ಸನಾತನ ಧರ್ಮದ ಮರ್ಮ
ಉಷಸ್ತಿ. :'ಚಕ್ರ' ಎಂಬುವರ ಮಗ 'ಉಷಸ್ತಿ' ಇವನನ್ನು ಚಾಕ್ರಾಯಣ ಎಂದು ಕರೆಯುತ್ತಾರೆ. ಈತನು 'ಬ್ರಹ್ಮ ಜ್ಞಾನಿ'. ಧರ್ಮ ಕರ್ಮಗಳಿಗನುಸಾರ ಗುರುಗಳ ಆದೇಶದಂತೆ ಸುಶೀಲೆ ಹಾಗೂ ಗುಣ ಸಂಪನ್ನ ಯೋಗ್ಯ ಮನೆತನದ ಹುಡುಗಿ ಯನ್ನು ವಿವಾಹ ವಾಗಿ ಕುರು ರಾಜ್ಯದ ಒಂದು ಗ್ರಾಮದಲ್ಲಿ ಸಂಸಾರ ಹೂಡಿದನು. ಒಂದೆರಡು ವರ್ಷದಲ್ಲಿ ಮಗು ಹುಟ್ಟಿತು. ಸಂಸಾರ ಏರುಪೇರು ಇಲ್ಲದೆ ಸಹಜ ಸ್ಥಿತಿಯಲ್ಲಿ ಸಾಗುತ್ತಿತ್ತು.
ಉಷಸ್ಥಿಯ ವೃತ್ತಿ ಪೌರೋಹಿತ್ಯ ( ಪುರೋಹಿತ ಎಂದರೆ ಪುರ ಅಥವಾ ಪಟ್ಟಣದ ಹಿತ ಕಾಪಾಡುವನು) ವೃತ್ತಿಯನ್ನು ಮಾಡುತ್ತಿದ್ದನು. ಉಷಸ್ಥಿ ಪೌರೋಹಿತ್ಯ ಹೋದ ಕಡೆ ಹೆಚ್ಚು ಸಂಭಾವನೆ ಕೊಟ್ಟರೆ ಅದನ್ನು ವಾಪಸ್ಸು ಕೊಡುತ್ತಿದ್ದ. ಆಯಾ ಪೂಜೆಗೆ ಸಲ್ಲುವಷ್ಟು ಮಾತ್ರ ಧನ ಪಡೆದು ಸಂಸಾರದ ಅವತ್ತಿನ ಖರ್ಚಿಗೆ ಬಳಸಿಕೊಂಡು ಉಳಿದರೆ ಬಡಬಗ್ಗರಿಗೆ ದಾನ ಮಾಡುತ್ತಿದ್ದ. ಹೊಸದಾಗಿ ಸಂಪಾದನೆಯ ಧನ ಬಂದ ಮೇಲೆ ಆಹಾರ. ಹೀಗೆ ಅವನ ಜೀವನ ಬಹಳ ಸರಳವಾಗಿತ್ತು.
ಒಮ್ಮೆ, ಬರಗಾಲ ಬಂದಿತು ಅದು ಎಂಥ ಬರಗಾಲ ಅಂದರೆ ಮೇಘಗಳ ಘರ್ಷಣೆಯಿಂದ ಡಿಕ್ಕಿ ಹೊಡೆದ ವಿದ್ಯುತ್ನಿಂದ ಒನಕೆ ಗಾತ್ರದ ಮಳೆ, ದಪ್ಪ ದಪ್ಪ ಆಲಿಕಲ್ಲುಗಳು ಬಿದ್ದು, ಬೆಳೆಗಳು ನಾಶವಾಯಿತು. ಮಳೆ ಪ್ರವಾಹ ಅವಾಂತರ ದಿಂದಾಗಿ ಹಸು, ಕರು,ಸಂಗ್ರಹಿಸಿದ ಆಹಾರ ಸಾಮಗ್ರಿಗಳು, ಸಾಮಾನು, ಸರಂಜಾಮು,ಅ ವಶ್ಯಕತೆ ವಸ್ತುಗಳೆಲ್ಲ ನಾಶ ವಾದವು. ಜನರು ಹೊತ್ತಿನ ಊಟಕ್ಕಿಲ್ಲದೆ ಪರದಾಡಿದರು. ಉಷಸ್ಥಿ ಇದಕ್ಕೆ ಹೊರತಾಗಿಲ್ಲ. ಆಹಾರ ಸಾಮಾಗ್ರಿಗಾಗಿ ಊರೆಲ್ಲಾ ಅಲೆದು ಬರಿಗೈಯ್ಯಲ್ಲಿ ಮನೆಗೆ ಬಂದನು. ಪತ್ನಿಗೆ ಬರಗಾಲದ ವಿಷಯ ತಿಳಿಸಿ ಮುಂದೆ ಏನು ಯೋಚಿಸಿದ. ಪತ್ನಿ ಹೇಳಿದಳು ಚಿಂತಿಸಬೇಡಿ ಮನೆಯಲ್ಲಿ ಸ್ವಲ್ಪ ಧಾನ್ಯ ಇದೆ ಅದು ಇರುವಷ್ಟು ದಿನ ಊಟ ಮಾಡೋಣ. ನಂತರ ಶಿವನೇ ದಾರಿ ತೋರುತ್ತಾನೆ ಎಂದಳು. ನಾಲ್ಕು ದಿನ ಒಪ್ಪತ್ತು ಊಟ ಮಾಡಿದರು. ಆಮೇಲೆ ಮೂರು ದಿನ ಕಳೆದರು.
ಉಷಸ್ಥಿ ಬೇರೆ ದಾರಿ ಕಾಣದೆ ಪತ್ನಿಗೆ ಹೇಳಿದನು. ಎಲ್ಲಾ ದರೂ ಹೊರಗಡೆ ಸ್ವಲ್ಪ ಆಹಾರ ತರುತ್ತೇನೆ. ನೀನು ಇಲ್ಲೇ ಪಕ್ಕದ ಗ್ರಾಮಕ್ಕೆ ಹೋಗಿ ನಿನಗೆ ಮಗುವಿಗೆ ಆಗುವಷ್ಟು ಆಹಾರದ ವ್ಯವಸ್ಥೆ ಮಾಡು ಎಂದನು. ಆಕೆ ಒಪ್ಪಿದಳು. ಉಷಸ್ಥಿ ಆಹಾರ ತರಲು ಹೊರಗೆ ಹೊರಟನು. ಎಷ್ಟು ದೂರ ಅಲೆದರೂ ಆಹಾರ ಸಿಗದೇ ಬಳಲಿದ ಅವನಿಗೆ ಒಂದು ಹೆಜ್ಜೆಯನ್ನು ಇಡಲಾಗಲಿಲ್ಲ. ಸ್ವಲ್ಪ ದೂರದಲ್ಲಿ ಅದೇ ಗ್ರಾಮದ ಮುಖ್ಯಸ್ಥನಾದ ವೈಶ್ಯನೊಬ್ಬ ಅಳಿದುಳಿದ ಕಾಳು, ಬೇಳೆ ಗಳಿಂದ ಬೇಯಿಸಿದ ಆಹಾರ ತಿನ್ನುತ್ತಿದ್ದನು. ಉಷಸ್ಥಿ ಸ್ವಲ್ಪ ಆಹಾರವನ್ನು ಕೊಡು ಎಂದನು. ಕೊಡಲು ಹೊರಟ ವೈಶ್ಯನು, ಸ್ವಾಮಿ ಇದು ನಾನು ತಿಂದ ಎಂಜಲು ಕೊಡುವುದಿಲ್ಲ ಎಂದನು. ಉಷಸ್ಥಿಯು ಹೌದು ನೀನು ಹೇಳಿದ್ದು ಸರಿ ಎಂಜಲನ್ನು ತಿನ್ನಬಾರದು. ಆದರೆ ಜೀವ ರಕ್ಷಣೆ ಮಾಡಿಕೊಳ್ಳಲು ಆಪದ್ಧರ್ಮವೆಂಬಂತೆ ಸೇವಿಸ ಬಹುದು. ಇವನು ಮಹಾಜ್ಞಾನಿ ಎಂದು ತಿಳಿದಿದ್ದ ವೈಶ್ಯನು ಸ್ವಲ್ಪ ಆಹಾರವನ್ನು ಕೊಟ್ಟನು.
