Wednesday, June 05, 2024

TARATAMYA SONG ತಾರತಮ್ಯ ಹಾಡು

          ಶ್ರೀ ವಾದಿರಾಜ ಗುರು ಸಾರ್ವಭೌಮರು ರಚಿಸಿದ 
                ತಾರತಮ್ಯ ಹಾಡು


ಶರಣು ಶರಣು ಶರಣು ಶರಣು || ಪಲ್ಲ ||
ಮಹದೇವರಾ ಗರ್ಭದಲಿ ಉದ್ಭವಿಶಿದಿಯೋ ನೀನು
 ಸಾಧುಮಾತೆಯಿಂ ರೂಪವನು ಕೈಕೊಂಡು 
ಆದಿ ಪೂಜೆಗೆ ಅಭಿಮಾನಿ ದೇವತೆಯಾದಿ 
 ಮಾಧವ ನಮ್ಮ ಹಯವದನನ್ನ ಪ್ರಿಯ     || 1 ||
 ಹಿಮಗಿರಿಗೆ ಮಗಳಾಗಿ ಜನಿಸಿ ತಪವನು ಗೈದು
 ಕಮಲ ಸಂಭವ ಸುತನ ಒಲಿಸಬೇಕೆಂದು
 ರಮಣಿ ರಾಮ ಮಂತ್ರ ದಿನ ಸಹಸ್ರವು ಜಪಿಸೆ 
 ಕಮಲಾಕ್ಷ ನಮ್ಮಹಯವದನನ್ನ ಪ್ರಿಯೇ    || 2 ||
 ಮಡದಿ ಹೋದಾಗ್ರಹಕೆ ಜೆಡೆಯ ಕಿತ್ತಪ್ಪಳಿಸಿ  
ಕಡು ಘೋರ ತಪಗೈಯೇ ಮನ್ಮಥನು ಬರಲು
 ಕಿಡಿಗಣ್ಣಿನಲಿ ಅವನ ಭಸ್ಮವನ ಮಾಡಿದೆ
 ಕಡಲೊಡೆಯ ನಮ್ಮ ಹಯವದನನ್ನ ಪ್ರಿಯ || 3 ||
 ಮತ್ಸ ದೇಶಕೆ ಹೋಗಿ ಮನದ ಚಿಂತೆಯಲ್ಲಿರಲು
 ತುಚ್ಛ ರಕ್ಕಸನು ನಿಮ್ಮನು ಪಿಡಿಯ ಬರಲು
 ಚಿತ್ತ ವಲ್ಲಭಘೇಳಿ ಕೊಚ್ಚಿಸಿದಿ ಅವನ ಶಿರ
 ಅಚ್ಯುತ ನಮ್ಮ ಹಯವದನನ್ನ ಪ್ರಿಯೇ    || 4 ||
 ಈರೇಳು ಲೋಕದ ಜನರ ನಾಲಿಗೆಯಲ್ಲಿ
 ಬೀಜವನ ಬಿತ್ತಿ ಅನ್ನುವ ಕೊಡುವ ತಾಯಿ
 ವಾರಿಜ ಸಂಭವನ ಹಿರಿಯ ಪಟ್ಟದ ರಾಣಿ
 ನೀರಜಾಕ್ಷ ನಮ್ಮ ಹಯವದನನ್ನ ಪ್ರಿಯ   || 6 ||
 ಕೇಸರಿಯ ಗರ್ಭದಲಿ ಉದ್ಭವಿಸಿದಿಯೋ ನೀನು
 ತ್ರೇತೆಯಲ್ಲಿ ರಾಮರ ಸೇವೆಯನ ಮಾಡಿ
 ಭೂತಳದೊಳು ಭೀಮ ಕಡೆಗೆ ಯತಿಯಾಗಿ
 ಶ್ರೀಪತಿ ಹಯವದನ ದೂತ ಪ್ರಖ್ಯಾತ     || 7 ||
 ಜನನಿ ಹುಟ್ಟಿದ ನಾಳದಲ್ಲಿ ಜನಿಸಿದೆ ನೀನು
 ಜನರ ಸೃಷ್ಟಿ ಸ್ಥಿತಿಗೆ ಕಾರಣನು ಎಂದು
 ಅನಿಮಿಷ ಎಲ್ಲರೂ ಸ್ತುತಿಸಿಕೊಂಡಾಡಲು
 ವನಜಾಕ್ಷ ನಮ್ಮ ಹಯವದ ನನ್ನ ಪ್ರಿಯೇ   || 8 ||
 ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದು
 ಪದ್ಮಾಕ್ಷರ ರಥಕೆ ಕೈ ನೀಡಿ ಬಂದೆ
 ಪದ್ಮಾವತಿ ಎಂದು ಖ್ಯಾತಿ ಮೂರ್ಲೊಕದೊಳು
 ಪದ್ಮಾಕ್ಷ ನಮ್ಮ ಹಯವದ ನನ್ನ ಪ್ರಿಯ      || 9 ||
 ಅನಂತ ನಾಟಕಾ ನಂತ ಸೂತ್ರಧಾರಿ
 ಅನಂತ ಚರಿತ ನಿತ್ಯಾನಂದ ಭರಿತ
 ಅನಂತಾ ಸನ ಶ್ವೇತ ದ್ವೀಪ ವೈಕುಂಠ
 ಅನಂತ ಗುಣ ಭರಿತ ಹಯವದನ ಚರಿತ    || 10 ||
 ಶರಣು ಮಚ್ಚ ಕೂರ್ಮ ವರಾಹ ನಾರಸಿಂಹ
 ಶರಣು ವಾಮನ ಭಾರ್ಗವ ರಾಮಚಂದ್ರ
 ಶರಣು ಕೃಷ್ಣ ಬೌದ್ಧ ಕಲಕ್ಯ ಸ್ವರೂಪನೆ
 ಶರಣು ಹಯವದ ನನ್ನ ಚರಣಗಳ ನುತಿಪ  || 11 ||

