By courtesy
CODE OF CONDUCT ( आचार संहिता )
ಮನೆಯಲ್ಲಿ ಅನುಸರಿಸಬೇಕಾದ ಒಂದಿಷ್ಟು ವಿಷಯ, ನಿಯಮಗಳ ಸಂಪ್ರದಾಯಗಳ ಕುರಿತು ಮಾಹಿತಿ
ಮನೆಯಲ್ಲಿ ಅನುಸರಿಸಬೇಕಾದ ಒಂದಿಷ್ಟು ವಿಷಯ, ನಿಯಮಗಳ ಸಂಪ್ರದಾಯಗಳ ಕುರಿತು ಮಾಹಿತಿ
1) ಸಂಜೆ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದು ಮನೆಯ ಹಿಂಭಾಗದಲ್ಲಿರುವ ಬಾಗಿಲನ್ನು ಮುಚ್ಚಬೇಕು.
2)ಮನೆಯ ಮುಖ್ಯ ದ್ವಾರ ಬಾಗಿಲ ಹೊಸ್ತಿಲ ಮೇಲೆ ನಿಲ್ಲಬೇಡಿ.ಅಷ್ಟು ಮಾತ್ರವೇ ಅಲ್ಲ ಬೇರೆ ಯಾರು ಸಹ ಹೊಸ್ತಿಲ ಮೇಲೆ ನಿಲ್ಲದಂತೆ ಎಚ್ಚರ ವಹಿಸಿ ತಿಳಿ ಹೇಳಿ.
3)ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯಲ್ಲಿ ಕಸ ಗೂಡಿಸಬೇಡಿ. ರಾತ್ರಿ ಮಲಗುವ ಮೊದಲು ಕಸ ಗೂಡಿಸಿದರೆ ಹೊರಗೆ ಹಾಕಬೇಡಿ. ಒಂದುಕಡೆ ಗುಡ್ಡೆ ಮಾಡಿ ಶೇಖರಿಸಿಟ್ಟು ಬೆಳಗಿನ ಜಾವ ಸೂರ್ಯೋದಯದ ನಂತರ ಹೊರಗೆ ಹಾಕಿ.
4)ಪೊರಕೆಯ ತುದಿಯ ಭಾಗ (ಕಸ ಗುಡಿಸುವ ಭಾಗ)ವನ್ನು ಮೇಲೆ ಮಾಡಿ ನಿಲ್ಲಿಸಬೇಡಿ ( ಪೊರಕೆಯ ಹಿಡಿಕೆಯ ಭಾಗವನ್ನು ಕೆಳಗೆ ಮಾಡಿ ನಿಲ್ಲಿಸಬೇಡಿ ) ಅದು ಸ್ಮಶಾನ ಮನೆಯ ಸೂಚಕವಾಗಿದೆ. ಆದ್ದರಿಂದ ಹಾಗೆ ಇಡುವುದು ಸತ್ತವರ
ಮನೆಯಲ್ಲಿ ಮಾತ್ರ.
5)ಮೊರ,ಪೊರಕೆಗಳನ್ನು ಕಾಲುಗಳಿಂದ ಒದೆಯಬೇಡಿ ಅಥವಾ ತುಳಿಯಬೇಡಿ ಹಾಗೇನಾದರೂ ನಿಮ್ಮ ಕಾಲು ಅಕಸ್ಮಾತ್ತಾಗಿ ತಗುಲಿದರೆ ಅವುಗಳಿಗೆ ನಮಸ್ಕರಿಸುವದು .
6)ಚಪ್ಪಲಿಗಳನ್ನು ಮನೆಯ ಹೊಸ್ತಿಲು ಮತ್ತು ಮುಖ್ಯ ದ್ವಾರದ ಎದುರಿಗೆ ಅಥವಾ ಬಳಿ ಬಿಡಬೇಡಿ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿಯೇ ಬಿಟ್ಟರೆ ಒಳ್ಳೆಯದು.ರಂಗೋಲಿ ಹಾಕದೆ ಹಾಗೆಯೇ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಒಳ್ಳೆಯದಲ್ಲ. ಯಾವುದಾದರೂ ಒಂದು ಪುಟ್ಟ ರಂಗೋಲಿಯನ್ನಾದರು ಹಾಕಿ.
