ಸಂಗ್ರಹಿತ
ಜೀವಜಗತ್ತಿನ ರೋಗಮೂಲ
ಸಾಹಚರ್ಯ ಕಾರಣ:- ಸಹವಾಸದಿಂದಾಗಿ ಬರುವ ರೋಗಗಳು - ದೈಹಿಕ ಸಹವಾಸಗಳು ಮತ್ತು ಮಾನಸಿಕ ಸಹವಾಸಗಳು ಎಂದು ೨ ಬಗೆಯವು.
ದೈಹಿಕ ರೋಗಗಳು: ಅವುಗಳಲ್ಲಿ ಕೆಲವು
೧. ಅಂಟುರೋಗಗಳು,
೨. ಚರ್ಮ ರೋಗಗಳು,
೩. ಮಹಾವ್ಯಾಧಿಗಳು
ಮಾನಸಿಕ ರೋಗಗಳು: ಸಹವಾಸ ಕಾರಣ
೧. ವಿಕ್ಷಿಪ್ತತೆ,
೨.ವಿಕೋಪತೆ,
೩. ಕೀಳುತನ,
೪. ಹಿರಿತನ,
೫. ಅಪಸ್ಮಾರ,
೬. ವಿಚ್ಛಿದ್ರ,
೭. ದೈವಾವೇಶ,
೮. ಅತಿ ಪ್ರಸನ್ನತೆ,
೯. ತೀವ್ರತರ ಕ್ಲೇಶ,
೧೦. ಮೂರ್ಛೆ,
೧೧. ಭಯ,
೧೨. ದುಃಖ,
೧೩. ಕೋಪ,
೧೪. ಮೋಹ,
೧೫. ಆವೇಶ,
೧೬. ಹುಚ್ಚು.
ಇವೆಲ್ಲಾ ಕೂಡ ಸಹವಾಸದಿಂದ ಬರುವ ರೋಗಗಳು. ತತ್ಸಂಬಂಧಿಯಾದ ಇತರೆ ದೈಹಿಕ ರೋಗಗಳೂ ಉಂಟಾಗುತ್ತವೆ. ಅದಕ್ಕಾಗಿಯೇ ನಮ್ಮ ಹಿರಿಯರು “ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ” ಎಂದರು. ಅಂದರೆ ಅದರರ್ಥ ಸದಾ ಸಜ್ಜನರ ಸಹವಾಸ ಮಾಡಿರಿ, ಸತ್ಸಂಗ ಮಾಡಿರಿ, ಆರೋಗ್ಯ ಸಿಗುತ್ತದೆ ಎಂದೇ ಅಲ್ಲವೇ? ಸತ್ಸಂಗವೆಂದರೆ ಆರೋಗ್ಯವಂತ ಮನಃಸ್ಥಿತಿಯ ಜನರೊಂದಿಗೆ ಸಹವಾಸ ಮಾಡಿದಲ್ಲಿ ಹಲವು ರೋಗಭೀತಿಗಳು ಕಡಿಮೆಯಾಗಿ ನಿರೋಗಿಯಾಗಿರಲು ಸಾಧ್ಯ. ದೇಶದ ಒಟ್ಟು ಸಮಾಜದ ರೋಗಗಳಲ್ಲಿ ೬೦% ಮಾನಸಿಕ ಕಾರಣವೇ. ಅವೆಲ್ಲವನ್ನೂ ಸತ್ಸಂಗದಿಂದ ನಿವಾರಿಸಿಕೊಳ್ಳಲು ಸಾಧ್ಯ. ಹಾಗಾಗಿ ಸಹವಾಸ ಯೋಗ್ಯ ಸಜ್ಜನರೆಂದರೆ ಯಾರು? ಪ್ರಾಣಿಗಳೂ, ಪಕ್ಷಿಗಳೂ ಯಾವವು ತಿಳಿಯೋಣ.
ಪಂಡಿತ•
ವಿದ್ವಾಂಸ•
ನಿರಹಂಕಾರಿ•
ಸಾತ್ವಿಕ•
ಸರಳ•
ಸಜ್ಜನ•
ಸಾಧಕ•
ಯೋಗಿ•
ದಯಾಮಯಿ•
ಅಹಿಂಸಾವಾದಿ•
ಸತ್ಯಪರಿಪಾಲಕ•
ನ್ಯಾಯನಿಷ್ಠುರ•
ಧರ್ಮನಿಷ್ಠುರ•
- ಯಾರಾಗಿರುತ್ತಾರೋ ಅವರು ಸಹವಾಸ ಯೋಗ್ಯರು. ಅವರ ಸಹವಾಸವನ್ನು ಸತ್ಸಂಗವೆನ್ನುತ್ತಾರೆ. ಅದು ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಹಕಾರಿ. ಹಾಗೇ ಯಾವುದೇ ರೀತಿಯ ಮನೋರೋಗಗಳಿಗೆ ಆಸ್ಪದವಿರುವುದಿಲ್ಲ. ತೃಪ್ತ, ಸುಖಕರ, ಆಹ್ಲಾದದಾಯಕ ಜೀವನ ಒದಗಿ ಬರುತ್ತದೆ. ಹಾಗಾಗಿ ಸದಾ ಸಜ್ಜನರ ಸಹವಾಸ ನಿಮ್ಮದಾಗಿರಲಿ. ಆಗ ದುರ್ಜನರೂ ಸಜ್ಜನರಾಗಲು ಸಾಧ್ಯ. ಅದೇ ಉತ್ತಮ ಬೆಳವಣಿಗೆ.
ದೈಹಿಕ ಸಹವಾಸವೆಂದರೆ:
1. ಉಚ್ಛಿಷ್ಟ ಭೋಜನ
2. ಏಕವಸ್ತ್ರ
3. ಶಯ್ಯಾ
4. ಅನ್ನ
5. ಶ್ಲೇಷ್ಮ
6. ಶಂಖಾ
7. ವ್ಯಜನ
8. ಪೂಲನ
9. ಮೈಥುನ ಆಲಿಂಗನ
- ಏತೇ ನವಾಃ ಎಂದಿದೆ ಮಾನವ ಧರ್ಮಶಾಸ್ತ್ರ. ಇವುಗಳಿಂದ ಹಲವು ರೀತಿಯ ಅಂಟುರೋಗಗಳು ಬರಬಹುದು. ಅದನ್ನು ಎಚ್ಚರಿಕೆಯಿಂದ ಪಾಲಿಸಿದರೆ ರೋಗರಹಿತ ಜೀವನ ಸಿಗುತ್ತದೆ.
೩. ಸಾಂಪ್ರದಾಯಿಕ ಕಾರಣ:- ಪ್ರತಿಯೊಂದು ಜೀವಿಗೂ ಅನ್ನ, ಬಟ್ಟೆ, ಜೀವನ, ವಯಸ್ಸು, ವಿಹಾರ ಧರ್ಮಗಳಿಗೆ ಆಧರಿಸಿ ಸಾಂಪ್ರದಾಯಿಕತೆ ಇರುತ್ತದೆ. ಅದನ್ನು ಸಾಂಪ್ರದಾಯಿಕ ಜೀವನ ಪದ್ಧತಿ ಎನ್ನುತ್ತಾರೆ. ಅದೂ ಕೂಡ ಈಗ ವಿಕೃತಿ ಹೊಂದುತ್ತಿರುವುದರಿಂದ ರೋಗ ಕಾರಣವಾಗಿರುತ್ತದೆ. ಅದನ್ನು ಒಗ್ಗದಿರುವಿಕೆ ಅಥವಾ ಇಂಗ್ಲೀಷಿನಲ್ಲಿ ಅಲರ್ಜಿ ಎನ್ನುತ್ತಾರೆ. ಸಾಂಪ್ರದಾಯಿಕ ಜೀವನ ಪದ್ಧತಿಯ ನ್ಯೂನತೆಯಿಂದ ಈ ಅಲರ್ಜಿಯು ದೈಹಿಕವಾಗಿಯೂ, ಮಾನಸಿಕವಾಗಿಯೂ ಹಲವು ಖಾಯಿಲೆಗಳಿಗೆ ಕಾರಣವಾಗಿರುತ್ತದೆ.
೪. ಸ್ವಾಭಾವಿಕ ಕಾರಣ:- ಉತ್ತರಾಯಣ, ದಕ್ಷಿಣಾಯನ ಪರಿವರ್ತನೆಗಳು ಮತ್ತು ಋತುಮಾನ ಪರಿವರ್ತನೆಗಳು, ಮಾಸಿಕ ಪ್ರವರ್ತನೆ, ಮೂರು ಕಾಲದ ವ್ಯತ್ಯಾಸಗಳು, ಆಯಾಯ ಕಾಲಕ್ಕನುಸರಿಸಿದ ವಾತ, ಪಿತ್ತ, ಪ್ರಕೋಪಗಳು, ಶೀತಾದಿ ಕ್ಲೇಶಗಳು; ಈ ಕಾರಣದಿಂದಾಗಿ ಬರತಕ್ಕ ರೋಗಗಳು.
