Wednesday, March 19, 2025

SHANAISHCHARA CHARITAM VII ( 01- 81) ಶ್ರೀ ಶನೈಶ್ಚರ ಚರಿತಂ ೭

SHANAISHCHARA CHARITAM  VII ( 01- 81)
                  

                  ಶ್ರೀ ಶನೈಶ್ಚರ ಚರಿತಂ ೭
                || श्री शनैश्चर देवताभ्यो नमः || 
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತ್ರಿಪದಿಗಳಲ್ಲಿ  ಒಟ್ಟು ಹತ್ತು ಸಂಧಿಗಳು  )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾಣಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರ  ಶ್ರೀ ಶನಿದೇವ ಚಾಲೀಸಾ  ಸಹಿತ )


ಸಪ್ತಮ ಸವಿಗಥಾ ಸಂಧಿ ೭
( ಋಗ್ವೇದ ಸಂಹಿತಾ ಭಾಷ್ಯಾಚಾರ್ಯ ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )

ಶ್ರೀ ಕರಿಮುಖನೇ ಕರವ ಜೋಡಿಪೆ 
ಏಕದಂತನೇ ವಕ್ರತುಂಡನೆ 
ಬೇಕು ಕೃಪೆ ಗ್ರಂಥವನು ರಚಿಸಲು ಕೇಳಿಕೊಳ್ಳುವೆನು  ೧
ಶ್ರೀವಾಣಿ ಸರಸತಿಯೇ ವೀಣೆ 
ಕಾವ್ಯ ಕಲ್ಪನೆ ತರುತರಂಗವೇ 
ದೇವಿ ನಿನ್ನಯ ನಮಿಸಿ ನುತಿಸುವೆ ಕೃಪೆಯ ಮಾಡೆಂದು ೨
ಏಳನೆಯ ಸವಿಗಥೆಯೊಳಾ ನೃಪ
ಮೇಲು ದೂರದ ಕಳ್ಳನೆನಿಸಿದ 
ಪಾಳುಹೋಕರ ದಯವ ಪಡೆದನು ಹೆಳವನಾದುದಕೆ. ೩
ಒಂದು ದಿನ ಉಜ್ಜಯಿನಿ ನಗರದ 
ಮಂದಗಮನೆಯು ತಾಮಿಳಿಂದಿಗೆ 
ಅಂದಣದಿ ಕುಳಿತಿರಲು ಗಂಡನ ಮನೆಗೆ ಬರುತಿರಲು  ೪
ಗಾಣಿಗನು ಸೊಸೆ ತರುವ ದಾರಿಗೆ 
ಕಾಣಿಸಿತು ಕೈ ಕಾಲ್ಗಳಿಲ್ಲದ
ಮಾಣಿಸಿಯೇ ನೋಡಿದಳು ನಮ್ಮ ಪುರದ ಅರಸನಿವ ೫
ತವರ ಊರಿನ ಹಿರಿಯರಾಯನು 
ಸವೆಯುತಿರುವುದು ಕಂಡು ಮಾವಗೆ 
