Sunday, July 26, 2020

YOGA FOR ELDERS -5 ( ವಯಸ್ಕರ ಯೋಗ, ಭಾಗ 5 )

ವಯಸ್ಕರಿಗೆ ಯೋಗ, ಭಾಗ 5:

ಇಂದು ನಾವು ಲಘು ವ್ಯಾಯಾಮಗಳ ಬಗ್ಗೆ ತಿಳಿದುಕೊಳ್ಳೋಣ. ಹೆಚ್ಚಿನ ಆಯಾಸವಾಗದಂತೆ ಮಾಡುವ ಈ ವ್ಯಾಯಾಮಗಳು ನಮ್ಮ ಆರೋಗ್ಯಕ್ಕೆ ಅತ್ಯಾವಶ್ಯಕ ವಾಗಿವೆ.
ಹೆಸರೇ ಹೇಳುವಂತೆ ವಯಸ್ಸಾಗಿರುವವರು ಹೆಚ್ಚು ಪರಿಶ್ರಮ ಪಡೆಯಲಸಾಧ್ಯವಾದ್ದರಿಂದ ಅನಾಯಾಸವಾಗಿ 5 ರಿಂದ 10 ನಿಮಿಷಗಳ ವ್ಯಾಯಾಮ ಸಾಕು. ಅವುಗಳನ್ನು ಬೆಳಿಗ್ಗೆ ಮತ್ತು ಸಂಜೆ, ಎರಡೂ ಹೊತ್ತು, ಆರಾಮವಾಗಿ ಮಾಡಬಹುದು. 
ಮತ್ತು ಈ ಕೆಳಗಿನ ಪ್ರತಿಯೊಂದನ್ನೂ, ಕ್ಲಾಕ್ ವೈಜ್ ಮತ್ತು ಆಂಟಿ ಕ್ಲಾಕ್ ವೈಜ್ ಎರಡೂ ಬದಿಗಳಲ್ಲಿ, ಪ್ರತಿ ಸಲ 12 ಆವೃತ್ತಿಗಳಂತೆ ತಿರುಗಿಸಬೇಕು.
1. ಕಣ್ಣುಗುಡ್ಡೆಗಳನ್ನು ವೃತ್ತಾಕಾರವಾಗಿ ತಿರುಗಿಸುವುದು. 
2. ಗೋಣು/ಕತ್ತನ್ನು ತಿರುಗಿಸುವುದು. (ಇಲ್ಲಿ, ಕತ್ತಿಗಾಗಿಯೇ ವಿಶಿಷ್ಟವಾದ ಹಲವು ತುಂಬ ಪ್ರಯೋಜನಕಾರಿಯಾದ  ವ್ಯಾಯಾಮಗಳಿದ್ದು, ಅವುಗಳನ್ನು ಮುಂದೆ ಎ ತಿಳಿಯೋಣ)
3. ಕೈಗಳನ್ನು ತಿರುಗಿಸುವುದು.
4. ಎರಡೂ ಕೈಗಳನ್ನು ಮುಂದೆ ಚಾಚಿ ಲಾಕ್ ಮಾಡಿ, ಸೊಂಟದ ಮೇಲ್ಭಾಗವನ್ನು ಎರಡೂ ಬದಿಗೆ ಹೊರಳಿಸುವುದು.
5. ಈಗ ಸೊಂಟವನ್ನೇ ತಿರುಗಿಸುವುದು.
6. ಎರಡೂ ಮೊಳಕಾಲು ಮಂಡಿಗಳನ್ನು ಒಟ್ಟಿಗೇ ತಿರುಗಿಸುವುದು.
7. ಕುಳಿತುಕೊಂಡು, ಎರಡೂ ಪಾದಗಳನ್ನು ತಿರುಗಿಸುವುದು.
8. ಮುಂಗೈಗಳನ್ನು ತಿರುಗಿಸುವುದು.
9. ಕೊನೆಯದಾಗಿ, ಅರ್ಧಬಸ್ತಿಗಳನ್ನು ತೆಗೆಯುವುದು. 12 ಅಲ್ಲ, 24 ಕೂಡ ಅಲ್ಲ, ಹಾಗಾದರೆ ಎಷ್ಟು!? ಬಹಳವಿಲ್ಲ, ಕೇವಲ ಒಂದು ನೂರು ಮಾತ್ರ!! ಬಹಳ ಹೆಚ್ಚು ಅಂತ ಅನ್ನಿಸಿದರೆ, ಪ್ರಾರಂಭದಲ್ಲಿ ಐವತ್ತು ಇಟ್ಟುಕೊಂಡು ಮುಂದೆ ಹೆಚ್ಚಿಸುತ್ತ ಹೋಗಬೇಕು. (ವಿಧಾನ: ಕೈಗಳನ್ನು ಮುಂದೆ ಚಾಚಿ, ಮೇಲೆತ್ತಿ, ಅಥವಾ ಸೊಂಟದ ಮೇಲಿಟ್ಟು ಮಂಡಿಗಳನ್ನು ಅರ್ಧ ಮಡಿಸಿ ಮೇಲೇಳುವುದು, ಅಷ್ಟೆ).

ಮೇಲಿನ ಎಲ್ಲಾ ಸೇರಿ, ತಗಲುವ ಸಮಯ, ಕೇವಲ  7 ರಿಂದ 8 ನಿಮಿಷಗಳು  ಮಾತ್ರ !! ಮಾಡುತ್ತೀರಿ ತಾನೇ !!?