7)ಮನೆಯ ಗೋಡೆಯ ಮೇಲೆ,ದೇವರ ಮನೆ ಮುಂತಾದ ಸ್ಥಳಗಳಲ್ಲಿ ಗೋಡೆಗಳ ಮೇಲೆ ಶಾಯಿ ಅಥವಾ ಕರಿ ಬಣ್ಣ
ಇತ್ಯಾದಿಗಳಿಂದ ವಿಕಾರ ಆಕೃತಿಗಳನ್ನು ಬರೆಯಬೇಡಿ.
8)ಮನೆಯಲ್ಲಿ ನಡೆಯುವಾಗ ನಿಮ್ಮ ಪಾದವನ್ನು ನೆಲಕ್ಕೆ ಸವರಿಕೊಂಡು ಓಡಾಡಬೇಡಿ.ಕಾಲಿನ ಪಾದವನ್ನು ಎತ್ತಿ ಇಟ್ಟು ನೆಡೆಯಬೇಕು. ಸಾಧ್ಯವಾದಷ್ಟು ಶಬ್ದ ಕಡಿಮೆ ಇರಲಿ.ಹೆಣ್ಣುಮಕ್ಕಳು ಕಾಲಿಗೆ ಕಾಲ್ಗೆಜ್ಜೆಯನ್ನು ಧರಿಸುವುದು ಒಳ್ಳೆಯದು
9)ಮಂಗಳವಾರ, ಶುಕ್ರವಾರ ದಂದು ಯಾರನ್ನು ಸಹ ಅವಾಚ್ಯ ಶಬ್ದಗಳಿಂದ ಬಯ್ಯಬೇಡಿ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಆ ದಿನಗಳಲ್ಲಿ ಅವಾಚ್ಯ ಶಬ್ದಗಳಿಂದ ಬಯ್ಯಲುಬಾರದು ಮತ್ತು ಅವರ ಮನಸ್ಸನ್ನು ಸಹ ನೋಯಿಸಬಾರದು.
8)ಹರಿದು ಹೋದ, ಸುಟ್ಟ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬೇಡಿ ತಮ್ಮ ವೈಯಕ್ತಿಕ ವಸ್ತುಗಳನ್ನು ಅಂದರೆ ಬಟ್ಟೆ,ಕೂದಲು ಇತ್ಯಾದಿ ಹೊರಗೆ ಬಿಸಾಕಬಾರದು (.ಒಂದು ವೇಳೆ ನೀವೇನಾದರೂ ಧರಿಸಿದರೆ, ಹೊರಗೆ ಬಿಸಾಕಿದರೆ ನಿಮ್ಮಮೇಲೆ ಮಾಡಿದ, ಮಾಡಬಹುದಾದ ಮಾಟ ,ಮಂತ್ರ ದೃಷ್ಟಿಗಳ, ಪ್ರಯೋಗ ಪರಿಣಾಮ ಬೇಗ ಆಗುವುದರಲ್ಲಿ
ಯಾವ ಸಂದೇಹವಿಲ್ಲ .
9)ಕೈ ಮತ್ತು ಕಾಲುಗಳ ಉಗುರುಗಳನ್ನು ವಿಪರೀತ ಬೆಳೆಸಬೇಡಿ. ಅದು ದಾರಿದ್ರ್ಯದ ಸಂಕೇತವಾಗಿದೆ.
