Sunday, November 05, 2023

BRAHMANYA ಬ್ರಾಹ್ಮಣ್ಯ

 ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಬಗ್ಗೆ  ಲೇಖ .......


ಬ್ರಾಹ್ಮಣರು ಯಾರು ? ಬ್ರಾಹ್ಮಣತ್ವ ಎಂದರೇನು ? ಬ್ರಾಹ್ಮಣರೇ ಪೂಜೆಯನ್ನೇಕೆ ಮಾಡುತ್ತಾರೆ ?
           'ಬ್ರಾಹ್ಮಣತ್ವ',ಎನ್ನುವುದು  ಒಂದು ಸಿದ್ಧಾಂತ. ಪ್ರಾಚೀನ ಕಾಲದಲ್ಲಿ ಆ ಸಿದ್ಧಾಂತದ ಶ್ರೇಷ್ಠತೆಯನ್ನು ಕಂಡವರು, ಜೀವನದಲ್ಲಿ ಆ ತತ್ವಗಳನ್ನು ಅಳವಡಿಸಿಕೊಂಡು ಬಂದವರು‌. ಸಹಜವಾಗಿ, ಆಡು ಮಾತಿನಲ್ಲಿ 'ಬ್ರಾಹ್ಮಣತ್ವ' ಕ್ಕೆ ಜಾತಿ ಎನ್ನುವುದು ಬಂದಿದೆ ಯಾದರೂ, ಬ್ರಾಹ್ಮಣತ್ವವೆಂಬುದು ಯಾವುದೇ ಜಾತಿಯಲ್ಲ. ಸರಕಾರದ ಕಾನೂನಿನ ಸಿದ್ಧಾಂತ ದ ಪ್ರಕಾರವೂ ಬ್ರಾಹ್ಮಣರಿಗೆ ಇಂದಿಗೂ, 'ಜಾತಿ'ಯ ಮಾನದಂಡವೇ ಇಲ್ಲ. ಬ್ರಾಹ್ಮಣ ಸಿದ್ಧಾಂತದ ಅನುಯಾಯಿಗಳು ಇಂದಿಗೂ ಜಾತಿಯ ಧೃಢೀಕೃತ ಪ್ರಮಾಣ ಪತ್ರ ಹೊಂದಿಲ್ಲದಿರುವುದೇ ಇದಕ್ಕೊಂದು ಸ್ಪಷ್ಟವಾದ ನಿದರ್ಶನ.ಯಾವುದೇ ರೀತಿಯಲ್ಲಿ ಜಾತಿಯನ್ನು ಬಂಡವಾಳ ಮಾಡಿ ಕೊಳ್ಳದೇ, ತಮ್ಮತನದಲ್ಲೇ ಇರುವ ಒಂದು ಪಂಕ್ತಿಯಲ್ಲಿ ಬರುವುದು,ಈ ಬ್ರಾಹ್ಮಣರು ಮಾತ್ರ. 

         ಎಷ್ಟೋ ಜನ, ಈ ಬ್ರಾಹ್ಮಣರನ್ನು ಜರೆಯುತ್ತಾರೆ.ಯಾಕೆಂದರೆ, ಬ್ರಾಹ್ಮಣರು ಯಾವತ್ತೂ ಈ ತರ ಕಿತ್ತಾಡುವವರನ್ನು ಗಣನೆಗೆ ತೆಗೆದುಕೊಂಡು, ರಂಪಾಟ ಮಾಡಿದವರೇ ಅಲ್ಲ. ಹಾಗಾಗಿ, ಈ ತರಹ ಮನ ಬಂದ ರೀತಿಯಲ್ಲಿ ಸಮಾಜಕ್ಕೆ ತಪ್ಪಾದ ಮಾಹಿತಿ ಕೊಡುವಲ್ಲಿ, ಸಮಾಜದ ದೃಷ್ಟಿಯಿಂದ ಕೆಲ ವಿಲಕ್ಷಣ ಜನರು ಮೇಲುಗೈ ಸಾಧಿಸಿ, ತಮ್ಮ ಬೇಳೆ ಬೇಯಿಸಿ ಕೊಂಡಿರಬಹುದು.  ಆದರೆ,ಅವರೊಳಗಿನ ಆತ್ಮಸಾಕ್ಷಿಗೆ ಇದು ವಿರುದ್ಧವಾಗಿಯೇ ಇರುತ್ತದೆ. 

