Wednesday, November 15, 2023

Fire is auspicious signs ಫಟಾಕಿ ಶುಭ ಸಂಕೇತ

                   ಪಟಾಕಿ- ಶುಭ ಸಂಕೇತ


ಭಾರತದಲ್ಲಿ ಪಟಾಕಿ ನಿಷೇಧ ಇದ್ದಾಗಲೂ, ಅಪಾರ ಪ್ರಮಾಣ ಪಟಾಕಿಗಳನ್ನು ಸಿಡಿಸಲಾಗುತ್ತಿದೆ. 2200 ವರ್ಷಗಳ ಹಿಂದೆ ಚೀನಾದ ಲುಯಾಂಗ್‌ನಲ್ಲಿ ಪಟಾಕಿಗಳನ್ನು ಸಿಡಿಸುವ ಪದ್ಧತಿ ಅಸ್ತಿತ್ವದಲ್ಲಿತ್ತು ಭಾರತದಲ್ಲಿ 18ನೇ ಶತಮಾನದ ವೇಳೆಗೆ ದೀಪಾವಳಿಗಳಲ್ಲಿ ಪಟಾಕಿಗಳನ್ನು ಸಿಡಿಸುವ ಆಚರಣೆ ಜಾರಿಗೆ ಕೆಲವು ವರ್ಷಗಳ ಹಿಂದೆ ಬಿಹಾರದ ಪಾಟ್ನಾದಲ್ಲಿ 'ಬಿನ್‌ ಲಾಡೆನ್‌ ಬಾಂಬ್‌' ಹೆಸರಿನ ಪಟಾಕಿ ಮಾರುಕಟ್ಟೆಗೆ ಬಂದಿತ್ತು. ಅದು ಅಲ್‌ಖೈದಾಫ್ಯಾಕ್ಟರಿಯಲ್ಲಿ ಉಗ್ರ ಲಾಡೆನ್‌ ಸಿದ್ಧಮಾಡಿದ್ದ ಬಾಂಬೇನೂ ಆಗಿರಲಿಲ್ಲ. ಅದು ನಮ್ಮ ಶಿವಕಾಶಿಯಲ್ಲೇ ತಯಾರಾದಂಥ ಪಟಾಕಿ! ಆ ಪಟಾಕಿಯನ್ನು ಸುಡುವುದರೊಂದಿಗೆ ಉಗ್ರವಾದವನ್ನೇ ದಹಿಸಿದೆವು ಎನ್ನುವ ಭಾವನೆಯಲ್ಲಿ ಲಾಡೆನ್‌ ಬಾಂಬ್‌ ಹೆಚ್ಚೆಚ್ಚು ಮಾರಾಟ ಕಂಡಿತ್ತು.

ಈಗಿನ ದಿನಗಳಲ್ಲಿ ಪಟಾಕಿಗೆ ಎಷ್ಟೆಲ್ಲ ನಿಷೇಧ ಗಳಿವೆ. ಕಳೆದ ವರ್ಷದ ದೀಪಾವಳಿಯಲ್ಲಿ ಬಹುತೇಕ ರಾಜ್ಯಗಳು ಪಟಾಕಿಯನ್ನು ನಿಷೇಧಿಸಿದ್ದರೂ, ಒಟ್ಟಾರೆ ಇಡೀ ದೇಶದಲ್ಲಿ  ಸುಮಾರು ಸಾವಿರ ಕೋಟಿ ರೂ. ಮೌಲ್ಯದ ಪಟಾಕಿಗಳನ್ನು ಸಿಡಿಸಲಾಗುತ್ತದೆ. ಅಂಥ ನಿಷೇಧ ಈಗಲೂ ಇದ್ದೇ ಇದೆ. ಆದರೂ, ಕಳೆದ ವರ್ಷಕ್ಕಿಂತ ಹೆಚ್ಚು ವಹಿವಾಟು ನಡೆಯುವ ನಿರೀಕ್ಷೆ ಇದೆ ಎನ್ನಬಹುದು ಪಟಾಕಿ ಹಚ್ಚುವುದು ಕೇವಲ ದೀಪಾವಳಿಯಲ್ಲಷ್ಟೇ ಅಲ್ಲ. ಭಾರತ ಪಂದ್ಯಗಳನ್ನು ಗೆದ್ದಾಗ, ಚುನಾವಣೆಗಳಲ್ಲಿ ಗೆಲುವು ಕಂಡಾಗ, ಉಪನಯನ ಮದುವೆಯಂಥ ಶುಭ ಸಮಾರಂಭಗಳಲ್ಲೂ ಪಟಾಕಿಗಳ ಸದ್ದು ಕೇಳುತ್ತದೆ.

