JALADHI ALANGISI ಜಲಧಿ ಆಲಂಗಿಸಿ
ಜಲಧಿಯಾಲಂಘಿಸಿದವಗೆ ಜಯ ಮಂಗಳಂ | ನಮ್ಮ ಸುಲಧಿತ ಮುಖ್ಯ ಪ್ರಾಣಗೆ ಶುಭ ಮಂಗಳಂ |ಜಲಧಿಯಾಲಂಘಿಸಿದವಗೆ ಜಯಮಂಗಳಂ ||
ಅಗ್ರಜನ ಭಯದಲ್ಲಿದ್ದ |ಸುಗ್ರೀವನ ತಂದು ಲಕ್ಷ್ಮ |ಣಾಗ್ರಜನ ಪಾದಕಮಲಕ್ಕೆ ಹಾಕಿಸಿ | ನಿಗ್ರಹಿಸಿ ವಾಲಿಯನ್ನು |ಶೀಘ್ರದಿಂದ ಕಪಿಗಳೊಳಗೆ |ಅಗ್ರೇಶನ ಮಾಡಿದ ಮುಖ್ಯ ವಿಗ್ರಹನಿಗೆ ||
ಏಕಚಕ್ರ ಪುರದಲ್ಲಿದ್ದ |ನೇಕ ವಿಪ್ರ ಸಮೂಹಕ್ಕೆ | ಭೀಕರನಾಗಿದ್ದ ಬಕನ |ನೂಕಿ ಹಾಕಿದ ಲೋಕಕ್ಕೆ ಕಂಟಕನಾದ | ಕಾಕು ದುರ್ಯೋಧನನ ಕೊಂದ | ಶ್ರೀ ಕೃಷ್ಣನ ಭಕ್ತ ಜಗದೇಕ ವೀರನಿಗೆ ||
ಜೀವ ದೇಹ ಒಂದೆ ಎಂಬ |ಮಾಯವಾದಿ ಮತವ ಮುರಿದು | ಜೀವ ಭೇದ ಜನಕ ಭೇದ ಎಂದು ಸ್ಥಾಪಿಸಿ |ದೇವ ಶ್ರೀ ಪುರಂದರ ವಿಠ್ಠಲ ಪರದೈವವೆಂದು | ಕಾವ ಗುರು ಕರುಣಾನಿಧಿ ಮಧ್ವಮುನಿಗೆ || ಜಲಧಿಯಾಲಂಘಿಸಿದವಗೆ ಜಯ ಮಂಗಳಂ | ನಮ್ಮ ಸುಲಧಿತ ಮುಖ್ಯ ಪ್ರಾಣಗೆ ಶುಭ ಮಂಗಳಂ |ಜಲಧಿಯಾಲಂಘಿಸಿದವಗೆ ಜಯಮಂಗಳಂ ||
.......ಪುರಂದರದಾಸರು
No comments:
Post a Comment