ತವಕಿಸಿಯೇ ಕೇಳಿದಳು ವಿಕ್ರಮನನ್ನು ಕರೆತರಲು  ೬
ಕುಮರಿ ಕೆಳಗಿಳಿದೋಡಿ ಬರುತಿರೆ 
ನಮಿಸಿ ವಿಕ್ರಮನನ್ನು ನೋಡಿಯೇ 
ಅಮಿತ ಭಾಗ್ಯವ ಆಗಲೆಂದಾಶಶಿದ ನುಡಿ ರಾಯ  ೭
ಗುರುತು ಮನದಲಿ ಎನಿಸಿ ಬಂದೆನು 
ಹಿರಿಯರೇ ನಮ್ಮೂರ ರಾಜರೇ 
ಕರ ಚರಣವಿಲ್ಲದೆಯೇ ಬಿದ್ದಿಹುದೇನು ಕಾರಣವು.  ೮
ಊರೆಡೆಯ ಒಳಿತಲ್ಲ ಕೇಳಿದ 
ಆರು ಇಲ್ಲವೋ ಕರ್ಮ ಕಳೆಯುವೆ 
ನೀರೇ ನಿಡು ನಿಟ್ಟುಸಿರು ಬಿಡುತಿಹೆ ಹಗಲು ರಾತ್ರಿಯಲಿ ೯
ಎಲ್ಲರೂ ಒಳ್ಳೆಯರಾಗಿ ಇರುವರು 
ಇಲ್ಲ ಅಧಿಪತಿ ನಗರದೊಳುವಿಗೆ 
ಅಲ್ಲ ಅವತಯ ನೋಡಿದುಃಖವೂ ಉಕ್ಕಿಬರುತಿಹುದು ೧೦
ಏನು ಕಾರಣ ಗಹನ ಗತಿಯದು 
ಕಾನನದಿ ಕಡಿದೊಗೆದುದೆನ್ನುಲು 
ಜ್ಞಾನಿ ವಿಕ್ರಮ ವಿವರ ಅರುಹಿದ ಜನ್ಮ ಕಥೆಯಾಗಿ  ೧೧
ಧನ್ಯ ವಿಕ್ರಮರಾಯ ವಿಧಿ ಅದು 
ಮಾನ್ಯವರ ನಿಮ್ಮನ್ನು ಒಯ್ಯುವೆ 
ಎನ್ನುತೆತ್ತಿಯೆ ಅಂದಣದಿ ಕರೆಕೊಂಡು ಕುಳ್ಳಿರಿಸಿ  ೧೨
ನಡುಗುತುಸುರಿದ ಅಂಜಿ ಮಾವನು 
ನಡುವೆ ವಿಘ್ನವ ಕರೆದುಕೊಂಡಿಯೆ 
ಉಡುಗಿ ಧೈರ್ಯವು ಸೊಸೆಗೆಕೇಳಿದ ಏನುಮಾಡುವುದು ೧೩
ಮಾಳವಾಧೀಶ್ವರನು ಧರ್ಮಿಯು 
ಪಾಳು ನೆಲದೊಳು ಬಿರ್ದ ಮಣಿ ತೆರ
ದೊಳು ಯಮಗೆ ದೊರೆತುದನು ಬಿಡುಬೇಡ ಮಾವಯ್ಯ೧೪
ಸಜ್ಜಿಕೆಯಲಾರೂಢಿ ಮನೆ ಎಡೆ 
ಉಜ್ಜಯಿನಿ ಪತಿಯನ್ನು ತಂದರು 
ರಾಜಸಿದ ಗಾಣವನು ಹೊಡೆಯುತ ಆಳಿನಾಳಾಗಿ  ೧೫
ಮಾವನವರೇ ಚಂದ್ರ ಸೇನಗೆ 
ಆವುದರುಹದೆ ಇರಲು ಬಾರದು 
ಸಾವಸಂಕಟ ಇಹುದು ಸುಖದಲಿ ಎಂದು ನೀ ತಿಳಿಯೆ ೧೬
ರಾಯನಪ್ಪಣೆ ಕುರಿತು ಪಡೆಯುವ 
ನ್ಯಾಯ ದುಡಿದನ್ನವನೇ ಸ್ವೀಕೃತ 
ಆಯಿತಂದನು ಚಂದ್ರ ಸೇನಗೆ ಅರುಹಿ ಕೈಮುಗಿದು  ೧೭