           ಪಟಾಕಿಯಿಂದ ತಮಗೆ ಅಪಾಯವಿದೆ, ಪರಿಸರಕ್ಕೆ ಆಪತ್ತಿದೆ ಎಂಬ ಅರಿವಿದ್ದೂ ಮನುಷ್ಯನೇಕೆ ಇನ್ನೂ ಪಟಾಕಿ ಹಾರಿಸುತ್ತಿದ್ದಾನೆ ? ಪಟಾಕಿಗೆ ಆಕರ್ಷಿತ ನಾಗುತ್ತಿದ್ದಾನೆ ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ, ಐತಿಹಾಸಿಕ, ಸಾಂಸ್ಕೃತಿಕ, ಸಾಮಾಜಿಕ, ವೈಜ್ಞಾನಿಕ ಕಾರಣಗಳಿಗಾಗಿ ಮನುಷ್ಯ ಪಟಾಕಿಗೆ ಹತ್ತಿರವಾಗಿರುವುದು ದೃಢವಾಗುತ್ತದೆ.

1. ಐತಿಹಾಸಿಕ ಕಾರಣ: ಪಟಾಕಿಗಳ ಶಬ್ದ ಶುಭ ಹಾರೈಕೆ ಸಂಕೇತ

ಮನುಷ್ಯನಿಗೆ ಬೆಂಕಿಯೊಂದಿಗಿನ ಬಾಂಧವ್ಯ ಬಲು ಪುರಾತನ. ಜೈವಿಕ ಮಾನವಶಾಸ್ತ್ರಜ್ಞರ ಪ್ರಕಾರ, ಮಾನವನ ಮಿದುಳು ವಿಕಸನ ಗೊಳ್ಳುತ್ತಿದ್ದ ಕಾಲದಲ್ಲಿ ಬೆಂಕಿಯೇ ಬಹು ದೊಡ್ಡ ಅಚ್ಚರಿ. ಬೆಂಕಿಯನ್ನು ತನ್ನ ಅಗತ್ಯಗಳಿಗೆ ಅನುಗುಣವಾಗಿ ಬಳಸುವುದನ್ನು ಆತ ಜೀವಿತ ಕಲೆಯೆಂಬಂತೆ ರೂಢಿಸಿಕೊಳ್ಳತೊಡಗಿದ. ಬೆಂಕಿಯೊಂದಿಗಿನ ಈ ಭಾವನೆಯೇ ಪಟಾಕಿಗಳೊಂದಿಗೆ ಮಾನವ ಸಂಬಂಧ ರೂಪುಗೊಳ್ಳಲು ಕಾರಣವಾಯಿತು. ಶುಭ ಹಾರೈಕೆಯ ಸಂಕೇತವಾಗಿ ಮನುಷ್ಯ ಪಟಾಕಿ ಸಿಡಿಸತೊಡಗಿದ.


2. ಸಾಂಸ್ಕೃತಿಕ ಕಾರಣ: ಶ್ರೀಮಂತರ ಮನೆಯಿಂದ ಶ್ರೀಸಾಮಾನ್ಯರ ಮನೆಗೆ...

