Sunday, June 22, 2025

*Shashti Devi Stotram ಶ್ರೀ ಷಷ್ಠೀ ದೇವೀ ಸ್ತೋತ್ರಂ

        ಬ್ರಹ್ಮಾಂಡದಲ್ಲಿ ಮೊಟ್ಟ ಮೊದಲು ಪ್ರಸೂತೆಯಾಗಿ ಮಕ್ಕಳನ್ನು ಪಡೆದ ದಕ್ಷ ಬ್ರಹ್ಮನ ಸತಿಯಾದ ಪ್ರಸೂತಾದೇವಿಯ ಆಪ್ತಳಾದ, ಪ್ರತಿರೂಪಳಾದ ದೇವಸೇನೆ, ಸಿನೀವಾಲೀ ಅಥವಾ ಷಷ್ಠಿ ಮಾತೆಯೆಂದು ಕರೆಸಿಕೊಳ್ಳುವ  ದೇವಿಯ ಪ್ರೀತಿಗೆ ಪಾತ್ರರಾಗಿರುವವರಿಗೆ  ಮಕ್ಕಳನ್ನು ದಯಪಾಲಿಸುತ್ತಾಳೆ. ಆದರೆ ಅವರವರ ಪ್ರಾರಭ್ದ, ಸಂಚಿತ ಕರ್ಮಗಳ ಫಲವಾಗಿ ಮಕ್ಕಳು ಪಡೆಯುವಲ್ಲಿ ವಿಳಂಬ, ಗರ್ಭ ನಿಲ್ಲದಿರುವಿಕೆ, ನಿಂತರೂ ಗರ್ಭಪಾತ ಆಗುವಿಕೆ, ಗರ್ಭದಲ್ಲಿಯೇ ಅರ್ಭಕದ ಮರಣ, ರೋಗಪೂರಿತ, ವ್ಯಂಗ ಮಗುವಿನ ಜನನ ಇತ್ಯಾದಿ ಫಲಗಳನ್ನು ಕಾಣುವ ಅವಸ್ಥೆ ನಮ್ಮದಾಗುತ್ತದೆ.
      ಅದಕ್ಕೆ ಅಪತ್ಯ ಪ್ರಾಪ್ತಿಯ ಸುಯೋಗವನ್ನು ನೀಡುವ ಷಷ್ಠಿ ಮಾತೆಯ ಪೂಜೆಮಾಡಿ ಸಂತೃಪ್ತಿ ಪಡಿಸಿದರೆ ಇಚ್ಛಿತ ಪರಿಣಾಮ ಪಡೆಯಬಹುದೆಂದು ದೃಷ್ಟಾರರಾದ ಋಷಿ ಮುನಿಗಳ ಹೇಳಿಕೆ.
        ಈ ಎಲ್ಲ ದೋಷಗಳ ನಿವಾರಣೆಗಾಗಿ  ದಂಪತಿಗಳು ತಮ್ಮ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು, ಹೆಣ್ಣು ಮಕ್ಕಳು ಋತು ಕ್ರಿಯೆ ನಿಯಮಿತವಾಗಿರುವಂತೆ ನೋಡಿಕೊಂಡು ಸಾತ್ವಿಕ ಆಹಾರ ಸೇವನೆಯೊಂದಿಗೆ ಅನ್ಯೋನ್ಯರಾಗಿರುವುದು ಅವಶ್ಯಕ. ಜೊತೆಗೆ ಈ ಕೆಳಗಿನ ಷಷ್ಠಿ ಮಾತೆಯ ಸ್ತೋತ್ರವನ್ನು ನಿಯಮಿತವಾಗಿ ಒಂಭತ್ತು ತಿಂಗಳು ಪಾರಾಯಣ ಮಾಡಬೇಕು, ಗಂಡನಾದವನು ಈ ಎಲ್ಲ ವಿಷಯಗಳಲ್ಲಿ ಹೆಂಡತಿಯನ್ನು ಅನುಸರಿಸಿಕೊಂಡು ಇರುವುದೂ ಅಷ್ಟೇ ಅವಶ್ಯಕ,
        ಯಾವುದಾದರೂ ಒಂದುದಿನ ಅಡಿಕೆ ಬೆಟ್ಟು, ಮಕ್ಕಳರಿಷಿಣ ಬೇರು, ಸಿಪ್ಪೆ ಸಹಿತ ಇರುವ ಬಾದಾಮಿ, ಉತ್ತತ್ತಿ, ದಕ್ಷಿಣೆ  ಅರ್ಧ ಕೊಬ್ಬರಿ ಗುಂಡಿನಲ್ಲಿಹಾಕಿ, ಶ್ರೀ ಷಷ್ಠಿ ಮಾತೆಯ ಆವಾಹನೆ ಮಾಡಿ ಅಪತ್ಯ ಪ್ರಾಪ್ತಿಯ ಸುಯೋಗವನ್ನು ಸ್ಮರಿಸಿ ಸಂಕಲ್ಪವನ್ನು ಮಾಡಿ ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ದೇವರ ಜಗುಲಿಯಲ್ಲಿ ಭದ್ರವಾಗಿರಿಸಿ ಆರಾಧಿಸಿದರೆ ಒಂದು ಸಂವತ್ಸರದ ಕೊನೆಗೆ ಲಕ್ಷಣ ಕಂಡು ಬರುವುದೆಂಬ ನಂಬಿಕೆ ಇದೆ.


