Thursday, June 13, 2019

CHITRAYA SWAAHAA चित्राय स्वाहाः चित्र गुप्तायनमः (ಚಿತ್ರಾಯ ಸ್ವಾಹಾ ಚಿತ್ರಗುಪ್ತಾಯನಮಃ)

चित्राय स्वाहाः  चित्र गुप्तायनमः (ಚಿತ್ರಾಯ ಸ್ವಾಹಾ ಚಿತ್ರಗುಪ್ತಾಯನಮಃ)

ಉಪನಯನ ವಾದ ಕೂಡಲೇ  ಮಕ್ಕಳಿಗೆ ಭೋಜನವಿಧಿ  ಹೇಗೆ, ಪರಿಶಿಂಚನ ಹೇಗೆ ,ಚಿತ್ರಾವತಿ ಇಡುವುದೆಲ್ಲಿ ಗೊತ್ತಿರುವದಿಲ್ಲ , ಏನು ಮಂತ್ರ ಹೇಳಬೇಕು ಎಷ್ಟು ಬಲಿಯನ್ನು ಹಾಕಬೇಕು ಅಂತ  ತಂದೆ ತಾಯಿಗೆ ಕೂಡಾ ಅನಕೂಲವಾಗಲಿ ಅಂತ ತಿಳಿಸಿ ಕೊಡುತ್ತಿದ್ದೇನೆ....
ಪ್ರಪ್ರಥಮವಾಗಿ ಅನ್ನಪೂರ್ಣ ಸ್ವರೂಪವಾದ  ಬಡಿಸಿರುವ ಬಾಳೆಎಲೆಗೆ  (ಬಡಿಸಿರುವ ತಟ್ಟೆಗೆ ) ನಮಸ್ಕಾರ  ಮಾಡಿ....‌

ಓಂ ಭೂರ್ಭುವಸ್ಸುವಃ || ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || 

ಇತಿ ಪ್ರೋಕ್ಷ್ಯ||  ಈ ಮಂತ್ರ ಹೇಳಿ ಅನ್ನಕ್ಕೆ ನೀರನ್ನು ಚಿಮುಕಿಸುವುದು  (ನನಗೆಂದೆ ಬಡಿಸಿದ ಅನ್ನ ಅದನ್ನು ಪ್ರೋಕ್ಷಿಸಿ ಶುದ್ಧೀಕರಣ ಗೊಳಿಸುವ ಕ್ರಿಯೆ )
ಸತ್ಯಂತ ವರ್ತೇನ  ಪರಿಷಿಂಚಾಮಿ ||  ಇತಿ ಜಲೇನ ಪ್ರದಕ್ಷಿಣಂ ಪರಿಷಿಚ್ಯ||  ಈ ಮಂತ್ರ ಹೇಳಿ 
ನೀರಿನಿಂದ ಅನ್ನದ ತಟ್ಟೆ  ಬಾಳೆ ಎಲೆಯನ್ನು ಪ್ರದಕ್ಷಿಣವಾಗಿ  ನೀರನ್ನು ಹಾಕುವದು ( ಎಲೆಯ ಸುತ್ತಲೂ ಆರ್ದ್ರತೆಯನ್ನು ನಿರ್ಮಾಣ ಮಾಡಿ ಬರುವ ಕ್ರಿಮಿ ಕಿಟಕಗಳಿಗೆ ತಡೆ ಉಂಟುಮಾಡುವ ಪ್ರಕ್ರಿಯೆ )
ಅನ್ನಕ್ಕೆ ಸ್ವಲ್ಪ ತುಪ್ಪ ಕಲಿಸಿ ( ಉಪ್ಪು ಹಾಕಿರಬಾರದು)
ಓಂ ಚಿತ್ರಾಯ  ಸ್ವಾಹಃ   | ಓಂ ಚಿತ್ರ ಗುಪ್ತಾಯ ನಮಃ| ಅಂತ ಹೇಳುತ್ತಾ  ಇತಿ ಅನ್ನದ ಅಗುಳಿನ ಎಲೆಯ ಬಲಭಾಗದಲ್ಲಿ ಬಲಿಯನ್ನು ಇಡುವುದು  ನಂತರ  ಬಲಗೈಯಲ್ಲಿ ನೀರು ಹಾಕಿಕೊಂಡು ಕೆಳಗಿನ ಮಂತ್ರ ಹೇಳಿ.....ಪ್ರಾಶನ ಮಾಡಬೇಕು 
(ಭೂತದಯೆ ಪಾಲಿಸುವುದಕ್ಕೆಂದು ಬರಬಹುದಾದಂಥ ಕ್ರಿಮಿ ಕೀಟಕಗಳಿಗೆ ತಿನ್ನಲು ಅನುವು ಮಾಡಿ ಕೊಡುವುದು) 
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ
ಪ್ರಾಣಾಪಾನ ಸಮಾಯುಕ್ತಃ  ಪಚಾಮ್ಯನ್ನಮ್ ಚತುರ್ವಿದಂ ಅಮೃತಮಸ್ತು ।।
ಅಮೃತೋಪಸ್ತರಣಮಸಿ ಸ್ವಾಹಾ ।। ಅಂದು ಬಲಗೈಯಲ್ಲಿ ಹಿಡಿದ ನೀರನ್ನು ಆಪೋಷಣ ಮಾಡಿ ಕೊಂಡು 
( ಇಲ್ಲಿಯವರೆಗೆ ಒಣಗಿ ಹೋದ ಅನ್ನನಲಿಕೆಯನ್ನು ಆರ್ದ್ರವಾಗಿಸಿ ತಿನ್ನುವ ಅನ್ನವು ಸರಾಗವಾಗಿ ಜಠರಕ್ಕೆ ಇಳಿಸುವ ಪ್ರಕ್ರಿಯೆ )
ಓಂ ಪ್ರಾಣಾಯ ಸ್ವಾಹಾ | ಓಂ ಅಪಾನಯ ಸ್ವಾಹಾ| ಓಂ ವ್ಯಾನಾಯ ಸ್ವಾಹಾ| ಓಂ ಉದಾನಾಯ ಸ್ವಾಹಾ | ಓಂ ಸಮಾನಯ ಸ್ವಾಹಾ | ಓಂ ಬ್ರಹ್ಮಣೇ ನಮಃ  || ಇತಿ ಷಡ್ವಾರಂ ಪ್ರಾಣಾಹುತಿಂ ಮಖೇ ಜುಹುಯಾತ್ || 