ಉಶಸ್ಥಿ ಆಹಾರದಲ್ಲಿ ಸ್ವಲ್ಪ ತನ್ನ ಶಲ್ಯದ ತುದಿಯಲ್ಲಿ ಹಾಕಿ ಗಂಟು ಕಟ್ಟಿದನು. ಮತ್ತು ಉಳಿದ ಆಹಾರ ತಿನ್ನುವಾಗ ಕಾಳುಗಳಾದ್ದರಿಂದ ಬಿಕ್ಕಳಿಕೆ ಬಂದಿತು. ವೈಶ್ಯ ಅವನಿಗೆ ಕುಡಿಯಲು ನೀರು ಕೊಡಲು ಬಂದಾಗ, ಇದನ್ನು ನಾನು ಕುಡಿಯುವುದಿಲ್ಲ ಎಂಜಲು ಎಂದನು. ಆಶ್ಚರ್ಯದಿಂದ ವೈಶ್ಯ ಕೇಳಿದ, ನಾನು ತಿಂದ ಎಂಜಲು ಆಹಾರವನ್ನು ತಿನ್ನುವಿರಿ, ನೀರು ಕುಡಿಯುವುದಿಲ್ಲ ಏಕೆ ಎಂದನು. ಉಶಸ್ಥಿ ಹೇಳಿದ, ಆಹಾರ ಜೀವ ರಕ್ಷಣೆಗಾಗಿ ಆಪಧರ್ಮವೆಂದು ಸೇವಿಸಿದೆ. ಆಮೇಲೆ ಪ್ರಾಯಶ್ಚಿತಮಾಡಿ ಕೊಳ್ಳುವೆ. ನೀರು ಎಲ್ಲಾ ಕಡೆಯು ಸಿಗುತ್ತದೆ. ಅನಿವಾರ್ಯ ಅಲ್ಲ ಬೇರೆ ಕಡೆ ಕುಡಿಯುವೆ ಎಂದು ಬಿಕ್ಕಳಿಕೆ ಬಂದರೂ, ಹಾಗೆ ಆಹಾರವನ್ನು ತಿಂದು ಸರಿ ಮಾಡಿಕೊಂಡು ಮನೆಗೆ ಬಂದನು. ಶಲ್ಯದಲ್ಲಿ ಗಂಟು ಕಟ್ಟಿ ತಂದ ಆಹಾರವನ್ನು ಪತ್ನಿ ಮತ್ತು ಮಗುವಿಗೆ ತಿನ್ನಲು ಕೊಟ್ಟನು.
ಪತ್ನಿ ಹೇಳಿದಳು, ಬೇರೆ ಮನೆ ಕೆಲಸ ಮಾಡಿ ಅಲ್ಲಿ ಕೊಟ್ಟ ಸ್ವಲ್ಪ ಆಹಾರ ನಾನು ಮಗು ತಿಂದಿದ್ದೇವೆ ಸಾಕು ಎಂದು ಹೇಳಿ, ಗಂಡ ಕೊಟ್ಟ ಆಹಾರವನ್ನು ಹಾಗೆ ತೆಗೆದಿಟ್ಟಳು. ರಾತ್ರಿ ಕಳೆದು ಬೆಳಗಾಯಿತು. ಆಹಾರಕ್ಕೆ ಏನಾದರೂ ವ್ಯವಸ್ಥೆ ಮಾಡಲು ಯೋಚಿಸಿದಾಗ, ಲೋಕಕಲ್ಯಾಣಾರ್ಥವಾಗಿ ಕೆಲವು ದಿನಗಳು ಅರಮನೆಯಲ್ಲಿ ಯಜ್ಞ ಯಾಗಗಳನ್ನು ಹಮ್ಮಿಕೊಂಡಿದ್ದು ಉಷಸ್ಥಿ ಗೆ ತಿಳಿಯಿತು. ಯಜ್ಞ ಶಾಲೆಗೆ ಹೋದರೆ ಏನಾದರೂ ಸಂಭಾವನೆ ಸಿಗಬಹುದು ಅದರಿಂದ ಸ್ವಲ್ಪ ದಿನ ಕಳೆಯಬಹುದು ಎಂದು ಯೋಚಿಸಿ ಹೊರಡಲು ಉದ್ಯುಕ್ತನಾದನು. ಯಾವ ಕಡೆ ಹೊರಟಿರಿ ಎಂದು ಪತ್ನಿ ಕೇಳಿದಾಗ ಅರಮನೆಯಲ್ಲಿ ಯಾಗ ಯಜ್ಞ ನಡೆಯುತ್ತಿವೆ ನಾನು ಹೋಗಿ ಬರುವೆ ಏನಾದರೂ ಸ್ವಲ್ಪ ಆಹಾರವಿದ್ದರೆ ತಿನ್ನಲು ಕೊಡು ಏಕೆಂದರೆ ಇಲ್ಲಿಂದ ನಡೆದು ಹೋದರೆ ಒಂದು ದಿನ ಬೇಕು. ಅಲ್ಲಿ ತನಕ ನಡೆಯಲು ಶಕ್ತಿ ಬೇಕು ಎಂದನು.