ಶ್ರೀ ಷಷ್ಠೀ ದೇವೀ ಸ್ತೋತ್ರಂ

ಶ್ರೀ ಗುರುಭ್ಯೋ ನಮಃ  ಹರಿ: ಓಂ 
ಅಥ ಧ್ಯಾನಂ
ಶ್ರೀಮನ್ಮಾತರಮಂಬಿಕಾಂ ವಿಧಿಮನೋ ಜಾತಾಂ ಸದಾಭೀಷ್ಟದಾಂ 
ಸ್ಕಂದೇಷ್ಟಾಂ ಚ ಜಗತ್ಪ್ರಸೂಂ ವಿಜಯದಾಂ ಸತ್ಪುತ್ರ ಸೌಭಾಗ್ಯದಾಮ್ ।
ಸದ್ರತ್ನಾಭರಣಾನ್ವಿತಾಂ ಸಕರುಣಾಂ ಶುಭ್ರಾಂ ಶುಭಾಂ ಸುಪ್ರಭಾಂ 
ಷಷ್ಠಾಂಶಾಂ ಪ್ರಕೃತೇಃ ಪರಂ ಭಗವತೀಂ ಶ್ರೀದೇವಸೇನಾಂ ಭಜೇ ॥ 1 ॥
ಷಷ್ಠಾಂಶಾಂ ಪ್ರಕೃತೇಃ ಶುದ್ಧಾಂ ಸುಪ್ರತಿಷ್ಠಾಂ ಚ ಸುವ್ರತಾಂ. 
ಸುಪುತ್ರದಾಂ ಚ ಶುಭದಾಂ ದಯಾರೂಪಾಂ ಜಗತ್ಪ್ರಸೂಮ್ । 
ಶ್ವೇತಚಂಪಕವರ್ಣಾಭಾಂ ರಕ್ತಭೂಷಣ ಭೂಷಿತಾಂ 
ಪವಿತ್ರರೂಪಾಂ ಪರಮಂ ದೇವಸೇನಾ ಪರಾಂ ಭಜೇ ॥ 2 ॥
ಸ್ತೋತ್ರಂ
ನಮೋ ದೇವ್ಯೈ ಮಹಾದೇವ್ಯೈ ಸಿದ್ಧ್ಯೈ ಶಾಂತ್ಯೈ ನಮೋ ನಮಃ । 
ಶುಭಾಯೈ ದೇವಸೇನಾಯೈ ಷಷ್ಠೀದೇವ್ಯೈ ನಮೋ ನಮಃ ॥ 1 ॥
ವರದಾಯೈ ಪುತ್ರದಾಯೈ ಧನದಾಯೈ ನಮೋ ನಮಃ ।
ಸುಖದಾಯೈ ಮೋಕ್ಷದಾಯೈ ಷಷ್ಠೀದೇವ್ಯೈ ನಮೋ ನಮಃ ॥ 2 ॥
ಸೃಷ್ಟ್ಯೈ ಷಷ್ಠಾಂಶರೂಪಾಯೈ ಸಿದ್ಧಾಯೈ ಚ ನಮೋ ನಮಃ । 
ಮಾಯಾಯೈ ಸಿದ್ಧಯೋಗಿನ್ಯೈ ಷಷ್ಠೀದೇವ್ಯೈ ನಮೋ ನಮಃ ॥ 3 ॥
ಸಾರಾಯೈ ಶಾರದಾಯೈ ಚ ಪರಾದೇವ್ಯೈ ನಮೋ ನಮಃ । 
ಬಾಲಾಧಿಷ್ಟಾತೃದೇವ್ಯೈ ಚ ಷಷ್ಠೀದೇವ್ಯೈ ನಮೋ ನಮಃ ॥ 4 ॥
ಕಲ್ಯಾಣದಾಯೈ ಕಲ್ಯಾಣ್ಯೈ ಫಲದಾಯೈ ಚ ಕರ್ಮಣಾಮ್ ।  
ಪ್ರತ್ಯಕ್ಷಾಯೈ ಸರ್ವಭಕ್ತಾನಾಂ ಷಷ್ಠೀದೇವ್ಯೈ ನಮೋ ನಮಃ ॥ 5 ॥
ಪೂಜ್ಯಾಯೈ ಸ್ಕಂದಕಾಂತಾಯೈ ಸರ್ವೇಷಾಂ ಸರ್ವಕರ್ಮಸು । ದೇವರಕ್ಷಣಕಾರಿಣ್ಯೈ ಷಷ್ಠೀದೇವ್ಯೈ ನಮೋ ನಮಃ ॥ 6 ॥
