತರ ವಿಸರ್ಜನೆ.
2. ಪಾದ ಪ್ರಕ್ಷಾಲನ ಬಳಿಕ ಮತ್ತೊಂದು ಪವಿತ್ರ ಧಾರಣೆ. ಪಿಂಡ ಪ್ರಧಾನಾನಂತರ ಘ್ರಾಣಭಕ್ಷಣೆಯ (ಆಘ್ರಾಣದ) ತರುವಾಯ ವಿಸರ್ಜನೆ.
3 ನೆಯ ಪವಿತ್ರ ಬ್ರಾಹ್ಮಣರು ಭೋಜನಕ್ಕೆ ಕುಳಿತ ನಂತರ ನೀವು ಭೋಜನಕ್ಕೆ ಕುಳಿತು ಕೊಳ್ಳುವ ಪೂವ೯ದಲ್ಲಿ ವಿಸಜ೯ನೆ ಹೀಗೆ ಶ್ರಾದ್ಧದಲ್ಲಿ ಮೂರು ದಬೆ೯ಗಳಿಂದ ಮಾಡಿದ ಮೂರು ಪವಿತ್ರ ಉಪಯೋಗಿಸಬೇಕು.
ವಿಶ್ವೇ ದೇವಸ್ಥನದಲ್ಲಿರುವ ಪವಿತ್ರ - " ತುದಿಯಿರುವ ಎರಡು ದರ್ಭೆಯ ಋಷಿ ಗಂಟಿನ ಪವಿತ್ರ "
ಪಿತೃ ದೇವತೆಗಳ ಆವಾಹನಕ್ಕಾಗಿ ಪವಿತ್ರ....
ತುದಿಯಿರುವ 2 ದರ್ಭೆ ನೇರವಾಗಿ, ತಲೆ ಕೆಳಗಾಗಿ 1 ದರ್ಭೆ ಹೀಗೆ ಒಟ್ಟು 3 ದರ್ಭೆಯ ಋಷಿ ಗಂಟಿನ ಪವಿತ್ರ. (ಆಚಾರಾನುಸಾರ)ಕೆಲವರು ಮೂರನ್ನೂ ಒಂದೇ ಕ್ರಮದಲ್ಲಿ ಹಿಡಿದು ಗ್ರಂಥಿ ಹಾಕುವರು. ಒಂದನ್ನು ತಲೆ ಕೆಳಗಾಗಿ ಹಿಡಿಯಬೇಕೆಂಬುದಕ್ಕೆ ಪ್ರಮಾಣ ಕಂಡಿಲ್ಲ.
ಪಿಂಡ ತಯಾರಿಸುವ ಕ್ರಮ....
ಎಳ್ಳು - ಅನ್ನ - ಕಲಶದ ನೀರು - ಹಾಲು - ಮೊಸರು - ಬೆಲ್ಲ - ಜೇನುತುಪ್ಪ - ತುಪ್ಪ ಈ 8 ದ್ರವ್ಯಗಳನ್ನು ಸೇರಿಸಬೇಕು.
ತಿಲಮನ್ನಂ ಚ ಪಾನೀಯಂ ಪಯೋದಧಿಗುಡಂ ತಥಾ ।
ಮಧುಸರ್ಪಿಸ್ಸಮಾಯುಕ್ತ೦ ಅಷ್ಟಾಂಗಂ ಪಿಂಡ ಲಕ್ಷಣಮ್ ।। ೧।।
ತಿಲಮನ್ನಂ ಘೃತಂ ಪಕ್ವಂ ಮಧು ಮುದ್ಗಂ ಪಯೋ ದಧಿ। ತುಲಸ್ಯದ್ಭಿಶ್ಚ ಸಂಮಿಶ್ರಂ ದಶ ದ್ರವ್ಯಾಣಿ ಪಾವ೯ಣೇ।।
ಎಳ್ಳು,ಹವಿಸ್ಸು,ಆಕಳ ತುಪ್ಪ,ಬಾಳೇಹಣ್ಣು,ಜೇನು, ಹೆಸರು,ಹಾಲು,ಮೊಸರು,ತುಳಸೀ,ನೀರು ದಶವಿಧ ಪಿಂಡ ಲಕ್ಷಣ ಎಂಬುದೂ ವಾಡಿಕೆ ಇದೆ. ತಿಲಮನ್ನಂಚ ಪಕ್ವಂ ಚ ದಧಿ ಕ್ಷೀರಂ ಗುಡಂ ತಥಾ। ಮಧು ಸಪಿ೯ ಸಮಾಯುಕ್ತಂ ಪಿಂಡಮಷ್ಟಾಂಗ ಲಕ್ಷಣಮ್।। ಎಂಬ ಪ್ರಮಾಣವೂ ಇದೆ.