ಪತ್ನಿಯು ಹಿಂದಿನ ದಿನ ತೆಗೆದಿಟ್ಟ ಆಹಾರವನ್ನು ಕೊಟ್ಟು ಇದೇ ಇರುವುದು ಆದರೆ ಹಳಸಿದೆ ಎಂದಳು. ಒಂದು ರಾತ್ರಿ ಕಳೆದ ಆಹಾರವನ್ನು ಸೇವಿಸುವುದು ನಿಶಿದ್ಧ ಅದರಲ್ಲೂ ಇದು ಹಳಸಿದೆ. ಉಷಸ್ಥಿ ಹೇಳಿದ ಹಳಸಿದ್ದರೂ ಸಹ ಇದನ್ನು ತಿನ್ನುವುದರಲ್ಲಿ ದೋಷವಿಲ್ಲ. ಆಹಾರವಿಲ್ಲದೆ ಪ್ರಾಣಬಿಡುವು ದಕ್ಕಿಂತ ಜೀವ ಹಿಡಿದಿಡಲು ಇಂಥ ಆಹಾರ ಸೇವಿಸಿದರೆ ದೋಷವಿಲ್ಲ ಎಂದು ಅದನ್ನೇ ಸೇವಿಸಿ ಹೊರಟು ಬಂದನು.
ಇವನು ಬರುವ ವೇಳೆಗೆ ಅರಮನೆಯಲ್ಲಿ ಹೋಮದ ತಯಾರಿ ನಡೆದು ವೃತ್ವಿಜರೆಲ್ಲಾ ಬಂದಿದ್ದರು. ಇವನು ಹೋಗಿ ಒಂದು ಬದಿಯಲ್ಲಿ ಕುಳಿತನು.ಯಜ್ಞ ದೀಕ್ಷೆ ತೊಟ್ಟ ವೃತ್ವಿಜರು ಹಾಗೂ ಉಳಿದ ಬ್ರಾಹ್ಮಣರು ಮಂತ್ರೋಚ್ಚಾರ ಮಾಡುತ್ತಿದ್ದ ರು. ಉಷಸ್ಥಿಗೆ ಅವರೆಲ್ಲ ಹೇಳುತ್ತಿದ್ದ ಮಂತ್ರದಲ್ಲಿ ಲೋಪ ಇದೆ ಎನ್ನಿಸಿತು. ಹೋಮ ದೀಕ್ಷೆ ವಹಿಸಿದ ಮುಖ್ಯ ಋತ್ವಿಜರಲ್ಲಿ ಒಬ್ಬರನ್ನು ಕೇಳಿದನು. ಲೋಕ ಕಲ್ಯಾಣಕ್ಕಾಗಿ ಮಾಡುವ ಈ ಯಾಗದ ಉದ್ಗೀತಕ್ಕೆ ಯಾವ ದೇವತೆಯನ್ನು ಆವ್ವಾಹ ನೆ ಮಾಡುತ್ತೀರಿ? ಹಾಗೂ ಆ ದೇವತೆಯ ಅರ್ಥ ವಿಚಾರ ಎಲ್ಲವೂ ಗೊತ್ತಿದೆಯೇ? ಎಂದು ಕೇಳಿದಾಗ ಅದೆಲ್ಲಾ ತಿಳಿಯದು ಎಂದರು.