        ಬ್ರಾಹ್ಮಣರ ಮೂಲ ಭಾರತ ದೇಶವೇ ಮತ್ತು ಮೂಲಮಂತ್ರ ಭರತಖಂಡ. ಅಂದಿಗೂ,ಇಂದಿಗೂ, ಎಂದಿಗೂ ಸೌಹಾರ್ದತೆಯಿಂದ ತುಂಬಿದ ಜನರಿರಬೇಕು ಎನ್ನುವ ಅಖಂಡ ಭಾರತದ ಮೂಲ ಧ್ಯೇಯವನ್ನು ಹೊತ್ತವರು. ವಸುಧೆಯೇ ಕುಟುಂಬ ಎಂಬ ಧ್ಯೇಯವನ್ನು ಹೊಂದಿದವರು. ತಮ್ಮ ಜನಸಂಖ್ಯೆ ಕೇವಲ ೨-೩ ಶೇಕಡದಷ್ಟಿದ್ದರೂ 'ಸರ್ವೇ ಜನಾಃ ಸುಖಿನೋ ಭವಂತು' ಎಂದು ಇಂದಿಗೂ ಹರಸುವರು.

          ಎಷ್ಟೋ ವಿಚಾರಗಳಲ್ಲಿ ನಾವು ನೋಡುವು ದೇನೆಂದರೆ, ಬ್ರಾಹ್ಮಣರಲ್ಲಿನ ಮಡಿತ್ವ, ಜೀವಿತಾ ವಧಿಯ ಸಸ್ಯಾಹಾರ ಶಾಸ್ತ್ರ, ನಿತ್ಯಾನುಷ್ಠಾನ. ನಿಜವಾಗಿ ನೋಡಲು ಹೋದರೆ,  ಇವುಗಳೆಲ್ಲ ಅವರ ಬ್ರಾಹ್ಮಣತ್ವದ ವಿಧಿವಿಧಾನಗಳಿಗಷ್ಟೇ ಮೀಸಲಾಗಿದೆ. ಯಾರ ಮೇಲೂ ಹೇರುತ್ತಿಲ್ಲ. ಹಿಂದುತ್ವವೆನ್ನುವುದು ಸಂಕುಚಿತವಲ್ಲ.                            ಎಲ್ಲವನ್ನೊಳಗೊಂಡ ಸಮ್ಮಿಶ್ರತೆಯ ಬಂಧ. ಈ ತರಹದ 'ವಿವಿಧತೆಯಲ್ಲಿ ಏಕತೆ' ಯನ್ನು ಹೊಂದಿದ ಭಾರತ ದೇಶವು ಇಡೀ ವಿಶ್ವದಲ್ಲೇ ಭಿನ್ನ. ಈ ದೇಶದಲ್ಲಿ ಪ್ರತಿಯೊಂದು ಕಾಯಕಗಳಿಗೂ ಅದರದೇ ಆದ ಮಹತ್ವವಿದೆ. 

