Tuesday, October 08, 2024

*KALA RATRI -VII. ದೇವಿ ಕಾಳ ರಾತ್ರಿ -೭

              KALA RATRI. ದೇವಿ ಕಾಳ ರಾತ್ರಿ 

ಏಕವೇಣೀ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ ||

ಜಯತು ಜಯತು ದೇವಿ ಚಾಮುಂಡಿ ಕಾಳರಾತ್ರಿ ಅಂಬೇ ರಣಚಂಡಿ | ಜಯತು ಜಯತು ದೇವಿ ಚಾಮುಂಡಿ ಕಾಳರಾತ್ರಿ ಅಂಬೇ ರಣಚಂಡಿ

ತಿಮಿರಾಜ್ಞಾನವ ತೀರಿಸಲೋಸುಗ ನೀರಾಜನವನು ಸ್ವೀಕರಿಸು 
ಪಾಪದ ಕಸವನು ಕಿತ್ತೊಗೆಯುತಲಿ ಪುಣ್ಯದ ಸಸಿಯ ಅಂಕುರಿಸು

ತರಿಸು ತಾರಿಸು ತೀರಿಸು ಭವವ ಚಿದಾನಂದದಲಿ ಕೆಂಕರಿಸು
ಜಯತು ಜಯತು ದೇವಿ ಮಾತಂಗಿ ಕಾಳರಾತ್ರಿ ಅಂಬೇ ಕೃಷ್ಣಾಂಗಿ

ಚತುರ್ವೇದಗಳ ರಕ್ಷಣೆಗೆಂದು ಮಂತ್ರಪುಷ್ಪವನು ಸ್ವೀಕರಿಸು
ರಕ್ಕಸ ಮುಂಡವ ಚಂಡಾಡುತಲಿ ರಾಸಭರಥಿಯೇ 
ಝಂಕರಿಸು

ಭರಿಸು ಭಾರಿಸು ಬೀರಿಸು ದುಃಖವ ಚಿದ್ಬಾಣದ ಹೆದೆ ಟಂಕರಿಸು
ಜಯತು ಜಯತು ದೇವಿ ಹೇ ದುರ್ಗಾ ಕಾಳರಾತ್ರಿ ಅಂಬೇ ವನದುರ್ಗಾ
                                                 .... ಜಾನಕಿ ರಾಮ 

                              ಸೀತಾರಾಮ ಕಟ್ಟಿ ಯಲಗೂರು 

No comments:

Post a Comment