ಈಗುಪದ್ರವ ಮಾಡಲಾರನು 
ಸಾಗಬಾರದ ಮುಂಡಿಕೆಯು ಅದು 
ಭೋಗವಿದೆ ದುಡಿದುಣ್ಣುವಂತೆ ಆಗೆ ಮಹಾರಾಜ  ೧೮
ಬಳಿಕ ಸೇನನು ನುಡಿದ ಭಲೇ ಭಲೇ 
ಬಳಲಿಕೆಗೆ ಉಳಿಗಾಲವಿರಲೆಂ -
ಒಳ್ಳೆಯದು ಕರಕೊಂಡು ಜೋಕೆಯಮಾಡು ಅಸನಕ್ಕೆ ೧೯
ಆಣೆ ಆಲಿಸಿ ಬಂದು ಮನೆಯೆಡೆ
ಗಾಣಿಗನು ಪೇಳಿದನು ಹರುಷದಿ 
ಜಾಣ ವಿಕ್ರಮ ಕೇಳಿ ತಿಳಿಸಿದ ತನ್ನ ಮಹತಿಯನು. ೨೦
ಗುರುತು ಹೇಳದಿರಾರಿಗೂ ನಾ 
ಇರುವೆ ವಿಕ್ರಮ ಸಾರ್ವಭೌಮನು 
ನಿರುತ ನೀ ಪೇಳುವುದು ಕೇಳುತ ಸೇವೆ ಮಾಡುವೆನು ೨೧
ಆಗಲೆಂದುಸುರಿದನು ಗಾಣಿಗ 
ತೂಗಣೆಯ ಮೇಲ್ ಕುಳಿತು ತಿರುಗುವ 
ಸಾಗು ಗಾಣವ ಸಾಗಿಸುತ ಕುಳಿತಿರಲು ಸಾಕೆಂದ  ೨೨
ಮೆಚ್ಚಿದೆನು ನಾ ನಿನ್ನ ಬುದ್ಧಿಗೆ 
ಹೆಚ್ಚು ಉಪಕಾರವನು ಮುಟ್ಟಿಪು 
ಅಚ್ಚರಿಯು ಇಹಜನ್ಮದಲಿ ಅಸಾಧ್ಯವಾಗಿರುವ   ೨೩
ಹಣೆ ಬರಹ ಧಿ:ಕ್ಕಾರವಿರಲೆಂ
ಅಣಿ ಮಾಡಿ ಗಾಣವನು ಹೊಡೆಯುತ
ಪ್ರಣವರಕ್ಷಣೆಯಾಗಿ ಉಳಿದನು ರಾಯ ಸುಖದಿಂದ  ೨೪
ಗಾಣಪೀಠದಿ ಕುಳಿತು ಹಗ್ಗವ 
ನೇಣು ಬಿಗಿಸಿನ್ನೊಂದು ಕೈ ಬದಿ 
ಬಾಣದಂತೆಯೇ ಬಡಿಗೆಯನು ಹಿಡಿದಂತೆ ಕಟ್ಟಿಸಿದ   ೨೫
ಪೀಠದೊಡೆ ಬಂಧಿಸಿಯು ತಾನು 
ನೀಟವಾಗಿರುವಂತೆ ಕುಳಿತು 
ಮೇಟಿ ಪರಿಘದಿರಾಯ ವಿಕ್ರಮಬೊಂಬೆ ತಿರುತಿರುಗಿ ೨೬
ಬಾಣ ಹೊಡೆ ಕ್ಷತ್ರಿಯ ಹಸ್ತವು 
ಗಾಣ ಹೊಡೆಯಲಿ ಬೇಕು ಕರ್ಮವು 
ಗಾಣದೆತ್ತಿನ ತೆರೆದಿ ಭೋಗಿಪುದೆಂದು ಅದು ನೋಡಿ  ೨೭
ಜೀವ ಚಕ್ಷುರ್ಗಳನು ಮುಚ್ಚಿಯೇ 
ಭಾವ ಚಕ್ಷುವನೊಂದು ತಿಳಿ ತಾ 
ಧಾವಿಸುವ ವರ್ತುಳದ ದಾರಿಯ ನಡೆಯಲೇ ಬೇಕು ೨೮
ತಪ್ಪಿದರೆ ತಾಡನವು ಬೀಳ್ವುದು 
ಅಪ್ಪಿ ಚುಕ್ಕಣಿ ಹೆಗಲ ದಾರವು 
ಅಪ್ಪ ಮೂಲ ಸ್ತಂಭ ಲಕ್ಷವನಿಡಲು ನುರಿಯುವುದು  ೨೯
