Saturday, October 05, 2024

*Kushmanda Devi IV ಕೂಷ್ಮಾಂಡಾ ದೇವಿ ೪

ಕೂಷ್ಮಾಂಡಾ ದೇವಿ


ಸುರಾ ಸಂಪೂರ್ಣ ಕಲಶಂ ರುಧಿರಾ ಪ್ಲುತಮೇವ ಚ |ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||

ಬ್ರಹ್ಮಾಂಡವನು ಹೊತ್ತ ಕೂಷ್ಮಾಂಡ ದೇವಿಗೆ ಅಕ್ಷರದ ಅಕ್ಷತೆಯ ನೀಡಬನ್ನಿ  |ರಾಗಗಳ ತಾಳಗಳ ಗಂಧವನು ತೇಯುತ್ತ ಅಮ್ಮನ ಅಂಗಕ್ಕೆ ತೀಡಬನ್ನಿ 

ಪೃಥಿವಿಯೂ ಇರಲಿಲ್ಲ , ಜಲತತ್ವವಿರಲಿಲ್ಲ ವಾಯು ಆಕಾಶದ ಲೇಶವಿರಲಿಲ್ಲ  | ಸ್ವರ್ಗವೂ ಇರಲಿಲ್ಲ ನರಕವೂ ಇರಲಿಲ್ಲ ದ್ಯು ಬ್ರಹ್ಮ ಲೋಕಗಳ ಸುಳಿವುಇರಲಿಲ್ಲ | ಸಂಸ್ಕಾರದಿಂದಲೇ ಸೃಷ್ಟಿಯನು ಹಡೆದವಳ ಮುಂದೆ ಅಳಲನು ನಿಮ್ಮ ತೋಡಬನ್ನಿ 

ಬಿಲ್ಲು ಬಾಣಗಳೊಡನೆ ದೇವನವ ಧರಿಸಿಹಳು ಸಿಂಹವಾಹಿನಿಯಾಗಿ ವಿಹರಿಸಿಹಳು | ಸೂರ್ಯನ ತೇಜವನು ತನ್ನಲ್ಲೇ ಹೊತ್ತಿಹಳು ಸೌರವ್ಯೂಹದ ಮಧ್ಯೆ ವಿಹರಿಸಿಹಳು | ಶಾದ್ವಲ ವಸನದ ಸಿದ್ಧಿಬೀಜಾದೇವಿ ಸ್ತುತಿಯನ್ನು ಚಿತಿಯಿಂದ ಹಾಡಬನ್ನಿ 

                                           ...... ಜಾನಕಿ ರಾಮ 

                              ಸೀತಾರಾಮ ಕಟ್ಟಿ ಯಲಗೂರು 

No comments:

Post a Comment