ಶ್ರಾದ್ಧದ ವಿಸರ್ಜಿತ ಪಿಂಡವನ್ನು ನೆಲದಲ್ಲಿ ಹೂಳಬಹುದು. ನದೀ ತೀರದಲ್ಲಿ ಮಾಡಿದಾಗ ಹರಿಯುವ ನದೀ ಪ್ರವಾಹದಲ್ಲಿ ಬಿಡಬಹುದು.
" ಗೋವುಗಳಿಗೆ ತಿನ್ನಲು ಕೊಡಬಹುದು ಇದು ಪರಮ ಶ್ರೇಷ್ಠ "
" ಭೋಜನದಲ್ಲಿ ಯಾವ ಸ್ಥಾನಕ್ಕೆ ಯಾರು? "
ಪಿತೃ ಸ್ಥಾನಕ್ಕೆ ಮೃತರ ಅಳಿಯ ( ಮಗಳ ಗಂಡ ), ತಂಗಿಯ ಗಂಡ, ಮಗಳ ಮಗ, ಭಾವ ಮೈದುನರು -
ಇವರಲ್ಲಿ ಯೋಗ್ಯರು ಯಾರೇ ಇದ್ದಲ್ಲಿ ಕೂಡಿಸಬಹುದು. *ಶ್ರೋತ್ರಿಯಂ ಸುಭಗಂ ಬಂಧುಂ* ಬಂಧುವಾಗಿದ್ದರೆ ಬಹಳ ಶ್ರೇಷ್ಠ!!
ವಿಶ್ವೇ ದೇವ ಸ್ಥಾನಕ್ಕೆ ಶ್ರೋತ್ರಿಯ ವಿದ್ವಾಂಸರು ಅವಶ್ಯ!!
" ವಿಶೇಷ ವಿಚಾರ "
ಈ ಮಹಾಲಯ ಪಕ್ಷದಲ್ಲಿ ಸರ್ವ ಪಿತೃಗಳೂ ಬಂದಿರುತ್ತಾರೆ. ಅವರ ಪ್ರೀತಿಗಾಗಿ ಭಕ್ತಿ ಶ್ರದ್ಧೆಗಳಿಂದ ಪಿಂಡ ಪ್ರದಾನ ಮಾಡಲೇಬೇಕು. ಒಂದುವೇಳೆ ಪಿಂಡಪ್ರದಾನ ಮಾಡದಿದ್ದರೆ ಅವರ ಆಗ್ರಹಕ್ಕೆ ಪಾತ್ರರಾಗುವದಂತೂ ನಿಶ್ಚಯ ಮತ್ತು ಜೀವನದಲ್ಲಿ ಯಾವುದೇಅಭಿವೃದ್ಧಿ ಆಗುವುದಿಲ್ಲ! ಆದ್ದರಿಂದ ಪಿತೃಗಳ ಉದ್ಧಿಶ್ಯ ಪಿಂಡ ಪ್ರದಾನ ಮಾಡಿ ಪಿತೃಗಳ ಅನುಗ್ರಹ ಪಾತ್ರರಾಗಿ ವೃದ್ಧಿ ಹೊಂದುವುದು.
|
▼
No comments:
Post a Comment