ಮಧ್ಯಕಾಲೀನ ಕಾಲದಿಂದಲೂ ಭಾರತದಲ್ಲಿ ಪಟಾಕಿ ಸಿಡಿಸಲಾಗುತ್ತಿತ್ತು. ಆದರೆ, ಆಗ ಹೆಚ್ಚಾಗಿ ರಾಜಮನೆತನಗಳು ತಮ್ಮ ಮನರಂಜನೆಗಾಗಿ ಬಳಸುತ್ತಿದ್ದವು. ಪಟಾಕಿ ಅವರಿಗೆ ಆನಂದ ಹಾಗೂ ಐಷಾರಾಮಿಯ ಪ್ರತೀಕವಾಗಿತ್ತು. ಪಟಾಕಿಯಲ್ಲಿ ಬಳಸಲಾಗುತ್ತಿದ್ದ ಗನ್‌ಪೌಡರ್‌ ಆ ಕಾಲದಲ್ಲಿ ದುಬಾರಿ ಆಗಿತ್ತಲ್ಲದೆ, ಕೇವಲ ರಾಜಮನೆತನಗಳ ಸಂಗ್ರಹದಲ್ಲಿ ಮಾತ್ರವೇ ಇತ್ತು. ಕಾಲಾನಂತರದಲ್ಲಿ ಯುದ್ಧ ಬಳಕೆಯ ಗನ್‌ ಪೌಡರ್‌ನ ಜಾಗಕ್ಕೆ ಡೈನಮೈಟ್‌ಗಳು ಬಂದವು. ಗನ್‌ಪೌಡರ್‌ಗಳು ಜನ ಸಾಮಾನ್ಯರ ಕೈಗೆಟುಕಲು ಆರಂಭಿಸಿದ್ದರಿಂದಾಗಿ ಪಟಾಕಿ ಬಳಕೆ ಎಲ್ಲೆಡೆ ಆರಂಭವಾಯಿತು.

3. ಸಾಮಾಜಿಕ ಕಾರಣ: ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು...

ಮನಶ್ಶಾಸ್ತ್ರಜ್ಞರ ಪ್ರಕಾರ, ಮನುಷ್ಯ ಬಾಲ್ಯದ ನೆನಪುಗಳನ್ನು ಹೆಚ್ಚು ಪ್ರೀತಿಸುತ್ತಾನೆ. ಆ ನೆನಪುಗಳನ್ನು ಮರುಜಾರಿಗೊಳಿಸಲು ಇಷ್ಟಪಡುತ್ತಾನೆ ಕೂಡ. ಈಗಿನ 30-40 ವರ್ಷ ದಾಟಿದ ಹಲವರ ಬಾಲ್ಯಗಳಲ್ಲಿ ಪಟಾಕಿ ಸಂಭ್ರಮ ಎನ್ನುವುದು ಬಹುದೊಡ್ಡ ಭಾಗ. ಈ ನೆನಪುಗಳನ್ನು ಮೆಲುಕು ಹಾಕುವ ಸಲುವಾಗಿ ಪಟಾಕಿ ಕಡೆಗೆ ಆಕರ್ಷಿತರಾಗುತ್ತಾರೆ. ಅಂದಿನ ದಿನಗಳಲ್ಲಿ ಈಗಿನ ಪಟಾಕಿ ಗಳಿಗಿಂತ  ಆಗ ಗಂಧಕ ಮತ್ತು ಪೊಟ್ಯಾಷ್ ಮಿಶ್ರಣವನ್ನು ಸಿಡಿಸಲು ಉಪಯೋಗಿಸಲಾಗುತ್ತಿತ್ತು.

