ಸಂಪಾದನೆ.....
ಪಿತೃಗಳ ಶಾಂತಿಗಾಗಿ ವಿವಿಧ ದೇಶಗಳಲ್ಲಿ ಮಾಡಲಾಗುವ ಪರಂಪರಾಗತ ವಿಧಿಗಳು ಕೇವಲ ಭಾರತದಲ್ಲಿ ಮಾತ್ರ ಪೂರ್ವಜರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕಲ್ಪನೆ ಇದೆ ಎಂದೇನಿಲ್ಲ, ವಿದೇಶಗಳಲ್ಲಿಯೂ ಪಿತೃಗಳ ಶಾಂತಿಗಾಗಿ ವಿವಿಧ ಪಾರಂಪರಿಕ ಕೃತಿಗಳನ್ನು ಮಾಡಲಾಗುತ್ತದೆ. ಅದರಲ್ಲಿ ಪೂರ್ವಜರ ಮುಕ್ತಿಗಾಗಿ ಶಾಸ್ತ್ರೋಕ್ತ ಸಂಕಲ್ಪನೆ ಇಲ್ಲದಿದ್ದರೂ, ಕನಿಷ್ಟ ಪೂರ್ವಜರ ಬಗ್ಗೆ ಕೃತಜ್ಞತೆಯಿರಬೇಕು, ಎನ್ನುವ ಭಾವನೆಯಂತೂ ಖಂಡಿತವಾಗಿ ಇದೆ. ಹಾಗೆಯೇ ವಿದೇಶಗಳಲ್ಲಿ ಇತರ ಪಂಥಗಳಲ್ಲಿ ಜನಿಸಿರುವ ಅನೇಕ ಪಾಶ್ಚಿಮಾತ್ಯರು ತಮ್ಮ ಪೂರ್ವಜರಿಗೆ ಮುಕ್ತಿ ದೊರಕಬೇಕೆಂದು ಭಾರತಕ್ಕೆ ಬಂದು ಪಿಂಡದಾನ ಮತ್ತು ತರ್ಪಣ ವಿಧಿಗಳನ್ನೂ ಮಾಡುತ್ತಾರೆ.
೧. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಇತರ ಧರ್ಮಗಳಲ್ಲಿ ಮಾಡಲಾಗುವ ಪಾರಂಪರಿಕ ಕೃತಿಗಳು !
ಪಾರ್ಸಿಗಳು : ಪಾರ್ಸಿ ಬಾಂಧವರು ಪತೇತಿ ಎಂಬ ಮುಖ್ಯ ಹಬ್ಬದ ನಿಮಿತ್ತ ವರ್ಷದ ಕೊನೆಯ ೯ ದಿನಗಳನ್ನು ಪಿತೃಗಳ ಶಾಂತಿಯ ದಿನಗಳೆಂದು ಆಚರಿಸುತ್ತಾರೆ. ಹತ್ತನೇಯ ದಿನ ‘ಪತೇತಿ’ ಹಬ್ಬವನ್ನು ಆಚರಿಸುತ್ತಾರೆ. ಈ ದಿನದಿಂದಲೇ ಪಾರ್ಸಿಗಳ ಹೊಸ ವರ್ಷ ಪ್ರಾರಂಭವಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಆತ್ಮವು ಅಮರವಾಗಿದೆ ಎಂದು ನಂಬಲಾಗಿದೆ. ಅದೇ ವಿಚಾರಧಾರೆ ಪಾರ್ಸಿ ಸಮಾಜದಲ್ಲಿ ಕಂಡು ಬರುತ್ತದೆ. ಅವೆಸ್ತಾದಲ್ಲಿ (ಪಾರ್ಸಿ ಧರ್ಮಗ್ರಂಥದಲ್ಲಿ) ಪಿತೃಗಳಿಗೆ ಫ್ರಾವಶೀ ಎಂದು ಹೇಳಲಾಗಿದ್ದು, ಬರಗಾಲದ ಸಮಯದಲ್ಲಿ ಅವರು ಸ್ವರ್ಗದಲ್ಲಿನ ಸರೋವರಗಳಿಂದ ತಮ್ಮ ವಂಶಜರಿಗಾಗಿ ನೀರು ತರುತ್ತಾರೆ, ಎಂದು ನಂಬಲಾಗಿದೆ. ಆದುದರಿಂದ ಅವರ ಪೂರ್ವಜರ ಆತ್ಮಕ್ಕೆ ಶಾಂತಿ ದೊರೆಯಬೇಕೆಂದು ೯ ದಿನಗಳ ಕಾಲ ವಿವಿಧ ವಿಧಿಗಳನ್ನು ಮಾಡಿದ ಬಳಿಕ ಕೊನೆಯ ದಿನ ಪತೇತಿಯನ್ನು ಆಚರಿಸುತ್ತಾರೆ. ಪಾರ್ಸಿ ಜನರ ಮೂಲ ದೇವತೆ ಅಗ್ನಿಯಾಗಿರುವುದರಿಂದ ಅವರು ಅಗ್ನಿಯ ಪೂಜೆಯನ್ನು ಮಾಡುತ್ತಾರೆ. ಉರಿಯುವ ಅಗ್ನಿಯಲ್ಲಿ ಚಂದನದ ಕಟ್ಟಿಗೆಗಳನ್ನು ಹಾಕಲಾಗುತ್ತದೆ. ಪತೇತಿ ಎಂದರೆ ಪಾಪದಿಂದ ಮುಕ್ತವಾಗುವ ದಿನ ‘ಪಾಪೇತಿ’ ಎಂದರೆ ಪಾಪವನ್ನು ನಾಶಗೊಳಿಸುವ ದಿನ. ಇದೇ ಶಬ್ದವು ಮುಂದೆ ಅಪಭ್ರಂಶವಾಗಿ ಪತೇತಿ ಎಂದು ಆಗಿದೆ ಎಂದು ಹಿರಿಯರು ಹೇಳುತ್ತಾರೆ. ಈ ಅವಧಿಯು ಸಾಧಾರಣ ಆಗಸ್ಟ ತಿಂಗಳಲ್ಲಿ ಬರುತ್ತದೆ.
ಕ್ಯಾಥೋಲಿಕರು : ಅಮೇರಿಕಾ, ಲ್ಯಾಟಿನ್ ಅಮೇರಿಕಾ ಮತ್ತು ಯುರೋಪಿನ ಅನೇಕ ದೇಶಗಳಲ್ಲಿ ನವೆಂಬರ್ ತಿಂಗಳಲ್ಲಿ ಪಿತೃಗಳನ್ನು ತೃಪ್ತಿಪಡಿಸುವ ಪದ್ಧತಿಯಿದೆ. ಇದು ಪೂರ್ವಜರ ಆತ್ಮಕ್ಕೆ ಸಂಬಂಧಿಸಿದ ದಿನವಾಗಿದ್ದರೂ, ಅಲ್ಲಿ ಇದನ್ನು ಉತ್ಸವದಂತೆ ಆಚರಿಸುವ ಪದ್ಧತಿಯಿದೆ. ಅಕ್ಟೋಬರ್ ೩೧ ರ ಸಾಯಂಕಾಲದಿಂದ ನವೆಂಬರ್ ೨ ರ ರಾತ್ರಿಯವರೆಗೆ ಈ ಉತ್ಸವವನ್ನು ಆಚರಿಸಲಾಗುತ್ತದೆ. ಇದರಲ್ಲಿ ೩೧ ಅಕ್ಟೋಬರ್ ಸಾಯಂಕಾಲ ಹೆಲೊವೀನ ಯಾತ್ರೆಯ (ಇದರಲ್ಲಿನ ಹೆಲೋ ಇದು ಹೋಲಿ ಎಂದರೆ ಪವಿತ್ರ ಎಂಬ ಶಬ್ದದ ಸಮಾನಾರ್ಥಕವಾಗಿದೆ) ಮೆರವಣಿಗೆಯನ್ನು ತೆಗೆಯಲಾಗುತ್ತದೆ. ನವೆಂಬರ್ ೧ ರಂದು ಆಲ್ ಸೇಂಟ್ಸ ಡೆ (ಸಂತರ ದಿನ), ನವೆಂಬರ್ ೨ ರಂದು ಆಲ್ ಸೋಲ್ಸ್ ಡೆ (ಆತ್ಮಗಳ ದಿನ) ಯನ್ನು ಆಚರಿಸಲಾಗುತ್ತದೆ. ಈ ಕಾಲವನ್ನು ‘ಹೆಲೋ ಮಂಥ್’ ಅಂದರೆ ‘ಪವಿತ್ರ ಕಾಲ’ ಎಂದೂ ತಿಳಿಯಲಾಗುತ್ತದೆ.
