Thursday, January 15, 2026

SATURDAY ಮಂದವಾರವು ಇಂದು (Janakiram)

         ಮಂದವಾರವಿಂದು

ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು 

ಭೂಮಿಯನು ಸುರಲೋಕಗೈಯಲು 
ಭೀಮೆ ತಟದಲಿ ವಾಸಮಾಡಿದ 
ಕಾಮ ಕ್ರೋಧ ದಾಮ ನರಹರಿ 
ಶಾಮವರ್ಣನ ಸ್ತೋತ್ರ ಮಾಡುವ 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು 

ಮುದದಿ ಕರೆಯಿರಿಂದು ಗಜರಾಜನಂತೆ 
ಮಣೆಯ ಹಾಕಿರಿಂದು ಗುಹರಾಜನಂತೆ
ಮುದದಿ ಕರೆಯಿರಿಂದು ಗಜರಾಜನಂತೆ 
ಮಣೆಯ ಹಾಕಿರಿಂದು ಗುಹರಾಜನಂತೆ 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು

ಜಲವ ನೀಡಿರಿ ಜಲಧಿಯಳಿಯಗೆ
ಅರ್ಘ್ಯ ನೀಡಿರಿ ಅರ್ಘ್ಯಯೋಗ್ಯಗೆ 
ಹತ್ತು ಆರು ವಿಧದಿ ಪೂಜಿಸಿ 
ಹತ್ತಲಾರು ರಿಪುವ ಶಿರವನು 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು 

ಮಂತ್ರ ಹೇಳಿರಿಂದು ಆಚಮನಕಾಗಿ 
ಮೈಯ ತೊಳೆಯಿರಿಂದು ಯಶೋದೆಯಾಗಿ 
ಮಂತ್ರ ಹೇಳಿರಿಂದು ಆಚಮನಕಾಗಿ 
ಮೈಯ ತೊಳೆಯಿರಿಂದು ಯಶೋದೆಯಾಗಿ 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು

ವಸ್ತ್ರನೀಡಿರಿ ವಸ್ತ್ರದಾತಗೆ 
ಮತ್ತೆ ಅರ್ಪಿಸಿ ಯಜ್ಞಸೂತ್ರವ 
ಹತ್ತು ಆರು ವಿಧದಿ ಪೂಜಿಸಿ 
ಹತ್ತಲಾರು ರಿಪುವ ಶಿರವನು 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು 

ಗಂಧ ಲೇಪಿಸಿಂದು ಕುಬ್ಜಾಂಗೆಯಂತೆ 
ಸುಮನವೇರಿಸಿಂದು ಶೃಂಗಾರದಂತೆ 
ಗಂಧ ಲೇಪಿಸಿಂದು ಕುಬ್ಜಾಂಗೆಯಂತೆ 
ಸುಮನವೇರಿಸಿಂದು ಶೃಂಗಾರದಂತೆ 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು

ಧೂಪ ತೋರಿರಿ ವಿಶ್ವರೂಪಗೆ 
ದೀಪ ಹಚ್ಚಿರಿ ಜಗದ್ದೀಪಗೆ 
ಹತ್ತು ಆರು ವಿಧದಿ ಪೂಜಿಸಿ 
ಹತ್ತಲಾರು ರಿಪುವ ಶಿರವನು 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು 

ಫಲವ ನೀಡಿರಿಂದು ಮಾತಂಗಿಯಂತೆ 
ಶಿರವ ಬಾಗಿರಿಂದು ಪ್ರಾಣೇಶನಂತೆ 
ಫಲವ ನೀಡಿರಿಂದು ಮಾತಂಗಿಯಂತೆ 
ಶಿರವ ಬಾಗಿರಿಂದು ಪ್ರಾಣೇಶನಂತೆ 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು

ಮಂತ್ರ ಪೇಳುತ ಸುತ್ತುವರೆಯಿರಿ 
ಮಂತ್ರ ಅಕ್ಷತೆ ಶಿರದಿ ಧರಿಸಿರಿ 
ಹತ್ತು ಆರು ವಿಧದಿ ಪೂಜಿಸಿ 
ಹತ್ತಲಾರು ರಿಪುವ ಶಿರವನು 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು 

ಕೂಡಿ ಜಪಿಸಿರಿಂದು ಸಾಸಿರ ನಾಮ 
ಅಲ್ಲೇ ನಲಿಪನೆಂದು ಜಾನಕಿ ರಾಮ 
ಜಾನಕಿ ರಾಮ.....ಜಾನಕಿ ರಾಮ.....
ಕೂಡಿ ಜಪಿಸಿರಿಂದು ಸಾಸಿರ ನಾಮ 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು

ಅಲ್ಲೇ ನಲಿಪನೆಂದು ಜಾನಕಿ ರಾಮ 
ರಕ್ಷ ರಕ್ಷ ಉಪೇಂದ್ರನೆನ್ನಲು 
ವೃಕ್ಷರೂಪದಿ ಬೇರನೂರಿದ 
ಹತ್ತು ಆರು ವಿಧದಿ ಪೂಜಿಸೆ 
ಹತ್ತಿಸುವನೈ ಇಂದ್ರಪುರಿಯನು 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು 

ಭೂಮಿಯನು ಸುರಲೋಕಗೈಯಲು 
ಭೀಮೆ ತಟದಲಿ ವಾಸಮಾಡಿದ 
ಕಾಮ ಕ್ರೋಧ ದಾಮ ನರಹರಿ 
ಶಾಮವರ್ಣನ ಸ್ತೋತ್ರ ಮಾಡುವ 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು 
ಮಂದವಾರವಿಂದು ಸುರಗಗನ ಇಂದು 
ಮಂದವಾರವಿಂದು ಕೈ ಮುಗಿಯಿರಿಂದು...
                          ...........ಜಾನಕಿ ರಾಮ

No comments:

Post a Comment