Tuesday, October 22, 2024

*Surya Mandala Stotram ಸೂರ್ಯಮಂಡಲ ಸ್ತೋತ್ರಂ

Surya Mandala Stotram ಸೂರ್ಯಮಂಡಲ ಸ್ತೋತ್ರಂ 


ಹಿಂದೂಗಳು ಸೂರ್ಯ ಭಗವಾನ್‍ಗೆ ನಮಸ್ಕಾರವನ್ನು ಸಲ್ಲಿಸುವ ವಾಡಿಕೆ ಅನಾದಿಕಾಲದಿಂದಲು ನಡೆದು ಬಂದಿದೆ. ಬೆಳಗ್ಗೆ ಸೂರ್ಯೋದಯವಾಗುವಾಗ ಸೂರ್ಯನಿಗೆ ನೀರನ್ನು ಅರ್ಪಿಸುತ್ತ ಅರ್ಘ್ಯಬಿಡುತ್ತಲೂ ಇದನ್ನು  ಪಠಿಸುವುದು ಉಂಟು . ಏಕೆಂದರೆ ಬೆಳಗಿನ ಸೂರ್ಯ ಕಿರಣಗಳನ್ನು ನೀರಿನ ಮೂಲಕ ನೋಡುವುದು   ಮಾನಸಿಕ ನೆಮ್ಮದಗೂ, ಶಾರೀರಿಕ ಸ್ವಾಸ್ಥ್ಯಕ್ಕೂ. ಕಣ್ಣುಗಳಿಗೆ ಒಳ್ಳೆಯದು ಎಂಬ ಅಭಿಪ್ರಾಯಗಳಿವೆ. ಜೊತೆಗೆ ಈ ಅನುಷ್ಟಾನವನ್ನು ಮಾಡಲು ನಾವು ಸೂರ್ಯೋದಯಕ್ಕಿಂತ ಮೊದಲೇ ಏಳಬೇಕಾಗುತ್ತದೆ. ಇದರಿಂದಾಗಿ ನಾವು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಇರಿಸಿಕೊಳ್ಳುತ್ತೇವೆ. ಹೀಗಾಗಿ ಮುಂಜಾನೆಯ ಒಳ್ಳೆಯ ಮತ್ತು ನಿರ್ಮಲವಾದ ವಾತಾವರಣ, ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

Surya Mandala Stotram ಸೂರ್ಯಮಂಡಲ ಸ್ತೋತ್ರಂ 
ಶ್ರೀ ಗುರುಭ್ಯೋ ನಮಃ. ಹರಿ: ಓಂ 

ನಮೋಽಸ್ತು ಸೂರ್ಯಾಯ ಸಹಸ್ರರಶ್ಮಯೇ
ಸಹಸ್ರಶಾಖಾನ್ವಿತ ಸಂಭವಾತ್ಮನೇ |
ಸಹಸ್ರಯೋಗೋದ್ಭವ ಭಾವಭಾಗಿನೇ
ಸಹಸ್ರಸಂಖ್ಯಾಯುಧಧಾರಿಣೇ ನಮಃ || ೧ ||

ಯನ್ಮಂಡಲಂ ದೀಪ್ತಿಕರಂ ವಿಶಾಲಂ |
ರತ್ನಪ್ರಭಂ ತೀವ್ರಮನಾದಿ ರೂಪಮ್ |
ದಾರಿದ್ರ್ಯ ದುಃಖಕ್ಷಯಕಾರಣಂ ಚ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೨ ||

ಯನ್ಮಂಡಲಂ ದೇವಗಣೈಃ ಸುಪೂಜಿತಂ |
ವಿಪ್ರೈಃ ಸ್ತುತಂ ಭಾವನಮುಕ್ತಿಕೋವಿದಮ್ |
ತಂ ದೇವದೇವಂ ಪ್ರಣಮಾಮಿ ಸೂರ್ಯಂ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೩ ||

ಯನ್ಮಂಡಲಂ ಜ್ಞಾನಘನಂತ್ವಗಮ್ಯಂ |
ತ್ರೈಲೋಕ್ಯ ಪೂಜ್ಯಂ ತ್ರಿಗುಣಾತ್ಮ ರೂಪಮ್ |
ಸಮಸ್ತ ತೇಜೋಮಯ ದಿವ್ಯರೂಪಂ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೪ ||

ಯನ್ಮಂಡಲಂ ಗೂಢಮತಿ ಪ್ರಬೋಧಂ |
ಧರ್ಮಸ್ಯ ವೃದ್ಧಿಂ ಕುರುತೇ ಜನಾನಾಮ್ |
ಯತ್ಸರ್ವ ಪಾಪಕ್ಷಯಕಾರಣಂ ಚ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೫ ||

ಯನ್ಮಂಡಲಂ ವ್ಯಾಧಿವಿನಾಶದಕ್ಷಂ |
ಯದೃಗ್ಯಜುಃ ಸಾಮಸು ಸಂಪ್ರಗೀತಮ್ |
ಪ್ರಕಾಶಿತಂ ಯೇನ ಚ ಭೂರ್ಭುವಃ ಸ್ವಃ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೬ ||

ಯನ್ಮಂಡಲಂ ವೇದವಿದೋ ವದಂತಿ |
ಗಾಯಂತಿ ಯಚ್ಚಾರಣಸಿದ್ಧಸಂಘಾಃ |
ಯದ್ಯೋಗಿನೋ ಯೋಗಜುಷಾಂ ಚ ಸಂಘಾಃ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೭ ||

