ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||
ತನ್ನಿರೇ ತನ್ನಿರಿ ಹೂವುಗಳ ತನ್ನಿರಿ
ತಾಯಿ ಸ್ಕಂದಮಾತೆಯ ಶೃಂಗರಿಸಲು
ಬ್ರಹ್ಮಗಂಧ ಧೂಪವನ್ನು ಅಕ್ಕರೆಯಲಿ ತೋರಿರಿ
ಕಂಠನೀಲನ ಸತಿಯ ಸಂತೈಸಲು
ಅಂಭೋರುಹವ ನೀಡಿ ಅಂಬಿಕೆಯ ಚರಣಕೆ
ತುಂಬುಹೃದಯದಿಂದ ಜಗವ ಪಾಲಿಸುವಳು
ಕುಶೇಶಯದ ಮಾಲೆಯಿಂದ ಕಟ್ಟಿ ಬಾಹುಬಂಧನ
ಕುಶಲದಲಿ ಪ್ರಾರ್ಥನೆಯನು ಆಲಿಸುವಳು
ಚಕ್ರಬಾಲಾ ಹೂವ ಅರ್ಪಿಸಿ ಚಂಡಿಗೆ
ಸುಕ್ರತೂಯಾ ಭಾವ ತೋರುವಳು
ಅತಿಗಂಧದ ಪೂವ ಗಂಧವನು ತೋರಿರಿ
ಚಿತಿಮಂದರಿಗೆ ಮತಿಯ ಸಾರುವಳು
ಪಾರಿಜಾತದ ಗುಚ್ಛ ಪಾದಕಮಲ ಜೋಡಿಗೆ
ವಾರಿಜಾತರವದಲೆಂದು ನೆಲೆಸುವಳು
ಸೇವಂತಿಕದ ಮಾಲೆ ಮುಡಿಯ ಅಂದವೃದ್ಧಿಗೆ
ಜೀವಂತಿಕೆಯ ಮನಕೆ ಬೆರೆಸುವಳು
.......... ಜಾನಕಿ ರಾಮ
(ಸೀತಾರಾಮ ಕಟ್ಟಿ ಯಲಗೂರು)
No comments:
Post a Comment