Sunday, February 01, 2026

Man is divine. ಮಾನುಷ ದೈವತ

ಮಲಗಿರುವ ಮಾನುಷ ದೈವತ 

ದಂಡಕದಂಗಳ ಕುಟಿರದಿ ಸುಖದಲಿ ಜಾನಕಿರಾಮನು ಮಲಗಿರುವ 
ಮಂಡಿತವಲ್ಲದ ದರ್ಭೆಯ ಶಯನದಿ ವನ ಯಾಯಾವರ ಮಲಗಿರುವ

ನೀರವವಾಗಿರು ಚಿತ್ರಪತಂಗ ನೀರಜನಯನನು ಮಲಗಿರುವ 
ನೀರಾಜನಸಮ  ಹುಳುಗಳ ಮಿಂಚಲಿ ನಿರಘಚರಿತನು ಮಲಗಿರುವ 

ವಮ್ರವೆ ಸರಿಯದೆ ಸುಮ್ಮನೆ ನಿಲ್ಲು ಸಮರ ಧುರಂಧರ ಮಲಗಿರುವ 
ಹೂವೇ ಅರಳುವ ಧ್ವನಿಯನು ನಿಲ್ಲಿಸು ಸಾವಿರ ನಾಮನು ಮಲಗಿರುವ 

ರಾಜಾಸನವನು ಭರತಗೆ ಒಪ್ಪಿಸಿ ರಾಜಕಮುನಿವರ ಮಲಗಿರುವ 
ಕೋಸಲಪತಿ ರಘುಕುಲನಭಸೋಮನು ದಶರಥನಂದನ ಮಲಗಿರುವ 

ಮಾತೆಯ ಇಚ್ಚೆಗೆ ವನಸೇರಿರುವ ವೀತರಾಗಮನ ಮಲಗಿರುವ 
ಕಾನನ-ಸದನದಿ ಸಮಸುಖ ಕಾಣುವ ಮಾನುಷ ದೈವತ ಮಲಗಿರುವ 

ಜಾನಕಿರಾಮ

No comments:

Post a Comment