4. ವೈಜ್ಞಾನಿಕ ಕಾರಣ: ಮಿದುಳಿನಲ್ಲಿ ಡೊಪಮೈನ್‌ ಬಿಡುಗಡೆ

ಮಾನವನ ಮಿದುಳಿನ ವಿವಿಧ ಭಾಗಗಳು ಮತ್ತು ದೇಹದ ಉಳಿದ ಭಾಗಗಳ ನಡುವಿನ ಸಂವಹನವು ಕೆಲವು ರಾಸಾಯನಿಕಗಳ ಮೂಲಕ ನಡೆಯುತ್ತದೆ. ಈ ರಾಸಾಯನಿಕಗಳು ಒಂದರ್ಥದಲ್ಲಿ ಸಂದೇಶವಾಹಕಗಳು ಅಥವಾ ನ್ಯೂರೋ ಟ್ರಾನ್ಸ್‌ಮಿಟರ್‌ಗಳಿದ್ದಂತೆ. ನಮ್ಮ ನರ ಮಂಡಲದಲ್ಲಿ ಉತ್ಪಾದನೆಯಾಗುವ ಅಂಥದ್ದೊಂದು ರಾಸಾಯನಿಕವೇ ಡೊಪಮೈನ್‌. ಇದು ಮನುಷ್ಯನಿಗೆ ಖುಷಿ ನೀಡುವಂಥ ರಾಸಾಯನಿಕ. ಯಾವುದೇ ಕೆಲಸವನ್ನು ಪುನಃ ಪುನಃ ಮಾಡಿದಾಗ ಆನಂದ ಸಿಕ್ಕರೆ, ಆ ಖುಷಿಯನ್ನು ಮತ್ತೊಮ್ಮೆ ಅನುಭವಿಸಲು ಡೊಪಮೈನ್‌ ಪ್ರಚೋದಿಸುತ್ತದೆ. ಪಟಾಕಿಗಳು ಹೊರಸೂಸುವ ಬೆಳಕು, ಕಿಡಿಗಳು ಮಾನವನ ಕಣ್ಣಿಗೆ ಒಂದು ರೀತಿಯ ವಿಸ್ಮಯ. ಪಟಾಕಿ ಹಚ್ಚುವಾಗ ಮನಸ್ಸಿನೊಳಗೆ ಭಯ ಹೇಗೆ ಕಾಡುತ್ತದೋ, ಅದಕ್ಕಿಂತ ಹೆಚ್ಚಾಗಿ ನಿಗೂಢತೆ, ನಿರೀಕ್ಷೆ, ಆನಂದಗಳೂ ಅವನನ್ನು ಆವರಿಸಿ ಕೊಳ್ಳುತ್ತವೆ. ಈ ಸಮಯದಲ್ಲಿ ನರ ಕೋಶದಲ್ಲಿ ಡೊಪಮೈನ್‌ ಬಿಡುಗಡೆ ಯಾಗುವ ಕಾರಣ, ಪಟಾಕಿ ಆತನಿಗೆ ಆನಂದಿಸುವ ಸಂಗತಿಯಾಗಿದೆ ಎನ್ನುತ್ತದೆ ಮನೋವಿಜ್ಞಾನ


5. 2200 ವರ್ಷಗಳ ಹಿಂದೆಯೇ ಇದ್ದ ಪಟಾಕಿ

ಸುಮಾರು 2200 ವರ್ಷಗಳ ಹಿಂದೆ ಚೀನಾದ ಲುಯಾಂಗ್‌ನಲ್ಲಿ ಪಟಾಕಿಗಳನ್ನು ಸಿಡಿಸುವ ಪದ್ಧತಿ ಇತ್ತು. ಈ ಪಟಾಕಿಗಳನ್ನು ಬಿದಿರಿನ ಕೋಲುಗಳಿಂದ ತಯಾರಿಸ ಲಾಗುತ್ತಿತ್ತು. ಇವುಗಳನ್ನು ಬೆಂಕಿಗೆ ಹಾಕಿದಾಗ, ಬಿದಿರನ ಗಂಟುಗಳು ಸಿಡಿದು ಭಾರೀ ಸದ್ದು ಹೊಮ್ಮುತ್ತಿತ್ತು.ಹಬ್ಬಗಳು ಮತ್ತು ಪ್ರಮುಖ ಸಂದರ್ಭಗಳಲ್ಲಿ ಚೀನಿಯರು ಬಿದಿರನ್ನು ಬೆಂಕಿಯಲ್ಲಿ ಎಸೆಯುವುದನ್ನು ರೂಢಿಸಿಕೊಂಡರು. ಅದರಿಂದ ಬರುವ ಶಬ್ದವನ್ನು ಅದೃಷ್ಟದ ಸಂಕೇತ ಎಂದೇ ಭಾವಿಸತೊಡಗಿದರು. ಈ ಸದ್ದಿಗೆ ಹೆದರಿ ದುಷ್ಟ ಶಕ್ತಿಗಳು, ಆಲೋಚನೆಗಳು ಮತ್ತು ದುರಾದೃಷ್ಟಗಳು ಓಡಿಹೋಗುತ್ತವೆ ಎಂಬ ನಂಬಿಕೆ ಚೀನಾದಲ್ಲಿ ತೀವ್ರವಾಯಿತು.


