Monday, September 11, 2023

#YANTRODDHARAK PRANADEVA ಯಂತ್ರೋದ್ಧಾರಕ

ಯಂತ್ರೋದ್ಧಾರಕ

ಹಂಪಿಯ ಬಂಡೆಯೊಂದರ ಮೇಲೆ ಯಂತ್ರದಲ್ಲಿ ಕೆತ್ತನೆ ಮಾಡಲ್ಪಟ್ಟ  ಆಂಜನೇಯ ಸ್ವಾಮಿಯ, ಯಂತ್ರೋದ್ಧಾರಕನ ಹಿನ್ನೆಲೆ 

ಪ್ರಪಂಚದಲ್ಲೇ ಶ್ರೀ ಹನುಮಂತನ ಅತ್ಯಂತ ಪವಿತ್ರ, ಜಾಗೃತ, ಶಕ್ತಿಶಾಲಿ ದೇವಾಲಯವಿದು...ಮೂರು ಕೋಟಿ ಬೀಜ ಮಂತ್ರಗಳ ಪ್ರಭಾವ ನಿರಂತರ ಹೊಮ್ಮುವ ಶ್ರೀ ಹನುಮಂತನ ಕ್ಷೇತ್ರ ತ್ರೇತಾಯುಗದ..ರಾಮಾಯಣ ಕಾಲದ ಕಿಷ್ಕಿಂದಾ ಪ್ರದೇಶವಾಗಿದ್ದ ಇಲ್ಲಿ ರಾಮಾಯಣ ದಲ್ಲಿ ಉಲ್ಲೇಖವಾಗಿರುವ ಋಷ್ಯಮೂಖ, ಮಾಲ್ಯವಂತ,ಅಂಜನಾದ್ರಿಯೇ ಮೊದಲಾದ ಪರ್ವತಗಳಂತೆಯೇ ಪಂಪಾ ಸರೋವರ ಮತ್ತು ಚಕ್ರತೀರ್ಥ(ಪೂರ್ವಕ್ಕೆ ಹರಿಯುವ ತುಂಗಭದ್ರಾ ನದಿ ಇಲ್ಲಿ ಮಡುಗಟ್ಟಿ ತಿರುಗಿ ಉತ್ತರಕ್ಕೆ ಹರಿಯುತ್ತದೆ)..ಸುಗ್ರೀವನ ಮಂತ್ರಿಯಾಗಿದ್ದ ಶ್ರೀ ಹನುಮಂತನು ಶ್ರೀ ರಾಮಚಂದ್ರನನ್ನು ಮೊದಲು ಇಲ್ಲಿಯೇ ಭೇಟಿಯಾದದ್ದು..ರಾಮ ಲಕ್ಷ್ಮಣ ಸೀತಾ ಸುಗ್ರೀವರ 10 ಅಡಿ ಎತ್ತರದ ವಿಗ್ರಹಗಳಿವೆ (ತುಂಗಭದ್ರಾ ನದಿ ತೀರ ಚಕ್ರತೀರ್ಥ ಹಂಪಿ ಯಾಂತ್ರೋದ್ದಾರಕ ದೇವಾಲಯ ಕೆಳಗೆ )(ರಾಮದೇವರ ಕಣ್ಣಿನ ನೇರದಲ್ಲಿ ವಾಲಿಯ ಭಂಡಾರವಿದೆ).ಯಂತ್ರೋದ್ದಾರ ಶ್ರೀ ಹನುಮಂತ ದೇವರ ಗುಡಿ ಪಂಪಾಪತಿ ಶ್ರೀವಿರೂಪಾಕ್ಷ ದೇವಾಲದಿಂದ 2 ಕಿ.ಮೀ. ದೂರದಲ್ಲಿದೆ (ಪುಟ್ಟ ಗುಹೆಯ ಒಳಗೊಂಡ ರಸ್ತೆ).ಅತ್ಯಂತ ವೈಭವದಿಂದ ಇದ್ದ ವಿಜಯನಗರದ ಅರಸರ ರಾಜಧಾನಿಯಾಗಿದ್ದ ಹಂಪೆಯ ಮತ್ತು 6 ಜನ ಅರಸರಿಗೆ ರಾಜಗುರುಗಳಾಗಿದ್ದ ಮಧ್ವಯತಿ ಶ್ರೀವ್ಯಾಸರಾಜರ ಸ್ವಹಸ್ತದಿಂದ ಮೂಡಿಬಂದ ಹನುಮನಿವನು..

