Saturday, November 04, 2023

NAAGA PUJAA ನಾಗಪುಜಾ ವಿಧಿ ಸಂಕಲ್ಪ II

ನಾಗಪುಜಾ ವಿಧಿ    ಸಂಕಲ್ಪ
ಶ್ರಾವಣ ಶುಕ್ಲ ಪಂಚಮಿ – ನಾಗಪುಜಾ ವಿಧಿ    ಸಂಕಲ್ಪ : ಆಚಮ್ಯ.. ಪ್ರಾಣಾನಾಯಮ್ಯ.. ದೇಶಕಾಲೌ ಸಂಕೀರ್ತ್ಯ ಮಮ ಸಹಕುಟುಂಬಸ್ಯ ಸಹಪರಿವಾರಸ್ಯ ಸರ್ವದಾ ಸರ್ವತಃ 
ಸರ್ಪ ಭಯ ನಿವೃತ್ತಿ ಪೂರ್ವಕಂ ಸರ್ಪ ಪ್ರಸಾದ ಸಿದ್ಧಿದ್ವಾರಾ 
ಶ್ರೀ ಪರಮೇಶ್ವರ ಪ್ರೀತ್ಯರ್ಥಮ್ ಶ್ರಾವಣ ಶುಕ್ಲ ಪಂಚಮಿ 
ವಿಹಿತಂ  ನಾಗಪುಜನಂ ಚ ಕರಿಷ್ಯೇ . ಆಮೇಲೆ ಕಲಶ ಪೂಜಾ  
ಸಂಕ್ಷೇಪೇಣ  ಪ್ರಾಣಪ್ರತಿಷ್ಠಾ,  ಧ್ಯಾನಂ : ಅನಂತಂ ವಾಸುಕಿಂ | ಶೇಷಮ್ ಪದ್ಮನಾಭಂ ಚ ಕಂಬಲಂ | ಧೃತರಾಷ್ಟ್ರಂ ಶಂಖಪಾಲಂ | ತಕ್ಷಕಂ ಕಾಲಿಯಂ ತಥಾ | ಎತಾನಿ ನವ ನಾಮಾನಿ ನಾಗಾನಂ | ಯಃ ಪಠೇತ ಸದಾ | ನಶ್ಯೇದ್ವಿಷಭಯಂ ತಸ್ಯ ಸರ್ವ ಕಾರ್ಯೋ 
ಜಯೋ ಭವೇತ್ |  ಆವಾಹನಂ : ಭುಜಂಗೇಶಾಯ ವಿಧ್ಮಹೇ  | ಸರ್ಪರಾಜಾಯ ಧೀಮಹಿ ತನ್ನೋ ನಾಗಃ ಪ್ರಚೋದಯಾತ್ || ಅಥವಾ   ಅಯಂಗೌ:  ಎಂಬ ಮಂತ್ರದಿಂದ ನಾಗಪತ್ನಿ ಸಹಿತ ಅನಂತಾದಿ ನಾಗೇಭ್ಯೋ ನಮಃ  ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಪ್ರಾರ್ಥನಾ : ಶ್ರಾವಣೆ ಶುಕ್ಲ ಪಂಚಮ್ಯಾಂ ಯತ್ ಕೃತಂ ನಾಗ ಪೂಜನಂ ತೇನ ತೃಪ್ಯಂತುಮೇ ನಾಗಾ ಭವಂತು ಸುಮುಖಾ ಮಮ || ಅಜ್ಞಾನಾ ಜ್ಞಾನತೋ ವಾಪೀ ಯನ್ಮಯಾ ಪೂಜನಂ ಕೃತಂ  ನ್ಯುನಾತಿರಿಕ್ತಂ ತತ್ ಸರ್ವಂ ಭೋ ನಾಗಾಃ ಕ್ಷಂತು ಮರ್ಹಥ | ಯುಷ್ಮತ್ ಪ್ರಸಾದಾತ್ಸಫಲಾ ಮಮ ಸಂತು ಮನೋರಥಃ ಸರ್ವದಾಮತ್ಕುಲೇ ಮಾಸ್ತು ಭಯಂ ಸರ್ಪ ಕುಲೋದ್ಭವಂ || ವಿಷಬಾಧಾ ನಿವಾರಣ ಮಂತ್ರಃ  ಓಂ ಕುಕುಲಂ ಹುಂ ಫಟ್ ಸ್ವಾಹಾ 

