Wednesday, June 19, 2024

TRIDEV RESIDES ASHWATHA ತ್ರಿಮೂರ್ತಿಗಳ ಸ್ಥಾನ ಅರಳಿ ಮರ

        ತ್ರಿಮೂರ್ತಿಗಳ ಸ್ಥಾನ ಅರಳಿ ಮರ

                   ಧಾರ್ಮಿಕ ದೃಷ್ಟಿಯಿಂದ ತ್ರಿಮೂರ್ತಿಗಳ ವಾಸಸ್ಥಾನ ಅರಳಿ ಮರ........  "ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರುಪಿಣೆ, ಅಗ್ರತಃ ರುದ್ರ ರೂಪಾಯ ವೃಕ್ಷರಾಜಾಯತೇ ನಮಃ"

ಅಶ್ವತ್ಥ ಮರವನ್ನು ಪೂಜಿಸಿದರೆ ಕಾಲಸರ್ಪ ದೋಷ ನಿವಾರಣೆಯಾಗುವುದು ನಮ್ಮ ಹಿಂದೂ ಧರ್ಮದಲ್ಲಿ ನಂಬಿಕೆ ಇದೆ.

ಹಿಂದೂ ಧರ್ಮಿಯರಿಗೆ ಅಶ್ವತ್ಥ ಮರವೆಂದರೆ ತುಂಬಾ ಪೂಜ್ಯನೀಯವಾಗಿದೆ. ಅಶ್ವತ್ಥ ಮರದ ಎಲೆ ಹಾಗೂ ಕಡ್ಡಿಗಳನ್ನು ವಿವಿಧ ರೀತಿಯ ಪೂಜೆ ಹಾಗೂ ಹವನಗಳಿಗೂ ಬಳಸಲಾಗುತ್ತದೆ. ಶನಿವಾರದಂದು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ತುಂಬಾ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಅಶ್ವತ್ಥ ಮರದಲ್ಲಿ ಶನಿವಾರದಂದು ವಿಷ್ಣುವಿನ ಜತೆಗೆ ಲಕ್ಷ್ಮೀಯು ನೆಲೆಸಿರುತ್ತಾಳೆ ಎಂದು ಪುರಾಣಗಳು ಹೇಳುತ್ತವೆ. 

ದೇವ ಸ್ವರೂಪಿ ಅಶ್ವತ್ಥ ಮರದ ಎಲೆಗಳ ಔಷಧೀಯ ಗುಣಗಳು

ಅನೇಕ ಖಾಯಿಲೆಗಳಿಗೆ ಅರಳಿ ಮರ ಒಂದು ರಾಮಬಾಣವೆಂದೇ ಹೇಳಬಹುದು.

ಅರಳಿ ಮರದ ಎಲೆಗಳ ರಸಕ್ಕೆ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಕುಡಿದರೆ ಕಾಮಾಲೆ ಖಾಯಿಲೆ ಕಡಿಮೆಯಾಗುತ್ತದೆ..

ಅರಳಿ ಮರದ ಎಲೆಗಳನ್ನು ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಬೆಲ್ಲವನ್ನು ಹಾಕಿ ಬೆಳಗ್ಗೆ ಮತ್ತು ರಾತ್ರಿ ಕುಡಿದರೆಶೀತ ಕೆಮ್ಮು ಮಾಯವಾಗುತ್ತದೆ.

ಒಂದು ಹಿಡಿ ಅರಳಿ ಎಲೆಗಳನ್ನು ಅರ್ಧ ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅರ್ಧದಷ್ಟಾದ ಮೇಲೆ ಇದನ್ನು ತಣ್ಣಗೆ ಮಾಡಿ ಕುಡಿದರೆ ಹೃದಯ ತೊಂದರೆ ಕಡಿಮೆಯಾಗುತ್ತದೆ.

ಹಲ್ಲು ನೋವು ಅಥವಾ ಹಲ್ಲನ್ನು ಗಟ್ಟಿಗೊಳಿಸಲು ಜೊತೆಗೆ ಹಲ್ಲನ್ನು ಬಿಳುಪಾಗಿಸಲು ಅರಳಿ ಮರದ ಚೆಕ್ಕೆಯನ್ನು ಪುಡಿ ಮಾಡಿ ಹಲ್ಲನ್ನು ಉಜ್ಜಲು ಬಳಸಿ.

ಅಸ್ತಮಾವನ್ನು ಕಡಿಮೆ ಮಾಡಲು ಅರಳಿ ಮರದ ತೊಗಟೆಯನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ನೀರಿನಲ್ಲಿ ಕಲಸಿ ಕುಡಿಯಿರಿ..