10)ಉಗುರುಗಳನ್ನುಸಂಜೆ,ಮತ್ತು ರಾತ್ರಿಯ ಸಮಯದಲ್ಲಿ ಕತ್ತರಿಸಬೇಡಿ ಹಾಗೆ ಶುಕ್ರವಾರ, ಮಂಗಳವಾರ, ಹಾಗೂ ಶನಿವಾರದ ದಿನ ಉಗುರುಗಳನ್ನು ಕತ್ತರಿಸಬಾರದು. ಕತ್ತರಿಸಿದ ಉಗುರುಗಳನ್ನು ಮನೆಯಲ್ಲಿ ಎಲ್ಲಂದರಲ್ಲಿ ಎಸೆಯಬಾರದು.ಹಾಲನ್ನು ಚೆಲ್ಲಿದ್ದರೆ ತುಳಿದುಕೊಂಡು ಓಡಾಡಬೇಡಿ ಒಂದು ವಸ್ತ್ರವನ್ನು ತೆಗೆದುಕೊಂಡು ಕೈಗಳಿಂದ ಸ್ವಚ್ಛಗೊಳಿಸಬೇಕು.
11)ಮನೆಯಲ್ಲಿ ಹೆಣ್ಣುಮಕ್ಕಳು ಕೆದರಿದ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು, ಕುಂಕುಮವಿಲ್ಲದ ಹಣೆ, ಕೆದರಿದ ಕೂದಲು ಅರಿಶಿನ ಹಚ್ಚದ ಕೈ ಕಾಲುಗಳು ಮಹಿಳೆಯರಿಗೆ ಅಶುಭದ ಸಂಕೇತವಾಗಿವೆ
12).ಮುಸ್ಸಂಜೆ ಮತ್ತು ಸೂರ್ಯಾಸ್ತದ ಬಳಿಕ ತಲೆಯ ಕೂದಲನ್ನು ಬಾಚಬಾರದು.
13) ಹಾಸಿಗೆ, ಸೋಫಾ, ಮಂಚದ ಮೇಲೆ ಕುಳಿತು ದ್ಯಾನ ಪೂಜೆಗಳನ್ನು ಮಾಡಬೇಡಿ ಅಂತಹವು ಯಾವ ಫಲವನ್ನು ನೀಡುವುದಿಲ್ಲ.
14)ಸೂರ್ಯೋದಯಕ್ಕೆ ಮುಂಚಿತವಾಗಿಯೇ ಹಾಸಿಗೆಯಿಂದ ಏಳುವ ಅಭ್ಯಾಸ ಮಾಡಿಕೊಳ್ಳಿ.ಮುಸ್ಸಂಜೆ ವೇಳೆ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಲಗಬೇಡಿ ಹಾಗೆ ಮಾಡಿದರೆ ಅದು ದರಿದ್ರಲಕ್ಷ್ಮೀ ಮನೆಯಲ್ಲಿ ತಾಂಡವವಾಡುತ್ತಾಳೆ.

ಅದೊಂದು ಕಾಲವಿತ್ತು. ಮನೆಯಲ್ಲಿ ಹಿರಿಯರು ಹೇಳಿದ ಮಾತು ವೇದವಾಕ್ಯವಾಗಿತ್ತು. ಕಿರಿಯರು ಅದನ್ನ ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಸಂಪ್ರದಾಯ,ಆಚರಣೆಗಳನ್ನು ಮಾಡುತ್ತಿದ್ದರು.
ಕಾಲ ಕ್ರಮೇಣ ಅದು ಕಿರಿಯರಿಗೆ ಕಿರಿಕಿರಿಯ ವಿಷಯವಾಯ್ತು. ಅದರ ಹಿಂದಿನ ನಿಜವಾದ ಮಹತ್ವ ತಿಳಿಸುವಲ್ಲಿ ಹಿರಿಯರೂ ಎಡವಿದ್ದರು. ಕೇಳುವಷ್ಟು ವ್ಯವಧಾನ ಉಳಿದವರಲ್ಲೂ ಕಡಿಮೆಯಾಗಿ ಅದೆಲ್ಲಾ ಅಂಧಾನುಕರಣೆ ಎನ್ನುವ ಭಾವನೆಮೂಡಿತು.
