Pinda Pradaana Krama & sthiti ( ಪಿಂಡ ಪ್ರದಾನ ಕ್ರಮ ಮತ್ತು ಸ್ಥಿತಿ )
ವಿವಾಹಾನಂತರ ಪಿಂಡಪ್ರದಾನ : ಮಕ್ಕಳ ವಿವಾಹವಾದಮೇಲೆ 1 ಅಥವಾ 3 ತಿಂಗಳೊಳಗೆ ಪಿಂಡ ಪ್ರದಾನ ಮಾಡಬಾರದು ಎನ್ನುವುದು ತಂದೆ ತಾಯಿಗಳ ಹೊರತಾಗಿ ಬೇರೆ ಶ್ರಾಧಗಳಿಗೆ ಮಾತ್ರ ಅನ್ವಯಿಸುತ್ತದೆ ವಿವಾಹದ ಹಿಂದೆ ಎಷ್ಟೇ ದಿನದ ಅಂತರದಲ್ಲೂ ಪಿಂಡ ಪ್ರದಾನ ಮಾಡಬಹುದು ವಿವಾಹಾನಂತರ ತಂದೆ ತಾಯಿಗಳ ಶ್ರಾದ್ಧವು ಎಷ್ಟೇ ದಿನಗಳ ಅಂತರದಲ್ಲಿದ್ದರು ಅವಶ್ಯವಾಗಿ ಪಿಂಡಪ್ರದಾನವನ್ನೇ ಮಾಡಬೇಕು
ಶ್ರಾದ್ಧ ತಿಥಿ ಅಜ್ಞಾತವಾಗಿದ್ದರೆ : ಸಂಬಧಿಕರ ಬಳಗದವರ ಮುಖಾಂತರ ಮಾಸ ತಿಥಿ ಗೊತ್ತಾಗುವುದು ಸಾಧ್ಯವಿಲ್ಲದಿದ್ದರೆ ಮಾರ್ಗಶೀರ್ಷ ಅಥವಾ ಮಾಘ ಅಮಾವಾಸ್ಯಾ ಅಥವಾ ದ್ವಾದಶಿ ತಿಥಿಯಲ್ಲಿ ಶ್ರಾದ್ಧವನ್ನು ಮಾಡಬೇಕು
ಅಮಾವಾಸ್ಯಾ ( ದರ್ಶ ) : ದರ್ಷದ ದಿವಸ ದ್ವಾದಶ ಪಿತೃಗಳಿಗೆ ಮಾತ್ರ ತಿಲ ಸಹಿತ ನೀರಿನಿಂದ ತರ್ಪಣ ಕೊಡಬೇಕು ನಂತರ ಪ್ರತಿನಿತ್ಯದ ಬ್ರಹ್ಮಯಜ್ನವನ್ನು ದೇವ, ಋಷಿ ,ಆಚಾರ್ಯ ತರ್ಪಣವನ್ನು ಕೊಟ್ಟು ಆಮೇಲೆ ಕೇವಲ ನೀರಿನಿಂದ ಸರ್ವ ಪಿತೃಗಳಿಗೆ ತರ್ಪಣ ಕೊಡುವುದು
ಘಾತ ಚತುರ್ದಶಿ ಶ್ರಾದ್ಧವನ್ನು ಎಕೊದಿಷ್ಟ ವಿಧಿಯಿಂದ ಮಾಡಬೇಕು
ವಿಧವಾ ಜನರು ಮಾಡುವ ಶ್ರಾದ್ಧ : ಮಕ್ಕಳಿಲ್ಲದೆ ಇದ್ದರೆ ತಾವೇ ಶ್ರಾದ್ಧ ಮಾಡಬೇಕು
ಮಮ ಭರ್ತೃ ತತ್ಪಿತ್ರು ಪಿತಾಮಹಾನಾಂ, ಮಮ ಭರ್ತೃ ಮಾತುಹ್ ಪಿತಾಮಹಿ ಮಾತುಹ್ ಪ್ರಪಿತಾಮಹಿನಾಂ
ಮಮ ಪಿತೃ ಪಿತಾಮಹ ಪ್ರಪಿತಾಮಹಾನಾಂ,
ಮಮ ಮಾತೃ ಪಿತಾಮಹಿ ಪ್ರಪಿತಾಮಹಿನಾಂ,
ಮಮ ಮಾತಾಮಹ ಮಾತುಹ್ ಪಿತಾಮಾಹ ಮಾತುಹ್ ಪ್ರಪಿತಾಮಹಾನಾಂ
ಮಮ ಮಾತಾಮಾಹಿ ಮಾತುಹ್ ಪಿತಾಮಹಿ ಮಾತುಹ್ ಪ್ರಪಿತಾಮಹಿನಾಂ
ತೃಪ್ತ್ಯರ್ಥ ಸಕೃನ್ ಮಹಾಲಯ ......................ಕರಿಷ್ಯೇ
No comments:
Post a Comment