Thursday, July 04, 2019

GAYATRI MANTRA II ( ಗಾಯತ್ರಿ ಮಂತ್ರಾರ್ಥ )


ಗಾಯ
ತ್ರಿ ಮಂತ್ರಾರ್ಥ 

     "ಗಾಯತ್ರಿಯಾ ಗಾಥಿನೋ ವಿಶ್ವಾಮಿತ್ರ ಋಶಿಃ" ಸವಿತಾ  ದೇವತಾ ಗಾಯತ್ರೀ ಚ್ಛಂದಃ ಗಾಯತ್ರಿ ಜಪೇ ವಿನಿಯೋಗಃ
     ಇದು ಗಾಯತ್ರಿ ಜಪ ಪೂರ್ವದ ನ್ಯಾಸ ಮಂತ್ರ.
"ಮನನಾತ್ ತ್ರಾಯತೇ ಇತಿ ಮಂತ್ರಃ", ಮನಸ್ಸಿಟ್ಟು ಜಪಿಸುವದರಿಂದ ರಕ್ಷಣೆ ಕೊಡುವದೇ ಮಂತ್ರ. ಯಾವುದೇ ಮಂತ್ರವನ್ನು ಪದೇ ಪದೇ ಮನನ ಮಾಡುತ್ತಿದ್ದರೆ ಅದು ನೆನಪಿನಲ್ಲಿರುತ್ತದೆ, ಮತ್ತೂ ಮಂತ್ರ ಸಿದ್ಧಿಯಾಗುತ್ತದೆ. 
     ವಿಶ್ವಾಮಿತ್ರರಿಂದ ದರ್ಶಿಸಲ್ಪಟ್ಟ ಗಾಯತ್ರಿ ಮಂತ್ರಕ್ಕೆ ವಿಶ್ವಾಮಿತ್ರರೇ ಋಶಿಗಳು, ಗಾಯತ್ರಿಯೇ ಛಂದಸ್ಸು. ಬೇರೆ ಬೇರೆ ಮಂತ್ರಗಳಿಗೆ ಬೇರೆ ಬೇರೆ ಛಂದಸ್ಸು ಇರುತ್ತದೆ.

"ಸರ್ವದೇವಾತ್ಮನಃ ಸರ್ವಶಕ್ತೇಃ ಸರ್ವ ಭಾಸಕ ತೇಜೋಮಯಸ್ಯ ಪರಮಾತ್ಮನಃ ಸರ್ವಾತ್ಮಕ ದ್ಯೋತಮಾವಾರ್ಥ ಸರ್ವಾತ್ಮಕತ್ವ ಪ್ರತಿಪಾದಕ ಗಾಯತ್ರಿ ಮಹಾಮಂತ್ರಸ್ಯ ಔಪಾಸಕ ಪ್ರಕಾರಃ ಪ್ರಕಾಶ್ಯತೇ. ತತ್ರ ಗಾಯತ್ರೀಂ ಪ್ರಣವಾದಿ ಸಪ್ತ ವ್ಯಾಹೃಸುವುಪೇತಾಂ ಶಿರಃ ಸಮೇತಾಂ ಸರ್ವವೇದ ಸಾರಮಿತಿ ವದಂತಿ." ಇದು ಆದಿ ಶಂಕರಾಚಾರ್ಯರ ಗಾಯತ್ರೀ ಮಂತ್ರದ ವ್ಯಾಖ್ಯಾನ. ಸರ್ವದೇವಾತ್ಮನೂ, ಸರ್ವ ದರ್ಶಕನೂ, ತೇಜೋಮಯನಾದ ಸರ್ವಾತ್ಮಕ ಪ್ರತಿಪಾದಿತ ಗಾಯತ್ರೀ ಮಂತ್ರೋಪಾಸನಾ ಪ್ರಕಾಶವಿದು.ಸರ್ವ ವೇದ ಸಾರವೇ ಗಾಯತ್ರೀ ಮಂತ್ರವೆಂದು ಹೇಳಲಾಗುತ್ತಿದೆ.
        
        ಗಾಯತ್ರೀ ಮಂತ್ರ.
ಓಂ ಭೂರ್ಭುವಸ್ವಃ ಓಂ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾತ್ ||
       ಭೂಮಿ, ಆಕಾಶ, ದೇವಲೋಕವನ್ನೂ(ಇಡೀ ಬ್ರಹ್ಮಾಂಡವನ್ನು) ವ್ಯಾಪಿಸಿರುವ ಸರ್ವ ಪಾಪ ವಿನಾಶಕರವಾದ ತೇಜಸ್ಸುಳ್ಳ ಸೂರ್ಯದೇವನೇ,ನಿನ್ನನ್ನು ಧ್ಯಾನಿಸುವೆನು. ನಮ್ಮನ್ನು ಸನ್ಮಾರ್ಗದಲ್ಲಿ ನಡೆಯುವಂತೇ ಬುದ್ಧಿಯನ್ನು ಪ್ರೇರೇಪಿಸು.