ಎಣ್ಣೆಕಾಳವು ಷಡ್ಗುಣಂಗಳ 
ಗಾಣಖಣಿ ತಿರುಗುವದು ಸ್ಮರಣೆ
ಕ್ಷಣಿಕ ಸಂಸಾರೆಂಬ ಗಾಣದೊಳೆಣ್ಣೆ ತಿಳಿಯಾಗಿ.  ೩೦
ಅರಿವು ಗುರಿ ಸಾಧಿಸಲು ಆತ್ಮನ 
ಕರ ಚರಣ ರಹಿತಾಗಿ ಕರ್ತೃವು
ಭರಣ ಪರದಿಂ ಭುಕ್ತನು ಗಾಣ ಹೊಡೆಯುವನು ೩೧
ಎಂಬ ಭಾವನೆಯಿಂದ ಕರ್ಮವು 
ತುಂಬು ಮನದಿಂ ಮಾಡುತಿರೆ ನಿಜ 
ನಂಬುಗೆಯ ಪರಮಾತ್ಮ ನೊಲಿಯುವಂತೆ ಗಾಣಿಗನು ೩೨
ಏಳು ವರುಷದ ಚಕ್ರ ತಿರುಗಿತು 
ಮೇಳಯಿಸೆ ಇರೆ ಒಂದು ದಿನದೋಳು
ಆಳಾಪಗಳ ನೆನಪಾಗಿ ರಾಗಗಳಲ್ಲಿ ಲೀನಾದ  ೩೩
ಸಂಜೆ ಯಾದೊಡೆ ದೀಪರಾಗವು
ರಂಜಿಸುತಲಿಹ ನಗರ ವಲಯದ
ಮಂಜು ಹರಿಯುತು ಲಕ್ಷ ಲಕ್ಷದ ದೀಪಗಳ ಸಾಲು ೩೪
ಬೆಳಗುತಿಹ ದೀವಳಿಯ ತೆರದೋಳೆ
ನಿಳಯಗಳು ನಳ ನಳಿಸಿ ಜ್ಯೋತಿಯ 
ಹೊಳವು ಮಿಣುಕಿತು ಕುಟಿರುವು ಕಲ್ಯಾಣ ಮಂದಿರವು ೩೫
ಪುರದ ರಾಜನ ಪುತ್ರಿಯಂ ತ: -
ಪುರವು ಒಂದೇ ಸ್ಥಂಭ ಮೇಲ್ಮನೆ 
ಇರಲು ಯಾರಿಗು ದಾರಿ ಇಲ್ಲದ ಸ್ಥಳದಿ ವಾಸಿಪಳು  ೩೬
ಸುಂದರಿಯು ಸುರರಲ್ಲಿ ರಂಭೆಯ
ಅಂದ ಗೆಡಿಸುವ ಪದ್ಮಸೇನೆಯು 
ಮಂದ ಗಮನೆಯ ಮಂದಿರದಿ ಗಮನಿಸಿಹ ದೀಪಗಳು ೩೭
ಲಗ್ನವಿಲ್ಲ ದೀವಳಿಗೆ ಅಲ್ಲವು 
ಸ್ನಿಗ್ಧ ರಸವಂ ಮೊದಲೇ ಇಲ್ಲವು
ಅಗ್ನಿ ಹೊತ್ತಿಸಲಿಲ್ಲವೋ ಕೋಲ್ ಮಿಂಚು ಮಿಂಚಿಲ್ಲ ೩೮
ಸೇವಕಿಯ ಕೇಳಿದಳು ಪುರದೀ
ದೀವಳಿಗೆ ನಡೆದಿಹುದೇ ಉತ್ಸವ ?
ಆವ ಕಾರಣ ಎಂಬುದನು ತಿಳಿಕೊಂಡು ಹೇಳುವುದು ೩೯
ಎಲ್ಲೆಡೆಗೆ ತಿರುಗುತಲೆ ದೀಪದ 
ಸೊಲ್ಲ ಮೂಲನೂ ಶೋಧಿಸುತ ಬರೆ 
ಪಲ್ಲವಿಯ ಕೊನೆಯಲ್ಲಿ ಮುಳುಗಲು ಸೊಡರು ಸಾಲುಗಳು ೪೦ 
ಕೇಳಲಾನಂದವನು ಪಡುತಿರೆ 
ತಾಳ ಮುಕ್ತದಿ ದೀಪ ಚಂದ್ರಿಕೆ 