ಆಗ ಉಷಸ್ಥಿ ಹೇಳಿದ ಲೋಕ ಕಲ್ಯಾಣಾರ್ಥವಾಗಿ ಕೈಗೊಂಡ ಯಾಗದಲ್ಲಿ ದೇವತೆಗಳ ಪೂರ್ತಿ ವಿವರ ತಿಳಿಯದೆ ಮಾಡಿ ದ ಹೋಮ ನಷ್ಟವಾಗುತ್ತದೆ. ಹಾಗೂ ಪ್ರಜೆಗಳ ಹಣವು ಪೋಲಾಗುತ್ತದೆ ಅಲ್ಲದೆ ತಪ್ಪಾಗಿ ಮಾಡುವುದರಿಂದ ನಿಮ್ಮ ಜೀವಕ್ಕೂ ಹಾನಿಯಾಗುತ್ತದೆ ಎಂದು ಹೇಳಿದಾಗ ಅವರೆಲ್ಲ ಕ್ಷಮಿಸಿ ಎಂದು ಯಾಗ ದಿಂದ ಹಿಂದೆ ಸರಿದನು. ಇದೇ ರೀತಿ ಇನ್ನಿಬ್ಬರನ್ನು ಕೇಳಿದರೆ, ಷೋಡಶೋಪ ಚಾರಗಳ ಮಧ್ಯೆ ಬರುವ ದೇವತೆ, ಹಾಗೂ ಯಜ್ಞದ ಕಾರ್ಯ ಮುಗಿದ ಮೇಲೆ ಅಂತಿಮವಾಗಿ ಸತ್ಕರಿಸಿ ಬೀಳ್ಕೊಡುವ ದೇವತೆ ಇವುಗಳ ಕುರಿತು ಅಲ್ಲಿ ಕುಳಿತ ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಯಜ್ಞದಿಂದ ದೂರ ಹೋಗಿ ಕುಳಿತರು.
ದೂರದಿಂದ ಗಮನಿಸುತ್ತಿದ್ದ ರಾಜನು ಇದೇನಿದು ಯಜ್ಞ ಆರಂಭವಾಗುವ ಸಮಯಕ್ಕೆ ಯಜ್ಞ ದೀಕ್ಷಿತರಾಗಿ ಕುಳಿತ ವೃತ್ವಿಜರೆಲ್ಲ ಹಿಂದೆ ಸರಿದ ಕಾರಣ. ವಿಚಾರಿಸಿದಾಗ, ಉಷಸ್ಥಿ ಯು ತನ್ನ ಪರಿಚಯ ಹೇಳಿದ. ರಾಜನು ಸಂತೋಷದಿಂದ ನಾನು ಮೊದಲು
ನಿಮ್ಮ ಗುರುಗಳ ಕಳಿಸಿದ ಸಂದೇಶದಂತೆ ನಿನ್ನನ್ನೇ ಹುಡುಕಿ ಸಿದ್ದೆ, ಆದರೆ ಎಲ್ಲಿ ಹುಡುಕಿದರೂ ಸಿಗಲಿಲ್ಲ ಆಹಾರಕ್ಕಾಗಿ ಮತ್ತೆಲ್ಲಿಗೋ ಹೋಗಿರುವುದು ತಿಳಿಯಿತು. ಹೀಗಾಗಿ ಇವರನ್ನು ನೇಮಿಸಿದೆ ಈಗ ಈ ಹೋಮವನ್ನು ನೀನೆ ಪೂರ್ಣಗೊಳಿಸು ಎಂದನು. ಉಷಸ್ಥಿ ಹೇಳಿದ ಅದು ಅಸಾಧ್ಲ. ಈಗ ಕುಳಿತ ಮೂರು ಜನ ವೃಥ್ವಿಜರು ದೀಕ್ಷಾ ಭದ್ಧರಾಗಿ ಕುಳಿತಿದ್ದಾರೆ. ಇವರ ಹೊರತು ಬೇರೆ ಯಾರು ಯಜ್ಞ ಮಾಡುವಂತಿಲ್ಲ ಎಂದನು.
