ಊಟ ಮಾಡುವಾಗ ನಾವೇಕೆ ನೆಲದ ಮೇಲೆ ಕುಳಿತುಕೊಳ್ಳಬೇಕು.?
ಭೂಮಿಯ ಮೇಲೆ ಭೋಜನ
ಭಾರತದಲ್ಲಿ ನಾವು ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ನೆಲದ ಮೇಲೆ ಕೂತು ಊಟ ಮಾಡುವ ಜನರನ್ನು ಕಾಣುತ್ತೇವೆ.
ನಮ್ಮಲ್ಲಿ ಕೆಲವು ಜನ ಊಟ ಮಾಡಲೆಂದೆ ಡೈನಿಂಗ್ ಟೇಬಲ್,ಚೇರ್ ಮುಂತಾದವುಗಳನ್ನು ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ಟಿವಿ ಮುಂದೆಯೋ ಅಥವಾ ತಮ್ಮ ಹಾಸಿಗೆಯ ಮೇಲೋ ಕುಳಿತು ಊಟ ಮಾಡುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ.
ಬಹುಶಃ ಟಿವಿ ನೋಡುತ್ತಾ ಅಥವಾ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ನಿಮಗೆ ಆರಾಮದಾಯಕವಾಗಿರಬಹುದು
ಆದರೆ ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಉಪಯೋಗವಾಗುವುದಿಲ್ಲ.
ಇದಕ್ಕಾಗಿ ನಮ್ಮ ಪೂರ್ವಿಕರು ಒಂದು ಶಿಸ್ತನ್ನೆ ಅಳವಡಿಸಿದ್ದರು.
ಅವರೆಲ್ಲರು ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತು ಆಹಾರವನ್ನು ಸೇವಿಸುತ್ತಿದ್ದರು.
ಹೀಗೆ ಆಹಾರ ಸೇವಿಸಲು ಇರುವ 10 ಕಾರಣಗಳನ್ನು ನಾವಿಲ್ಲಿ ನೀಡಿದ್ದೇವೆ, ಇದನ್ನು ಅಳವಡಿಸಿಕೊಳ್ಳಿ ಇದರಿಂದ ನಿಮ್ಮ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳು ದೊರೆಯುತ್ತವೆ.
ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ:
ನೀವು ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಊಟ ಮಾಡುವುದರಿಂದ ನಿಮಗೆ ತಿಳಿಯದಂತೆ ಒಂದು ಉಪಯೋಗ ದೊರೆಯುತ್ತದೆ.
ಅದೇನೆಂದರೆ ಚಕ್ಕಳ ಮಕ್ಕಳವು ಒಂದು ಸುಖಾಸನ ಅಥವಾ ಅರ್ಧ ಪದ್ಮಾಸನ ಎಂದೇ ಹೆಸರುವಾಸಿಯಾಗಿದೆ.
ಈ ಸುಖಾಸನವು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ (ಇನ್ನೂ ಕೆಲವರ ಅಭಿಪ್ರಾಯದಂತೆ ನೀವು ಸುಖಾಸನದಲ್ಲಿ ಕುಳಿತ ಕೂಡಲೆ ನಿಮ್ಮ ಮೆದುಳಿಗೆ ಜೀರ್ಣ ಶಕ್ತಿಯನ್ನು ಪ್ರಚೋದಿಸುವಂತಹ ಸಂಕೇತಗಳು ತಲುಪುತ್ತವೆಯಂತೆ).
ಇದರ ಜೊತೆಗೆ ನೀವು ತಟ್ಟೆಯಲ್ಲಿ ಕುಳಿತು ಊಟ ಮಾಡುವಾಗ ಆಹಾರವನ್ನು ಸೇವಿಸಲು ಸ್ವಲ್ಪ ಮುಂದೆ ಬಾಗುತ್ತೀರಿ ಮತ್ತು ಅದನ್ನು ಅಗಿಯಲು ಹಿಂದಕ್ಕೆ ಬಾಗುತ್ತೀರಿ.
ಹೀಗೆ ನಿಯಮಿತವಾಗಿ ಹಿಂದೆ- ಮುಂದೆ ಬಾಗುವುದರಿಂದ ನಿಮ್ಮ ಕಿಬ್ಬೊಟ್ಟೆಯ ಭಾಗದ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಇದರಿಂದ ಹೊಟ್ಟೆಯಲ್ಲಿ ಆಮ್ಲಗಳು ಹೆಚ್ಚಾಗಿ ಸ್ರವಿಸಿ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ.