ಮರವು ದೇವದೇವತೆಗಳಿಗೆ ಸ್ವರ್ಗ ಎಂದು ಅಥರ್ವ ವೇದ ಮತ್ತು ಛೋದೋಗ್ಯ ಉಪನಿಷತ್ ನಲ್ಲಿ ಹೇಳಲಾಗಿದೆ. ಪುರಾಣಗಳ ಪ್ರಕಾರ ಅಶ್ವತ್ಥ ಮರದ ಬೇರಿನಲ್ಲಿ ಬ್ರಹ್ಮ, ಕೊಂಬೆಯಲ್ಲಿ ವಿಷ್ಣು ಮತ್ತು ಎಲೆಗಳಲ್ಲಿ ಶಿವ ನೆಲೆಸಿರುತ್ತಾನೆ. ಅಶ್ವತ್ಥ ಮರವನ್ನು ಪೂಜಿಸುವವರಿಗೆ ಸಂಪತ್ತು ಸಿಗುವುದು ಮಕ್ಕಳಿಲ್ಲದವರಿಗೆ ಮಕ್ಕಳ ಪ್ರಾಪ್ತಿ ಯಾಗುವುದು ಮತ್ತು ಇದರಲ್ಲಿ ತಪ್ಪು ಮಾಡುವವರಿಗೆ ಬಡತನ ಕಾಡುವುದು ಎನ್ನಲಾಗಿದೆ. ಅಶ್ವತ್ಥ ಮರವನ್ನು ಪೂಜಿಸುವವರಿಗೆ ಇರುವ ನಿಯಮಗಳ ಬಗ್ಗೆ ತಿಳಿದುಕೊಂಡು ಅಶ್ವತ್ಥ ಮರ ಪೂಜಿಸಿ.....

ವೈಜ್ಞಾನಿಕ ಕಾರಣಗಳು

ಹೆಚ್ಚಿನ ಮರಗಳು ಕಾರ್ಬನ್ ಡೈಯಾಕ್ಸೈಡ್ ನ್ನು ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತದೆ. ರಾತ್ರಿ ವೇಳೆ ಮರಗಳು ಆಮ್ಲಜನಕವನ್ನು ಹೀರಿಕೊಂಡು ಕಾರ್ಬನ್ ಡೈಯಾಕ್ಸೈಡ್ ನ್ನು ಬಿಡುಗಡೆ ಮಾಡುವುದು. ಇದರಿಂದ ರಾತ್ರಿ ವೇಳೆ ಮರಗಳ ಸಮೀಪ ಮಲಗಬಾರದು ಎನ್ನಲಾಗುತ್ತದೆ.  ಆದರೆ ಅಶ್ವತ್ಥ ಮರವು ರಾತ್ರಿ ವೇಳೆ ಕೂಡ ಆಮ್ಲಜನಕವನ್ನು ಬಿಡುಗಡೆ ಮಾಡುವುದು. ಅಶ್ವತ್ಥ ಮರವು ರಾತ್ರಿ ವೇಳೆಯೂ ಆಮ್ಲಜನಕವನ್ನು ಬಿಡುಗಡೆ ಮಾಡುವುದು. ಯಾಕೆಂದರೆ ಕ್ರಾಸ್ಲುಲೇಶನ್ ಮೆಟಾಬಾಲಿಸಮ್ ಎನ್ನುವ ಒಂದು ರೀತಿಯ ದ್ಯುತಿಸಂಶ್ಲೇಷಣೆ ನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ. ನಿಮ್ಮ ಸುತ್ತಮುತ್ತ ಅಶ್ವತ್ಥ ಮರಗಳು ಹೆಚ್ಚಾಗಿದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದು. ಯಾಕೆಂದರೆ ಇದು ವಾತಾವರಣವನ್ನು ಶುದ್ಧೀಕರಿಸುವುದು.

ಧಾರ್ಮಿಕ ಕಾರಣಗಳು

ಅಶ್ವತ್ಥ ಮರದಲ್ಲಿ ನಾನು ನೆಲೆಸಿರುತ್ತೇನೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ದೇವರು ಹೇಳಿದ್ದಾರೆ. ಅಶ್ವತ್ಥ ಮರಕ್ಕೆ ನೀರು ಹಾಕುವುದು, ಪೂಜಿಸುವುದು ಮತ್ತು ಸುತ್ತು ಬರುವುದರಿಂದ ಸಂಪತ್ತು, ಅಪತ್ಯ ಪ್ರಾಪ್ತಿ, ಸಂತೋಷ ಮತ್ತು ಒಳ್ಳೆಯ ಅದೃಷ್ಟ ಬರುವುದು ಎಂದು ನಂಬಲಾಗಿದೆ. ಅಶ್ವತ್ಥ ಮರವನ್ನು ಪೂಜಿಸಿದರೆ ಪಿತ್ತ ದೋಷ ಮತ್ತು ಕಾಲಸರ್ಪ ದೋಷವು ನಿವಾರಣೆಯಾಗುವುದು ಎಂದು ಪುರಾಣಗಳಲ್ಲಿ ಇದೆ.

ಅಮವಾಸ್ಯೆಯ ದಿನ

ಅಮವಾಸ್ಯೆಯ ದಿನ ಶ್ರೀಗೋವಿಂದ ಸ್ತೋತ್ರ, ಅಶ್ವಥ್ಹ ಸ್ತೋತ್ರ, ಹನುಮಾನ ಚಾಲೀಸ ಹೇಳಿಕೊಂಡು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ಜೀವನದಲ್ಲಿ ಬರುವ ಹಲವಾರು ರೀತಿಯ ಸಂಕಷ್ಟಗಳು ದೂರವಾಗುವುದು ಎಂದು ಹಿರಿಯರು ಹೇಳುತ್ತಾರೆ. ಅಶ್ವತ್ಥ ಮರದ ಕೆಳಗೆ ಪ್ರತೀದಿನ ಸಾಸಿವೆ ಎಣ್ಣೆಯ ದೀಪ ಹಚ್ಚಿದರೆ ತುಂಬಾ ಒಳ್ಳೆಯದು ಎಂದು ನಂಬಲಾಗಿದೆ.

ವೃಕ್ಷೋ ರಕ್ಷತಿ ರಕ್ಷಿತಃ


No comments:

Post a Comment