ಹೊಳಕೆ ಶ್ರೀ ರಾಗವನು ನಲಿ ಉಮ್ಮಡಿಸಿ ಕುವರಿಯಲಿ ೪೧
ಹುಡುಕುತಿರೆ ಹೋದವರು ನಾಲ್ವರು 
ತುಡುಗ ಮುಂಡಕನನ್ನು ಕಂಡರು 
ಗುಡುಗು ಹಿಡಿಸಿದ ರಾಗದೊಳು ತಾ ಕುಳಿತ ವಿಕ್ರಮನು ೪೨
ತಿಳಿ ಪಡಿಸೇ ಯುವರಾಣಿ ಸೇನೆಗೆ 
ಕಳವು ಮಾಡಿದ ಗಾಣಿಗರ ಮನೆ 
ಹೇಳವ ಹಾಡಿದ ರಾಗದಿಂದಲೇ ಕಂಡುದಾಶ್ಚರ್ಯ  ೪೩
ಹೆಳವ ಕುರೂಪಿ ಅಸಹ್ಯ ಮುಂಡಕ 
ಕಳೆಯು ಸೋಗವು ಹೋಳಿ ಹುಣ್ಣಿಮೆ 
ತಿಳಿಯೇ ತಾಳದಿ ರಾಗ ರಂಗವನಂಗನಾಗಿಹನು  ೪೪
ಕೇಳಿ ಕುವರಿಯು ರಾಗ ನೆನಪಿನ 
ಕೇಳಿಯೊಳು ಮುಳುಗಿರುವ ಮನದಿಂ
ತಾಳದೆ ಪೇಳಿದಳು ಕರೆತನ್ನಿರಿಯೇ ಸಖಿಯರಿರ  ೪೫
ಪ್ರಾಣಪ್ರಿಯಕರನೆಂದು ಒಳಮನ 
ಗಾಣಕಲೆ ಮೆಚ್ಚಿರುವ ದೆಸೆಯಿಂ
ಆಣತಿಯ ಮಾಡಿದಳು ಸಖಿಯರೇ ತರುವ ಕುರಿತಾಗಿ ೪೬
ಸಖಿಯರೆಂದರೂ ಚಿಕ್ಕ ದೇವಿಯೇ 
ಪ್ರಖರ ಕೋಪದ ತಂದೆಯವರಿಗೆ 
ಅಖಿಲ ಅರಿವುಂಟಾದರೆಮ್ಮನು ಶೂಲಕಟ್ಟುವರು  ೪೭
ದೂಷಣವು ನಮಗೆಲ್ಲರಿಗೆ ಬರುವುದು 
ಆಶೆ ಬೇಡೆಂ ಕುವರಿಗೆನಲಾ -
ವೇಶದಿಂದಲೇ ನಾನು ನೋಡುವೆ ಬಂದ ದುಗುಡವನು ೪೮
ತುಡುಗನು ಕರೆ ತಂದ ಬಳಿಕ 
ಮಿಡಿದು ವೀಣೆಯ ನುಡಿಯ ಕೇಳುವೆ 
ಕಡೆಗೆ ತಂದೆಗೆ ಅರುಹಿದರು ಬಂದೀತು ಎಂದವಳು ೪೯
ಹಗರಣವ ಬೇಡಿನ್ನು ಪೇಳಿದ 
ಬಗೆಯುಗೈಯಲೇ ಬೇಕು ಎನ್ನಲು 
ಸೊಗಸಿಯರು ಮೂಕಾಗಿ ಹೋದರು ತುಡುಗನನು ತರಲು ೫೦ 
ಗಾಣಿಗರ ಅಂಗಡಿಗೆ ಸಖಿಯರು 
ಆಣತಿಯು ಪದ ಪದ್ಮ ಸೇನೆಯ 
ಮಾಣಿಸಿಯೆ ಮುಂಡಕಗೆ ಸಾಗಿಸಿಕೊಂಡು ಹೊರಟಿಹರು ೫೧
ಸ್ಥಂಭ ಬಂದ ಕ್ಷಣದಿ ಮನೆಯೊಳು 
ರಂಭೆ ರೂಪದ ಕುವರಿ ತನ್ನಲಿ 
ಹುಂಬನಾಪುರಿ ಇರುವ ಕಳ್ಳಗೆ ನೋಡಿ ನಲಿದಿಹಳು ೫೨
ನುಡಿದಳೀ ಪರಿ ರಾಗ ಜ್ಞಾನವೇ 
ಪಡೆದ ನೀನೇ ಧನ್ಯ ಧನ್ಯನು 