ರಾಮಾಯಣದ ಕಾಲದಲ್ಲಿ ಶ್ರೀ ರಾಮಚಂದ್ರನು ವಿರಮಿಸಿದ್ದ ಬಂಡೆಯೊಂದರ ಮೇಲೆ ಶ್ರೀ ವ್ಯಾಸರಾಜರು ಶ್ರೀ ಹನುಮನ ಚಿತ್ರಬಿಡಿಸಿದಾಗ ಅದು ನಿರಂತರವಾಗಿ..ಮತ್ತೆ ...ಮತ್ತೆ ಮಾಯವಾಗುತ್ತಿತ್ತು......ಧ್ಯಾನಸ್ತರಾದಾಗ ತಾವು ಹಿಂದೆ ತಮ್ಮ ಪೂರ್ವಜನ್ಮದಲ್ಲಿ ಬಾಹ್ಲಿಕ ರಾಜನಾಗಿ  ಶ್ರೀ ಭೀಮಸೇನ (ಹನುಮನ ಅವತಾರ ) ವಿರುದ್ಧ 732 ಬಾರಿ ಗದೆ ಪ್ರಹಾರ ಮಾಡಿದ್ದು, ಅದರ ಪ್ರಾಯಶ್ಚಿತ್ತ ರೂಪವಾಗಿ 732  ಶ್ರೀ ಹನುಮಂತ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ನಿಶ್ಚಯಸಿ 12 ಕಪಿಗಳ ಕಪಿ ಬಂಧವನ್ನು ಹೆಣೆದು ವಲಯಾಕಾರ ಚಿತ್ರಿಸಿ..ಚಿತ್ರಕೋಣ ಯಂತ್ರವನ್ನು ಏರ್ಪಡಿಸಿ ಅದರ ಮಧ್ಯ ಜಪಸರ ಹಿಡಿದು ಧ್ಯಾನಮಾಡುವ ಶ್ರೀ ಹನುಮಂತನನ್ನು ಮಾಯವಾಗದಂತೆ ಪ್ರತಿಷ್ಠಾಪಿಸಿದರು. ಮೂರುಕೋಟಿ ಜಪದ ಪುಣ್ಯವಿಶೇಷ ದಿಂದ ಶ್ರೀಮುಖ್ಯಪ್ರಾಣನನ್ನು ಆರಾಧಿಸಿದ್ದಾರೆ

ಮಧು..ಜೇನುತುಪ್ಪದ ಅಭಿಷೇಕ ವಿಶೇಷವಾಗಿದೆ ಇಲ್ಲಿ..  ರಾಮ ನವಮಿ, ಶ್ರೀಹನುಮ ಜಯಂತಿ ಯಂತೆಯೇ ಮೊದಲಾದ ವಿಶೇಷ ಪೂಜೆಗಳೂ, ಮಾರ್ಗಶಿರ ಮಾಸದ ಪಾಡ್ಯದಿಂದ ಪ್ರಾರಂಭಿಸಿ 13 ದಿನಗಳ ಶ್ರೀ ಹನುಮದ್ವ್ರತ ಮತ್ತು ಹುಣ್ಣಿಮೆಯ ರಥೋತ್ಸವ ವಿಶೇಷ ಪೂಜೆಗಳು ಅತಿ ಭಕ್ತಿ ಶ್ರದ್ಧಾ ಗಳಿಂದ ಆಚರಿಸಲಾಗುತ್ತದೆ.

