ಶ್ರೀ ಗೋವಿಂದರಾಜ ದೇವರ ಕೀರ್ತನೆ (Kannada)
ಈರೇಳು ಲೋಕದೊಳಗೆ ಇವಗೆಣೆ ಕಾಣೆ ಗೋವಿಂದರಾಯನಿಗೆ |
ಮಾರನ್ನ ಪೆತ್ತ ಮನೋಹರ ಮೂರುತಿ ಗೋವಿಂದರಾಯನಿಗೆ || ಪ ||
ನೀಲನೀರದ ನಿಭ ನಿರ್ಮಲಕಾಯ ಗೋವಿಂದರಾಯನಿಗೆ |
ಪಾಲಸಾಗರದಲ್ಲಿ ಪವಡಿಸಿ ಪಾಲಿಪ ಗೋವಿಂದರಾಯನಿಗೆ || 1 ||
ಮತ್ಸ್ಯ ಕೂರ್ಮ ವರಾಹ ನರಸಿಂಹ ವಾಮನ ಗೋವಿಂದರಾಯನಿಗೆ |
ಕುತ್ಸಿತ ರಾಯರ ಕೊಂದ ಕೊಡಲಿಯ ಗೋವಿಂದರಾಯನಿಗೆ || 2 ||
ರಘುಕುಲ ಯದುಕುಲ ಬುದ್ಧ ಕಲ್ಕಿಯ ಗೋವಿಂದರಾಯನಿಗೆ |
ಸೊಗಸು ನುಡಿಯ ಮೆಚ್ಚಿ ಶೋಕವ ಕಳೆವ ಶ್ರೀ ಗೋವಿಂದರಾಯನಿಗೆ || 3 ||
ಕಡಗೋಲ ಪಿಡಿದು ಶ್ರೀ ಉಡುಪಿಲಿ ನೆಲೆಸಿದ ಗೋವಿಂದರಾಯನಿಗೆ |
ಬಡ ನಡುವಿನ ಭಾವಕಿಯರೋಡನಾಡುವ ಗೋವಿಂದರಾಯನಿಗೆ || 4 ||
ವರ್ಣಿಸಿ ಪೊಗಳುವ ವಾದಿರಾಜಗೊಲಿದ ಶ್ರೀ ಗೋವಿಂದರಾಯನಿಗೆ |
ಚೆನ್ನಾದ ಚೆಲುವನೆ ಜಯ ಹಯ ವದನ ಗೋವಿಂದರಾಯನಿಗೆ || 5
.........ಹಯವದನ
|| ಪ್ರೀತೋಸ್ತು ಕೃಷ್ಣಃ ಪ್ರಭು ಶ್ರೀ ರಮಾ ತಿವಿಕ್ರಮ ದೇವತಾ ಪ್ರಸೀದತು ||
No comments:
Post a Comment