ಮಿಡಿದ ವೀಣೆಯ ತೆರದಿ ತೀವ್ರದಿ ಹಾಡು ಕೇಳುವೆನು ೫೩
ತಾನ ಆಲಾಪಗಳು ತಾಳದಿ 
ತಾನ ಕಂಡವು ಪಂಚಮದ ಮಧು 
ಧ್ಯಾನಕೋಮಲ ವಲಯ ಲಯವಾಗಿ ಪಾಡುತಿರೆ ೫೪
ಮಂದಿರದಿ ಗಾನವನು ಶ್ರಮಿಸಲು 
ಚಂದ್ರಶೇನನ ಕಿವಿಯ ರುಚಿಸಲು 
ಗಂಧರ್ವನಿವ ನಾವ ಬಂದನು ಕುವರಿ ಗೃಹದ ಬಳಿ ೫೫
ಸೇವಿಕೆಯರನು ಕರೆದು ಕೇಳಿದ 
ದೇವಿಕನ್ನೆಯ ಗೃಹದ ಉತ್ಸವ - 
ಯಾವುದೇ ಕಾರಣವು ನಡೆದುದು ಕೇಳಿ ಗುರುತಿಸಿರಿ ೫೬
ಸಲ್ಲದಿಹ ಶಬ್ದಗಳು ನಮ್ಮಯ
ಮೇಲೆ ಬರುವುದು ರಾಯಕ್ಷಮಿಸಿರಿ 
ಅಲ್ಲದುದು ಆಗಿಹುದು ಪೇಳಿರೇ ಕೇಳಿ ಬಲವಂತ ೫೭
ತಮ್ಮ ನಿಜ ಕನ್ನಿಕೆಯು ನಡೆಸಿದ 
ದುಮ್ಮನವ ಪೇಳುವುದಕ್ಕಿಂತಲೂ 
ಒಮ್ಮೆ ಪ್ರತ್ಯಕ್ಷದೊಳು ನೋಡಿರೆ ತಿಳಿವುದೈ ತಮಗೆ ೫೮
ಅಲ್ಪ ಮಾತಿನೊಳರುಹೆ ಸಖಿಯರು 
ಕಲ್ಪನೆಗೆ ವೈಶಿಷ್ಟ್ಯ ವೆನಿಸದೆ 
ಅಲ್ಪ ಅಂಗನ ರಾಗ ರಂಗವ ಕೇಳಲೇನದುವು ೫೯
ಚಂದ್ರಸೇನಗೆ ನಿದ್ರೆ ಬರೆ ನಾ -
ಳೆಂದು ಮಲಗಿದ ಬಳಿಕ ಈ ಕಡೆ 
ಮಂದ್ರ ಸಾಂದ್ರತೆಯಿಂದ ತಂದ್ರಿತ ನಡೆದವವು ಗಾನ ೬೦
ಏಳು ವರೆ ಸಂವತಗಳುರುಳಿರೇ 
ತಾಳ ಮೇಳದಿ ರಾಗ ವಿಕ್ರಮ 
ಆಲಿಸುವ ಆಲಾಪದೊಳು ಶನಿರಾಯನನು ನೆನೆಯೇ ೬೧
ಮುಕ್ತಾಯದಿ ಶ್ರೀ ರಾಗವ ಪಾಡಿ 
ನಕ್ತ ನಿದ್ರೆಯೂ ಆವರಿಸಿ ಬರೆ 
ಸೂಕ್ತ ಹಾಸಿಗೆಗಳಲಿ ಪವಡಿಸೆ ಚಿಂತೆ ವಿಕ್ರಮಗೆ ೬೨
ಕಷ್ಟ ನಷ್ಟಗಳನು ಭವಿಸಿದೆ 
ಪಟ್ಟದರಸಿ ಪ್ರಧಾನಿ ಮರೆತೆನು 
ಥಟ್ಟನೆ ಕಣ್ಣೀರುದುರಿ ಉಜ್ಜಯಿನಿ ನೆನಸಿದನು ೬೩
ಸಾಕು ಸಂಸಾರೆಂದ ವಿಕ್ರಮ 
ಏಕ ಚಿತ್ತದೋಳಿದ್ದು ಧ್ಯಾನದ-
ನೇಕ ಪರಿ ಚಿಂತಿಪುದರೋಳ್ ಪ್ರತ್ಯಕ್ಷಶನಿರಾಯ ೬೪
ಹಸಿತ ವದನದಿ ನುಡಿಯೇ ಏಳೈ !
