ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ಸಿದ್ಧಿದಾ
ಸಿದ್ಧಿದಾಯಿನೀ ||
ಗಗನಾಭೋಗದ ಮಹಿಮಾ ಚತುರೆ ಆಯಾಚನೆಯನು ಆಲಿಸು ಬಾ
ಸಿದ್ಧರ ಯಕ್ಷರ ಅಮರರ ಮರ್ತ್ಯರ ಸಿದ್ಧಿಯೆಡೆಗೆ ಮತಿ ಚಾಲಿಸು ಬಾ
ಹಗ್ಗವ ಹಾವೆಂದೋಡುವ ಮೂಢರ ಜಗ್ಗುತ ಸತ್ಯವ ತೋರಿಸು ಬಾ
ಅಗ್ಗಿಸು ಕುಗ್ಗಿಸು ಧರ್ಮವಿಹೀನರ ಸಗ್ಗವ ಧರ್ಮಿಗೆ ಪಾಲಿಸು ಬಾ
ಸಿದ್ಧಿದಾಯಿನಿ ಸಿದ್ಧಿಪ್ರದಳೇ ಬದ್ಧ ತಪೋಬಲ

ನೀಡಲು ಬಾ
ಬುದ್ಧರಾಗಿಸು ಶುದ್ಧ ಅಬದ್ಧರ ಮುಗ್ಧಜನರ
ಬುದ್ಧರಾಗಿಸು ಶುದ್ಧ ಅಬದ್ಧರ ಮುಗ್ಧಜನರ
ಭವತೇಲಿಸು ಬಾ
ನವಮಿಯ ದಿನದ ಪೂಜೆಗೆ ಬಾ, ಭುವನವ ಮಂಗಲ ವಾಗಿಸು ಬಾ
ನವಮಿಯ ದಿನದ ಪೂಜೆಗೆ ಬಾ, ಭುವನವ ಮಂಗಲ ವಾಗಿಸು ಬಾ
ಹವನದ್ವೇಷಿಗಳ ನಿಗ್ರಹಿಸುತಲಿ ತವನ ಕಾರರನು ಪಾಲಿಸು ಬಾ
..... ಜಾನಕಿ ರಾಮ
ಸೀತಾರಾಮ ಕಟ್ಟಿ ಯಲಗೂರು
No comments:
Post a Comment