Wednesday, October 02, 2019

SHRAADHA VICHAARA - II ಪಿತೃ ಋಣ -2

ಪಿತೃ ಋಣ

ಔರ್ಧ್ವದೇಹಿಕ ಕ್ರಿಯಾರಂಭ ಮಾಡುವ ಪ್ರಾರಂಭ

ದಲ್ಲೇ ಬ್ರಹ್ಮ ದಂಡಮೂಲಕ ಬ್ರಾಹ್ಮಣ ರಲ್ಲಿ ಅನುಮತಿ ಪಡೆದು ಕರ್ತೃ ವಪನ ಮಾಡಿಕೊಂಡು ಕ್ರಿಯೆ ಮಾಡಬೇಕೆಂದು ಸ್ಮೃತಿಸಾರದ ಈ ಶ್ಲೋಕದಲ್ಲಿವಿವರಿಸಿದ್ದಾರೆ, ಗಾಯಾಂಭಾಸ್ಕರಕ್ಷೇತ್ರೇ ಮಾತಾಪಿತ್ರೋರ್ಗುರೋರ್ಮೃತೌ/ಆದಾನೇ ಸೋಮಯಾಗೇಚ ವಪನಂ ಸಪ್ತಸುಸ್ಮೃತಮ್  ಗಂಗಾಗಯಾದಿ ಕ್ಷೇತ್ರದಲ್ಲಿಯೂ ಮಾತಾಪಿತೃ ಹಾಗೂ ಗುರುಗಳ ಆಧಾನ ಸಂಸ್ಕಾರ ಮಹಾಯಾಗ.ಪ್ರಾರಂಭದಲ್ಲೂ.ವಪನಮಾಡಿಕೊಳ್ಳಬೇಕು, ಗರ್ಭಿಣಿಯ ಪತಿ ಕ್ಷೌರಮಾಡಿಸಿಕೊಂಡರೆ ಬ್ರಹ್ಮಹತ್ಯಾ ದೋಷಬರುವುದು,ಆದರೆ.ಪಿತೃಗಳ ಅಣ್ಣ ಗುರು ಮಾವ ಈ ಐವರ.ಮರಣದಲ್ಲಿ ಕ್ಷೌರ ವಿಹಿತ ಎಂದು ಈ.ರೀತಿ ಹೇಳಿದೆ,ಗರ್ಭವಾನ್ವಪನಂಕುರ್ಯಾತ್ ಬ್ರಹ್ಮಹತ್ಯಾ ಸಮಂ ಭವೇತ್ಮಾ ತರಂ ಪಿತರಂ ಜೇಷ್ಠಮಾಚಾರ್ಯಂ ಶ್ವಶುರಂ ವಿನಾ  ಎಂದಿದೆ.ರಾತ್ರೌ ದಗ್ದ್ವಾತು ಪಿಂಡಾಂತಂ ಕೃತ್ವಾ ವಪನವರ್ಜಿತಂ  ವಪನಂ ನೇಷ್ಯತೇ ರಾತ್ರೌ ಶ್ವಸ್ತನೀ ವಾಪನ ಕ್ರಿಯಾ  ರಾತ್ರಿದಹನಕ್ರಿಯೆ ಯಾದರೆ ಕ್ಷೌರ ನಿಷೇಧ ಮರುದಿನಕ್ರಿಯಾರಂಭದಲ್ಲಿ ಮಾಡಿಸಿ ಪ್ರಾರಂಭಮಾಡಬೇಕೆಂದೂ ಆದರೆ ಧರ್ಮ ಸಿಂದುವಿನಲ್ಲಿ ರಾತ್ರಿಯಾದರೂ ತಂದೆ ತಾಯಿಯಲ ವಿಷಯ ದಲ್ಲಿ ವಪನ ವಿಹಿತವೆಂದು ಈ ಶ್ಲೋಕದಲ್ಲಿದೆ,  ಮಾತಾಪಿತ್ರೋರ್ಮೃತೇ ಪ್ರಾಪ್ತೇ ದಾಹಕಸ್ಯ ವಿಶೇಷತಃ/ಸಂಸ್ಕಾರಕರ್ತುರ್ವಪನಂ ರಾತ್ರಾವಪಿ ವಿಧೇರ್ಬಲಾತ್  ಎಂದಿದೆ.

1. ಪ್ರೇತವು ಮೃತ ದಿನದಿಂದ 13ನೆಯ ದಿನ ಪ್ರಯಾಣ ಬೆಳಸಿ ಶ್ರೀ ಯಮಧರ್ಮರಾಜರ ಸನ್ನಿಧಾನಕ್ಕೆ ಬಂದು ಸೇರಲು 12 ದಿನ ಕಡಿಮೆ 01 ವರ್ಷ ಆಗುತ್ತದೆ. 

