Monday, June 10, 2019

Shanaishchara charitam Dwitiya Sandhi 49 to 73 ( ಶ್ರೀ ಶನೈಶ್ಚರ ಚರಿತಂ ೨ / ೪೯ ರಿಂದ ೭೩ )

                                                                                                ಶ್ರೀ ಶನೈಶ್ಚರ ಚರಿತಂ ೨  / ೪೯ ರಿಂದ  ೭೩      
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ 
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ  ಒಟ್ಟು ಐದು ಸಂಧಿಗಳು  )  
( ಶ್ರೀ ಶನೈಶ್ಚರ ಪ್ರತಿಮಾ ಪ್ರಾಣಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ ,
ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರಂ  ಸಹಿತ )   
ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ  
ದ್ವಿತೀಯ  ಸಂಧಿ ( ೪೯ ರಿಂದ ೭೩  )
ಗೃಹದ ಬಗೆಯನಗಲ್ಪ ಪರಿಚಯ | ಇಹುದು ದಂಪತಿಗಳಿರ್ವರು | ಅಹುದು ದಕ್ಷಿಣ ದೇಶ ಭೀಮಾ ತಟದ ಬ್ರಾಹ್ಮಣರು ||೪೯ ||
ಭೂಸುರನ ಹೆಸರು ವಿಷ್ಣು ಸ್ವಾಮಿಯು | ಆಸತಿಯು ರುಕ್ಮಿಣಿಯಮ್ಮ ಎಂದಿರೆ | ವಾಸಿಸುತ್ತಿರಲವರು ಛತ್ರದಿ ಸಂದಿ ದಿನವಧಿಕ || ೫೦ ||
ವಿಪ್ರನಾ ವೇದಾಂತಿ ತರ್ಕದಿ | ಸುಪ್ರಬುದ್ಧನು ವೇದ ಶಾಸ್ತ್ರದಿ | ಶ್ರಿ ಪ್ರವೃತ್ತಿಯು ನಿತ್ಯ ನೈಮಿತ್ಯಕದ ಕ್ರಿಯೆಗಳಲಿ || ೫೧ ||
ಆದರೂ ಕಡು ಬಡವರವರಾ - |   ಆವದಿನದಲಿ ಗಳಿಕೆ ಅಲ್ಪವು | ಇದರ ದೆಸೆ ಉಪವಾಸ ಕೆಲ ಕಳೆದಿಹರು ಜೇವನದಿ || ೫೨ ||
ಆತನಷ್ಟೇ ಸತಿಯು ಮಿತವ್ಯಯಿ | ಅತಿಯ ಆಡಂಬರವು ಕಾಣದೆ |  ಇತಿ ಮಿತಿಯ ಜೀವರಿಗೆ  ಮಕ್ಕಳು ಇಲ್ಲದದು ಚಿಂತೆ || ೫೩ ||
ಅವನೆ ಪೇಳಿದ ಮಾತಿನಂತೆಯೇ | ಅವಗೆ ಶನಿಗ್ರಹ ಕ್ರೂರ ಸ್ಥಳದಿಂ - | ದಿರಲು ನಿಜವಾ ಕಪ್ಪುಛಾಯೆಯು ಶನಿಯು ಖಂಡಿತವು || ೫೪ ||
ಪರಿಚಯವ ಪಂಡಿತನು ಪೇಳ್ವೆಡೆ | ಧರಣಿಪತಿ ಬೇಸಸಿರುವ ಮಾತಿಗೆ | ಇರುವ ಸಪ್ತಮಿ ಇಂದಿಹುದು ನಾಂ ಭೂಸುರನ ಕರೆವೆ || ೫೫ ||
ಯಾರಲ್ಲಿ ? ಎಂದು ಕರೆಯೇ ಭಟರು | ಬರಲು ಎನಪ್ಪಣೆಯು  ಪ್ರಭುವೇ | ಭರದಿ ತತ್ಪರರಾಗಿ ನಿಂದರು ಆಜ್ಞೆಯುದ್ದೇಶ || ೫೬ ||
ಭಟರೆ ! ನೀವ್ ಇಗಲೆಯೆ ಪೋಗಿ | ತಟದ ಉತ್ತರ ದ್ವಾರ ಛತ್ರದಿ | ದಿಟದಿ ವಿಷ್ಣು ಸ್ವಾಮಿ ಎಂಬಯ ವಿಪ್ರನನು ತನ್ನಿ || ೫೭ ||
ರಾಜಾಜ್ಞೆ ಮನ್ನಿಸಿಯೇ ಭಟರು | ದ್ವಿಜನೆಡೆಗೆ ಪೇಳಿದರು ಬಂದು | ಬಿಜಯ ಗೈವುದು ದ್ವಿಜರೆ ಓಲಗದೆಡೆಗೆ ರಾಜಾಜ್ಞೆ || ೫೮ ||