ವಸುಧೆ ಪತಿಯ ಜ್ಞಾನಿ ಅನುಭವ 
ನಶಿತನಿಹ ನೀ ನನ್ನ ಗುರುತನು ಮರೆತು ಕುಳಿತಿಹೆಯಾ? ೬೫
ರಾಯ ಕಣ್ದೆರೆದೇಳ ಬಯಸಲು 
ಕಾಯ ವಿಕಲತ್ವದೊಳು ಭೂಮಿಗೆ 
ಧಾಯ ಧಾಯಂದಳುತ ಬಿದ್ದನು ನಮನ ಸಾಷ್ಟಾಂಗ ೬೬
ಆಗಲಾ ಶನಿ ರಾಯನೆಂದನು 
ಬೇಗ ಬೇಡೈ  ಬೇಕು ಎಂಬುದ 
ಸಾಗಿ ಸೊಗಸಿಹ ನಾಗಿ ಬಂದಿಹೆ ಬಯಕೆ ಏನೆಂಬ ೬೭
ಸದ್ಗದಿತ ಕಂಠದೊಳು ವಿಕ್ರಮ 
ಸದ್ವಿವೇಕದಿ ನುಡಿದ ಸಹನೆಯು 
ಬದ್ಧ ದೇಹದ ಮಾನವಗೆ ಕೊಡಬೇಡ ಪೀಡೆಯನು ೬೮
ಇದುವೇ ವರದಾನವನು ಕೊಡುವೈ
ವಿಧ ದುಃಖ ನಾ ತಾಳ್ದೆನೆಂ ನರ- 
ಪೆದುವಿ ತಾಳನು ಪ್ರಾಣಿ ಮಾತ್ರಕೆ ಬೇಡ ಬೇಡೆಂದ ೬೯
ಅರುಹೆ ಶನಿ ನುಡಿ ಧನ್ಯ ಧನ್ಯನು 
ನರಪತಿಯೇ ನೀ ತಿಳಿದೆ ಅನುಭವ 
ಪರ ಪೀಡೆ ಬೇಡೆಂದು ಬೇಡಿದೆ ಭವಿಗೆ ನಿನಗೇನು  ೭೦
ಬಿಡಲಿಲ್ಲವೋ ಛತ್ರ ಚಾಮರ 
ಪೊಡವಿ ಒಡೆತನಗಳನು ಮರೆತೆ
ಕೊಡುವೆ ಕಡು ಪ್ರೀತಿಯಲಿ ಎಂದನು ಚರಣಕರಗಳನು ೭೧
ಮಿಂಚಿನಿಂ ಸುಂದರತೆ ಪ್ರಾಪ್ತಿಯು 
ಮಿಂಚುತಿದೆ ಮಹತೇಜ ಕಂಗಳ 
ಅಂಚಿನಲಿನಲಿ ನೀರು ತುಂಬಿಯೇ ನಮಿಸೆ ವಿಕ್ರಮನು ೭೨
ಹೇ ದಯಾನಿಧೇ ಯಾರಿಗೀ ಪರಿ 
ಬಾಧೆ ಬೇಡೈ ಕರುಣಸಿಂಧುವೆ 
ಇದುವೇ ಬೇಡಿಕೆ ಎಂದೆನಲು ಪಿಂಗಲನು ಪ್ರತಿನುಡಿದ ೭೩
ದುಃಖವಿದು ಬಹಳಲ್ಲ ವಿಕ್ರಮ 
ಯ: ಕಚಿತವಿದು ನಿನಗೆ ಇತ್ತಿದೆ 
ತ: ಕ್ರಮಕೆ ಬಳಲಿದರು ದಿವಿಜರು ದಿಕ್ಕುಗಾಣದೆಯೇ ೭೪
ಸಕ್ರಮದಿ ವಿಕ್ರಮನು ಕೇಳಿದ 
ದುಃಖ ಸಕಲರಿಗೀವುದೆಂ ಗಡ 
ನಿಶ್ಚಯದಿ ನಿರಸನವು ಮಾಳ್ಪುದು ನನಿಪೆ ಕೃಷ್ಣಾಂಗ ೭೫
ಭೃತ್ಯ ಭಾವದಿ ಕೇಳ್ದೊಡನೆ ಶನಿ 
ನಿತ್ಯ ಜೀವಿಗೆ ಗುರಿಯು ತಪ್ಪಲು 
ಪಥ್ಯಪಾಲಿಪದದುವೆ ದುಃಖವು ಉಪರಿ ಹುಟ್ಟುದಕೇ ೭೬
ಪರಬ್ರಹ್ಮ ಚೈತನ್ಯದೊಳು ತಾ
ಬರುವ ಮಾಯೆಯು ವಿದ್ಯಸೃಷ್ಟಿಯು 
ತಿರುಗು ತಿರುಗುತ ಮಲೆತು ಮಲಮಯ ಪಾಪಿ ಯಾಗುವುದು  ೭೭