ಜೊತೆಜೊತೆಗೆ ಪಾಶ್ಚಾತ್ಯ ಪದ್ಧತಿಗಳನ್ನು ಅನಿಸರಿಸುವ ಆಸಕ್ತಿ ನಮ್ಮತನವನ್ನು
ಉಳಿಸಿಕೊಳ್ಳುವುದರಲ್ಲಿ ಇರಲಿಲ್ಲ. ಹೆಚ್ಚು ಕಡಿಮೆ ಎಲ್ಲಾ ಪದ್ದತಿಗಳು ಮೂಲೆಗುಂಪಾದವು. ಅದೇ ಸಮಯಕ್ಕೆ so called ಬುದ್ಧಿ ಜೀವಿಗಳು ಪ್ರಶ್ನೆಮಾಡಿ ಮಾಡಿ ನಮ್ಮ ನಂಬಿಕೆಗಳೇ ತಪ್ಪು ಎನ್ನುವರೀತಿ ವರ್ತಿಸಿದರು.
ಕಾಲಕ್ರಮೇಣ ನಮ್ಮ ಪದ್ಧತಿಗಳೇ ಸರಿಎಂಬುದು ವಿಶ್ವಕ್ಕೆ ತಿಳಿದರೂ ಅದನ್ನು ಒಪ್ಪಿಕೊಂಡು ಅನುಸರಿಸುವಲ್ಲಿ ಮತ್ತೆ ನಾವು ಎಡುವುತ್ತಿದ್ದೇವೆ.ನಮ್ಮ ಪ್ರತಿಯೊಂದು ಆಚರಣೆಯ ಹಿಂದೆಯೂ ವೈಜ್ಞಾನಿಕ ತರ್ಕವಿತ್ತು.ಅದನ್ನು ಅರಿಯದ ನಾವು ಮೂಢನಂಬಿಕೆ ಹೆಸರಲ್ಲಿ ಎಲ್ಕಾ ಬಿಟ್ಟು, ಮತ್ತದೇ ಸೋಗಲಾಡಿ ಜಾಹೀರಾತಿಗೆ ಮರುಳಾಗುತ್ತಿದ್ದೇವೆ.
ಮೊದಲು ಇದ್ದಲು,ಉಪ್ಪು,ಬೇವಿನಕಡ್ಡಿ ಉಪಯೋಗಿಸಿ ಹಲ್ಲುಜ್ಜುವುದನ್ನು ತಪ್ಪು ಎಂದು ಹೇಳಿದ ಕಂಪನಿಗಳು ಈಗ ಅದೇ ಹಳೇ ರಾಗ ಹಾಡುತ್ತಿದೆ. ನಿಮ್ಮ ಟೂತ್ ಪೇಸ್ಟ್ ಅಲ್ಲಿ ಉಪ್ಪು ಇದೆಯಾ, ಲವಂಗ ಇದ್ಯಾ ಅಂತ!
ಮುಂಚೆ ನಮ್ಮಜ್ಜ ಹೇಳ್ತಾ ಇದ್ದರು. ಬೆಳಿಗ್ಗೆ ಎದ್ದ ಕೂಡಲೇ ರಾತ್ರಿ ತುಂಬಿಟ್ಟ ತಾಮ್ರದ ತಂಬಿಗೆಯ ನೀರು ಕುಡಿಬೇಕು ಅಂತ. ಈಗ ವಾಟರ್ filter ಕಂಪನಿಯವರು ಅದನ್ನೇ ಹೇಳುತ್ತಿದ್ದಾರೆ.
