Thursday, September 19, 2024

A brief Pitara Karma is indispensable. ಸಂಕ್ಷಿಪ್ತ ಪಿತರ ಕರ್ಮ ( ಅನಿವಾರ್ಯ ಪ್ರಸಂಗಗಳಲ್ಲಿ)

               ಸಂಕ್ಷಿಪ್ತ ಪಿತರ ಕರ್ಮ  ಅನಿವಾರ್ಯ 


     ಪಕ್ಷ ಮಾಸ ಪ್ರಾರಂಭ, ಕಾರಣಾನಂತರಗಳಿಂದ ಕ್ರಮ ಬದ್ಧ ಅಪರಕರ್ಮ, ಶ್ರಾದ್ಧ, ತರ್ಪಣಾದಿಗಳನ್ನು ಮಾಡಾಲಾಗದೆ ಇದ್ದಲ್ಲಿ ಈ ಪಿತೃ ಪಕ್ಷದಲ್ಲಿ  ನಿಮ್ಮಪಿತೃಗಳ ಆತ್ಮ ಶಾಂತಿಗಾಗಿ ನಾವೆಲ್ಲಾ ವಿಪ್ರ ಬಾಂಧವರು  ಯ ಈ ಬ್ರಹ್ಮ ದೇವರಿಂದ ರಚಿತವಾದ " ಬ್ರಹ್ಮ ಕೃತ ಪಿತೃ ಪ್ರಣಾಮ ಸ್ತೋತ್ರ" ವನ್ನು ಪಠಿಸಬಹುದಾಗಿದೆ. ಇದು ಬಹಳಷ್ಟು ಪ್ರಭಾವಕಾರಿ ಸ್ತೋತ್ರ ನಾವು ಮನುಷ್ಯರಾಗಿ ಜನ್ಮ ತಾಳಿದ ಮೇಲೆ ನಾನಾ ರೀತಿಯ ಸಂಕಷ್ಟ_ ವಿಘ್ನ_ಬಾಧೆಗಳು ಎದುರಿಸಬೇಕಾಗುತ್ತದೆ ಆಗ ಕೆಲವೊಮ್ಮೆ ನಾವು ನೆರವೇರಿಸಬೇಕಾದ  ಧಾರ್ಮಿಕ ಕ್ರಿಯೆಗಳನ್ನು ಕಾರಣಾಂತರಗಳಿಂದ ಮುಂದೂಡುವುದು  ಅಥವಾ ಸ್ಥಗಿತ ಗೊಳಿಸಬೇಕಾಗಿಬರಬಹುದು ಅದಕ್ಕೆ ವಿಕಲ್ಪಳೂ ಸಹ ನಮ್ಮ ಸನಾತನ ವೈದಿಕ ಸಂಸ್ಕೃತಿಯಲ್ಲಿ ಪ್ರಾವಧಾನವಿರುತ್ತದೆ. ಏನೂ ಮಾಡದೇ ಇರುವುದಕ್ಕಿಂತ ಮನ: ಪೂರ್ವಕವಾಗಿ ಪಿತರರನ್ನು ನೆನಪಿಸಿಕೊಂಡು ಸಂಕ್ಷಿಪ್ತವಾಗಿ ಮಾಡುವುದು ಉತ್ತಮ 

 ಶ್ರದ್ಧೆಯಿಂದ ಮಾಡುವ ಯಾವುದೇ ಕಾರ್ಯವನ್ನು ಶ್ರಾದ್ಧವೆಂದು ಕರೆಯಲಾಗುತ್ತದೆ .