ತೂಕವನ್ನು ಇಳಿಸಿಕೊಳ್ಳಲು ಸಹಕಾರಿ:
ನೀವು ಸುಖಾಸನದಲ್ಲಿ ಕುಳಿತಾಗ ಮೆದುಳು ತನ್ನಷ್ಟಕ್ಕೆ ತಾನೆ ಶಾಂತಗೊಳ್ಳುತ್ತದೆ ಮತ್ತು ಆಹಾರವನ್ನು ಸೇವಿಸಲು ಅಗತ್ಯವಾಗಿರುವ ಮನಸ್ಥಿತಿಗೆ ಬಂದು ಅದರ ಮೇಲೆಯೇ ಗಮನ ಕೇಂದ್ರೀಕರಿಸುತ್ತದೆ.
ಇದಕ್ಕಿಂತ ಹೆಚ್ಚಾಗಿ ಈ ಆಸನವು ಒಮ್ಮನಿಸಿನಿಂದ ಆಹಾರವನ್ನು ಸೇವಿಸುವಂತೆ ಮಾಡಿ, ನಿಮಗೆ ಬೇಗ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.
ಇನ್ನೂ ಕುತೂಹಲದಾಯಕ ವಿಚಾರವೆಂದರೆ ಈ ಆಸನದಲ್ಲಿ ನೀವು ಕುಳಿತು ಊಟ ಮಾಡುವಾಗ, ಟೇಬಲ್ ಮೇಲೆ ಕುಳಿತು ಊಟ ಮಾಡುವುದಕ್ಕಿಂತ ಕಡಿಮೆ ಆಹಾರವನ್ನು ಸೇವಿಸುತ್ತೀರಿ.
ಹೀಗೆ ನೀವು ಕಡಿಮೆ ಆಹಾರವನ್ನು ಸೇವಿಸಲು ಮತ್ತು ಆಹಾರ ಸೇವನೆಯ ಕುರಿತಾಗಿ ಆಸಕ್ತಿ ತಾಳುವುದು ಕಡಿಮೆಯಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ನೆಲದ ಮೇಲೆ ಕುಳಿತು ಊಟ ಮಾಡುವುದು ನಿಮ್ಮ ದೇಹಕ್ಕೆ ಅತ್ಯಗತ್ಯವಾಗಿ ಒಳ್ಳೆಯದು.
ನಿಮ್ಮ ದೇಹಕ್ಕೆ ಮತ್ತಷ್ಟು ನಮ್ಯತೆಯನ್ನು ಒದಗಿಸುತ್ತದೆ:
ನೀವು ಚಕ್ಕಳ ಮಕ್ಕಳ ಅಥವಾ ಪದ್ಮಾಸನದಲ್ಲಿ ಕುಳಿತಾಗ ಕಿಬ್ಬೊಟ್ಟೆಯ ಮೇಲಿನ ಮತ್ತು ಕೆಳ ಭಾಗದಲ್ಲಿ, ಸೊಂಟ, ಹೊಟ್ಟೆಯ ಸುತ್ತ ಇರುವ ಪೆಲ್ವಿಸ್ ಭಾಗದಲ್ಲಿರುವ ಎಲ್ಲಾ ಸ್ನಾಯುಗಳು ಹಿಗ್ಗುತ್ತವೆ ಮತ್ತು ಇದರಿಂದ ನಿಮಗೆ ಮುಂದೆ ಬರುವ ನೋವು ಸಹ ಕಡಿಮೆಯಾಗುತ್ತದೆ.
ಇದರಿಂದ ನಿಮ್ಮ ಜೀರ್ಣಾಂಗ ವ್ಯೂಹವು ವಿಶ್ರಾಂತಿಯನ್ನು ಪಡೆದು ತನ್ನ ಸುಸ್ಥಿತಿಯನ್ನು ಕಾಪಾಡಿಕೊಳ್ಳುತ್ತದೆ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಈ ಆಸನವು ನಿಮ್ಮ ಹೊಟ್ಟೆಯನ್ನು ಯಾವುದೇ ಕಾರಣಕ್ಕು ಕುಗ್ಗಿಸುವುದಿಲ್ಲ. ಮೇಲಾಗಿ ಇದು ನೀವು ತಿಂದ ಆಹಾರವನ್ನು ಜೀರ್ಣ ಮಾಡಲು ಸಹಕರಿಸುತ್ತದೆ.