ತಾಮ್ರದ ತಂಬಿಗೆಯಲ್ಲಿ ನೀರು ಸಂಗ್ರಹಿಸಿ ಕುಡಿಯಿರಿ, ಪ್ಲಾಸ್ಟಿಕ್ ನಲ್ಲಿ ಸಂಗ್ರಹಿಸಿದ ನೀರು ಕ್ಯಾನ್ಸರ್ ಕಾರಕ.. ಅಜ್ಜ ಇದನ್ನೇ ಅಲ್ವಾ ಹೇಳ್ತಾ ಇದ್ದಿದ್ದು??
ಮಡಿ, ಮುಸುರೆ,ಎಂಜಲು ಹೀಗೆ ಬೇರೆ ಬೇರೆ ಇಡುವ ಪದ್ಧತಿಯಿತ್ತು. ಈಗಿನವರಿಗೆ ಇದು ಹಾಸ್ಯಾಸ್ಪದ. ಆದರೆ ಅದರ ಹಿಂದೆ logic ಇತ್ತು.ಉಪ್ಪು, ಸಕ್ಕರೆ ತರದ ಪದಾರ್ಥಗಳು ತುಂಬಾ ದಿನದವರೆಗೆ ಉಪಯೋಗಿಸಬಹುದಾದ ವಸ್ತುಗಳು. ಹಾಲು,ಮೊಸರು, ಮುಂತಾದವು ಬೇಗ ಹಾಳಾಗುವ ಪದಾರ್ಥ. ಒಂದಕ್ಕೆ ಒಂದು ಬಿದ್ದು ಹಾಳಾಗುವುದನ್ನು ತಪ್ಪಿಸಲು ಈ ವಿಧಾನ ಅನುಸರಿಸಲಾಗುತ್ತಿತ್ತು. ಇನ್ನು ಒಬ್ಬರು ತಿಂದು ಬಿಟ್ಟಿದ್ದನ್ನು ಮತ್ತೊಬ್ಬರಿಗೆ ಕೊಡುತ್ತಿರಲಿಲ್ಲ.
ಈಗ ಡಾಕ್ಟರ್ ಅದನ್ನೇ ಹೇಳುವುದು. ಸಾಂಕ್ರಾಮಿಕ ರೋಗಗಳು ಬರದಂತೆ ತಡೆಗಟ್ಟಲು ಇದು ಸಹಾಯಕಾರಿಆಯಾ ಕಾಲಕ್ಕೆ ತಕ್ಕಂತೆ ಹಬ್ಬಗಳು,ಅದಕ್ಕೆ ತಕ್ಕಂತೆ ತಿನಿಸುಗಳು. ಚಳಿಗಾಲದ ಸಮಯದಲ್ಲಿ ಬರುವ ಸಂಕ್ರಾಂತಿಗೆ ತಿನ್ನುವ ಎಳ್ಳು ಬೆಲ್ಲ ಚಳಿಗಾಲದಲ್ಲಿ ಒಣಗಿದ ಚರ್ಮಕ್ಕೆ ಬೇಕಾದ ಎಣ್ಣೆ ಅಂಶ ದೇಹಕ್ಕೆ ಒದಗಿಸುತ್ತದೆ.
ಹಬ್ಬಹಬ್ಬಕ್ಕೆ ಮಾಡುವ ಅಭ್ಯಂಗ ದೇಹಕ್ಕೆ ಶಕ್ತಿ ಕೊಡುತ್ತದ್ದೆ. ಎಣ್ಣೆ ನೀರು ದೇಹದ ರಕ್ತ ಸಂಚಾರ ಹೆಚ್ಚಾಗುವಂತೆ ಮಾಡುತ್ತದೆ.
ಮುಂಬಾಗಿಲಲ್ಲಿ ಹಾಕುವ ಸಗಣಿ ನೀರು ಕ್ರಿಮಿ ಕೀಟಗಳು ಮನೆಯಒಳಗೆ ಬರುವುದನ್ನು ತಪ್ಪಿಸುತ್ತದೆ.
