ಬ್ರಹ್ಮ ಪುಷ್ಪ.
( ಶ್ರೀ ಪರಿಮಳಾರ್ಯರು )
ಓಂ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ
ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ
ಪಂಕಜಾಕ್ಷನ ನುತಿಪ ಧ್ಯೇಯಕ್ಕೆ ಚ್ಯುತಿಯ ಕಂಡೊಡೆ ದೈತ್ಯ ಸಂಭವಿ |
ಬ್ರಹ್ಮ ಪರಿಚಾರಕನೇ ಬಾರಯ್ಯ
ಓಂ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ
ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ 1
ಸ್ಥಂಭ ಲಕ್ಷನೆ ಜನ್ಮ ವೈಷ್ಣವ ವೀರ ನೃಪ ಪ್ರಹ್ಲಾದ ಅವನಿಯ |
ಸ್ಥಂಭ ಗೋಚರ ಸಿಂಹನರನಲಿ ಪ್ರಣಿಪದಿಂ ಅಪರೋಕ್ಷ ಜ್ಞಾನಿಯೇ |
ಬ್ರಹ್ಮ ಪರಿಚಾರಕನೇ ಬಾರಯ್ಯ
ಓಂ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ.
ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ 2
ಶಶಿಯ ವಂಶದ ಶ್ರೇಷ್ಟ ಯೋಧನೆ ಭಾಸ ವೈರೋಧ ದೊಳು ಬಾಹ್ಲಿಕ |
ಅಸುರ ಜರಸಂಧನಲಿ ಆಶ್ರಯ ದೋಷದಿಮ್ ವೃಕಉದರ ಗದೆ ಹತ |
ಬ್ರಹ್ಮ ಪರಿಚಾರಕನೇ ಬಾರಯ್ಯ
ಓಂ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ.
ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ. 3
ವ್ಯಾಸವರ ಬ್ರಹ್ಮಣ್ಯ ತೀರ್ಥರೇ ನೃತ್ಯ ಪುತ್ಥಳಿನಾದ ದೈವತ |
ಶ್ರೀಶ ಶಾಲಿಗ್ರಾಮ ಅರ್ಪಣ ಶೇಷಚಲ ಮತ ಮಧ್ವವಾದಿಯೇ |
ಬ್ರಹ್ಮ ಪರಿಚಾರಕನೇ ಬಾರಯ್ಯ
ಓಂ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ
ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ 4
ತೀರ್ಥ ಮಾಂಚಾಲದಲಿ ಪರಿಮಳ ಆರ್ಯ ರಾಘವ ಇಂದ್ರ ಪ್ರಜ್ಞರ |
ತೀರ್ಥ ವೃಂದವನವು ವ್ಯಾಪ್ತದ ದೀರ್ಘ ತುಂಗೆಯ ಇಂದುಸುತ ಪ್ರಿಯ |
ಬ್ರಹ್ಮ ಪರಿಚಾರಕನೇ ಬಾರಯ್ಯ
ಓಂ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ.
ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ. 5
|| ಶ್ರೀ ಮದ್ ರಾಘವೇಂದ್ರಾರ್ಪಣಮಸ್ತು ||
( ಏಕತಾರೀ ತಂತಿವಾದ್ಯದ ಜೊತೆಯೂ ಹಾಡಬಹುದು )

No comments:
Post a Comment