ಊಟ ಮಾಡುವಾಗ ಸ್ಥಿರ ಪ್ರಜ್ಞೆ ಯನ್ನು ಒದಗಿಸುತ್ತದೆ:
ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ನಿಮ್ಮ ಮನಸ್ಸು ತನ್ನ ಪ್ರಶಾಂತತೆಯನ್ನು ಕಾಪಾಡಿಕೊಂಡಿರುತ್ತದೆ.
ಇದರಿಂದ ನಿಮಗೆ ಆಹಾರದಲ್ಲಿ ಏನನ್ನು ತಿನ್ನಬೇಕು ಎಂಬ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆಗ ನೀವು ಸಹಜವಾಗಿ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸಲು ಆಧ್ಯತೆ ನೀಡುತ್ತೀರಿ.
ಅಲ್ಲದೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಕುರಿತಾಗಿ ಸಹ ನೀವು ಆಲೋಚಿಸಿ ಆಹಾರವನ್ನು ಸೇವಿಸುತ್ತೀರಿ. ಹೀಗೆ ನೆಲದ ಮೇಲೆ ಕುಳಿತು ಊಟ ಮಾಡುವಾಗ ನೀವು ಸ್ಥಿತ ಪ್ರಙ್ಞೆಯನ್ನು ಕಾಯ್ದುಕೊಳ್ಳುತ್ತೀರಿ.
ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯಲು ನೆರವಾಗುತ್ತದೆ:
ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ಮತ್ತೊಂದು ಉಪಯೋಗ ನಿಮಗೆ ದೊರೆಯುತ್ತದೆ.
ಅದೇನೆಂದರೆ ನಿಮ್ಮ ಕುಟುಂಬದ ಜೊತೆಗೆ ಕುಳಿತು ಊಟ ಮಾಡುವ ಸುಯೋಗ. ಹೌದು ಎಂತಹ ಬೆಲೆ ಬಾಳುವ ಊಟದ ಮೇಜನ್ನು ನಿಮ್ಮ ಮನೆಯಲ್ಲಿ ಹೊಂದಿದ್ದರು, ಅದರಲ್ಲಿ ಹತ್ತು ಜನ ಕುಳಿತು ಊಟ ಮಾಡಲು ಸ್ವಲ್ಪ ಇರಿಸು ಮುರಿಸು ಉಂಟಾಗುತ್ತದೆ.
ಆದರೆ ನೆಲದ ಮೇಲೆ ಕುಳಿತು ಊಟ ಮಾಡುವಾಗ ಈ ಸಮಸ್ಯೆಯು ನಿಮ್ಮನ್ನು ಕಾಡುವುದಿಲ್ಲ. ಜೊತೆಗೆ ನಿಮ್ಮ ಕುಟುಂಬ ಸದಸ್ಯರ ಸಮಸ್ಯೆಗಳನ್ನು ಮತ್ತು ಯೋಗ ಕ್ಷೇಮಗಳನ್ನು ವಿಚಾರಿಸಿಕೊಳ್ಳುವ ವೇದಿಕೆಯಾಗಿ ನಿಮ್ಮ ಊಟದ ಸಮಯ ಸದ್ವಿನಿಯೋಗವಾಗುತ್ತದೆ.
ಹೀಗೆ ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಹ ಈ ಪದ್ಧತಿ ನಿಮ್ಮ ನೆರವಿಗೆ ಬರುತ್ತದೆ.
ನಿಮ್ಮ ನಿಲುವನ್ನು ಸುಧಾರಿಸುತ್ತದೆ:
ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಿಮ್ಮ ನಿಲುವು ಸಹ ಸುಧಾರಿಸುತ್ತದೆ.
ನೆಲದ ಮೇಲೆ ಕುಳಿತು ಊಟ ಮಾಡುವಾಗ ನಿಮ್ಮ ಬೆನ್ನು ಮೂಳೆಯು ನೇರವಾಗಿರುತ್ತದೆ, ಜೊತೆಗೆ ಬೆನ್ನು ಮೂಳೆಯು ಉದ್ದವಾಗಲು ಸಹ ಸಹಾಯವಾಗುತ್ತದೆ ಮತ್ತು ನಿಮ್ಮ ಭುಜಗಳನ್ನು ಹಿಂದಕ್ಕೆ ಸರಿಸಲು ಸಹ ಇದು ನೆರವಾಗುತ್ತದೆ.
