Friday, August 29, 2025

*GANAPATI AARATI. ಶ್ರೀ ಗಣಪತಿ ಆರತಿ

  ಡಾ||ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ                                   ವಿರಚಿತ 
                         ಶ್ರೀ ಗಣಪತಿ ಆರತಿ

ಜಯದೇವ ಜಯದೇವ ಶ್ರೀ ಗಣಪತಿ ರಾಯ 
ಜಯಕಾರಕ ಭಯಹಾರಕ ಓಂಕಾರ ಕಾಯ  || ಪ

ಜಗದಂಬೆಯ ಮೈಮಣ್ಣಲಿ ಮೂಡಿದ ಮೂರುತಿಯೇ 
ಮೃಗಧರ ನೋಡೇ ಮಾಡಿದ ಬೇರೆ ಆಕೃತಿಯೇ 
ಚಿಗುರಾಗಿದೆ ನಿನ್ನಾಲಿಗೆಯಲಿ ದಿನ ದಿನ ಶೃತಿಯೇ 
ಹಗಲಾಯಿತು ನಿನ್ನೆನಪೇ ಸುಳ್ಳಾಯಿತು ಮೃತಿಯೇ
ಜಯದೇವ ಜಯದೇವ ಶ್ರೀ ಗಣಪತಿ ರಾಯ 
ಜಯಕಾರಕ ಭಯಹಾರಕ ಓಂಕಾರ ಕಾಯ. ||1


ಗಣನಾಯಕ ಕವಿ ಗಾಯಕ ಜನತ್ರಾಯಕ ಸಿರಿಯೇ 
ಗುಣ ವರ್ಧಕ ಖಲಮರ್ದಕ ಸುರಸ್ಪರ್ಶಕ ದೊರೆಯೇ 
ಅಣುಅಣುವು ತೃಣರೇಣುವು ಗುಣಗಣವೆಂದರಿಯೇ 
ಕ್ಷಣ ಕ್ಷಣವು ನಾ ಸಿದ್ದನು ನಿನ್ನೊಂದಿಗೆ ಬೆರೆಯೇ
ಜಯದೇವ ಜಯದೇವ  ಶ್ರೀ ಗಣಪತಿ ರಾಯ 
ಜಯಕಾರಕ ಭಯಹಾರಕ ಓಂಕಾರ ಕಾಯ ||2


ಮೋದಕ ತುಂಬಿದ ಬಸಿರಲೇ ನಡೆಸಿರುವೆಯೋ ನೃತ್ಯ 
ಬೋಧಕ ನಿಷ್ಟೆಯು ಬರೆಯುವುದು ಮೌನದ ಸಾಹಿತ್ಯ 
ಶೋಧಕ ದೃಷ್ಟಿಯು ಸೃಷ್ಟಿಯು ನಿನ್ನದೆ ಶತ ಕೃತ್ಯ
ನಾರದ ಮೂಲ ಸ್ವರೂಪವೇ ನಾ ನಿನ್ನಯ ಭೃತ್ಯ
ಜಯದೇವ ಜಯದೇವ  ಶ್ರೀ ಗಣಪತಿ ರಾಯ 
ಜಯಕಾರಕ ಭಯಹಾರಕ ಓಂಕಾರ ಕಾಯ. ||3

                                ........ ಅಂಬಿಕಾ ತನಯ ದತ್ತ 


No comments:

Post a Comment