ಪಿತೃ ಯಜ್ಞ ಭಾಗ :-೧೩
ಏಷು ಸ್ನಾನಂ ಜಪೋ ಹೋಮೋ ವ್ರತಂ ದೇವದ್ವಿಜಾಚ೯ನಮ್ l
ಪಿತೃದೇವ ನೃ ಭೂತೇಭ್ಯೋ ಯದ್ದತ್ತಂ ತದ್ಧ್ಯನಶ್ವರಮ್।।
ಶ್ರಾದ್ಧ ಯಾ ಪಕ್ಷಾಚರಣೆಯ ದಿನದಂದು ಪಿತೃಗಳನ್ನುದ್ದೇಶಿಸಿ ಮಾಡುವ ಸ್ನಾನ,ಜಪ, ಹೋಮ,ವ್ರತ,ದೇವತಾಚ೯ನೆ,ಅತಿಥಿ ಬ್ರಾಹ್ಮಣ ಸತ್ಕಾರ,ಪಿತೃಯಜ್ಞ, ಗೋ ಭೂ ತಿಲ ಹಿರಣ್ಯಾಜ್ಯಾದಿ ದಾನಗಳು ಹರಿ ಸ್ಮರಣ ಪೂವ೯ಕ ಆಚರಿಸಿದಲ್ಲಿ ಅಕ್ಷಯ ಫಲದಾಯಕವಾಗುವವು.ಸಂದೇಹವೇ ಇಲ್ಲ.
ಆದರೆ ಇದರಲ್ಲಿ ಶ್ರದ್ಧೆ,ಭಗವದ್ಭಕ್ತಿ ಮತ್ತು ವಿತ್ತ ಶಾಟ್ಯ ಮಾಡದಿರುವಿಕೆ ಅಗತ್ಯ.
ಹಿಂದೆ ತಾರಣನೆಂಬ ಕಡೂ ಬಡತನವುಳ್ಳ ಬ್ರಾಹ್ಮಣನೊಬ್ಬನಿದ್ದನು. ಅವನ ತಂದೆಯ ಶ್ರಾದ್ಧದ ದಿನ ದರಿದ್ರನಾದ ಅವನಲ್ಲಿ ವೈದಿಕ ನಡೆಸಲು ಬೇಕಾದ ಯಾವುದೇ ಸಂಪತ್ತೂ ಇರಲಿಲ್ಲ. ಆದರೆ ನಿಸ್ಸೀಮ ಭಕ್ತನಾದ ಆತ ಮನೆಯಲ್ಲಿ ಸಾಸಿವೆ ಮಾತ್ರವೇ ಇದ್ದ ಕಾರಣ ಅದರಿಂದಲೇ ಶ್ರಾದ್ಧವನ್ನೂ, ಬ್ರಾಹ್ಮಣ ಭೋಜನವನ್ನೂ ಮಾಡಿಸಿದ. ಪ್ರಸನ್ನರಾದ ಪಿತೃಗಳು ಬ್ರಾಹ್ಮಣರ ದ್ವಾರಾ ಪೂಣಾ೯ನುಗ್ರಹ ಮಾಡುತ್ತಾರೆ. ಅವರ ಅನುಗ್ರಹ ಪಾತ್ರನಾಗಿ ಸಕಲೈಶ್ವಯ೯ ಸಂಪನ್ನನಾದನು.
ಮುಂದಿನ ವಷ೯ ಪಿತೃಶ್ರಾದ್ಧದ ದಿನ ಬಂದಾಗ ದುರಹಂಕಾರ ಮತ್ತು ಅತಿ ವ್ಯಾಮೋಹಕ್ಕೊಳಗಾಗಿ ಸಾಸಿವೆಯ ಪಿಂಡದೊಂದಿಗೆ ಅಡಿಗೆಯನ್ನೂ ಮಾಡಿಸಿದನು. ಅದನ್ನುಂಡ ಬ್ರಾಹ್ಮಣರು ಕ್ರುದ್ಧರಾಗಿ ಅವನನ್ನು ಶಪಿಸಿದರು. ಇದರಿಂದವನು ಮತ್ತೆ ದಟ್ಟ ದಾರಿದ್ರ್ಯಾವಸ್ಥೆಗೆ ದೂಕಲ್ಪಟ್ಟನು.