ಕ್ರೈಸ್ತ ಪಂಥದಲ್ಲಿ ಇದೊಂದು ಉತ್ಸವವಾಗಿದ್ದರೂ, ಅದು ಅದರ ಮೂಲ ಕ್ರಿಸ್ತಪೂರ್ವ ಕಾಲದ ಮೂರ್ತಿಪೂಜಕ ರೋಮನ್ರ ಸಂಸ್ಕೃತಿಗೆ ಸಂಬಂಧಿಸಿದೆ. ರೋಮನ್ ಜನರು ಮರಣ ಹೊಂದಿದವರ ಆತ್ಮವನ್ನು ಸಂತುಷ್ಟಗೊಳಿಸಲು ಸಾರ್ವಜನಿಕ ಬಲಿದಾನದೊಂದಿಗೆ ‘ಲೆಮುರಿಯಾ’ ಹೆಸರಿನ ಹಬ್ಬವನ್ನು ಆಚರಿಸುತ್ತಾರೆ. ಅವರು ಸ್ಮಶಾನಕ್ಕೆ ಹೋಗಿ ಮರಣ ಹೊಂದಿರುವವರಿಗೆ ಕೇಕ್ ಮತ್ತು ವೈನ್ ಅರ್ಪಿಸುತ್ತಿದ್ದರು. ಕಾಲಾಂತರದಲ್ಲಿ ಚರ್ಚ್ ಈ ದಿನವನ್ನು ‘ಆಲ್ ಸೋಲ್ಸ್ ಡೇ’ ಎಂದು ಅಂಗೀಕರಿಸಿ ಆಚರಿಸಲು ಪ್ರಾರಂಭಿಸಿತು. ಈ ಉತ್ಸವವನ್ನು ನವೆಂಬರ್ ೨ ರಂದು ಆಚರಿಸಲಾಗುತ್ತದೆ
‘ಆಲ್ ಸೇಂಟ್ಸ್ ಡೇ’ : ಈ ದಿನದಂದು ಸ್ವರ್ಗವಾಸಿಗಳಾದ ಪರಿಚಿತ-ಅಪರಿಚಿತ ಎಲ್ಲ ಪೂರ್ವಜರನ್ನು ಮತ್ತು ಸಂತರ ಸ್ಮರಣೆಯನ್ನು ಮಾಡುತ್ತಾರೆ. ಮರಣ ಹೊಂದಿರುವ; ಆದರೆ ಸ್ವರ್ಗಪ್ರಾಪ್ತವಾಗದ ಪರಿಚಿತ-ಅಪರಿಚಿತ ಎಲ್ಲ ಪೂರ್ವಜರ ಪಾಪಕ್ಷಾಲನವಾಗಬೇಕೆಂದು ಈ ದಿನದಂದು ಪ್ರಾರ್ಥನೆಯನ್ನು ಮಾಡುತ್ತಾರೆ.