ಯನ್ಮಂಡಲಂ ಸರ್ವಜನೈಶ್ಚ ಪೂಜಿತಂ |
ಜ್ಯೋತಿಶ್ಚಕುರ್ಯಾದಿಹ ಮರ್ತ್ಯಲೋಕೇ |
ಯತ್ಕಾಲ ಕಾಲಾದ್ಯಮರಾದಿ ರೂಪಂ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೮ ||

ಯನ್ಮಂಡಲಂ ವಿಷ್ಣುಚತುರ್ಮುಖಾಖ್ಯಂ |
ಯದಕ್ಷರಂ ಪಾಪಹರಂ ಜನಾನಾಮ್ |
ಯತ್ಕಾಲಕಲ್ಪಕ್ಷಯಕಾರಣಂ ಚ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೯ ||

ಯನ್ಮಂಡಲಂ ವಿಶ್ವಸೃಜಂ ಪ್ರಸಿದ್ಧಂ |
ಉತ್ಪತ್ತಿ ರಕ್ಷ ಪ್ರಲಯ ಪ್ರಗಲ್ಭಮ್ |
ಯಸ್ಮಿನ್ ಜಗತ್ಸಂಹರತೇಽಖಿಲಂ ಚ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೧೦ ||

ಯನ್ಮಂಡಲಂ ಸರ್ವಗತಸ್ಯ ವಿಷ್ಣೋಃ |
ಆತ್ಮಾ ಪರಂ ಧಾಮ ವಿಶುದ್ಧತತ್ತ್ವಮ್ |
ಸೂಕ್ಷ್ಮಾಂತರೈರ್ಯೋಗಪಥಾನುಗಮ್ಯಂ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೧೧ ||

ಯನ್ಮಂಡಲಂ ವೇದವಿದೋಪಗೀತಂ |
ಯದ್ಯೋಗಿನಾಂ ಯೋಗ ಪಥಾನುಗಮ್ಯಮ್ |
ತತ್ಸರ್ವ ವೇದ್ಯಂ ಪ್ರಣಮಾಮಿ ಸೂರ್ಯಂ |
ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೧೨ ||

ಸೂರ್ಯಮಂಡಲ ಸುಸ್ತೋತ್ರಂ ಯಃ ಪಠೇತ್ಸತತಂ ನರಃ | ಸರ್ವಪಾಪವಿಶುದ್ಧಾತ್ಮಾ ಸೂರ್ಯಲೋಕೇ ಮಹೀಯತೇ ||

ಇತಿ ಶ್ರೀ ಭವಿಷ್ಯೋತ್ತರಪುರಾಣೇ ಶ್ರೀ ಕೃಷ್ಣಾರ್ಜುನ ಸಂವಾದೇ ಸೂರ್ಯಮಂಡಲ ಸ್ತೋತ್ರಂ |
ಶ್ರೀ ಕೃಷ್ಣಾರ್ಪಣಮಸ್ತು 

ಸೂರ್ಯ ಪ್ರಾತ:ಸ್ಮರಣ ಸ್ತೋತ್ರಮ್ 

ಪ್ರಾತ:ಸ್ಮರಾಮಿ ಖಲು ತತ್ ಸವಿತುರ್ವರೇಣ್ಯಂ |
ರೂಪಂ ಹಿ ಮಂಡಲಮೃಚೋsಥ ತನುರ್ಯಜೂಂಷಿ ||
ಸಾಮಾನಿ ಯಸ್ಯ ಕಿರಣಾ: ಪ್ರಭವಾದಿ ಹೇತುಂ |
ಬ್ರಹ್ಮಾಹರಾತ್ಮಕಮಲಕ್ಷ್ಯಮಚಿಂತ್ಯಹೇತುಂ ||೧||

ಪ್ರಾತರ್ನಮಾಮಿ ತರಣಿಂ ತನುವಾಙ್ಮನೋಭಿ: |
ಬ್ರಹ್ಮೇಂದ್ರಪೂರ್ವಕ ಸುರೈರ್ನುತಮರ್ಚಿತಂ ಚ ||
ವೃಷ್ಟಿ ಪ್ರಮೋಚನ ವಿನಿಗ್ರಹ ಹೇತುಭೂತಂ |
ತ್ರೈಲೋಕ್ಯ ಪಾಲನಪರಂ ತ್ರಿಗುಣಾತ್ಮಕಂ ಚ ||೨||

ಪ್ರಾತರ್ಭಜಾಮಿ ಸವಿತಾರಮನಂತ ಶಕ್ತಿಂ |
ಪಾಪೌಘ ಶತ್ರು ಭಯರೋಗ ಹರಂ ಪರಂ ಚ ||
ತಂ ಸರ್ವಲೋಕ ಕಲನಾತ್ಮಕ ಕಾಲಮೂರ್ತಿಂ |
ಗೋಕಂಠ ಬಂಧನ ವಿಮೋಚನಮಾದಿದೇವಮ್ ||೩||

ಶ್ಲೋಕತ್ರಯಮಿದಂ ಭಾನೋ: ಪ್ರಾತ:ಕಾಲೇ ಪಠೇತ್ತುಯ: |
ಸರವ್ಯಾಧಿವಿನಿರ್ಮುಕ್ತ: ಪರಂ ಸುಖಮಾಪುಯಾತ್ ||೪||

     ||ಇತಿ ಶೀ ಸೂರ್ಯ ಪ್ರಾತ:ಸ್ಮರಣ ಸ್ತೋತ್ರಮ್||


No comments:

Post a Comment