Monday, October 07, 2024

*JAGADADHI DEVANE " ಜಗದಧಿ ದೇವನೆ "

                            ಜಗದಧಿ ದೇವನೆ  


ಜಗದಧಿ ದೇವನೆ  ದೇವಾಧಿ ದೇವನೆ.  2

ಅಘನಾಶಕನೇS ತರುವರರೂಪನೇS     || ಪಲ್ಲ ||


ಕರದಲಿ ಧನುವು ಬೆರಳಲಿ ಚಕ್ರವು.     2

ಶಿರದಲಿ ಜಡೆಯು ಫಾಲಲಿ ಪೌಂಡ್ರವು 2

ಸುರ ಅಸುರರು  ನತ ನಿನಗನುಗಾಲವೂ.  ||೧

ಜಗದಧಿ ದೇವನೆ  ದೇವಾಧಿ ದೇವನೆ

ಅಘನಾಶಕನೇS ತರುವರರೂಪನೇS


ಕೋದಂಡವ ಶಾರಂಗವ ಧರಿಸಿದ    2

ವೇಧವು ಸಂರಕ್ಷಣ ವಿಧ ಧರ್ಮದ.   2

ವೇದದಿ ನೀ ಪ್ರಳ ಯಾಂತಕ ದೇವನೇ.     ||೨

ಜಗದಧಿ ದೇವನೆ  ದೇವಾಧಿ ದೇವನೆ

ಅಘನಾಶಕನೇS ತರುವರರೂಪನೇS


ಉತ್ತುಂಗ ಪೀಠದಿ ವಿರಾಜಮಾನನು.  2

ನಿತ್ಯದಿ ಸೇವಿಪ ವಾಯು ವಿಹಂಗಮ.  2

ಸತ್ಯದಿ ಪ್ರವಹಿಪ ಭೀಮರಥೀSತಟ        ||೩

ಜಗದಧಿ ದೇವನೆ  ದೇವಾಧಿ ದೇವನೆ

ಅಘನಾಶಕನೇS ತರುವರರೂಪನೇS


ಕಲಶೋದ್ಭವ ಅರ್ಚಿತ ಮೂರುತಿಯೇ. 2

ವಿಲಸಿತ ಅಶ್ವತ್ಥ ನಿಂಬಕ ರೂSಪನೇ.    2

ವಲಯದಿ ಪಠಿಪರ ಮೋಕ್ಷ ದಾಯಕನೇ. ||೪

ಜಗದಧಿ ದೇವನೆ  ದೇವಾಧಿ ದೇವನೆ

ಅಘನಾಶಕನೇS ತರುವರರೂಪನೇS


ಚಂದ್ರಿಕೆ ಚಂಚಲೆ ಯುಗಲರ್ಧಾಂಗರು.  2

ಸಾಂಧ್ರದಿ ವಾಮಕೆ ಶ್ರೀ ವನದೇವಿಯು.  2

ಮಂದ್ರಧೀಮಂದ ಪ್ರಸೂSತಿ ಸಖಿಯಳೂ.   ||೫

ಜಗದಧಿ ದೇವನೆ  ದೇವಾಧಿ ದೇವನೆ

ಅಘನಾಶಕನೇS ತರುವರರೂಪನೇS


ಪರಿಸರ ರಕ್ಷಕ ಭೂSತ ರಕ್ಷಾಟನು.       2

ಎರೆವಿಜಯರು ಸಂ ವರ್ಧಕ ಸೇವ್ಯರು. 2

ವರಯಜಮಾನನೇ ಪ್ರಸರಿಪ ಪುರಗಳ.   ||೬

ಜಗದಧಿ ದೇವನೆ  ದೇವಾಧಿ ದೇವನೆ

ಅಘನಾಶಕನೇS ತರುವರರೂಪನೇS


ವಂದೇ ಗೋವೃಂದಪುರ ಸುಪ್ರಾಂತದೀ. 2

ವಂದೇ ಹೃದ್ಮನದಿಂ ಗೋಯುಥಗಳ.     2

ವಂದಿಸಿ ನೃಪ ವಿಕ್ರಮನು ದಾSರ್ಢ್ಯರ     ||೭

ಜಗದಧಿ ದೇವನೆ  ದೇವಾಧಿ ದೇವನೆ

ಅಘನಾಶಕನೇS ತರುವರರೂಪನೇS


ಶಿಷ್ಟರ ಭಕುತರ ಸುಖದಾSಯಕನೇ.   2

ಕಷ್ಟ ಕಾರ್ಪಣ್ಯಗಳ್ ನೀಗಿಪ ನೃಪನೇ.  2

ಭ್ರಷ್ಟ ಖಲರುಗಳ ಮದವನು ವಿಧಿಸುವ.  ||೮

ಜಗದಧಿ ದೇವನೆ  ದೇವಾಧಿ ದೇವನೆ

ಅಘನಾಶಕನೇS ತರುವರರೂಪನೇS


ನಿಂಬಕ ಅಶ್ವಥ ಜ್ಞಾನ ಪೂSರಿಪತರು.  2

ಅಂಬರ ಭಿಷಜರ ವರಪ್ರಾಸಾSದದೀ.  2

ಸಂಭ್ರಮದಿ ಆಯುರಾರೋಗ್ಯ ನೀಡುತ.  ||೯

ಜಗದಧಿ ದೇವನೆ  ದೇವಾಧಿ ದೇವನೆ

ಅಘನಾಶಕನೇS ತರುವರರೂಪನೇS


ಗೋಪತಿ ಸೌಮಿತ್ರಾಗ್ರಜ ಸಂಯುತ   2

ಆಪ್ಯಾಯತೆಯಲಿ ಭಜಿಪರ ಇಪ್ಸಿತ    2

ಗೌಪ್ಯದಿ ಇಂದಿರೇಶಸುತನನೇ ಹರಸುತ.    ||೧೦

ಜಗದಧಿ ದೇವನೆ  ದೇವಾಧಿ ದೇವನೆ

ಅಘನಾಶಕನೇS ತರುವರರೂಪನೇS

No comments:

Post a Comment