        ಬ್ರಾಹ್ಮಣತ್ವದ ಸಿದ್ಧಾಂತ ಅಳವಡಿಸಿಕೊಂಡ ಜನರು, ಆ ಸಿದ್ಧಾಂತಗಳನ್ನು  ಮುಂದು ವರೆಸಿಕೊಂಡು ಬಂದರು. ಗುರುಪರಂಪರೆಯ ಮುಖೇನ ಆ ಸಿದ್ಧಾಂತ ಹೆಣೆಯಲ್ಪಟ್ಟಿತು. ಇಂದಿಗೂ ಗುರುವೊಬ್ಬರ ಬೇರು ಈ ಬ್ರಾಹ್ಮಣರ ಸಿದ್ಧಾಂತ ದಲ್ಲಿದೆ.  ಹಿಂದೂ ಧರ್ಮದ ಮೂಲ ಸಿದ್ಧಾಂತದ ಅಡಿಯಲ್ಲಿಯೇ ಎಲ್ಲವೂ ಬರುವುದು.  

ಯಾಕೆ ಬ್ರಾಹ್ಮಣರೇ ಪೂಜಾ ವಿಧಾನಗಳನ್ನು ಮಾಡಬೇಕು ?

              ಬುದ್ಧಿಜೀವಿಗಳೆನಿಸಿಕೊಂಡವರು ನೀಚ ಮಾತುಗಳನ್ನಾಡಿ ನಿಂದಿಸಿದಾಗಲೂ,ಈ ಪೂಜಾ ಕೈಂಕರ್ಯಗಳ ಗೊಡವೆ ತಮಗೇಕೆ ಎಂದು ತಮ್ಮ ಪೂರ್ವಜರ ಮೂಲತತ್ವವನ್ನು ತೊರೆಯದೇ, ಗುರುಪರಂಪರೆ, ಋಷಿಮೂಲದ ಬೇರನ್ನು ಬಿಡದೇ, ನಿಷ್ಠೆಯಿಂದ ನೀರೆರೆದು ಇನ್ನೂ ತಮ್ಮ ಪಾಡಿಗೆ ತಾವು ಕರ್ತವ್ಯ ನಿರ್ವಹಿಸುತ್ತಿರುವುದನ್ನು ಸ್ವಲ್ಪ ವಿವೇಚನೆ ಯಿಂದ ಯೋಚಿಸಿದರೆ, ಅವರೇ ಯಾಕೆ ಪೂಜಾ ವಿಧಾನಗಳನ್ನು ಮಾಡಲು ಯೋಗ್ಯರೆಂಬುವುದನ್ನು ನಾವು ಮನಗಾಣಬಹುದು.

             ಬ್ರಾಹ್ಮಣತ್ವವನ್ನು ಒಂದು ಚೌಕಟ್ಟಿನಲ್ಲಿ ತಂದಿಟ್ಟು, ಅದಕ್ಕೊಂದು ಮಾನದಂಡ ಕೊಟ್ಟು, ಇಂದಿಗೂ ಉಳಿಸಿಕೊಂಡು ಬಂದಿರುವವರು ಬ್ರಾಹ್ಮಣರು. ಮುಂದೂ ಸಹಿತ ಬ್ರಾಹ್ಮಣ ಸಿದ್ಧಾಂತದ ಸಾರ ಹೀಗೇಯೇ  ಮುಂದು ವರೆಯುವುದರಲ್ಲಿ. 

            ಬ್ರಾಹ್ಮಣ ಸಿದ್ಧಾಂತವನ್ನು ತನ್ನ ಜೀವಿತಾ ವಧಿಯಲ್ಲಿ ಪರಿಪಾಲಿಸಿಕೊಂಡು ಹೋಗುವ ಯೋಗ್ಯತೆ, ಅದರ ಮೇಲಿನ ಪೂಜ್ಯತೆ ಇದ್ದರೆ, ನಂಬಿಗೆ ಇದ್ದರೆ, ನಿಷ್ಠೆ ಇದ್ದರೆ,  ಶ್ರದ್ಧೆಯಿಂದ,  ಯಾರು ಬೇಕಾದರೂ ಪೂಜಾ ಕೈಂಕರ್ಯಗಳನ್ನು  ಮಾಡಿ ಕೊಂಡು ಹೋಗಬಹುದು.....

No comments:

Post a Comment