ಕೆಲವು ದೇಶಗಳಲ್ಲಿ ಪಿತೃಗಳ ಆಗಮನದ ಆನಂದದಲ್ಲಿ ಅಲ್ಲಿ ಸೋಲ್ ಕೇಕ್ ಹೆಸರಿನ ಸಿಹಿ ಪದಾರ್ಥವನ್ನು ತಯಾರಿಸುವ ಪದ್ಧತಿಯಿದೆ. ಈ ಪದಾರ್ಥವನ್ನು ತಿನ್ನುವುದರಿಂದ ಪರಲೋಕದಲ್ಲಿರುವ ಮೃತಾತ್ಮಗಳಿಗೆ ಸುಖ ಮತ್ತು ಶಾಂತಿ ಲಭಿಸುತ್ತದೆ ಎಂದು ಅಲ್ಲಿಯ ಜನರ ನಂಬಿಕೆಯಾಗಿದೆ.
ಬೌದ್ಧರು : ಚೀನಾದ ಬೌದ್ಧ ಮತ್ತು ತಾವೋ ಪರಂಪರೆಗನುಸಾರ ಚೀನಿ ಪಂಚಾಂಗದ ೭ ನೇ ತಿಂಗಳ ೧೫ ನೇ ದಿನದಂದು ಪೂರ್ವಜರ ವಿಷಯದಲ್ಲಿ ‘ಘೋಸ್ಟ್’ ಫೆಸ್ಟಿವಲ್ (ಭೂತಗಳ/ ಮೃತರ ಉತ್ಸವ) ಅಥವಾ ಯುಲಾನ ಫೆಸ್ಟಿವಲ್ವನ್ನು ಆಚರಿಸಲಾಗುತ್ತದೆ. ಆಗಸ್ಟ್ದಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಈ ದಿನ ಬರುತ್ತದೆ. ಈ ೭ ನೇ ತಿಂಗಳನ್ನು ಘೋಸ್ಟ್ ತಿಂಗಳು (ಭೂತಗಳ/ಮೃತರ ತಿಂಗಳು) ಎಂದು ಗುರುತಿಸಲಾಗುತ್ತದೆ. ಈ ಕಾಲದಲ್ಲಿ ಸ್ವರ್ಗದಲ್ಲಿರುವ, ಹಾಗೆಯೇ ನರಕದಲ್ಲಿರುವ ಪೂರ್ವಜರ ಆತ್ಮಗಳು ಭೂಮಿಗೆ ಬರುತ್ತವೆ, ಎನ್ನುವುದು ಅಲ್ಲಿಯ ಜನರ ನಂಬಿಕೆಯಾಗಿದೆ. ಈ ಕಾಲಾವಧಿಯಲ್ಲಿ ಪೂರ್ವಜರನ್ನು ದುಃಖದಿಂದ ಮುಕ್ತಗೊಳಿಸಲು ಪ್ರಯತ್ನಿಸಲಾಗುತ್ತದೆ. ಅದರಲ್ಲಿ ಪರಂಪರಾಗತ ಭೋಜನವನ್ನು ತಯಾರಿಸುವುದು (ಬಹುತೇಕ ಶಾಕಾಹಾರಿ), ಧೂಪ ಉರಿಸುವುದು, ಜಾಸ್ ಪೇಪರ ಸ್ಪಿರಿಟ್ ಮನಿ – ಬಿದುರಿನ ಹಾಳೆಯಿಂದ ತಯಾರಿಸಲ್ಪಟ್ಟ ಆತ್ಮಗಳ ಧನ) ಸುಡುವುದು ಇತ್ಯಾದಿಗಳನ್ನು ಮಾಡಲಾಗುತ್ತದೆ. ಈ ಹಾಳೆಗಳಿಂದ ವಸ್ತ್ರ, ಬಂಗಾರದ ಆಭರಣಗಳ ಪ್ರತೀಕವೆಂದು ಆಭರಣಗಳನ್ನು ತಯಾರಿಸಿ ಸುಡುತ್ತಾರೆ. ಈ ವೇಳೆ ಭೋಜನದ ಸಮಯದಲ್ಲಿ ಪೂರ್ವಜರು ಅವರೆದುರಿಗೆ ಅಲ್ಲಿ ಪ್ರತ್ಯಕ್ಷ ಉಪಸ್ಥಿತರಿದ್ದಾರೆ, ಎನ್ನುವ ರೀತಿಯಲ್ಲಿ ಅವರಿಗಾಗಿ ಆಸನವನ್ನಿಟ್ಟು ಅವರಿಗೆ ಭೋಜನವನ್ನು ಬಡಿಸಲಾಗುತ್ತದೆ. ರಾತ್ರಿ ಕಾಗದದ ದೋಣಿ ಹಾಗೂ ದೀಪಗಳನ್ನು ನೀರಿನಲ್ಲಿ ಬಿಟ್ಟು ಪೂರ್ವಜರಿಗೆ ಮಾರ್ಗವನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತದೆ. ಬೌದ್ಧ ಪರಂಪರೆಯನ್ನು ಅನುಸರಿಸುವ ಬಹುತೇಕ ದೇಶಗಳಲ್ಲಿ ಈ ಉತ್ಸವವನ್ನು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಆಚರಿಸಲಾಗುತ್ತದೆ.
೨. ಜಗತ್ತಿನ ವಿವಿಧ ದೇಶಗಳಲ್ಲಿ ಪೂರ್ವಜರ ಆತ್ಮಕ್ಕಾಗಿ ಮಾಡಲಾಗುವ ಪಾರಂಪರಿಕ ಕೃತಿಗಳು

ಯುರೋಪಿಯನ್ ದೇಶಗಳಲ್ಲಿ ಪೂರ್ವಜರ ಶಾಂತಿಗಾಗಿ ಮಾಡಲಾಗುವ ವಿವಿಧ ಕೃತಿಗಳು
ಬೆಲ್ಜಿಯಮ್: ನವೆಂಬರ್ ೨ ರಂದು ಆಲ್ ಸೋಲ್ಸ್ ಡೆ ಯ ಹಿಂದಿನ ದಿನ ಅಂದರೆ ಆಲ್ ಸೇಂಟ್ಸ ಡೆಯ ದಿನ ಸ್ಮಶಾನಕ್ಕೆ (ದಫನಭೂಮಿಗೆ) ಹೋಗಿ ಪ್ರಾರ್ಥನೆಯನ್ನು ಮಾಡುತ್ತಾರೆ. ಹಾಗೆಯೇ ಮೃತರ ಗೋರಿಗಳ ಮೇಲೆ ದೀಪಗಳನ್ನು ಹಚ್ಚುತ್ತಾರೆ.
ಪೋರ್ಚುಗಲ್ : ನವೆಂಬರ್ ೨ ರಂದು ಸಂಪೂರ್ಣ ಪರಿವಾರದೊಂದಿಗೆ ಸ್ಮಶಾನಭೂಮಿಗೆ ಹೋಗಿ ಪ್ರಾರ್ಥನೆ ಮಾಡುತ್ತಾರೆ. ಹಾಗೆಯೇ ಸಾಯಂಕಾಲ ಚಿಕ್ಕ ಮಕ್ಕಳು ಗುಂಪುಗುಂಪಾಗಿ ಪ್ರತಿಯೊಬ್ಬರ ಮನೆಯ ಪ್ರವೇಶದ್ವಾರದ ಬಳಿಗೆ ಹೋಗಿ ನಿಲ್ಲುತ್ತಾರೆ. ಅಲ್ಲಿ ಅವರಿಗೆ ಕೇಕ್ ಇತ್ಯಾದಿ ಸಿಹಿ ಪದಾರ್ಥಗಳನ್ನು ಹಂಚುತ್ತಾರೆ.
