Thursday, February 13, 2025

*Nrusimha Nakha Stutihi ಶ್ರೀನರಸಿಂಹ ನಖಸ್ತುತಿಃ

ಅಥ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತಂ

ಶ್ರೀನರಸಿಂಹ ನಖಸ್ತುತಿಃ

ಶ್ರೀ ಗುರುಭ್ಯೋ ನಮಃ ಹರಿ : ಓಂ 


ಪಾಂತ್ವಸ್ಮಾನ್ ಪುರುಹೂತ ವೈರಿ ಬಲವನ್ ಮಾತಂಗ ಮಾದ್ಯದ್ ಘಟಾ  | ಕುಂಭೋಚ್ಚಾದ್ರಿ ವಿಪಾಟನಾಧಿಕ ಪಟು ಪ್ರತ್ಯೇಕ ವಜ್ರಾಯಿತಾಃ | ಶ್ರೀಮತ್ ಕಂಠೀರವಾಸ್ಯ ಪ್ರತತ ಸು ನಖರಾ ದಾರಿತಾರಾತಿ ದೂರ | ಪ್ರಧ್ವಸ್ತ ಧ್ವಾಂತ ಶಾಂತ ಪ್ರವಿತತ ಮನಸಾ ಭಾವಿತಾ ನಾಕಿವೃಂದೈಃ   || ೧ ||


ಲಕ್ಷ್ಮೀ ಕಾಂತ ಸಮಂತತೋಽಪಿ ಕಲಯನ್ ನೈವೇಶಿತುಸ್ತೇ ಸಮಂ  | ಪಶ್ಯಾಮ್ಯುತ್ತಮ ವಸ್ತು ದೂರ ತರತೋಽಪಾಸ್ತಂ ರಸೋ ಯೋಽಷ್ಟಮಃ | ಯದ್ ರೋಷೋತ್ಕರ ದಕ್ಷ ನೇತ್ರ ಕುಟಿಲ ಪ್ರಾಂತೋತ್ಥಿತಾಗ್ನಿ ಸ್ಫುರತ್  |  ಖದ್ಯೋತೋಪಮ ವಿಸ್ಫುಲಿಂಗ ಭಸಿತಾ ಬ್ರಹ್ಮೇಶ-ಶಕ್ರೋತ್ಕರಾಃ || ೨ ||


|| ಇತಿ  ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ವಿರಚಿತಂ ಶ್ರೀ ನರಸಿಂಹ ನಖಸ್ತುತಿಃ ಸಂಪೂರ್ಣಾ ||


ನಖ ಸ್ತುತಿಯ ಪ್ರತಿಶಬ್ದಕ್ಕೂ ಈ ಕೆಳಗಿನಂತೆ ಫಲಶ್ರುತಿ - ಸಕಲಅನಿಷ್ಟನಿವಾರಣೆ ಹಾಗೂ ಸಕಲಾಭೀಷ್ಟ ಸ೦ಪ್ರಾಪ್ತಿಗಾಗಿ.....

1. ಶ್ರೀಮದ್ವಿಷ್ಣ್ವ೦ಘ್ರಿನಿಷ್ಠ --- ವಿದ್ಯಾಸಿದ್ಧಿ.

2. ಉತ್ಕ೦ಠಾಕು೦ಠ   --- ಪ್ರಜ್ಞಾಸಿದ್ಧಿ.

3. ಜನ್ಮಾಧಿವ್ಯಾಧ್ಯುಪಾಧಿ --- ರೋಗನಿವೃತ್ತಿ.

4. ಅಸ್ಯಾವಿಷ್ಕರ್ತುಕಾಮ೦ --- ಮ೦ತ್ರಸಿದ್ಧಿ.

5. ಉದ್ಯದ್ವಿದ್ಯುದ್ಪ್ರಚ೦ಡಾ೦ --- ಬುದ್ಧಿಪ್ರಾಪ್ತಿ.

6. ಸ೦ಸಾರೋತ್ತಾಪ --- ಸ೦ತಾಪನಿವೃತ್ತಿ.

7. ಮೂರ್ಧನ್ಯೇಷೋ --- ಬ೦ಧಮುಕ್ತಿ.

8. ಸಾಭ್ರೋಷ್ಣಾಭೀಶು ---ಉನ್ಮಾದಪರಿಹಾರ.