ಇದೆಲ್ಲದಕ್ಕಿಂತ ಮೇಲಾಗಿ ನಿಮ್ಮ ಕುಳಿತುಕೊಳ್ಳುವ ಭಂಗಿಯಿಂದ ಸಂಭವಿಸಬಹುದಾದ ಸಣ್ಣ ಪುಟ್ಟ ನೋವುಗಳು ಸಹ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಿವಾರಣೆಯಾಗುತ್ತವೆ.
ನಿಮ್ಮನ್ನು ದೀರ್ಘಾಯುಷ್ಯಿಯನ್ನಾಗಿಸುತ್ತದೆ
ಯೂರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯವರು ಪ್ರಕಟಿಸಿರುವ ಒಂದು ಅಧ್ಯಯನದ ಪ್ರಕಾರ ನೆಲದ ಮೇಲೆ ಕುಳಿತು ಊಟ ಮಾಡುವವರು ಅಂದರೆ, ಪದ್ಮಾಸನದಲ್ಲಿ ಕುಳಿತು ಊಟ ಮಾಡುವವರು, ಯಾವುದೇ ಸಹಾಯವಿಲ್ಲದೆ ಏಳಲು ಶಕ್ತರಾಗಿದ್ದಲ್ಲಿ ಅವರು ನಿಸ್ಸಂಶಯವಾಗಿ ದೀರ್ಘಾಯುಷ್ಯಿಗಳಾಗಿ ಬಾಳುತ್ತಾರಂತೆ.
ಇದಕ್ಕೆ ಕಾರಣ ಅವರ ದೇಹದ ನಮ್ಯತೆಯ ಗುಣ. ಈ ಅಧ್ಯಯನದ ಪ್ರಕಾರ ಯಾವುದೇ ಸಹಾಯವಿಲ್ಲದೆ ಕುಳಿತ ಭಂಗಿಯಿಂದ ಏಳುವವರು ಮುಂದಿನ ಆರು ವರ್ಷದಲ್ಲಿ ಸಾಯುವ ಸಾಧ್ಯತೆ 6.5 ಪಟ್ಟು ಕಡಿಮೆಯಿರುತ್ತದೆಯಂತೆ.
ನಿಮ್ಮ ಮೊಣಕಾಲುಗಳು ಮತ್ತು ಮೊಣಕೈಗಳ ಸಂಧಿಗಳಲ್ಲಿ ದ್ರವಗಳನ್ನು ಸ್ಫುರಿಸಿ ಅವುಗಳ ಆರೋಗ್ಯವನ್ನು ಸುಧಾರಿಸುತ್ತದೆ.
ಪದ್ಮಾಸನ ಅಥವಾ ಸುಖಾಸನವು ನಮ್ಮ ಇಡೀ ದೇಹಕ್ಕೆ ಆರೋಗ್ಯವನ್ನು ನೀಡುವಂತಹ ಆಸನಗಳಾಗಿರುತ್ತವೆ.
ಇವುಗಳಿಂದ ಕೇವಲ ನಿಮ್ಮ ಜೀರ್ಣ ಶಕ್ತಿಯು ಸುಧಾರಿಸುವುದರ ಜೊತೆಗೆ ನಿಮ್ಮ ದೇಹದ ಸ್ನಾಯುಗಳು ಮತ್ತು ಸಂಧಿಗಳನ್ನು ಆರೋಗ್ಯವನ್ನು ಸುಧಾರಿಸಿ, ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಇದರಿಂದ ಸಂಧಿವಾತ ಮತ್ತು ಒಸ್ಟಿಯೊಪೊರೊಸಿಸ್ನಂತಹ ಕಾಯಿಲೆಗಳು ಬರದಂತೆ ತಡೆಯಲು ಅನುಕೂಲವಾಗುತ್ತದೆ. ಇದು ಹೇಗೆ ಸಾಧ್ಯ ಎಂದು ನಿಮಗನಿಸಬಹುದು?
ನಿಯಮಿತವಾಗಿ ನಾವು ಕುಳಿತು ಏಳುವುದರಿಂದ ನಮ್ಮ ಕಾಲುಗಳಿಗೆ,ಸ್ನಾಯುಗಳಿಗೆ, ಮೊಣಕೈ ಮತ್ತು ಮೊಣಕಾಲುಗಳಿಗೆ ಅಗತ್ಯವಾದ ವ್ಯಾಯಾಮ ದೊರೆತು ಅವುಗಳಲ್ಲಿ ನಮ್ಯತೆ ಮೂಡುತ್ತದೆ. ಈ ನಮ್ಯತೆಯಿಂದ ಸಂಧಿಗಳಲ್ಲಿ ದ್ರವದ ಸರಾಗ ಚಲನೆ ಕಂಡು ಬರುತ್ತದೆ.
