ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ||
ಅಭಿವಂದಿಸುವೆ ಮಹಾಗೌರಿ..
ಶಿವಸತಿ ನಾರಿ.. ಮಂಗಳ ಗೌರಿ..
ಶಿವಸತಿ... ನಾರಿ.. ಮಂಗಳ ಗೌರಿ..
ಅಭಿವಂದಿಸುವೆ ಮಹಾಗೌರಿ..
ಶುಂಭ ನಿಶುಂಭರ ನರಕಕ್ಕಿಳಿಸಿ
ಧೂಮ್ರಲೋಚನನ ಮರ್ದಿಸಿ ಅಳಿಸಿ
ಕೈಲಾಸವ ವ್ಯೋಮಾಭವಾಗಿಸಿ
ಶಿವಸಂಸಾರವ ಪಾಲಿಸಿ ವಹಿಸಿದೆ
ಕಣಕಣದಲೂ ಜೀವನವ ತುಂಬಿಸಿ
ಪಾಕಶಾಸ್ತ್ರದಲಿ ಮೇಳೈಸಿ
ರಸ ರಸದಲಿ ನವರಸಗಳ ಚಿಮುಕಿಸಿ
ಅನ್ನಪೂರ್ಣೇಯೇ ಜಗವನೆ ಹರಸಿದೆ
..............ಜಾನಕಿ ರಾಮ
ಸೀತಾರಾಮ ಕಟ್ಟಿ ಯಲಗೂರು
No comments:
Post a Comment