6. ಗನ್‌ಪೌಡರ್‌ನಿಂದ ಪಟಾಕಿ ಹುಟ್ಟಿದ ಕಥೆ

ಒಮ್ಮೆ ಚೀನಾದ ಕೆಲವು ಸೈನಿಕರು ಪರ್ವತದಿಂದ ಹಳದಿ ಬಣ್ಣದ ಮಣ್ಣನ್ನು ಹೊತ್ತು ತಂದು ಉದ್ಯಾನದಲ್ಲಿ ಹರವುತ್ತಿದ್ದರು. ಕಾಕತಾಳೀಯವೆಂಬಂತೆ, ಅಲ್ಲಿ ಕಲ್ಲಿದ್ದಲಿನ ತುಂಡುಗಳೂ ಬಿದ್ದಿದ್ದವು. ಮರುದಿನ ಮಧ್ಯಾಹ್ನ ಬಿರು ಬಿಸಿಲಿನ ವೇಳೆ ಆ ಸ್ಥಳದಲ್ಲಿ ದೊಡ್ಡ ಸ್ಫೋಟ ಸಂಭವಿಸಿತು. ಸುತ್ತ ಇದ್ದ ಮರಗಳೂ ಬೂದಿಯಾಗಿದ್ದವು. ವಾಸ್ತವವಾಗಿ ಆ ಹಳದಿ ಮಣ್ಣು ಸಲ್ಫರ್‌ ಆಗಿತ್ತು. ಇದರೊಂದಿಗೆ ಪೊಟ್ಯಾಷಿಯಂ ನೈಟ್ರೇಟ್‌ ಮತ್ತು ಇದ್ದಿಲನ್ನು ಬೆರೆಸಿದಾಗ ಗನ್‌ ಪೌಡರ್‌ ಸಿದ್ಧವಾಯಿತು. ಈ ಗನ್‌ಪೌಡರನ್ನು ಬಿದಿರಿನ ಕೊಳವೆಯಲ್ಲಿ ತುಂಬಿ ಚೀನಿಯರು 9ನೇ ಶತಮಾನದಲ್ಲಿ ಮೊಟ್ಟ ಮೊದಲ ಬಾರಿಗೆ ಕೈಯಿಂದ ಪಟಾಕಿಗಳನ್ನು ತಯಾರಿಸಿದರು. ನಂತರ ಬಿದಿರಿನ ಬದಲಿಗೆ ಕಾಗದ ಬಳಕೆ ಆರಂಭವಾಯಿತು.

7. ಚೀನಾದ ಪಟಾಕಿ ಭಾರತದ ದಾರಿ ಹಿಡಿದಿದ್ಹೇಗೆ?

ಆತಿಶ ದೀಪಂಕರ್‌ ಎಂಬ ಬಂಗಾಳಿ ಬೌದ್ಧ ಧಾರ್ಮಿಕ ನಾಯಕ ಚೀನಾ, ಟಿಬೆಟ್‌ ಮತ್ತು ಪೂರ್ವ ಏಷ್ಯಾದಲ್ಲಿ ಪಟಾಕಿ ತಯಾರಿಕೆ ಬಗ್ಗೆ ಕಲಿತು, 12ನೇ ಶತಮಾನದಲ್ಲಿ ಭಾರತಕ್ಕೆ ಆ ಕಲ್ಪನೆಯನ್ನು ಹೊತ್ತು ತಂದರು. ಭಾರತದಲ್ಲಿ ಪಟಾಕಿಗಳ ಔಪಚಾರಿಕ ಬಳಕೆಯು ಮೊಘಲರಿಂದ ಪ್ರಾರಂಭವಾಯಿತು. ಇದನ್ನು ಆ ಕಾಲದ ಅನೇಕ ವರ್ಣಚಿತ್ರಗಳು ಮತ್ತು ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿನ ಪಟಾಕಿಗಳ ಆರಂಭಿಕ ಟಿಪ್ಪಣಿಗಳು ಸಿಗುವುದು ಪ್ರವಾಸಿಗ ಅಬ್ದುಲ್‌ ರಜಾಕ್‌ ದಾಖಲಿಸಿದ ರಚನೆಗಳಲ್ಲಿ. ಪರ್ಷಿಯಾದ ಟಿಮರುಡ್‌ ರಾಜವಂಶದ ಆಡಳಿತಗಾರ ಶಾರೂಖ್‌ನ ರಾಯಭಾರಿಯಾಗಿದ್ದ ರಜಾಕ್‌, ವಿಜಯ ನಗರ ಸಾಮ್ರಾಜ್ಯದ 2ನೇ ದೇವರಾಯನ ಕಾಲದಲ್ಲಿ ಹಂಪಿಗೆ ಬಂದಿದ್ದರು.