ಹಾಗಾಗಿ ಬಡತನವಿದ್ದಾಗ ಹೇಗೋ ಶ್ರಾದ್ಧ ಪೂರೈಸಿದ್ಧ ಪಕ್ಷದಲ್ಲಿ ಶ್ರಾದ್ಧವನ್ನು ವಿಸ್ತಾರ ಮಾಡಬಾರದು ಎಂದು ಪೂವ೯ಕಾಲದಂತೇ ಎಂದೂ ಏನೂ ಮಾಡದೇ ಹೋದರೆ ದೇವರು ಕೊಟ್ಟಾಗ ಕೈ ಬಿಚ್ಚಿ ದಾನ ಮಾಡದೇ ಹೋದರೆ ಬ್ರಹ್ಮ ಶಾಪ,ಪಿತೃಶಾಪಕ್ಕೆ ಗುರಿಯಾಗಬೇಕಾದೀತು ಎಂಬ ಎಚ್ಚರಿಕೆ ನಮಗಿರಲಿ.
ಶ್ರಾದ್ಧದ ದಿನ ಬರುವ ಬ್ರಾಹ್ಮಣರಲ್ಲಿ ಪಿತೃ ಸನ್ನಿಧಾನ ವಿರುವುದಕ್ಕೆ ರಾಮಾಯಣದ ಘಟನೆಯೊಂದು ಸಾಕ್ಷಿಯಾಗಿದೆ.ಶ್ರೀರಾಮನು ವನವಾಸದಲ್ಲಿದ್ದಾಗ ತಂದೆಯ ಮೃತ ತಿಥಿಯ ದಿನ ಅವರ ಶ್ರಾದ್ಧದಲ್ಲಿ ತೊಡಗಿರುತ್ತಾನೆ.ಸೀತಾ ಮಾತೆಯೇ ಪಾಕವನ್ನು ಸಿದ್ಧಗೊಳಿಸುತ್ತಿರುತ್ತಾಳೆ. ಆಗ ಬ್ರಾಹ್ಮಣಾಥ೯ ಬರುತ್ತಿರುವ ಬ್ರಾಹ್ಮಣರನ್ನು ಕಂಡ ಸೀತೆ ನಾಚಿಕೆಯಿಂದ ಒಳಗೆ ಓಡಿ ಹೋಗುವಳು.ಶ್ರಾದ್ಧಾನಂತರ ರಾಮನು ಸೀತೆಯಲ್ಲಿ ಹಾಗೇಕೆ ಓಡಿದೆ ವಿಪ್ರೋತ್ತಮರ ಆಗಮನ ಕಾಲದೊಳು? ಎಂದಾಗ ಸೀತೆ
ಪಿತಾ ತವ ಮಯಾ ದೃಷ್ಟಃ ಬ್ರಾಹ್ಮಣಾಂಗೇಷು ರಾಘವ
ಅಂದರೆ ಬರುತ್ತಿರುವ ಬ್ರಾಹ್ಮಣರಲ್ಲಿ ನಿಮ್ಮ ತಂದೆ ಅಂದರೆ ನನ್ನ ಪೂಜ್ಯ ಮಾವನವರು ಕಂಡರು. ಅರಮನೆಯ ರಾಜ ಉಡುಗೆಗಳಿರದ ನಾರು ಮಡಿಯುಟ್ಟ ನನ್ನನ್ನು ನೋಡಿ ಅವರಿಗೆ ಏನನಿಸಬಹುದೋ ಎಂದು ಒಳಗೋಡಿದೆ. ಎಂದಳು. ಪಿತರೋ ವಿಪ್ರ ರೂಪೇಣ ಎನ್ನುತ್ತದೆ ಶಾಸ್ತ್ರ ಆದುದರಿಂದ ಬ್ರಾಹ್ಮಣರಲ್ಲಿ ಭಕ್ತಿ,ವಿತ್ತ ಶಾಟ್ಯ ಮಾಡದೇ ಶ್ರದ್ಧಾ ಭಕ್ತಿಯಿಂದ ಶ್ಯಾದ್ಧ ಮಾಡಬೇಕು.

No comments:
Post a Comment