ಸಂಕ್ಷಿಪ್ತ ಪಿತರ ಕರ್ಮ 

ರುದ್ರ ದೇವರ ದೇವಸ್ಥಾನದಲ್ಲಿಯೋ  ಅಶ್ವತ್ಥ ಕಟ್ಟೆಯಲ್ಲೋ ಅಥವಾ ಮಠದಲ್ಲೋ  ನಿಮ್ಮ ಸಂಪ್ರದಾಯದ ಪ್ರಕಾರ ಸಾಲಿಗ್ರಾಮ, ವಿಷ್ಣುಪಾದ , ಪುಟ್ಟ ಶಿವಲಿಂಗ  ತೆಗೆದು ಕೊಂಡು, ನೀವೇ ದೇವಸ್ಥಾನದ ಕಟ್ಟೆಯ ಮೇಲೆ ಒಂದು ಜಾಗದಲ್ಲಿರಿಸಿ ಮೊದಲು ನಿಮ್ಮ ಕುಲದೈವವನ್ನು ಪ್ರಾರ್ಥಿಸಿಕೊಂಡು ಬಲ ಅಂಗೈಯಲ್ಲಿ ಅಕ್ಕಿಯನ್ನು ಹಿಡಿದುಕೊಂಡು ಎಡಗೈಯಿಂದ ಬಲಗೈಯಲ್ಲಿಯ ಅಕ್ಕಿಯ ಮೇಲೆ ನೀರು ಬಿಟ್ಟು "ಸ್ವಾಹಾ ನಮೋ ನಮಃ" ಮುಕ್ಕೋಟಿ ದೇವತೆಗಳು, ನವಗ್ರಹಗಳು ನವಗ್ರಹ ಅಧಿದೇವತಾ ಪ್ರತ್ಯಧಿ ದೇವತಾಭ್ಯೋ ನಮಃ

 27 ನಕ್ಷತ್ರಗಳು ನಕ್ಷತ್ರಗಣ ಅಧಿದೇವತಾ ಪ್ರತ್ಯಧಿ ದೇವತಾಭ್ಯೋ ನಮಃ ಎಂದು ಸ್ಮರಣೆ ಮಾಡುತ್ತ ನೀರು ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು ಸ್ವಾಹಾ ನಮೋ ನಮಃ ಎಂದು ಪಠಿಸುತ್ತಿರಬೇಕು ನಂತರ ಅಂಗೈಯಲ್ಲಿ ಕಪ್ಪು ಎಳ್ಳು ಹಿಡಿದುಕೊಂಡು 

"ಸರ್ವೇಭ್ಯೋ ಪಿತೃಭ್ಯೋ ನಮಃ"  ಎಂಬ ಒಂದು ಈ ಮಂತ್ರ ಹೇಳಿಕೊಂಡು ಹೆಬ್ಬೆರಳು ಕೆಳಗೆ ತೋರಿಸುತ್ತ ಸಾಲಿಗ್ರಾಮ, ವಿಷ್ಣುಪಾದ, ಶಿವಲಿಂಗದ ಮೇಲೆ ನೀರಿನ ಅಭಿಷೇಕ ಮಾಡಬೇಕು ನೀರು ಹನಿಗಳು ಹೆಬ್ಬೆರಳು

ಮುಖೇನ  ಬಿಡ ಬೇಕು " ಸರ್ವ ಪಿತೃ ಜನ ಸಹಿತಾಯ "ಸ್ವಧಾ ನಮಃ" . ಎಂದು ಮಂತ್ರ ಪಠಿಸಬೇಕು 

ಇಷ್ಟು ಸಂಕ್ಷಿಪ್ತ ಪಿತೃ ತರ್ಪಣ ಇದರಲ್ಲಿ ದೇವತಾ ತರ್ಪಣಕ್ಕೆ ಸವ್ಯವಾಗಿಯೂ, ಪಿತೃ ತರ್ಪಣಕ್ಕೆ ಅಪಸವ್ಯವಾಗಿಯೂ ಜನಿವಾರ ಬಲ ಮತ್ತು ಎಡ ಹಾಕಿಕೊಳ್ಳೋದು ಇರುತ್ತದೆ 

     ಇದು ಕೇವಲ ಅನಿವಾರ್ಯ ಸಮಯದಲ್ಲಿ ಮಾಡುವ ವಿಧಾನ ಮಾತ್ರ,  ಆದರೇ ಇದನ್ನೇ ಮಾಡುತ್ತ ಹೋಗಬಾರದು, ಬಿಡುವು ಮಾಡಿಕೊಂಡು ಬ್ರೆ, ಪುರೋಹಿತರನ್ನು ಆಮಂತ್ರಿಸಿ ಶ್ರದ್ಧೆಯನ್ನು ಪೂರ್ಣ ಮನಗೊಟ್ಟು ಮಾಡುವುದು ಅಥವಾ ಶ್ರಾದ್ಧ ವಿಧಿ ಪುಸ್ತಕವನ್ನು ಓದಿ ಮಾಡಿದರೂ ಉತ್ತಮ.