ತಿಂಗಳಿಗೊಮ್ಮೆ ಮಾಡುವ ಸಂಕಷ್ಟಿ ಉಪವಾಸ ದೇಹದ ಪಚನಕ್ರಿಯೆಗೆ ಒಂದಷ್ಟು ವಿಶ್ರಾಂತಿ ಕೊಟ್ಟು ದೇಹದ ಜೊತೆಗೆ ಮನಸ್ಸಿನ ಹತೋಟಿಗೂ ಸಹಾಯಮಾಡುತ್ತದೆ.
ವಿಠ್ಠಲ ನಾಮಸ್ಮರಣೆಯಿಂದ ಹೃದಯಾಘಾತ ತಪ್ಪುತ್ತದೆ ಎನ್ನುವುದು ಇತ್ತೀಚೆಗೆ ಸಂಶೋಧನೆಯಿಂದ ದೃಢಪಟ್ಟ ವಿಷಯ.
ಸಂಧ್ಯಾವಂದನೆ ಕೇವಲ ಒಂದು ಆಚರಣೆಯಲ್ಲ. ಅದೊಂದು ಯೋಗ ಪ್ರಾಣಾಯಾಮ ಸೇರಿದ ಅಭ್ಯಾಸ. ಗಮನಿಸಿ ನೋಡಿ, ಅದರಲ್ಲಿ ಪ್ರಾಣಾಯಮವಿದೆ, ಅರ್ಘ್ಯ ನೀಡಲು ಕೂರುವುದು ಏಳುವುದು ಹೀಗೆ ದೇಹಕ್ಕೆ ಒಳ್ಳೆಯ ವ್ಯಾಯಾಮ ಕೂಡ!
ಮೊದಲೆಲ್ಲಾ ಆರೋಗ್ಯದ ಏರುಪೇರಿಗೆ ಅಜ್ಜಿಯ ಕಷಾಯ, ಅಳಲೇಕಾಯಿ, ಮನೆಮದ್ದು ಸಾಕಿತ್ತು.
ಈಗ ನಾವು ದೇಹವನ್ನು ಮೊದಲಿಂದಲೇ ಬೇರೆ ಔಷಧಿಗಳ ಪ್ರಯೋಗಾಲಯ ಮಾಡಿದ್ದೇವೆ.ಎಲ್ಲದ್ದಕ್ಕೂ ಮಾತ್ರೆ,ಔಷಧಿ.. ಸಣ್ಣ ಪುಟ್ಟ ಖಾಯಿಲೆಗೆ ವೈದ್ಯರು!ನಮ್ಮ ರೋಗನಿರೋಧಕ ಶಕ್ತಿಯನ್ನು ನಾವೇ ಕುಗ್ಗಿಸಿಬಿಟ್ಟಿದ್ದೇವೆ.
ಮನೆಯಲ್ಲಿ ಯಾವುದಾದರೂ ದೇವರ ಪೂಜೆ, ಕಾರ್ಯವಿದ್ದರೆ ಹಿಂದಿನ ದಿನ ರಾತ್ರಿ ಫಲಾಹಾರ, ಬೆಳಿಗ್ಗೆ ಉಪವಾಸ.. ಕಾರಣ ಸರಳ. ವಾಯುಕಾರಕ ಪದಾರ್ಥಗಳನ್ನು ಸೇವಿಸಿದರೆ ಅದು ಆರೋಗ್ಯವನ್ನು ಏರುಪೇರು ಮಾಡುತ್ತದೆ.
ಇನ್ನು ಒಂದಷ್ಟು ಪದಾರ್ಥಗಳು ವರ್ಜ್ಯವೆನ್ನಲು ಇದೆ ಕಾರಣ. ಆಹಾರ ಪದಾರ್ಥಗಳನ್ನು ವಿಂಗಡಿಸಿದ್ದಾರೆ ಹಿರಿಯರು. ತಾಮಸ, ರಾಜಸಿಕ ಅಂಶದ ಪದಾರ್ಥ ಹೀಗಾಗಿ ವರ್ಜ್ಯವೆಂದು ಇದಕ್ಕೇ ಹೇಳುತ್ತಿದ್ದರು.