ಕ್ರಿ.ಶ.1443ರಲ್ಲಿ ಆಚರಣೆಗೊಂಡ ಮಹಾನವಮಿ ಹಬ್ಬದಲ್ಲೂ ಪಟಾಕಿಗಳನ್ನು ಸಿಡಿಸಿದ್ದರ ಬಗ್ಗೆ ರಜಾಕ್‌ ಉಲ್ಲೇಖಿಸಿದ್ದಾರೆ.

ಕ್ರಿ.ಶ. 1518ರಲ್ಲಿ ಗುಜರಾತ್‌ನಲ್ಲಿ ನಡೆದ ಬ್ರಾಹ್ಮಣ ಕುಟುಂಬದ ಒಂದು ವಿವಾಹದಲ್ಲಿ ಭಾರೀ ಪಟಾಕಿಗಳನ್ನು ಸಿಡಿಸಲಾಗಿತ್ತು ಎಂದು ಪೋರ್ಚುಗೀಸ್‌ ಪ್ರವಾಸಿ ಹೇಳಿರುವ ಬಗ್ಗೆ ಪಿ.ಕೆ. ಗೋಡ್‌ ಅವರ 'ದಿ ಹಿಸ್ಟರಿ ಆಫ್‌ ಫೈರ್‌ ವರ್ಕ್ಸ್ ಇನ್‌ಇಂಡಿಯಾ' ಎಂಬ ಕೃತಿಯಲ್ಲಿ ದಾಖಲಿಸಲಾಗಿದೆ.

ಮಧ್ಯಯುಗದಲ್ಲಂತೂ ಪಟಾಕಿಗಳು ರಾಜಮನೆತನಗಳಿಗೆ ಮನರಂಜನೆ ಸಂಗತಿಯಾಗಿತ್ತು. ಶ್ರೀಮಂತರ ಮನೆಯ ವಿವಿಧ ಹಬ್ಬಗಳು, ಮದುವೆಗಳು ಮತ್ತು ಆಚರಣೆಗಳಲ್ಲಿ ಪಟಾಕಿ ಕಡ್ಡಾಯವಾಗಿತ್ತು


8. ಕೃಷ್ಣ- ರುಕ್ಮಿಣಿ ಮದುವೆಯಿಂದ ದೀಪಾವಳಿ ತನಕ....

ಕ್ರಿ.ಶ. 1570ರಲ್ಲಿ ಮರಾಠಿ ಕವಿ ಏಕನಾಥ್‌ ಬರೆದ ಕವಿತೆಯೊಂದರಲ್ಲಿ, ರುಕ್ಮಿಣಿ ಮತ್ತು ಕೃಷ್ಣರ ಮದುವೆಯಲ್ಲಿ ಪಟಾಕಿಗಳನ್ನು ಸಿಡಿಸಿದ್ದ ಪ್ರಸಂಗವನ್ನು ಸ್ವಾರಸ್ಯವಾಗಿ ಚಿತ್ರಿಸಲಾಗಿದೆ.  ಬಿಜಾಪುರದ ಸುಲ್ತಾನ್‌ ಇಬ್ರಾಹಿಂ ಆದಿಲ್‌ ಶಾ ತನ್ನ ಮಗಳ ಮದುವೆಯಲ್ಲಿ ಪಟಾಕಿ ಸಿಡಿಸಲು 80 ಸಾವಿರ ರೂ. ಖರ್ಚು ಮಾಡಿದ್ದ ಎಂದು ಸತೀಶ್‌ಚಂದ್ರ ಅವರ 'ಮಧ್ಯಕಾಲೀನ ಭಾರತ' ಕೃತಿ ಉಲ್ಲೇಖಿಸಿದೆ.

