Friday, May 24, 2024

*Aaryanna ಆರ್ಯನ್ನ ಯೋಗಧುರ್ಯನ್ನ

               ಆರ್ಯನ್ನ ಯೋಗಧುರ್ಯನ್ನ
                 ಶ್ರೀ ವಾದಿರಾಜ ತೀರ್ಥರ ಕೃತಿ

ರಾಗ: ಸಿಂಧುಭೈರವಿ ರೂಪಕತಾಳ

ಆರ್ಯನ್ನ ಯೋಗಧುರ್ಯನ್ನ ಭಜಿಸಿ
ವರ್ಯನ್ನ ಮಧ್ವಾಚಾರ್ಯನ್ನ ॥ ಪ ॥

ಅಕಳಂಕ ಮಹಿಮ ಚರಿತ್ರನ್ನ ಈ ।
ಸಕಲ ಭುವನಕೆ ಪವಿತ್ರನ್ನ ॥
ಪ್ರಕಟ ಭಾರತಿ ಸತ್ಕಳತ್ರನ್ನ ಪಾಪ - ।
ನಿಕರಕಾನನ್ನ ವೀತಿಹೋತ್ರನ್ನ ॥ 1 ॥

ನಿರ್ಜಿತ ಪಾಷಂಡಯೂಥನ್ನ ದೂರ ।
ವರ್ಜಿತ ಭವದುಃಖಬದ್ಧನ್ನ ॥
ಸಜ್ಜನರಘಕೆ ನಿರೋಧನ್ನ ದೋಷ - ।
ವರ್ಜಿತ ಗುಣಪೂರ್ಣಬೋಧನ್ನ ॥ 2 ॥

ಸದಮಲ ಲಕ್ಷಣ ತುಂಗನ್ನ ಸಿರಿ ।
ಸದನನ್ನ ಕರುಣಾಂತರಂಗನ್ನ ॥
ಮದಮೋಹ ತಿಮಿರ ಪತಂಗನ್ನ ಹಯ - ।
ವದನನ್ನ ಚರಣಾಂಬ್ಜಭೃಂಗನ್ನ ॥ 3 ॥

No comments:

Post a Comment