ಹೀಗೆ ಇದು ಕಾಯಿಲೆಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆಯಾಗುತ್ತದೆ. ಆಗಾಗಿ ನೆಲದ ಮೇಲೆ ಕುಳಿತು ಊಟ ಮಾಡಲು ಶುರು ಮಾಡಿ.
ಮನಸ್ಸನ್ನು ಪ್ರಶಾಂತಗೊಳಿಸುತ್ತದೆ ಮತ್ತು ಉದ್ವೇಗವನ್ನು ತಡೆಯುತ್ತದೆ:
ಆಯುರ್ವೇದದ ಪ್ರಕಾರ ಪ್ರಶಾಂತವಾದ ಮನಸ್ಥಿತಿಯಲ್ಲಿ ಊಟವನ್ನು ಸೇವಿಸುವುದರಿಂದ ಜೀರ್ಣಶಕ್ತಿಯು ಹೆಚ್ಚುತ್ತದೆಯಂತೆ.
ಜೊತೆಗೆ ಇದು ಊಟದ ಸವಿಯನ್ನು ಸಹ ಹೆಚ್ಚಿಸುವ ಗುಣವನ್ನು ಹೊಂದಿದೆಯಂತೆ. ಮತ್ತೇಕೆ ತಡ ಸುಲಭವಾಗಿ ಖರ್ಚಿಲ್ಲದೆ ದೊರೆಯುವ ಈ ಕೆಲಸವನ್ನು ಮೊದಲು ಮಾಡಿ.
ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಹೃದಯವನ್ನು ಸದೃಢಗೊಳಿಸುತ್ತದೆ:
ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ನಿಮ್ಮ ಹೃದಯದಿಂದ ರಕ್ತವು ಪಂಪ್ ಆಗಿ ಇಡೀ ದೇಹಕ್ಕೆ ಪ್ರಸಾರಗೊಳ್ಳಲು ನೆರವಾಗುತ್ತದೆ.
ಜೊತೆಗೆ ಜೀರ್ಣಾಂಗ ವ್ಯೂಹವು ಸಹ ತನ್ನ ಕಾರ್ಯವನ್ನು ಸರಾಗವಾಗಿ ಮಾಡಲು ಇದರಿಂದ ಅನುಕೂಲವಾಗುತ್ತದೆ. ಆದರೆ ಡೈನಿಂಗ್ ಟೇಬಲ್ ಮುಂದೆ ಕುಳಿತು ಊಟವನ್ನು ಸೇವಿಸುವಾಗ ನಿಮಗೆ ಈ ಪ್ರಯೋಜನ ದೊರೆಯುವುದಿಲ್ಲ.
ಕಾರಣ ಅಲ್ಲಿ ಕಾಲುಗಳು ನಿಮ್ಮ ಹೃದಯದಿಂದ ಕೆಳಭಾಗದಲ್ಲಿ ಇಳಿಜಾರಾಗಿ ನಿಂತಿರುತ್ತವೆ. ಆಗ ಹೃದಯದಲ್ಲಿ ಪರಿಚಲನೆಗೊಳ್ಳುವ ರಕ್ತದ ವೇಗಕ್ಕಿಂತ ಕಡಿಮೆ ವೇಗದಲ್ಲಿ ರಕ್ತವು ಕಾಲುಗಳಿಗೆ ಪ್ರಸಾರವಾಗುತ್ತಿರುತ್ತದೆ.
ಅದಕ್ಕಾಗಿ ನಮ್ಮ ದೈನಂದಿನ ಜಂಜಡಯುತವಾದ ಜೀವನದ ಒತ್ತಡವನ್ನು ಎದುರಿಸಲು ನಮ್ಮ ಹೃದಯ ಮತ್ತು ಸ್ನಾಯುಗಳು ಆರೋಗ್ಯಕರವಾಗಿರಬೇಕಾದುದು ಅತ್ಯಗತ್ಯ.
ಅದಕ್ಕಾಗಿ ನೆಲದ ಮೇಲೆ ಕುಳಿತು ಊಟ ಮಾಡುವುದನ್ನು ರೂಢಿಸಿಕೊಳ್ಳಿ.

No comments:
Post a Comment