ಶ್ರಾವಣ ಶುಕ್ಲ ದ್ವಾದಶಿ ದಿವಸ ಮಹಾ ವಿಷ್ಣುವಿಗೆ ಪವಿತ್ರಾರೋಪಣ ಮಂತ್ರ : ದೇವ ದೇವ ನಮಃ ಸ್ತುಭ್ಯಂ ಗೃಹಾಣೇದಂ ಪವಿತ್ರಕಂ | ಪವಿತ್ರೀಕರನಾರ್ಥಾಯಂ ವರ್ಷಪುಜಾ ಫಲಪ್ರದಂ ||  ಪವಿತ್ರಕಂ ಕುರುಷ್ವಾದ್ಯ ಯನ್ಮಯಾ ದುಷ್ಕೃತಂ ಕೃತಂ | ಶುದ್ದ್ಹೋ ಭವಾಮ್ಯಹಂ ದೇವ ತ್ವತ್ ಪ್ರಸಾದಾತ್ ಸುರೇಶ್ವರ ||

       ನಮ್ಮ ದೇಹದೊಳಗಿರುವ ಅಧ್ಯಾತ್ಮ ಕೇಂದ್ರಗಳಿಗೆ ಕುಂಡಲಿನೀ ಶಕ್ತಿ ಎಂದು ಹೆಸರು "ಸರ್ಪೆಂಟ್ ಪವರ್".

ನಮ್ಮ ಮೂಲಾಧಾರದಲ್ಲಿ ಈ ಕೇಂದ್ರ, ಕುಂಡಲ ಹಾಕಿ ಮಲಗಿದ ಹಾವಿನಂತಿದೆ. ಅದು‌ ಮೇಲೇರಿ ಸಹಸ್ರಾರದಲ್ಲಿ ಹೆಡೆಯರಳಿಸಬೇಕು.

ಅದೇ ಯೋಗಸಿದ್ಧಿ. ಅದರಿಂದ ಶೇಷ-ನಾಗ ಅಧ್ಯಾತ್ಮ ಸಾಧನೆಯ ಸಂಕೇತವೂ ಹೌದು.

ನಮ್ಮ ಅನ್ನಮಯ ಕೋಶದಲ್ಲಿ ಶಿವ ತುಂಬಿದ್ದಾನೆ.

ಅದಕ್ಕೆಂದೆ ಅವನಿಗೆ ಶರೀರಪುರುಷ ಎಂದು ಹೆಸರು.

ಅವನು ಹೊರಟು ಹೋದರೆ ಇದು ಶವವಾಗಿ ಬಿಡುತ್ತದೆ.

ಪ್ರಾಣಮಯ ಕೋಶದಲ್ಲಿ ಶೇಷ-ಸಂಕರ್ಷಣ ತುಂಬಿದ್ದಾನೆ.

ಅವನ ಮೂಲಕ ನಾವು ಮಾತನಾಡುತ್ತೇವೆ.

ಅದಕ್ಕೆಂದೆ ಅವನಿಗೆ ಛಂದಃಪುರುಷ ಎಂದು ಹೆಸರು.

ಹೀಗೆ ಶೇಷಶಕ್ತಿ ನಮ್ಮ ನಾಲಗೆಯಲ್ಲಿ ಮಾತು ಚಿಗುರಿಸುವ ಒಂದು ವಿಶೇಷ ಶಕ್ತಿ. 

ಶೇಷ ಇಲ್ಲದಾಗ ಮಾತು ಮೂಕವಾಗುತ್ತದೆ.

ಅಷ್ಟೇ ಅಲ್ಲ ಪೌರುಷೇಯ ಆಗಮಗಳಿಗೆ, ವಿಶೇಷತಃ ಪಂಚರಾತ್ರಗಳಿಗೆ ದ್ರಷ್ಟಾರನಾದ ಋಷಿ ನಾಗರಾಜನಾದ ಶೇಷ; 'ಪಂಚರಾತ್ರಸ್ಯ ನಾಗರಾಡ್'.

ಹೀಗೆ ಪಿಂಡಾಂಡ-ಬ್ರಹ್ಮಾಂಡಗಳ ಧಾರಕ ಶಕ್ತಿಯಾಗಿ ಶೇಷನಿಗೆ ವೈದಿಕ ಉಪಾಸನೆಯಲ್ಲು ತುಂಬ ಮಹತ್ವದ ಸ್ಥಾನವಿದೆ.

ಇದೆಲ್ಲದರ ಸಂಕೇತವಾಗಿ 'ನಾಗಾರಾಧನೆ'' ನಮ್ಮಲ್ಲಿ ಆಚರಣೆಗೆ ಬಂದಿದ.



No comments:

Post a Comment