 ದೇವರ ತಾರತಮ್ಯದ ವ್ಯಾಪ್ತಿ
 ದೇವತಾ ತಾರತಮ್ಯದ ಕಕ್ಷೆಯಲ್ಲಿರುವ ಪ್ರಮುಖ ದೇವತೆಗಳಾದ ಶ್ರೀ ಗಣಪತಿ,  ಶ್ರೀ ಪಾರ್ವತಿ ದೇವಿ,  ಶ್ರೀ ಮಹಾರುದ್ರ ದೇವರು,  ಶ್ರೀ ಭಾರತಿ ದೇವಿ, ಶ್ರೀ ವೀಣಾ ಪಾಣಿ,  ಶ್ರೀ ಪ್ರಾಣದೇವರು,  ಶ್ರೀ ಬ್ರಹ್ಮದೇವರು,  ಶ್ರೀ ಮಹಾಲಕ್ಷ್ಮಿ ದೇವಿ  ಇವರನ್ನೆಲ್ಲ ಒಂದೊಂದು ನುಡಿಯಲ್ಲಿ ವರ್ಣಿಸುವುದರ ಮೂಲಕ ಶ್ರೀ ವಾದಿರಾಜ ಗುರು ಸಾರ್ವಭೌಮರು ಬಹಳ ಸುಲಭವಾಗಿ ಎಲ್ಲ ಪರಿವಾರ ದೇವತೆಗಳ ಅನುಗ್ರಹಕ್ಕೆ ಪಾತ್ರರಾಗುವ ಉಪಾಯ ತಿಳಿಸಿಕೊಟ್ಟಿದ್ದಾರೆ  ಹಾಡಿನ ಮೂಲಕ ಎಲ್ಲ ಪರಿವಾರ ದೇವತೆಗಳ ಜೊತೆಯಲ್ಲಿ ದಶಾವತಾರರೂಪಿ ಶ್ರೀಮನ್ನಾರಾಯಣನನ್ನು ಪ್ರಾರ್ಥಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಅನುಗ್ರಹಿಸಿದ್ದಾರೆ  

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment