ಘಟಿಕಾಚಲದಿ ನಿಂತ ಶ್ರೀ ಹನುಮಂತ
ಘಟಿಕಾಚಲದಿ ನಿಂತ ಶ್ರೀ ಹನುಮಂತ ಘಟಿಕಾಚಲದಿ ನಿಂತ ಪಟು ಹನುಮಂತನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಪಲ್ಲವಿ||
ಚತುರ ಯುಗದಿ ತಾನು ಮುಖ್ಯಪ್ರಾಣನು ಚತುರ್ಮುಖನಯ್ಯನ ಚತುರ ಮೂರುತಿಗಳ ಚತುರತನದಿ ಭಜಿಸಿ ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತ ||೧||
ಸರಸಿಜ ಭವಗೋಸ್ಕರ ಕಲ್ಮಷ ದೂರ ವರಚಕ್ರತೀರ್ಥ ಸರ ಮೆರವಾಚಲದಿ ನಿತ್ಯ ನರಹರಿಗೆದುರಾಗಿ ಸ್ಥಿರ ಯೋಗಾಸನದಿ ಕರೆದು ವರಗಳ ಕೊಡುತ ||೨||
ಶಂಖ ಚಕ್ರವ ಧರಿಸಿ ಭಕ್ತರ ಮನ ಭಂಗವ ಪರಿಹರಿಸಿ ಪಂಕಜನಾಭ ಶ್ರೀ ಪುರಂದರ ವಿಠ್ಠಲನ ಬಿಂಕದ ಸೇವಕ ಸಂಕಟ ಕಳೆಯುತ ||೩||
........ದಾಸ ವರೇಣ್ಯ ಶ್ರೀ ಪುರಂದರ ದಾಸರು
No comments:
Post a Comment