೫. ಸ್ವಯಂಕೃತ ಕಾರಣ:- ಕಾಲಮಾನವನ್ನರಿಯದೇ ತಾನೇ ಸ್ವತಃ ತನ್ನ ಆಹಾರ, ವಿಹಾರ ಇತ್ಯಾದಿಗಳಿಂದ ತಂದುಕೊಳ್ಳುವ ಅವಿವೇಕತನದ ಖಾಯಿಲೆಗಳು. ಮದ್ಯಪಾನ, ಧೂಮಪಾನ, ಅಭೋಜ್ಯ ಭಕ್ಷಣ ಇವುಗಳಿಂದ ಬರುವ ಸಮಸ್ಯೆಗಳು.
೬. ವಿಹಾರ ಕಾರಣ:- ಇವು ಮಾನವ ಮಾತ್ರರಿಗೆ ಬರುವ ಸಮಸ್ಯೆಗಳು. ಅನಗತ್ಯ ಪ್ರಯಾಣ, ಒಂದೇ ದಿನದಲ್ಲಿ ಹಲವು ವಿಭಿನ್ನ ವಾತಾವರಣದಲ್ಲಿ ಪ್ರಯಾಣ, ಬೇರೆ ಬೇರೆ ಪದ್ಧತಿಯ ಆಹಾರ ಸ್ವೀಕರಣೆ, ವಿಕೃತ ಮನೋರಂಜನೆ, ದುಷ್ಟಸಹವಾಸ ಇತ್ಯಾದಿಗಳಿಂದ ಬರುವ ಮನೋ ವಿಕ್ಷಿಪ್ತತೆ, ದೈಹಿಕ ಅಶಕ್ತತೆ ಮತ್ತು ಇತರೆ ರೋಗಗಳು.
೭. ಜನ್ಮಾಂತರ ಕಾರಣ:- ಅತೀ ಮುಖ್ಯವಾದ ಭಾಗ. “ಜನ್ಮಾಂತರ ಕೃತಂ ಪಾಪಂ ವ್ಯಾಧಿರೂಪೇಣ ಪೀಡ್ಯತೆ” ಎಂಬ ಉಕ್ತಿಯಂತೆ ಕೆಲವೊಂದು
1. ಮಹಾವ್ಯಾಧಿಗಳು,
2. ಕ್ಷಯ,
3. ಕುಷ್ಟ,
4. ಅಪಸ್ಮಾರ,
5. ಅರ್ಬುದ,
6. ಮೇಹ,
7. ಹುಚ್ಚು,
8. ಶೂಲಾದಿಗಳು,
9. ಸಂಧಿವಾತಗಳು,
10. ಪಕ್ಷವಾತಗಳು.
- ಇವುಗಳೆಲ್ಲಾ ಬರಲು ಸಾಧ್ಯವಿದೆ. ಅದಕ್ಕೆ ಈ ಜನ್ಮ ಕಾರಣವಲ್ಲದಿದ್ದರೂ ಖಾಯಿಲೆ ರೂಪದಲ್ಲಿ ಕಾಡಬಹುದು. ಇವುಗಳನ್ನು ಪಾಪರೋಗಗಳು ಎನ್ನಬಹುದು. ಒಂದು ರೀತಿಯಲ್ಲಿ ಪೂರ್ವಜನ್ಮದ ಪಾಪಗಳಿಗೆ ಪರಿಷ್ಕರಣೆ ಎನ್ನಿಸುತ್ತದೆಯಾದ್ದರಿಂದ ಅನುಭವಿಸುವುದರಿಂದ ಕರ್ಮ ವಿಪಾಕ ಹೊಂದುತ್ತದೆ. ಇವುಗಳು ಪೂರ್ವದ ನಾನಾ ರೀತಿಯ ನಾನಾ ಜನ್ಮದ ಹಲವು ರೀತಿಯ ಪಾಪಕೃತ್ಯಗಳಿಂದ ದೂಷಿತಗೊಂಡು ನಿರಂತರ ಕಾಡುವ ರೋಗಗಳು; ಮಾನವನನ್ನು ಕಾಡಬಹುದು. ಅದಕ್ಕೆ ಕರ್ಮ ವಿಪಾಕ ಪದ್ಧತಿಯಲ್ಲಿ ಪರಿಹಾರ ವಿಧಾನಗಳೂ ಇವೆ. ಚಿಕಿತ್ಸಾ ವಿಧಾನಗಳೂ ಇವೆ. ಅವಕ್ಕೆ ಸಂಬಂಧಪಟ್ಟು ಮಾನವನು ಕೆಲ ತ್ಯಾಗ, ಕೆಲ ದಾನ, ಕೆಲವೊಂದು ಜೀವನ ಮಾರ್ಪಾಡುಗಳು ಮತ್ತು ಪ್ರದೇಶ ಬದಲಾವಣೆಗಳಿಂದ ಪರಿಹಾರ ಪಡೆಯಬೇಕಿರುತ್ತದೆ. ಇದು ಜನ್ಮಾಂತರ ಕೃತವೆಂದು ಪೋಷಿಸಲ್ಪಟ್ಟಿದ್ದರಿಂದ ಅವುಗಳನ್ನು ಸಾತ್ವಿಕ, ಸರಳ, ಶುದ್ಧ, ಬದ್ಧ, ನ್ಯಾಯಯುತ ಜೀವನ ಶೈಲಿಯಿಂದಲೂ ವಿಪಾಕಗೊಳಿಸಿಕೊಳ್ಳಬಹುದು. ಬರೇ ಔಷಧದಿಂದಲೋ ಅಥವಾ ಇನ್ನಿತರೆ ಧನಬಲದ ಚಿಕಿತ್ಸಾ ವಿಧಾನದಿಂದಲೋ ಪರಿಹರಿಸಿಕೊಳ್ಳಲಾಗದ ಸಮಸ್ಯೆಗಳಿದಾಗಿರುತ್ತವೆ.
೮. ದುರಾಶಾ ಕಾರಣ:- ಮಾನವನ ಅತೀ ಅಪೇಕ್ಷೆ ದುರಾಸೆ. ಇದೂ ಕೂಡ ಕೆಲ ರೋಗಗಳಿಗೆ ಕಾರಣವಾಗಿರುತ್ತದೆ. ತನ್ಮೂಲಕ ಪ್ರಾಪ್ತವಾಗದ ನಾನಾ ರೋಗಗಳಿಗೆ ಕಾರಣವಾಗಿ ಹಲವು ರೀತಿಯ ಹಿಂಸೆಗೆ ಸಿಲುಕಿ ನರಳಬಹುದು. ಇದು ತನ್ನನ್ನು ತಾನು ತಿದ್ದಿಕೊಳ್ಳುವುದರ ಹೊರತು ಬೇರೆ ಪರಿಹಾರವೇ ಇಲ್ಲದ ವಿಚಾರವಾಗಿರುತ್ತದೆ.
೯. ಪಾಪಕೃತ್ಯ ಕಾರಣ:- ಮಾನವನು ತನ್ನ ಜೀವನ ವಿಧಾನದಲ್ಲಿ ಮಾಡುವ ಪಾಪಕೃತ್ಯಗಳು ಹಲವು ರೀತಿಯವು. ಅವೂ ಕೂಡ ಅಗೋಚರ ಖಾಯಿಲೆಗಳಾಗಿ ಮಾನವನನ್ನು ಕಾಡುತ್ತವೆ.
1. ಹಿಂಸೆ
2. ಅನೃತವಚನ
3. ನಿಂದೆ
4. ಊಹಾತ್ಮಕ ಮಿಥ್ಯಾರೋಪ
5. ಕ್ರೋಧ
6. ದ್ವೇಷ
7. ಮತ್ಸರ
8. ಪರಿಸರ ನಾಶ
9. ಸೋಮಾರಿತನ
10. ಕರ್ತವ್ಯ ಭ್ರಷ್ಟತೆ
- ಎಂಬ ದಶವಿಧ ಕಾರಣಗಳು ಮಾನವನ ಸಾಮಾಜಿಕ ಜೀವನ ಪಾಪಕೃತ್ಯಕಾರಣ ಹೇತುವಾಗಿರುತ್ತವೆ. ಆ ಕಾರಣದಿಂದ ಬರುವ ಶಾಪರೂಪವಾದ ರೋಗಗಳು ಬಾಧಿಸಬಹುದು

No comments:
Post a Comment