Friday, April 26, 2019

Method of Visiting GOD (ದೇವ ದರ್ಶನ ಪದ್ಧತಿ )

                                                                                                                                                 ಸಂಗ್ರಹಿತ 
ದೇವ ದರ್ಶನ  ಪದ್ಧತಿ 
ದೇವರ ದರ್ಶನ...

ಯಾವುದಾದರೂ ಯಾತ್ರೆ ಅಥವಾ ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಹೇಗೆ ಪಡೆದು ಕೊಳ್ಳಬೇಕು  ಅನ್ನುವದಕ್ಕೆ ನಮ್ಮ ಪೂರ್ವಜರು  ಸರಿಯಾದ ಕ್ರಮವನ್ನು  ತಿಳಿಸುತ್ತಾರೆ . ಅದರಂತೆ ನಡೆದರೆ ನಮಗೆ ಖಂಡಿತ ದರ್ಶನ ಫಲ ಸಿಗುತ್ತದೆ ...‌‌
 ಯಾವದೇ ಯಾತ್ರೆಗೆ ಹೋದಾಗ ಯಾತ್ರಾರ್ಥಿಯು ದೇವರ ಪ್ರಥಮ ದರ್ಶನ ಸಮಯದಲ್ಲಿ  ಮೊದಲು ದೇವಸ್ಥಾನದ ಗೋಡೆಗೆ ಒರಗಿ ನಿಂತು ಕೈಮುಗಿದು  ಹೀಗೆ ಹೇಳಬೇಕು.." ನೂರು ಕೋಟಿ ತಿರ್ಥಗಳ ಸ್ನಾನ ಮಾಡಿಸು ,ವಿರಜಾ ನದಿಯ ಸ್ನಾನ ಮಾಡಿಸು , ತಾರಕ ಬ್ರಹ್ಮ ದೇವರಿಂದ  ತತ್ವ ಉಪದೇಶ ಮಾಡಿಸು . ವೈಕುಂಠಕ್ಕೆ ಕರೆದೊಯ್ದು  ನಿನ್ನ ದರುಶನ ಮಾಡಿಸು " ಎಂದು ಪ್ರಾರ್ಥಿಸಿ  ನಂತರ ಹೊರಗಿನಿಂದಲೇ  ದೇವರ ದರ್ಶನ ಮಾಡಬೇಕು..ಅದಕ್ಕೆ ಧೂಳಿದರ್ಶನ ಎನ್ನುತ್ತಾರೆ  
ಧೂಳಿ ದರ್ಶನಂ ಪಾಪ ನಾಶನಂ   ಧೂಳಿದರ್ಶನ ದಿಂದ ಪಾಪ ನಾಶವಾಗುತ್ತದೆ  . 
ನಂತರ 
ತಲೆಯಲ್ಲಿರು ಚಿಂತಗಳನ್ನೇಲ್ಲ ಬಿಟ್ಟು  ಶಿಖರ ದರ್ಶನ ಮಾಡಿ 
ಶಿಖರ ದರ್ಶನಂ  ಚಿಂತಾನಾಶನಂ 
ನಂತರ ದೇವಸ್ಥಾನ ಒಳಗೆ ಹೋಗುವಾಗ ಕೈಕಾಲುಗಳನ್ನು  ತೊಳೆದು  ದೇವಸ್ಥಾನ ಒಳಗಡೆ ಪ್ರವೇಶಮಾಡಿ  ತಕ್ಷಣ ದೇವರ ವಿಗ್ರಹವನ್ನು ನೋಡ ಬೇಡಿ  ಅದಕ್ಕೂ ಒಂದು ಕ್ರಮವಿದೆ .
ಮೊದಲು ಪಾದ ದರ್ಶನ ಮಾಡಿ  ಪಾದ ದರ್ಶನಂ ಪಾಪನಾಶನಂ ...‌
ನಂತರ 
ಕಟಿ ದರ್ಶನ  ಕಟಿ ದರ್ಶನಂ  ಕಾಮನಾಶನಂ 
ನಂತರ 
ನಾಭಿ ದರ್ಶನ  ನಾಭಿ ದರ್ಶನಂ ನರಕ ನಾಶನಂ 
ನಂತರ 
ಕಂಠ ದರ್ಶನ  ಕಂಠ ದರ್ಶನಂ  ವೈಕುಂಠ ಸಾಧನಂ 
ನಂತರ 
ಮುಖ ದರ್ಶನ  ಮುಖ ದರ್ಶನಂ ಮುಕ್ತಿ ಸಾಧನಂ 
ನಂತರ 
ಕಿರೀಟ ದರ್ಶನ  ಕೀರಿಟ ದರ್ಶನಂ ಪುನರ್ಜನ್ಮ ನಾಶನಂ
ನಂತರ 
 ಸರ್ವ ದರ್ಶನ ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ .‌‌‌ ಸರ್ವಾಂಗ ದರ್ಶನ ಮಾಡಿ  ದೇವರಲ್ಲಿ ನಿಮ್ಮ ಬೇಡಿಕೆಗಳನ್ನು ಮಂಡಿಸಿರಿ  ....
ನೀವು ಇನ್ನು ಮುಂದೆ ಯಾತ್ರೆ ದೇವರ ದರ್ಶನಕ್ಕೆ ಹೋದಾಗ  ಈ ಕ್ರಮವನ್ನು ಅನುಸರಿಸಿರಿ   ನಿಮ್ಮ ಬೇಡಿಕೆ ಇಷ್ಟಾರ್ಥಗಳು ಬೇಗ ಸಿದ್ಧಿಸಲಿ 
               Il ಶ್ರೀ ಕೃಷ್ಣಾರ್ಪಣಮಸ್ತು  ll

No comments:

Post a Comment