"ಬ್ರಹ್ಮ ಕೃತ ಪಿತೃ ಪ್ರಣಾಮ ಸ್ತೋತ್ರ" ವನ್ನು ಪಠಿಸಬಹುದು.

ಬ್ರಹ್ಮ ಉವಾಚ:

 1.  ನಮೋ ಪಿತ್ರೇ ಜನ್ಮದಾತ್ರೇ ಸರ್ವ ದೇವಮಾಯಾಯ ಚ|ಸುಖದಾಯ ಪ್ರಸನ್ನಾಯ ಸುಪ್ರೀತಾಯ ಮಹಾತ್ಮ||

ಈ ಜನ್ಮವು ಯಾರಿಂದ ಬಂದಿದೆಯೋ, ಯಾರು ಎಲ್ಲಾ ದೇವತೆಗಳ ರೂಪದಲ್ಲಿ, ಅವರ ಅನುಗ್ರಹದಿಂದ ಸಂತೋಷವನ್ನು ತರುತ್ತಾರೆಯೋ ಆ ಮಹಾ ಪಿತೃಗಳಿಗೆ ನಮಸ್ಕಾರಗಳು.

2.  ಸರ್ವ ಯಜ್ಞ ಸ್ವರೂಪಾಯ ಸ್ವರ್ಗಾಯ ಪರಮೇಷ್ಠಿನೇ |ಸರ್ವತೀರ್ಥಾವಲೋಕಾಯ ಕರುಣಾಸಾಗರಾಯ||

ಸ್ವರ್ಗದಲ್ಲಿರುವ ದೇವತೆಗಳಿಗೆ ಸಮಾನರಾದ ಯಾತ್ರಿಕರಿಗೆಲ್ಲ ಕರುಣಾಸಾಗರವಾಗಿರುವ ಕರುಣೆಯ ಸಾಗರವಾಗಿರುವ ಪಿತೃಗಳಿಗೆ ನಮಸ್ಕಾರಗಳು.

3.  ನಮೋ ಸದಾ ಅಶುತೋಷಾಯ ಶಿವರೂಪಾಯ ತೇ ನಮಃ|ಸದಾಪರಾಧಕ್ಷಮಿನೇ ಸುಖಾಯ ಸುಖದಯ||

ಸುಲಭವಾಗಿ ಸಂತುಷ್ಟರಾದ ಮತ್ತು ತ್ವರಿತವಾಗಿ ಅನುಗ್ರಹಿಸುವ ಶಿವನ ರೂಪಗಳಿಗೆ ನಮಸ್ಕಾರಗಳು.  ಮಾಡಿದ ತಪ್ಪನ್ನು ಸದಾ ಮನ್ನಿಸಿ ಸಂತೋಷದಿಂದಿರುವ ಪಿತೃಗಳಿಗೆ ನಮಸ್ಕಾರಗಳು.

4.  ದುರ್ಲಭಂ ಮಾನುಷಮಿದಂ ಯೇನಲಬ್ಧಂ ಮಯಾ ವಪುಃ|ಸಂಭಾವನೀಯಂ ಧರ್ಮಾರ್ಥೇ ತಸ್ಮೈ ಪಿತ್ರೇ ನಮೋನಮಃ||

ಈ ಅಪರೂಪದ ಮಾನವ ದೇಹವು ಸದ್ಗುಣಗಳನ್ನು ಆಚರಿಸುವ ಅವಕಾಶವನ್ನು ನೀಡಿದ ಪಿತೃದೇವತೆಗಳಿಗೆ ನಮಸ್ಕಾರಗಳು.