ಶುದ್ಧಸತ್ತ್ವಸ್ವರೂಪಾಯೈ ವಂದಿತಾಯೈ ನೃಣಾಂ ಸದಾ ।
ಹಿಂಸಾಕ್ರೋಧವರ್ಜಿತಾಯೈ ಷಷ್ಠೀದೇವ್ಯೈ ನಮೋ ನಮಃ ॥ 7 ॥
ಧನಂ ದೇಹಿ ಪ್ರಿಯಾಂ ದೇಹಿ ಪುತ್ರಂ ದೇಹಿ ಸುರೇಶ್ವರಿ ।
ಮಾನಂ ದೇಹಿ ಜಯಂ ದೇಹಿ ದ್ವಿಷೋ ಜಹಿ ಮಹೇಶ್ವರಿ ॥ 8 ॥
ಧರ್ಮಂ ದೇಹಿ ಯಶೋ ದೇಹಿ ಷಷ್ಠೀದೇವೀ ನಮೋ ನಮಃ ।  
ದೇಹಿ ಭೂಮಿಂ ಪ್ರಜಾಂ ದೇಹಿ ವಿದ್ಯಾಂ ದೇಹಿ ಸುಪೂಜಿತೇ । 
ಕಲ್ಯಾಣಿ ಚ ಜಯಂ ದೇಹಿ ಷಷ್ಠೀದೇವ್ಯೈ ನಮೋ ನಮಃ ॥ 9 ॥
ಫಲಶೃತಿ
ಇತಿ ದೇವೀಂ ಚ ಸಂಸ್ತುತ್ಯ ಲಭೇತ್ಪುತ್ರಂ ಪ್ರಿಯವ್ರತಮ್ ।
ಯಶಶ್ವಿನಂ ಚ ರಾಜೇಂದ್ರಂ ಷಷ್ಠೀದೇವಿ ಪ್ರಸಾದತಃ ॥ 10 ॥
ಷಷ್ಠೀಸ್ತೋತ್ರಮಿದಂ ಬ್ರಹ್ಮಾನ್ ಯಃ ಶೃಣೋತಿ ತು ವತ್ಸರಮ್ ।
ಅಪುತ್ರೋ ಲಭತೇ ಪುತ್ರಂ ವರಂ ಸುಚಿರ ಜೀವನಮ್ ॥ 11 ॥
ವರ್ಷಮೇಕಂ ಚ ಯಾ ಭಕ್ತ್ಯಾ ಸಂಸ್ತುತ್ಯೇದಂ ಶೃಣೋತಿ ಚ ।
ಸರ್ವಪಾಪಾದ್ವಿನಿರ್ಮುಕ್ತಾ ಮಹಾವಂಧ್ಯಾ ಪ್ರಸೂಯತೇ ॥ 12 ॥
ವೀರಂ ಪುತ್ರಂ ಚ ಗುಣಿನಂ ವಿದ್ಯಾವಂತಂ ಯಶಸ್ವಿನಮ್ ।
ಸುಚಿರಾಯುಷ್ಯವಂತಂ ಚ ಸೂತೇ ದೇವಿ ಪ್ರಸಾದತಃ ॥ 13 ॥
ಕಾಕವಂಧ್ಯಾ ಚ ಯಾ ನಾರೀ ಮೃತವತ್ಸಾ ಚ ಯಾ ಭವೇತ್ ।
ವರ್ಷಂ ಶೃತ್ವಾ ಲಭೇತ್ಪುತ್ರಂ ಷಷ್ಠೀದೇವಿ ಪ್ರಸಾದತಃ ॥ 14 ॥
ರೋಗಯುಕ್ತೇ ಚ ಬಾಲೇ ಚ ಪಿತಾಮಾತಾ ಶೃಣೋತಿ ಚೇತ್ ।
ಮಾಸೇನ ಮುಚ್ಯತೇ ರೋಗಾನ್ ಷಷ್ಠೀದೇವಿ ಪ್ರಸಾದತಃ ॥ 15 ॥
ಜಯ ದೇವಿ ಜಗನ್ಮಾತಃ ಜಗದಾನಂದಕಾರಿಣಿ ।
ಪ್ರಸೀದ ಮಮ ಕಲ್ಯಾಣಿ ನಮಸ್ತೇ ಷಷ್ಠೀದೇವತೇ ॥ 16 ॥

ಇತಿ ಶ್ರೀ ಷಷ್ಠೀದೇವಿ ಸ್ತೋತ್ರಮ್ ಸಂಪೂರ್ಣಂ

ಶ್ರೀ ಕೃಷ್ಣಾರ್ಪಣಮಸ್ತು 

        ब्रह्मांडात प्रथमच माता म्हणून मुलांना जन्म देणारी, दक्ष ब्रह्मदेवाची पत्नी प्रसूतादेवीची जवळची मैत्रीण आणि प्रतिरूप असलेली देवी, देवसेना, सिनिवाली किंवा षष्ठी माता या देवीच्या प्रेमास पात्र असलेल्यांना संतती प्रदान करते. तथापि, त्यांच्या प्रारब्ध आणि संचित कर्माचा परिणाम म्हणून, आपल्याला अशा परिस्थितीचा सामना करावा लागतो की जिथे आपल्याला मुले होण्यास विलंब, वंध्यत्व, गर्भधारणेनंतरही गर्भपात, गर्भातच अर्भकाचा मृत्यू, आजारी किंवा विकृत मुलाचा जन्म इ.

ज्या ऋषी-मुनींना दृष्टांत झालेल्या आहे त्यांचे विधान आहे की, इष्ट फलप्राप्तीचे पर्व देणाऱ्या षष्ठी मातेचे पूजन व तृप्ती केल्यास अपेक्षित फल प्राप्त होते.

हे सर्व दोष दूर करण्यासाठी जोडप्यांनी त्यांची वैद्यकीय तपासणी करून घेणे, पत्नीची मासिक पाळी नियमित आहे याची खात्री करणे आणि सात्विक आहाराच्या सेवन करीत  घनिष्ट दोघांत अन्योन्य संबंध ठेवणे आवश्यक आहे. याशिवाय षष्ठीमातेचे खालील स्तोत्र नऊ महिने नित्य पठण करावे. या सर्व बाबतीत पतीने पत्नीचे अनुसरण करणे तितकेच महत्त्वाचे आहे.