ಜರ್ಮನಿ : ಜರ್ಮನಿಯಲ್ಲಿ ಸ್ಮಶಾನದ ಗೋರಿಗಳಿಗೆ ಸುಣ್ಣ-ಬಣ್ಣ ಹಚ್ಚಲಾಗುತ್ತದೆ. ಭೂಮಿಯ ಮೇಲೆ ಇದ್ದಿಲು ಹರಡಿ ಅದರ ಮೇಲೆ ಕೆಂಪು ಬಣ್ಣದ ಚಿತ್ರಗಳನ್ನು ರಚಿಸಲಾಗುತ್ತದೆ ಮತ್ತು ಗೋರಿಗಳನ್ನು ಹೂವು ಮತ್ತು ಮೊಗ್ಗುಗಳ ಮಾಲೆಗಳಿಂದ ಅಲಂಕರಿಸಲಾಗುತ್ತದೆ. ಕೊನೆಯಲ್ಲಿ ಎಲ್ಲರೂ ಸೇರಿ ಪ್ರಾರ್ಥನೆಯನ್ನು ಮಾಡುತ್ತಾರೆ.
ಫ್ರಾನ್ಸ್ : ಫ್ರಾನ್ಸ್ನಲ್ಲಿ ಚರ್ಚ್ನ ರಾತ್ರಿ ಸಮಯದ ಪ್ರಾರ್ಥನೆಯ ಕೊನೆಯಲ್ಲಿ ಜನರು ತಮ್ಮ ಪಿತೃಗಳ ವಿಷಯದಲ್ಲಿ ಚರ್ಚೆಯನ್ನು ಮಾಡುವುದು ಆವಶ್ಯಕವಾಗಿದೆ ಎಂದು ತಿಳಿಯುತ್ತಾರೆ. ತದನಂತರ ಅವರು ತಮ್ಮ ಮನೆಯ ಅಡುಗೆಮನೆಯಲ್ಲಿ ಒಂದು ಹೊಸ ಬಿಳಿಯ ವಸ್ತ್ರವನ್ನು ಹರಡುತ್ತಾರೆ ಮತ್ತು ಅದರ ಮೇಲೆ ಶರಬತ್ತು, ಮೊಸರು, ವಿವಿಧ ಭಕ್ಷ್ಯಗಳು ಇತ್ಯಾದಿಗಳನ್ನಿಟ್ಟು ಅಲಂಕರಿಸುತ್ತಾರೆ. ಹಾಗೆಯೇ ಹತ್ತಿರದ ಅಗ್ನಿಪಾತ್ರೆಯಲ್ಲಿ ಕಟ್ಟಿಗೆಯ ಒಂದು ದೊಡ್ಡ ತುಂಡನ್ನು ಸುಡುವುದಕ್ಕಾಗಿ ಇಡುತ್ತಾರೆ. ತದನಂತರ ಜನರು ಮಲಗಲು ಹೋಗುತ್ತಾರೆ. ಸ್ವಲ್ಪ ಸಮಯದ ಬಳಿಕ ಪಾರಂಪರಿಕ ವಾದಕರು ವಾದ್ಯಗಳನ್ನು ಬಾರಿಸುತ್ತ ಅವರನ್ನು ನಿದ್ದೆಯಿಂದ ಎಬ್ಬಿಸುತ್ತಾರೆ ಮತ್ತು ಮರಣ ಹೊಂದಿದವರ ಪರವಾಗಿ ಅವರಿಗೆ ಆಶೀರ್ವಾದ ನೀಡುತ್ತಾರೆ. ಆ ಸಮಯದಲ್ಲಿ ಅಲಂಕರಿಸಲ್ಪಟ್ಟ ಎಲ್ಲ ತಿಂಡಿ-ತಿನಿಸುಗಳನ್ನು ಆ ವಾದ್ಯ ಪ್ರಮುಖನಿಗೆ ಅರ್ಪಿಸಲಾಗುತ್ತದೆ.

No comments:
Post a Comment