9. ಯೇಮು೦ ಭಾವ೦ --- ಸುಖದಾ೦ಪತ್ಯ.

10. ಆನ೦ದಾನ್ --- ಆನ೦ದಪ್ರಾಪ್ತಿ.

11. ಉತ್ತಪ್ತಾತ್ಯುತ್ಕಟತ್ವಿಟ್---ಶತ್ರುಜಯ.

12. ಅಸ್ಮಿನ್ನಸ್ಮದ್ಗುರೂಣಾ೦---ಕ್ಲೇಶನಿವೃತ್ತಿ.

13. ಕ್ಷುತ್ಕ್ಷಾಮಾನ್ ---ದಾರಿದ್ರ್ಯ ನಿವೃತ್ತಿ.

14. ಮಾತರ್ಮೇ---ಭಕ್ತಿಸಿದ್ಧಿ.

15. ಮಿಷ್ಣೋರತ್ಯುತ್ತಮತ್ವಾತ್ ---ಜ್ಞಾನಪ್ರಾಪ್ತಿ.

16. ತತ್ತ್ವಜ್ಞಾನ್---ಮೋಕ್ಷಸಾಧನಪ್ರಾಪ್ತಿ.

17. ವ೦ದೇಽಹ೦ ತ೦--- ಪೌರುಷಾಸಿದ್ಧಿ.

18. ಪ್ರಾಕ್ ಪ೦ಚಾಶತ್ --- ಔಷಧಿಸಿದ್ಧಿ.

19. ಕ್ಷಿಪ್ತಃಪಶ್ಚಾತ್ --- ಗುರಿಸಾಧನೆ.

20. ದೃಷ್ಟ್ವಾದುಷ್ಟಾಧಿ---ಸ೦ಗ್ರಾಮವಿಜಯ.

21. ದೇವ್ಯಾದೇಶ --- ಅಪೂರ್ವಕಾರ್ಯಸಿದ್ಧಿ.

22. ಜಘ್ನೇ ನಿಘ್ನೇನ --- ವಿಘ್ನಪರಿಹಾರ.

23. ನಿರ್ಮೃದ್ನನ್ನತ್ಯಯತ್ನ೦ ---ಸ೦ಕಷ್ಟನಿವೃತ್ತಿ.

24. ಕ್ಷ್ವೇಲಾಕ್ಷೀಣಾ ---- ಅಧಿಕಾರಪ್ರಾಪ್ತಿ.

25. ದ್ರುಹ್ಯ೦ತೀ೦--- ಕವಿತ್ವಸಿದ್ಧಿ.

26. ಯಾಭ್ಯಾ೦ ಶುಶ್ರೂಷುಃ--- ಗುರ್ವನುಗ್ರಹ.

27. ಗಚ್ಛನ್ಸೌಗ೦ಧಿಕಾರ್ಥ೦---ಮೋಹನಾಶ.

28. ಬಹ್ವೀಕೋಟಿರ --- ವಾದಿಜಯ.

29. ದೇಹಾದುತ್ಕ್ರಾ ---ಅಜ್ಞಾನನಿವೃತ್ತಿ.

30. ತದ್ದುಷ್ಪ್ರೇಕ್ಷಾನು --- ವಿದ್ಯಾಪ್ರಾಪ್ತಿ.

31. ಆಕ್ರೋಶ೦ತೋ ---ಭೂತಪೀಡಾನಿವೃತ್ತಿ.

32. ತ್ರಿಷ್ವಪ್ಯೇವಾವ --- ಅಪಮೃತ್ಯುನಿವೃತ್ತಿ.

33. ಉದ್ಯನ್ಮ೦ದ --- ರೂಪಲಾವಣ್ಯಪ್ರಾಪ್ತಿ.

34. ಪ್ರಾಚೀನಾಚೀರ್ಣ---ಶ್ರವಣಾದಿಯೋಗ.

35. ಪೀಠೇ ರತ್ನೋಪ ---ಐಶ್ವರ್ಯಪ್ರಾಪ್ತಿ.

36. ಸಾನುಕ್ರೋಶೈಃ --- ಹರ್ಯನುಗ್ರಹ.

37. ಅಸ್ತವ್ಯಸ್ತ೦ --- ನಷ್ಟವಸ್ತುಪ್ರಾಪ್ತಿ.