असे मानले जाते की, एखाद्या दिवशी सुपारी, हळकुंड मूळ, कातडे असलेले बदाम, खारीक, दक्षिणा आणि अर्धा नारळाच्या अर्ध भागात टाकून श्री षष्ठी मातेचे आवाहन केले करणे, अपत्य प्राप्तीचे स्मरण करून, संकल्प करावा, तो लाल कपड्यात बांधून देवाह्रात ठेवून  आराधना करावी  एका संवत्सर शेवटी इच्छित लक्षणे दिसतात असे विश्वास आहे 

स्तोत्र
नमो देव्यै महादेव्यै सिद्धयै शान्त्यै नमो नमः । 
शुभायै देवसेनायै षष्ठीदेव्यै नमो नमः ॥1॥ 
वरदायै पुत्रदायै धनदायै नमो नमः । 
सुखदायै मोक्षदायै षष्ठीदेव्यै नमो नमः ॥2॥ 
शक्तेः षष्ठांशरूपायै सिद्धायै च नमो नमः । 
मायायै सिद्धयोगिन्यै षष्ठीदेव्यै नमो नमः ॥3॥ 
पारायै पारदायै च षष्ठीदेव्यै नमो नमः । 
सारायै सारदायै च पारायै सर्वकर्मणाम् ॥4॥ 
बालाधिष्ठातृदेव्यै च षष्ठीदेव्यै नमो नमः । 
कल्याणदायै कल्याण्यै फलदाय च कर्मणाम् । 
प्रत्यक्षायै च भक्तानां षष्ठीदेव्यै नमो नमः ॥5॥ 
पूज्यायै स्कन्दकान्तायै सर्वेषां सर्वकर्मसु । 
देवरक्षणकारिण्यै षष्ठीदेव्यै नमो नमः ॥6॥ 
शुद्धसत्त्वस्वरुयायै वन्दितायै नृणां सदा । 
हिंसाक्रोधैर्वर्जितायै षष्ठीदेव्यै नमो नमः ॥7॥ 
धनं देहि प्रियां देहि पुत्रं देहि सुरेश्वरि । 
धर्मं देहि यशो देहि षष्ठीदेव्यै नमो नमः ॥8॥ 
भूमिं देहि प्रजां देहि देहि विद्यां सुपूजिते । 
कल्याणं च जयं देहि षष्ठीदेव्यै नमो नमः ॥9॥ 
इति देवीं च संस्तूय लेभे पुत्रं प्रियव्रतः । 
यशस्विनं च राजेन्द्रं षष्ठीदेवीप्रसादतः ॥10॥ 
षष्ठीस्तोत्रमिदं ब्रह्मन्यः शृणोति च वत्सरम् । 
अपुत्रो लभते पुत्रं वरं सुचिरजीविनम् ॥11॥ 
वर्षमेकं च या भक्त्या संयतेदं शृणोति च । 
सर्वपापाद्विनिर्मुक्ता महावन्ध्या प्रसूयते ॥12॥ 
वीरपुत्रं च गुणिनं विद्यावन्तं यशस्विनम् । 
सुचिरायुष्मन्तमेव षष्ठीमातृप्रसादतः ॥13॥ 
काकवन्ध्या च या नारी मृतापत्या च या भवेत् । 
वर्षं श्रुत्वा लभेत्पुत्रं षष्ठीदेवी प्रसादतः ॥14॥ 
रोगयुक्ते च बाले च पिता माता शृणोति च । 
मासं च मुच्यते बालः षष्ठीदेवीप्रसादतः ॥15॥ 
इति श्री ब्रह्मवैवर्तमहापुराणे प्रकृतिखण्डे 

नारदनारायणसंवादे षष्ठीदेवी स्तोत्रं संपूर्णम॥16॥


No comments:

Post a Comment