5.  ತೀರ್ಥ ಸ್ನಾನ ತಪೋ ಹೋಮ ಜಪದೀನ್ ಯಸ್ಯ ದರ್ಶನ|ಮಹಾ ಗುರೋಶ್ಚ ಗುರುವೇ ತಸ್ಮೈ ಪಿತ್ರೇ ನಮೋನಮಃ||

ಅನೇಕ ತೀರ್ಥ ಸ್ನಾನ, ತಪಸ್ಸು, ಹೋಮ, ಕೀರ್ತನೆಗಳನ್ನು ಕಂಡ ಮಹಾಗುರುಗಳ ಗುರುಗಳಾದ ಪಿತೃದೇವತೆಗಳಿಗೆ ನಮಸ್ಕಾರಗಳು.

6.  ಯಸ್ಯ ಪ್ರಣಮಸ್ತವನಾತ್ ಕೋಟಿಶಃ ಪಿತೃಹಾರ್ಪಣಮ್ | ಅಶ್ವಮೇಧ ಸತೈಃ ತುಲ್ಯಂ ತಸ್ಮೈ ಪಿತ್ರೇ ನಮೋನಮಃ ||

ಅಂತಹ ಪಿತೃಗಳಿಗೆ ನಮಸ್ಕಾರವು ನೂರಾರು ಅಶ್ವಮೇಧ ಯಾಗಗಳಿಗೆ ಸಮಾನವಾಗಿದೆ, ಯಾರಿಗೆ ನಮಸ್ಕಾರ ಮತ್ತು ತರ್ಪಣಗಳನ್ನು ಮಾಡಲಾಗುತ್ತದೆ.

ಫಲಿತಾಂಶ:

 ಇದಂ ಸ್ತೋತ್ರಂ ಪಿತೃಃ ಪುಣ್ಯಂ ಯಃ ಪಠೇತ್ ಪ್ರಯತೋ ನರಃ  | ಪ್ರತ್ಯಹಂ ಪ್ರಾತರುತ್ಥಾಯ ಪಿತೃಶ್ರಾದ್ಧಾದಿನೋಪಿ | ನ ಚ ಸ್ವಜನ್ಮದಿವಾಸೇ ಸಾಕ್ಷಾತ್ ಪಿತುರಾಗ್ರೇ ಸ್ಥಿತೋಪೈವ|ನಚ ತಸ್ಯ ದುರ್ಲಭಂ ಕಿಂಚಿತ್ ಸರ್ವಜ್ಞತ್ವಾದಿ ವಾಂಛಿತಮ್ |ನಾನಾಪಕರ್ಮಕೃತ್ವಾಪಿ ಯಹಸ್ತೌತಿ ಪಿತರಂ ಸುತಃ|ಸತ್ರುವಂ ಪ್ರವಿಧಾಯೈವ ಪ್ರಾಯಶ್ಚಿತಂ ಸುಖೀ ಭವೇತ್ | ಪಿತೃತ್ವವೆಲ್ಲ ಕರ್ಮಂಧರ್ಹತಿ ||

        ಪಿತೃಶ್ರಾದ್ಧದಂದು ಅಥವಾ ಪ್ರತಿದಿನ ಬೆಳಿಗ್ಗೆ, ಜನ್ಮದಿನದಂದು, ತಂದೆತಾಯಿಗಳಿಗೆ ನಮಸ್ಕರಿಸುತ್ತಾ ಈ ಸ್ತೋತ್ರವನ್ನು ಯಾರು ಪ್ರಯತ್ನದಿಂದ ಪಠಿಸುತ್ತಾರೋ ಅವರಿಗೆ ಕಷ್ಟವೇನಿಲ್ಲ.  ಏನು ಬಯಸುತ್ತೀರೋ  ಅದನ್ನು ಹೊಂದುತ್ತೀರಿ.  ಮಾಡಿದ  ಪಾಪ ಕರ್ಮಗಳು ನಾಶವಾಗುತ್ತವೆ.  ಧನ್ಯವಾದಗಳು 



No comments:

Post a Comment