【ಕತ್ತು / ಗೋಣಿನ ವ್ಯಾಯಾಮ: ಶಿರೋಬೇಧ ಕ್ರಿಯೆ ಅಂತಲೂ ಹೇಳ್ತಾರೆ. ಇದು ತುಂಬ ಮಹತ್ವದ ಮತ್ತು ಯೋಗವನ್ನು ಹೊರತುಪಡಿಸಿದ ಕ್ರಿಯೆ. ಇವು ಒಟ್ಟು ಎಂಟು ಬೇರೆ ಬೇರೆ  ಕ್ರಿಯೆಗಳಿದ್ದು, ಎಲ್ಲ ಸೇರಿ 2 ನಿಮಿಷಗಳು ಸಾಕು.
1. ಗೋಣನ್ನು ನೇರವಾಗಿ ಇರಿಸಿಕೊಳ್ಳುವುದು
2. ಗೋಣನ್ನು ಮೇಲೆತ್ತಿ ಮೇಲೆ ನೋಡುವುದು
3. ಗೋಣನ್ನು ದೃಷ್ಟಿ ಸಹಿತ ಮೇಲೆ ಕೆಳಗೆ ಮಾಡುವುದು
4. ಗೋಣನ್ನು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಅಲ್ಲಾಡಿಸುವುದು
5. ಗೋಣು ಹಾಕುವುದು ಅಂತೀವಲ್ಲ, ಅಂದರೆ ಗೋಣನ್ನು ಬಾಗಿಸಿ, ಎಡ ಮತ್ತು ಬಲ ಮುಂಡಿಗಳ ಮೇಲೆ ಪರ್ಯಾಯ ವಾಗಿ ಇಡುತ್ತ ಹೋಗುವುದು
6. ಗೋಣನ್ನು ಡೈಗೊನಲ್ಲಾಗಿ (ಕರ್ಣರೇಖೆಯ ಗುಂಟ, ಅಥವಾ ಕತ್ತರಿಯಾಕಾರದಲ್ಲಿ ) ಅಂದರೆ, ಮೇಲಿನಿಂದ ಕೆಳಕ್ಕೆ, ಎಡದಿಂದ ಬಲಕ್ಕೆ, ಮತ್ತೆ ಮೇಲಿನಿಂದ ಕೆಳಕ್ಕೆ, ಬಲದಿಂದ ಎಡಕ್ಕೆ ಚಲಿಸುವುದು
7. ಅದೇರೀತಿ ಗೋಣನ್ನು ಎಡಭಾಗದ ಮೇಲಿನಿಂದ ಕೆಳಗೆ ತಂದು ಬಲ ಭಾಗದ ಮೇಲಿನ ವರೆಗೆ, ನಂತರ ಬಲಭಾಗದ ಮೇಲಿನಿಂದ ಕೆಳಗೆ ತಂದು ಎಡಭಾಗದ ಮೇಲಕ್ಕೆ ಒಯ್ಯುವುದು
8. ಈಗ ಗೋಣನ್ನು ವೃತ್ತಾಕಾರವಾಗಿ 12 ಸಲ ತಿರುಗಿಸುವುದು, ನಂತರ ವಿರುದ್ಧ ದಿಕ್ಕಿನಲ್ಲಿ ಮತ್ತೆ ಅಷ್ಟೇ ಸಲ ತಿರುಗಿಸುವುದು.
ಪ್ರಯೋಜನಗಳು: ಭುಜ, ಕೈಕಾಲುಗಳ ಮತ್ತು ಶರೀರದ ಯಾವುದೇ ಭಾಗದಲ್ಲಿ ಮಸಲ್ ಕ್ಯಾಚ್ ಬಿಡುತ್ತದೆ, ಪಚನಶಕ್ತಿ ಹೆಚ್ಚುತ್ತದೆ ಎದೆ ಉರಿ, ಎದೆನೋವು ವಾಸಿ, ಲಿವರ್/ಯಕೃತ್ತು ಕಾರ್ಯ ವೃದ್ಧಿ, ಪ್ಯಾಂಕ್ರಿಯಾಸ್/ಸಕ್ಕರೆ ಕಾಯಿಲೆ, ಕಿವಿ, ಗಂಟಲಿನ ಸಮಸ್ಯೆ, ಪಾರ್ಶ್ವವಾಯು ದೂರ, ಎಂಡೋಕ್ರೈನ್ /ನಿರ್ನಾಳ ಗ್ರಂಥಿಗಳ ಕಾರ್ಯದಲ್ಲಿ ಸುಧಾರಣೆ, ಮರೆವು, ಕಣ್ಣಿನ ದೃಷ್ಟಿ ದೋಷ, ಇತ್ಯಾದಿ ತುಂಬಾ ಸಮಸ್ಯೆಗಳು ದೂರವಾಗುತ್ತವೆ.】
{YouTube ನಲ್ಲಿ, Shiradi Sai Biksha Kendra ವತಿಯಿಂದ ಪ್ರಸಾರವಾದ ಕಾರ್ಯಕ್ರಮ, " Ep081  22 - Apr 2020 " ಇದು ಭ್ರಾಮರಿ ಪ್ರಾಣಾಯಾಮ ವನ್ನು ಕುರಿತು, ಮತ್ತು, " Ep085 26 - Apr 2020 " ಇದು ಶಿರೋಬೇಧ - ಇದು ಕತ್ತು / ಗೋಣು ಸುತ್ತಿಸುವ ವ್ಯಾಯಾಮದ ಕುರಿತು. ದಯವಿಟ್ಟು ಇವುಗಳನ್ನು ನೋಡಿದರೆ ತುಂಬಾ ಒಳ್ಳೆಯದು }

No comments:

Post a Comment