llನಮಾಮಿ ದೂತಮ್ ರಾಮಸ್ಯll ಎಂಬ ಶ್ರೀ ಯಂತ್ರೋದ್ಧಾರಕ  ಸ್ತೋತ್ರವು ಮನೋ ಕಾಮನೆಗಳು ಫಲಗಳನ್ನು ಖಂಡಿತಾ ಈಡೇರಿಸಲ್ಪಡುತ್ತದೆ  ಎಂದು ಶ್ರೀವ್ಯಾಸರಾಜರೇ ತಿಳಿಸಿದ್ದಾರೆ.....ಇದು ಏನೋ ಚರಿತಾ ...ಎಂದು  ಶ್ರೀ ಪುರಂದರ, ಶ್ರೀ ವಿಜಯ ದಾಸರಾದಿಯಾಗಿ ಅನೇಕ ಅಪರೋಕ್ಷ ಜ್ಞಾನಿ ಗಳಿಂದ ಸ್ತುತಿಸಲ್ಪಟ್ಟ ಶ್ರೀಯಂತ್ರೋದ್ದಾರಕ ಹನುಮಂತನು ತನ್ನ ದರ್ಶನ ಮಾತ್ರದಿಂದ ಸಕಲ ಸಂಕಟಗಳಿಂದ ನಮ್ಮನ್ನು ಪಾರುಮಾಡುತ್ತಾನೆ..ಎನ್ನುವ ನಂಬಿಕೆ ಸಾಕಷ್ಟು ಜನರಲ್ಲಿದೆ .

ಶ್ರೀ ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ

ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್ |ಪೀನವೃತ್ತ ಮಹಾಬಾಹುಂ ಸರ್ವ ಶತೃ ನಿವಾರಣಂ ||೧||

ನಾನಾರತ್ನ ಸಮಾಯುಕ್ತಂ ಕುಂಡಲಾದಿ ವಿರಾಜಿತಮಂ |ಸರ್ವದಾಭೀಷ್ಠದಾತರಾಂ ಸತಾಂ ವೈ ಧೃಢಮಾವಹೇ ||೨||

ವಾಸಿನಂ ಚಕ್ರ ತೀರ್ಥಸ್ಯ ದಕ್ಷಿಣಸ್ಥ ಗಿರೌಸದಾ| ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೇ ||೩||

ನಾನಾದೇಶಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ |ಧೂಪದೀಪಾದಿ ನೈವೇದೈಃ ಪಂಚಖಾದ್ಯೈಶ್ಚಶಕ್ತಿತಃ ||೪||

ಭಜಾಮಿ ಶ್ರೀ ಹನೂಮತಂ ಹೇಮಕಾಂತಿ ಸಮಪ್ರಭಮ್|ವ್ಯಾಸತೀರ್ಥ ಯತೀಂದ್ರೇಣ ಪೂಜಿತಂ ಪ್ರಣಿಧಾನತಃ ||೫||

ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ | ವಾಂಛಿತಂ ಲಭತೇ ಭೀಷ್ಟಂ ಷಣ್ಮಾಸಾಭ್ಯಂತರೇ ಖಲು ||೬||

ಪುತ್ರಾರ್ಥಿ ಲಭತೇ ಪುತ್ರಾನ್ ಯಶಾರ್ಥಿ ಲಭತೇ ಯಶಃ|ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ ||೭||

ಸರ್ವಥಾ ಮಾಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ|ಯಃ ತಮ್ಮ ಕರೋತ್ಯತ್ರ ಸಂದೇಹಂ ಸಯಾತಿ ನರಕಂ ಧೃವಮ್|| ೮||

ಶ್ರೀ ಯಂತ್ರೋದ್ಧಾರಕಾರ್ಪಣಮಸ್ತು

No comments:

Post a Comment