       ಗಾಯತ್ರೀ ಮಂತ್ರದ ಉಚ್ಛಾರಣೆ ಶುದ್ಧವಾಗಿರಬೇಕು.ಪುರೋಹಿತ ಮುಖೇನ, ಗುರು ಸ್ಥಾನದಲ್ಲಿ ತಂದೆಯಿಂದಲೇ ಗಾಯತ್ರೀ ಮಂತ್ರದ ಉಪದೇಶ ಪಡೆಯಬೇಕು. ಆಗಮಾತ್ರ ಗಾಯತ್ರೀ ಮಂತ್ರದ ಜಪದ ಸಿದ್ಧಿಯಾಗುತ್ತದೆ.

      "ಓಂ"ಕಾರ ಪ್ರಣವಗಳನ್ನು ಗಾಯತ್ರೀ ಮಂತ್ರಕ್ಕೆ ಹೆಚ್ಚಿಗೆ ಸೇರಿಸಿದಷ್ಟು ಶಕ್ತಿ ಹೇಚ್ಚುತ್ತದೆ.

ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹೀ ಧಿಯೋಯೋನಃ ಪ್ರಚೋದಯಾತ್ || ಇದು ಸಾಧಾರಣವಾಗಿ ಎಲ್ಲರೂ ಜಪಿಸುವ ಮಂತ್ರ.
       ಇನ್ನು ದ್ವಿ ಪ್ರಣವ, ಓಂ ಭೂರ್ಭುವಸ್ವಃ ಓಂ ತತ್ಸವಿತು,,,,,,  ಪ್ರಚೋದಯಾತ್ ||
       ಚತುಷ್ಪ್ರಣವ ಓಂ ಭೂರ್ಬುವಸ್ವಃ ಓಂ ತತ್ಸವಿತು,,,,,, ಓಂ ಭರ್ಗೋದೇವಸ್ಯ,,,,,,,,, ಓಂ ಧಿಯೋಯೋನಃ ಪ್ರಚೋದಯಾತ್ ||
      ಇನ್ನು ಪ್ರತೀ ಅಕ್ಷರಕ್ಕೂ ಓಂ ಕಾರ ಪ್ರಣವ ಸೇರಿಸಿ ಜಪ ಮಾಡಿದರೆ ಅದರ ಶಕ್ತಿ ವರ್ಣಿಸಲು ಸಾಧ್ಯವಿಲ್ಲ. ಗಾಯತ್ರಿ ಮಂತ್ರದ ಪ್ರತೀ ಅಕ್ಷರಕ್ಕೂ ನಮ್ಮ ದೇಹದ ಪ್ರತೀ ಅಂಗಾಂಗಗಳನ್ನೂ ಕಾಪಾಡುವ ಶಕ್ತಿಇದೆ. ಇದು "ಗಾಯತ್ರೀ ಕವಚ" ದಲ್ಲಿ ವಿವರಿಸಲ್ಪಟ್ಟಿದೆ. 
"ಓಂ ಭೂ ಪಾತುಮೇ ಮೂಲಂ ಚತುರ್ದಲ ಸಮನ್ವಿತಂ ಓಂ ಭುವಃ ಪಾು ಮೇ ಲಿಂಗಂ ಷಡ್ದಲಂ ಷಡ್ದಲಾತ್ಮಕಂ|  ಓಂ ಸ್ವಃ ಪಾತು ಮೇ ಕಂಠಂ ಸಕಾಶಾಂ ದಲ ಶೋಡಶಂ| ಓಂ ತ ಪಾತು ಮೇ ರೂಪಂ ಬ್ರಹ್ಮಾಣಂ ಕಾರಣಂ ಪರಂ ಓಂ ತ್ಸ ಪಾತು ಮೇ ಬ್ರಹ್ಮಾಣಂ ಪಾತು ಸದಾ ಮಮ | ಓಂ ವಿ ಪಾತು ಮೇ ಗಂಧಂ ಸದಾ ಶಿಶಿರ ಸಂಯುತಂ | ಓಂ ತು ಪಾತು ಮೇ ಸ್ಪರ್ಶಂ ಶರೀರಸ್ಯ ಚ ಕಾರಣಂ |      ಓಂ ರ್ವ ಪಾತು ಮೇ ಶಬ್ಧಂ ಶಬ್ಧವಿಗ್ರಹ ಕಾರಕಂ  |     ಓಂ  ರೇ ಪಾತು ಮೇ ನಿತ್ಯಂ ಸದಾ ತತ್ವ ಶರೀರಕಂ |    ಓಂ ಣ್ಯಂ ಪಾತು ಮೇ ಹ್ಯಕ್ಷಂ ಸರ್ವ ತತ್ವೈಕ ಕಾರಣಂ | ಓಂ ಭ ಪಾತು ಮೇ ಶ್ರೋತ್ರಂ ಶ್ರವಣಸ್ಯ ಚ ಕಾರಣಂ | ಓಂರ್ಗೋ ಪಾತು ಮೇ ಘ್ರಾಣಂ ಗಂಧೋಪಾದಾನ ಕಾರಣಂ |
ಓಂ ದೇ ಪಾತು ಮೇ ವಾಸ್ಯಾಂ ಸಭಾಯಾಂ ಶಬ್ಧ ರೂಪಿಣೀ |
ಓಂ ವ ಪಾತು ಮೇ ಬಾಹುಃ ಯುಗಲಂ ಬ್ರಹ್ಮ ಕಾರಣಂ ಓಂ ಸ್ಯ ಪಾತು ಮೇ ಲಿಂಗಂ ಷಡ್ದಲಂ ಷಡ್ದಲೈರ್ಯುತಂ ಓಂ ಧೀ ಪಾತು ಮೇ ನಿತ್ಯಂ ಪ್ರಕೃತಿಂ ಶಬ್ಧಕಾರಿಣಂ |
ಓಂ ಮ ಪಾತು ಮೇ ಬುದ್ಧಿಂ ಪರಬ್ರಹ್ಮಮಯಂ ಸದಾ|
ಓಂ ಹೀ ಪಾತು ಮೇ ನಿತ್ಯಂ ಸದಾ ತತ್ವ ಶರೀರಕಂ |
ಓಂ ಧಿಯಃ ಪಾತು ಮೇ ನಿತ್ಯಮಹಂಕಾರ ಯಥಾತಥಾ|
ಓಂ  ಯೋ ಪಾತು ಮೇ ನಿತ್ಯಂ ಜಲಂ ಸರ್ವತ್ರ ಸರ್ವದಾ |
ಓಂ ನಃ ಪಾತು ಮೇ ನಿತ್ಯಂ ತೇಜಪ್ಪುಜೋ ಯಥಾತಥಾ |
ಓಂ ಪ್ರ ಪಾತು ಮೇ ನಿತ್ಯಮನಿಲಂ ಕಾರ್ಯ ಕಾರಣಂ |
ಓಂ ಚೋ ಪಾತು ಮೇ ನಿತ್ಯಮಾಕಾಶಾಂ ಶಿವಸನ್ನಿಭಂ |
ಓಂ ದ ಪಾತು ಮೇ ಜಿಹ್ವಾಂ ಜಪಯಜ್ಞಸ್ಯ ಕಾರಣಂ |
ಓಂ ಯಾತ್ ಪಾತು ಮೇ ನಿತ್ಯಂ ಶಿವಧ್ಯಾನಮಯಂ ಸದಾ | ತತ್ವಾನಿ ಪಾತು ಮೇ ನಿತ್ಯಂ ಗಾಯತ್ರೀ ಪರದೈವಕಂ | ಕೃಷ್ಣಾ ಮೇ ಸತತಂ ಪಾತು ಬ್ರಹ್ಮಣೀ ಭೂರ್ಭುವಸ್ವರೋಮ್ |

       ಹೀಗೆ ಗಾಯತ್ರೀ ಮಂತ್ರದ ಪ್ರತಿಯೊಂದು ಅಕ್ಷರವೂ ನಮ್ಮದೇಹದ ಪ್ರತಿಯೊಂದು ಅವಯವಗಳಿಗೆ, ಮತ್ತೂ ನಾವು ಮಾಡುವ ಜಪಕ್ಕೆ ಚೇತನ ನೀಡುತ್ತದೆ.
"ದುರ್ಲಭಃ ಸರ್ವ ಮಂತ್ರೇಷು ಗಾಯತ್ರೀ ಪ್ರಣವಾನ್ವಿತಃ" ಓಂಕಾರ ಪ್ರಣವದಿಂದ ಕೂಡಿದ ಗಾಯತ್ರೀ ಮಂತ್ರಕ್ಕಿಂತ ಮತ್ತೊಂದು ಮಂತ್ರ (ಸಾಧನೆಗೆ) ದುರ್ಲಭ.

No comments:

Post a Comment