2. ಸಾಮಾನ್ಯವಾಗಿ ಚಾಂದ್ರಮಾನ ಅಥವಾ ಸೌರಮಾನ ಯಾವ ತಿಂಗಳು - ಯಾವ ಪಕ್ಷದ - ಯಾವ ತಿಥಿಯಲ್ಲಿ ಮೃತಿ ಹೊಂದಿದನೋ, ಮುಂದಿನ ವರ್ಷದ ಅದೇ ತಿಂಗಳಿನ ಅದೇ ಪಕ್ಷದ ಅದೇ ತಿಥಿಯಂದು " ಶ್ರೀ ಯಮಧರ್ಮರಾಜ " ರ ಸನ್ನಿಧಾನವನ್ನು ಸೇರುತ್ತಾನೆ. 

3. ಶ್ರೀ ಯಮಧರ್ಮರಾಜರ ಆಸ್ಥಾನದಲ್ಲಿರುವ - ವಸು, ರುದ್ರ, ಆದಿತ್ಯ ಎಂಬುವರು ಪಿತೃ ದೇವತಾ ಗಣಗಳು. 

4. " ವಸು " ಗಳೆಂಬ ಪಿತೃ ದೇವತೆಗಳ ಅನುಗ್ರಹವಿಲ್ಲದಿದ್ದರೆ ಒಬ್ಬನು ತಾನು ತಂದೆ - ತಾಯಿಗಳ ಮಗನಾಗಿರಲು ಸಾಧ್ಯವಿಲ್ಲ. ಅಂತೆಯೇ ತಾನೂ ಮಗನನ್ನು ಕಾಣಲು ಸಾಧ್ಯವಿಲ್ಲ. 

5. " ರುದ್ರ " ರೆಂಬ ಪಿತೃಗಳ ಅನುಗ್ರಹವಿಲ್ಲದಿದ್ದರೆ ಅಜ್ಜಿ - ಅಜ್ಜರಿಗೆ ಮೊಮ್ಮಗನಾಗಿರಲು ಸಾಧ್ಯವಿಲ್ಲ ಹಾಗೂ ತಾನೂ ಮೊಮ್ಮಗನನ್ನು ಕಾಣಲು ಸಾಧ್ಯವಿಲ್ಲ. 

6. " ಆದಿತ್ಯ " ರೆಂಬ ಪಿತೃಗಳ ಅನುಗ್ರಹವಿಲ್ಲದಿದ್ದರೆ ಮುತ್ತಜ್ಜಿ - ಮುತ್ತಜ್ಜಿಯರ ಮರಿ ಮೊಮ್ಮಗನಾಗಿರಲು ಮತ್ತು ತಾನೂ ಮರಿಮಗನನ್ನು ಪಡೆಯಲು ಸಾಧ್ಯವಿಲ್ಲ. 

7. ಆದ್ದರಿಂದ ಸಾಮಾನ್ಯವಾಗಿ ಮಕ್ಕಳನ್ನು ಪಡೆದ ಪುರಷರಲ್ಲಿ " ವಸು - ರುದ್ರ - ಆದಿತ್ಯ " ರ ಅಂಶವೂ; ಸ್ತ್ರೀಯರಲ್ಲಿ " ವಸು - ರುದ್ರ - ಆದಿತ್ಯ ಪತ್ನಿಯರ  " ಅಂಶವೂ ಇರುತ್ತದೆ. 

ಈ ಮೇಲೆ ಹೇಳಿದಂತೆ ಒಬ್ಬ ವ್ಯಕ್ತಿ ಪುರುಷ ಅಥವಾ ಸ್ತ್ರೀ ಯಾರೇ ಆದರೂ ತಾವು ಒಬ್ಬರಿಗೆ ಮರಿಮಕ್ಕಳಾಗಿಯೂ, ಮರಿಮೊಮ್ಮಕ್ಕಳಾಗಿಯೂ ಮತ್ತು ಮಕ್ಕಳಾಗಿಯೂ ಹುಟ್ಟುವುದಕ್ಕೆ ಈ ಪಿತೃ ದೇವತೆಗಳ ಅನುಗ್ರಹವಾದ್ದರಿಂದ ಈ ದೇಹ ಪಡೆಯುವುದಕ್ಕೆ ಅವರ ಋಣವಿದ್ದೇ ಇರುತ್ತದೆ. 

ಇದನ್ನೇ " ಪಿತೃ ಋಣ " ಯೆಂದು ಕರೆಯುತ್ತಾರೆ!!

No comments:

Post a Comment