ರಾಜನು, ಇವರಿಗೆ ಪೂರ್ಣ ಗೊತ್ತಿಲ್ಲ ಯಜ್ಞ ಯಶಸ್ವಿಯಾಗಿ ಪೂರ್ಣಗೊಳ್ಳಲು ಏನು ಮಾಡಬೇಕು ಎಂದನು. ಉಶಸ್ಥಿ ಹೇಳಿದ, ದೀಕ್ಷೆ ತೊಟ್ಟ ಈ ಋತ್ವಿಜರೇ ಯಜ್ಞ ಕಾರ್ಯ ಪೂರ್ತಿ ಮಾಡಲಿ, ನಾನು ಅವರಿಗೆ ಆಯಾ ದೇವತೆಗಳ ಮಂತ್ರಗಳನ್ನು ತಿಳಿಸುತ್ತೇನೆ ಎಂದನು. ರಾಜನಿಗೆ ನೆಮ್ಮ ದಿಯಾಯಿತು. ಯಜ್ಞಕಾರ್ಯ ಸಾಂಗೋಪಸಾಂಗವಾಗಿ ಸಂಪನ್ನವಾಯಿತು. ರಾಜನು ಅವರಿಗೆ ಭೂರಿ ದಕ್ಷಿಣೆಗಳನ್ನು ಯಥೇಚ್ಛವಾಗಿ ಕೊಟ್ಟನು. ಹಾಗೂ ಉಷಸ್ಥಿಗೆ ನಿನಗೆ ಏನು ಬೇಕೋ ಅದನ್ನು ನಿಸ್ಸಂದೇಹವಾಗಿ ಕೇಳು ಎನ್ನಲು, ನನಗೆ ಹೆಚ್ಚಿನು ಬೇಡ. ವೃಥ್ವಿಜರಿಗೆ ಕೊಟ್ಟಷ್ಟೇ ಧನ ನನಗೆ ಕೊಟ್ಟರೆ ಸಾಕು ಅದನ್ನೂ ನಾನು ಕೇಳುತ್ತಿರಲಿಲ್ಲ ಆದರೆ, ಬರಗಾಲ ಆದ್ದರಿಂದ ಆಹಾರಕ್ಕಾಗಿ ತೆಗೆದುಕೊಳ್ಳುವೆ ಎಂದನು.
ರಾಜನು ಅವನು ಕೇಳಿದ ಮೂರು ಪಟ್ಟು ಕೊಟ್ಟನು. ಉಶಸ್ಥಿ ತನಗೆ ಅಗತ್ಯವಿರುವಷ್ಟು ಮಾತ್ರ ತೆಗೆದುಕೊಂಡು ಮಿಕ್ಕಿದ್ದನ್ನು ಹಿಂತಿರುಗಿಸಿದನು. ಅರಮನೆಯಲ್ಲಿ ಕೊಟ್ಟ ಧನ ಬರಗಾಲ ಮುಗಿಯುವ ತನಕ ಅವನ ಸಂಸಾರಕ್ಕೆ ಸಾಕಾಗಿ, ಉಳಿದದ್ದನ್ನು ಬಡಬಗ್ಗರಿಗೆ ದಾನ ಮಾಡಿದನು ಮತ್ತು ಹಿಂದಿನಂತೆ ನಿತ್ಯ- ಯುಕ್ತ ಜೀವನ ನಡೆಸತೊಡಗಿದನು. ಯಜ್ಞ ಆಗುತ್ತಿದ್ದಂತೆ ಸಾಕಷ್ಟು ಮಳೆ ಬೆಳೆಯಾಗಿ ರಾಜ್ಯ ಸಮೃದ್ಧಿಯಾಯಿತು. ಪ್ರಜೆಗಳು ಮೊದಲಿನ ಸ್ಥಿತಿಗೆ ಬಂದು ಸಂತೋಷದ ಜೀವನ ನಡೆಸಿದರು.
ಇದು ಉಪನಿಷತ್ತಿನ ಪ್ರವಚನಗಳ ಮಾಲಿಕೆಗಳಲ್ಲಿ ಕೇಳಿದ ಕಥೆ.
ಸತ್ಯವನ್ನೆ ಹೇಳಬೇಕು, ಪ್ರಿಯವಾದದ್ದು ಹೇಳಬೇಕು,
ಅಪ್ರಿಯವಾದ ಸತ್ಯವನ್ನು ಹೇಳಬಾರದು,
ಪ್ರಿಯವಾದ ಸುಳ್ಳನ್ನು ಹೇಳಬಾರದು,

ಇದು ಸನಾತನ ಧರ್ಮವು.
No comments:
Post a Comment