ಎಂಥಾ ಶ್ರೀಮಂತಾನಂತನೋ
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ ಎಂಥಾ ಶ್ರೀಮಂತಾನಂತನೋ ||ಪ||
ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗ ಶಣ್ಮಶಿರಮ್ಮಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ ಸಿಂಗರ ದಂಗುಟ ಸಂಗದ ಗಂಗಜ ಕಂಗಳ ಘಂಗಳ ಹಿಂಗಿಪಳಾಂಗಾ ||
ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರ ದಲ್ಲಣನಲ್ಲದೆಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||
ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||
....ಶ್ರೀ ಪ್ರಸನ್ನ ವೆಂಕಟದಾಸರು
No comments:
Post a Comment