ಆಜ್ಞೆಯಂ ಕೇಳಿದನು ಭೂಸುರ | ಸೂಜ್ಞೆಯಿಂ ಯೋಚನೆಗೆ ತೊಡಗಿ ರಾ -| ಜಾಜ್ನೆಯದು ಯನಗೇಕೆ ತಾ ಮನದಲ್ಲೇ ಚಿಂತಿಸಿದ || ೫೯ ||
ಏನು ಕೆಲಸಯೋ ಯಾವ ವಿಷಯವೋ | ಎನಗೆ ಗ್ರಹಚರಕ್ರೂರ ಮೊದಲೇ ಅ -| ವನಿಪತಿಯ ಆಣೆಯದು ಎನ್ನುತ ಭಟರೊಡನೆ ಪೋರಟ || ೬೦ ||
ಹೊರಟ ವಿಪ್ರನು ಆಜ್ಞೆ ಯಂತೆಯೇ | ಭರದಿ ರಾಜ್ಯಾಸ್ಥಾನಕೆ ಬಂ - | ದರುಹಿ ಭಯ ಭಕ್ತಿಯಲಿ ವಿಪ್ರನು ನೃಪಗೆ ವಂದಿಸಿದ || ೬೧ ||
ವಂದನೆಗೆ ವಂದನೆ ಸಲಿಸಿ ನೃಪನು | ಅಂದದಲಿ ಕುಳ್ಳಿರಿಸಿ ಪಾರ್ವಗೆ | ಸಂಧಿ ಸಾಧಿಸಿ ಮಾತಿಗೆಳೆದನು ನಿಶಿತ ಮತಿ ರಾಜ || ೬೨ ||
ಎಲ್ಲವೂ ಅದು ಕುಶಲವೋ ತಾಂ - | ಎಲ್ಲಿಯವರು ಆವ ಪುರವದು | ಬಲ್ಲ ವಿದ್ಯೆಗಳೆಲ್ಲಿ ಕಲಿತಿರಿ ಎಂದು ಕೇಳಿದನು || ೬೩ ||
ದೇಶ ದಕ್ಷಿಣ ಭೀಮ ತಟದಿಂ - | ದಾಸೆಯಿಂದಲಿ ಕಲಿತ ವಿದ್ಯೆ ಗ - | ಳೇಸು ಎಲ್ಲವು ವಾರಣಾಸಿಯ ವಿದ್ಯೆ ಪೀಠ ದಲಿ  || ೬೪ ||
ದ್ವಿಜನು ನಾನಗಸ್ತಿ ಗೊತ್ರಜ  | ರಾಜಿಸುವ ರುಕ್ಮಿಣಿಯು ನಿಜಸತಿ  |  ರಾಜಧಾನಿಯ ಛತ್ರದಲಿ ಣಾ ವಾಶಿಸುವುದೆಂದ  || ೬೫ ||
ಕರೆದ ಉದ್ದೇಶಾವುದು ಎಂ - | ದರುಹಲನು ನೃಪ ಸಾವಧಾನದಿ  | ಸಾರ ಸುಖವನು ಕಂಡು ಅರಿದವರಲ್ಲ ತಾವೆಂದ   || ೬೬ ||
ಕನಿಕರದಿ ನಿಮ ಪರಿಚಯವನರಿತು | ಕನವಳಿಸಿ ಕರೆ ತಂದು ದದಕೆ  | ಮಾನವತೆಯದು ಬಡವರಲಿ ಕಾಣುವುದು ಉಂಟೆಂದ || ೬೭||
ಪರರ ಮನ ನೋಯಿಸದ ಜೀವರು | ಸುರರ ಪರಿ ಭೂಸುರರು ತಾವು | ಸುರತವಾಗಿಯೇ ಮಾತಿಗೊಂದು ಮಾತು ಬೆಳೆಯಿತದು || ೬೮ ||
 ದೇವ ಸರಿಸಮ ನರರು ಆಗಲು | ಆವುದೇ ತಪ ದೇಹ ದಂಡನೆ |        ವ ನಿರ್ಮಲ ಚಿತ್ತ ಬೇಕದು ಎಂದನಾ ವಿಪ್ರ || ೬೯ ||
ಶುದ್ಧ ಭಾವದ ನರನು ದೇವನು |  ಸಿದ್ಧ ಕೊಡಲನು ವಸ್ತುಗಳ ಸುಖ | ಬದ್ಧ ಉಪಕಾರಿಯನು ಪರರಿಗೆ ತಾನೇ ದೇವನರ || ೭0 ||
ಸತ್ಯ ಆಚಾರದಲಿ ನಡೆಯಲು | ಮಿಥ್ಯವಂ ತೊರೆದುದಲೇ ಸುಖವನು | ನಿತ್ಯ ನೀತಿಯ ನಡೆಯು ತಾ ದೇವನಿಂ ಮಿಗಿಲು  || ೭೧ || 
ಈ ಹೊಗಳಿಕೆಗೆ ನಾ ನನರ್ಹ ರಾಜನೇ | ಇಹುದು ಬಡತನಕಾರು ಹೊಣೆಯದು | ಬಹುದು ಅದರಲೇ ತೃಪ್ತಿಯನು ತಾ ಪದೆವುದೇ ಲೇಸು  || ೭೨ ||
ಬಲವು ಗ್ರಹದಿಂ ಇಲ್ಲವದು ಪಿಂ - | ಗಳನ ಕೋಪವು ಯೆನಗೆ ಇಹುದಿಂ - | ದಲೆಯೇ ಸೌರಿಯು ಸಿಂಹ ರಾಶಿಗೆ ಗತಿಸೆ ಗತಿಯಿಂದ || ೭೩ ||
                                                                                                                                                                                  ಕ್ರಮಶಃ 

No comments:

Post a Comment