ಬಾಳೆಎಲೆ ಯಲ್ಲಿ ಊಟ ಮಾಡುವುದು ಒಳ್ಳೆಯದು.. ಏಕೆಂದರೆ ಅದು ದೇಹಕ್ಕೆ ಅಗತ್ಯವಿದ್ದ ಒಳ್ಳೆ ಅಂಶವನ್ನು ನೀಡುತ್ತದೆ. ಹಾಗೆಯೇ ವಿಷದ ಪದಾರ್ಥ ಅದರಮೇಲೆ ಬಿದ್ದರೆ ಅದು ಕಪ್ಪಾಗುತ್ತದೆಯಂತೆ!
ಊಟದ ವಿಷಯದಲ್ಲೂ ವಿಜ್ಞಾನವಿದೆ..ಮೊದಲು ಅಜ್ಜಿ ಹೇಳ್ತಾ ಇದ್ದರು.ನಾವು ತಿನ್ನಬೇಕಿರುವುದು ಒಂದು ಮುಷ್ಟಿ ಅನ್ನ,
32 ತುತ್ತು, ಒಂದೊಂದು ತುತ್ತು 32 ಸಲ ಅಗೆದು ತಿನ್ನಿ ಅಂತ.. ಇದನ್ನೇ ಮಾಡಿದರೆ ಯಾವ diet ಯಾಕೆ ಬೇಕು ಹೇಳಿ?
ಊಟದ ಮೊದಲು ಚಿತ್ರ ಇಟ್ಟು,ಎಲೆ ಸುತ್ತ ನೀರು ಹಾಕುವುದು ಯಾವುದೇ ಸಣ್ಣ ಕ್ರಿಮಿ ಕೀಟಗಳು ಬಾಳೆಲೆಗೆ ಬಾರದಿರಲಿ ಅಂತ..ಬೆಳ್ಳಿಯಲ್ಲಿ ರೋಗನಿರೋಧಕ ಶಕ್ತಿ ಇರೋದ್ರಿಂದ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ ಅಂತ ಹೇಳ್ತಾ ಇದ್ರು.
ಸಂಜೆ ಕತ್ತಲಾದ ಮೇಲೆ ಕಸಗುಡಿಸಿ ಕಸ ಹೊರಗೆ ಹಾಕಿದ್ರೆ ಅಮೂಲ್ಯವಾದ ವಸ್ತುಗಳು ಏನಾದ್ರೂ ಇದ್ದು ಕತ್ತಲೆಗೆ ಕಾಣದೆ ಇದ್ರೆ ಕಷ್ಟ ಅನ್ನೋದು ಸಂಜೆ ವೇಳೆಗೆ ಕಸ ತೆಗಿಬಾರ್ದು ಅನ್ನೋದಕ್ಕೆ ಕಾರಣ.
ಮೈ ಮೇಲೆ ಚೂರಾದ್ರು ಬಂಗಾರ ಇರ್ಲಿ ಅಂತ ಹೇಳ್ತಿದ್ರು ಅಲ್ವಾ? ಬಂಗಾರದ ಮೇಲೆ ಬಿದ್ದ ನೀರು ಮೈ ಮೇಲೆ ಬಿದ್ರೆ ಚರ್ಮರೋಗ ನಿವಾರಣೆಗೆ ಸಹಾಯಮಾಡುತ್ತದೆ..ಬಹುಶಃ ಹೀಗೆ ಹೇಳುತ್ತಾ ಹೋದರೆ ಒಂದು ಪುಸ್ತಕ ಆಗಬಹುದು.
ಇದು ಒಂದು ಕಿರುಪ್ರಯತ್ನ. ನಮ್ಮ ನಡುವೆ ಇರುವ ಆಚಾರ ವಿಚಾರಗಳನ್ನು ಅರ್ಥೈಸಿ ಆಚರಿಸೋಣ!
|
No comments:
Post a Comment