38. ಆಜ್ಞಾಮನ್ಯೈಃ --- ಅಸಾಧ್ಯಕಾರ್ಯಸಿದ್ಧಿ.

39. ಭೂತ್ವಾ ಕ್ಷೇತ್ರೇ --- ಸ೦ತತಿಪ್ರಾಪ್ತಿ.

40. ವ೦ದೇ ತ೦ ತ್ವಾ--- ಪುರುಷಾರ್ಥಸಿದ್ಧಿ.

41. ಸುಬ್ರಹ್ಮಣ್ಯಾಖ್ಯ--- ಗ್ರಹದೋಷನಿವೃತ್ತಿ.

               ಶ್ರೀಮದಾಚಾರ್ಯ ಮಧ್ವರ ಸಾಕ್ಷಾತ್ ಶಿಷ್ಯರೂ, ಅಂತರಂಗ ಭಕ್ತರೂ ಆದ ಶ್ರೀ ತ್ರಿವಿಕ್ರಮ ಪಂಡಿತರಿಗೆ ದೃಷ್ಟವಾದ ಈ ಕೃತಿ ಆಚಾರ್ಯರ ಅನುಗ್ರಹಕ್ಕೆ ಪಾತ್ರವಾಗಿದೆ. ಪ್ರತೀತಿಯಂತೆ ಆಚಾರ್ಯರನ್ನು ಅವತಾರತ್ರಯ ಸ್ವರೂಪಗಳಲ್ಲಿ ತ್ರಿವಿಕ್ರಮಪಂಡಿತರು ಕಂಡಾಗ ಹೊರಹೊಮ್ಮಿದೆ ಈ ಮಂತ್ರಸ್ತುತಿ. ಒಮ್ಮೆ ಆಚಾರ್ಯರು ಪೂಜೆಯಲ್ಲಿ ನಿರತರಾಗಿರುವಾಗ, ಕಾಲವು ಬಹಳವಾಗಲು, ತ್ರಿವಿಕ್ರಮಪಂಡಿತರು ಪೂಜಾಗ್ರಹದಲ್ಲಿ ಇಣುಕಿ ನೋಡಿದರು. ಆಗ ಅವರಿಗೆ ಅದ್ಭುತ ಅವತಾರತ್ರಯ ಸ್ವರೂಪಗಳು ತಮ್ಮ ಇಷ್ಟ ದೈವತಗಳನ್ನು ಅರ್ಚಿಸುತ್ತಿರುವುದು ಕಂಡಿತು (ಹನುಮರೂಪದಿಂದ ರಾಮಚಂದ್ರ ದೇವರನ್ನು ಭೀಮರೂಪದಿಂದ ಕೃಷ್ಣ, ಮಧ್ವರೂಪದಿಂದ ವೇದವ್ಯಾಸರನ್ನು). ಈ ಸಾಕ್ಷಾತ್ಕಾರದ ಪ್ರತಿರೂಪವಾಗಿ ವಾಯುಸ್ತುತಿ ರಚಿತವಾಯಿತು.  ಈ ಸ್ತುತಿಯನ್ನು ಆಚಾರ್ಯರಿಗೆ ತೋರಿಸಲಾಗಿ, ಆಚಾರ್ಯರು ಈ ಸ್ತುತಿ ಕೇವಲ ತನ್ನ ಸ್ತುತಿಯಾಗಿರುವುದು ಬೇಡವೆಂದು ಅದಕ್ಕೆ ಸಂಪುಟಾಕಾರವಾಗಿ ನರಸಿಂಹನ ನಖಗಳ ಪ್ರಾರ್ಥನಾರೂಪವಾಗಿ ನಖಸ್ತುತಿಯನ್ನು ಅನುಗ್ರಹಿಸಿದರು. ಈ ರೀತಿ ವಾಯುಸ್ತುತಿಯ ಆದ್ಯಂತಗಳಲ್ಲಿ ನಖಸ್ತುತಿಯ ಪಾರಾಯಣ ವಿದಿತವಾಗಿದೆ, ಇದಕ್ಕೆ ಆ ಸಿಂಹರೂಪಿ ಪರಮಾತ್ಮನೇ ಶ್ರೀರಕ್ಷೆ. 


|| ಶ್ರೀಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಶ್ರೀಕೃಷ್ಣಾರ್ಪಣಮಸ್ತು ||

No comments:

Post a Comment