ಅಂದರೆ  ಆರು ತುತ್ತುಗಳನ್ನು ಮೇಲಿನ ಮಂತ್ರ ಹೇಳುತ್ತಾ   (ಜಠರಾಗ್ನಿಗೆ ಬಲಿ  ) ತುತ್ತನ್ನು ಅರ್ಪಿಸಬೇಕು ಅಂದರೆ ಸ್ವೀಕರಿಸಬೇಕು.... ಹೀಗೆ ತುತ್ತನ್ನು ಸ್ವೀಕರಿಸುವಾಗ ಎಡಗೈಯಿಯ  ಅನಾಮಿಕ ಬೆರಳಿನಿಂದ  ಬಾಳೆಎಲೆಯ ಎಡಗಡೆ   ಒತ್ತಿ ಹಿಡಿಯಬೇಕು ತುತ್ತು ಸ್ವೀಕರಿಸಿ ನಂತರ  ಆ ಬೆರಳಿಗೆ ನೀರಿನಿಂದ ತೊಳೆದು ಕಣ್ಣಿಗೆ ಹಚ್ಚಿಕೊಂಡು ಊಟವನ್ನು ಮಾಡಬೇಕು.....
ಊಟವಾದ ಮೇಲೆ  ಬಲಗೈಯಲ್ಲಿ ನೀರನ್ನು ಹಾಕಿಕೊಂಡು 

 ಅಮೃತಾ ಪಿ ಧಾನಮಸಿ ಸ್ವಾಹಾ| ಅಂತ ಹೇಳಿ 
ಆಪೋಶನ ಮಾಡಬೇಕು  ನಂತರ  ಬಲಗೈ ನಾಲ್ಕು ಬೆರಳುಗಳನ್ನು ನೆಲಕ್ಕೆ ಊರಿ   ಅನ್ನ ದಾತಾ ಸುಖಿ ಭವ  ಅಂತ  ಅನ್ನ ಹಾಕಿದವರು ಸುಖವಾಗಿರಲಿ ಅಂತ ಹಾರೈಸಿವುದು....
ನಂತರ ಕೈಕಾಲು ತೊಳೆದು ..‌ಹೊಟ್ಟೆ ಮುಟ್ಟಿಕೊಂಡು.‌

ಅಗಸ್ತ್ಯಂ ಕುಂಭಕರ್ಣಂ ಚ ಶನಿಂ ಚ ವಡವಾನಲಂ |
ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಂ || ಇತಿ ಜಪೇತ್||
ಊಟವೆಂದರೆ ಕೇವಲ ಜಠರಿನಲ್ಲಿ ಅನ್ನಹಾಕುವುದು, ಅಥವಾ ನಾಲಿಗೆಯ ಚಪಲವೆಂದು ತಿನ್ನುವುದು ಅಲ್ಲ,  ಊಟದ ಪ್ರಕ್ರಿಯೆ ಎಂದರೆ ಒಂದು ಯಜ್ಞವೆಂದು ತಿಳಿಯಬೇಕು  ಎನ್ನುವುದೇ ಮತಿತಾರ್ಥ     

No comments:

Post a Comment