ಅರಿವು ಬಾರದೆ ತಿರುಗಿ ಜನ್ಮಾಂ-
ತರಗಳೆಂಬತ್ ನಾಲ್ಕು ಲಕ್ಷ ವು
ಚರಮ ಯೋನಿಗಳಲ್ಲಿ ಪೋಗುತಲಿರುವ ಮಾಯೆಯೊಳು ೭೮
ಕರಚರಣ ಕರ್ಮೇಂದ್ರಿಯ ನೀ -
ನಿರಲಾರೆ ಮನ ಬುದ್ಧಿ ಚಿತ್ತವು
ಹಿರಿ ಕಿರಿಯ ನೀನಲ್ಲ ಎಂಬುವ ಅರಿವು ಬರುವುದಕೇ ೭೯
ಸಿರಿ ಸದನ ಸ್ತ್ರೀ ಮನುಜ ಸುಖವೇ 
ಇರುವ ಮೂರಾಗಿರುವ ದಾರಿಗೆ 
ಪರಸುಖದ ಕೇಳುವಿಕೆಗಾಗಿಯೇ ಇಹಕೆ ಕಾಡುವುದು  ೮೦
ಇಹದ ಒಳಗೆ ಈಹ ಜನ್ಮ ಮೃತ್ಯು 
ಬಹು ತ್ರಿವಿಧದ ತಾಪಗಳು ತಾ 
ಸಹನೆ ಯಾಗದು ದನ್ನೇ ಸುಖದ ನಂಬುಗೆಯು ನೋಡು ೮೧
ಹೇಯ ಜೀವನ ಹೇಳುವವರೆಲ್ಲರೂ 
ಧೈರ್ಯ ಇಹ ಬಿಡು ತ್ತಿರುವ ಡಂಬರ 
ಮಾಯೆಯಂ ಮುಕ್ತಿಯನ್ನು ದೊರೆಯಲು ಪೀಡೆ ನೀಡುವುದು  ೮೨
ಮಿಸುನಿ ಗುಣ ತಿಳಿಯುವುದಕ್ಕೆ ಬೆಂಕಿಯ 
ಮುಸೆ ಯೊಳಗಿರಿಸಿಯೇ ನೋಡುವಂದದಿ 
ವಿಷಯ ವಾಸನೆಯಿಂದ ಮುಕ್ತಿಯ ಕೊಡುವುದಕೆ ಪೀಡೆ ೮೩
ತಾತಾರ್ಯ ಮಹಿಪತಿಯು ಮಹರಠಿ
ಹೇತು ಪೂರ್ವಕವಾಗಿ ಕನ್ನಡ 
ಮಾತಿನಿಂ ರೂಪಿಸಿದ ತುಳಸಾತ್ಮಜನು ಸಿರಿರಾಯ ೮೪
ಸರಳಗನ್ನಡ ಭಾಷೆಯಲಿ ಕಥೆ 
ಬರೆಹದಿಂ ವರ್ಣಿಸಿದೆ ನ್ಯೂನತೆ 
ಬರದ ತೆರೆ ಅರ್ಥವನು ಬುದ್ಧಿಗೆ ನೀಡು ಶನಿದೇವ  ೮೫
ಪಿತರು ಓದಿದುದಂತೆ ಪೇಳಿದ 
ಕಥೆಯು ರಂಜಿಸುವಂತೆ ಕನ್ನಡ 
ಮತಿಯರಸ ಭಾಷೆಯಲಿ ಲೇಖಿಸಿ ಇತ್ತ ಸಿರಿರಾಯ  ೮೬
ಇಂತಿ ಶ್ರೀ ಶನೈಶ್ಚರಚರಿ ತಾ -
ದ್ಯಂತ ಸ್ಪೂರ್ತಿಯು ನೀಡುತಿರೆ ತಾ-
ಆಂತು ಮಹತಿಯು ಗೈಮೆ ಶ್ರೀ ಗೋವಿಂದರಾಜ ಮರ ೮೭ 
ಇತಿ ಪುರಾಣೈತಿಹದ ಕಥೆಗಳು 
ಮಥಿಸಿ ಸೀತಾರಾಮ ತುಳಸಾ-
ಸುತನ ಸವಿಗತೆ ಸಪ್ತಮದ ಶ್ರೀ ಕೃಷ್ಣ ಅರ್ಪಣೆಯ  ೮೮

ಇಂತಿ ಶ್ರೀ ಶನೇಶ್ಚರ ಚರಿತ ಪುರಾಣದೊಳು ಸಪ್ತಮ ಸಂಧಿ ಪರಿಪೂರ್ಣಂ  ಶುಭಮಸ್ತು  ಕೃಷ್ಣಾರ್ಪಣಮಸ್ತು


No comments:

Post a Comment