      1820ರಲ್ಲಿ ಬರೋಡಾದ ಮಹಾರಾಜ 2ನೇ ಸಯಾಜಿ ರಾವ್‌ ತನ್ನ 2ನೇ ಮದುವೆ ಯಲ್ಲಿ ಪಟಾಕಿಗಾಗಿ 3 ಸಾವಿರ ರೂ. ಖರ್ಚು ಮಾಡಿದ್ದು ಆ ಕಾಲಕ್ಕೆ ಬಹುದೊಡ್ಡ ವೆಚ್ಚ.

18ನೇ ಶತಮಾನದ ಹೊತ್ತಿಗೆ ದೀಪಾವಳಿಯ ಸಮಯದಲ್ಲಿ ಪಟಾಕಿಗಳ ಔಪಚಾರಿಕ ಬಳಕೆ ಪ್ರಾರಂಭವಾಯಿತು. ಅದು ಇಲ್ಲಿಯ ತನಕವೂ ನಡೆದುಬಂದಿದೆ.

9. "ವೈಶ್ವಾನರ"

ವೇದವಂದ್ಯ: ಎಂಬುದು ಇದರಲ್ಲಿ ಬರುವ ಪದ.  ಇದರರ್ಥ ಯಜ್ಞದ ಬೆಂಕಿ. ವೈಶ್ವಾನರ ಎಂದರೆ ಜಾತವೇದ ಸಹಜವಾಗಿಯೇ ವೇದಗಳು ಪ್ರಕಟವಾದ ಅಗ್ನಿ.ಅಗ್ನಿಯು ತನ್ನ ಮಗನಿಗೆ ತಂದೆಯಂತೆ ಜ್ಞಾನ, ಪವಿತ್ರತೆ ಮತ್ತು ಸಮೃದ್ಧಿಯ ದೇವರು ಅಂತೆಯೇ, ಅವನು ತನ್ನ ಆರಾಧಕರನ್ನು ಸಹ ರಕ್ಷಿಸುತ್ತಾನೆ.  ಪವಿತ್ರವಾದ ಅಗ್ನಿ ಮತ್ತು ತ್ಯಾಗದ ಮೂಲಕ ಅದರ ಆರಾಧನೆಯು ವೇದಗಳ ಏಕೈಕ ವಿಷಯವಾಗಿದೆ.ವಾಸ್ತವವಾಗಿ, ಪ್ರಾಚೀನ ಸಂಪ್ರದಾಯವು ವೇದಗಳ ಉದ್ದೇಶವು ತ್ಯಾಗವನ್ನು ವಿಧಿಸುವುದಾಗಿದೆ ಎಂದು ಹೇಳುತ್ತದೆ. ವೇದಗಳು 'ಅಗ್ನಿ' ಪದದಿಂದ ಪ್ರಾರಂಭ ವಾಗುತ್ತವೆ. 'ತಾನಿ ಧರ್ಮಾಣಿ ಪ್ರಥಮನ್ಯಾಸನ್' ಇಂತಹ ಮಾತುಗಳಲ್ಲಿ ನಿತ್ಯಯಜ್ಞ ಅಂದರೆ ಅಗ್ನಿಯೇ ಮನುಕುಲದ ಮೂಲ ಪೂಜೆ ಎಂದು ವೇದಗಳು ನಿರೂಪಿಸಿವೆ. ವೇದಗಳೇ ಪವಿತ್ರ ಅಗ್ನಿಯ ಅವತಾರವಾಗಿದ್ದವು,ಅದೇ  "ವೈಶ್ವಾನರ  ಅವತಾರ"


No comments:

Post a Comment