Tuesday, January 07, 2020

HANUMAD VRATA (ಹನುಮದ್ವ್ರತದ_ಮಹತ್ವ)

ಹನುಮದ್ವ್ರತದ ಮಹತ್ವ
(ಮಾರ್ಗಶೀರ್ಷ ತ್ರಯೋದಶಿ)






ಧರ್ಮರಾಜನಿಗೆ ವೇದವ್ಯಾಸದೇವರು ಉಪದೇಶ ಮಾಡಿದ ವ್ರತವಿದು.
ದ್ರೌಪದೀದೇವಿಯು ಈ ವ್ರತವನ್ನು ಭಕ್ತ್ಯಾದರಗಳಿಂದ ಆಚರಿಸಿದಳು.
ಶ್ರೀಕೃಷ್ಣಪರಮಾತ್ಮನಿಂದ ಉಪದೇಶ ಪಡೆದ ದ್ರೌಪದಿಯು 
ಹನುಮದ್ವ್ರತವನ್ನು ಆಚರಿಸುತ್ತಿದ್ದಳು. ಹನುಮದ್ವ್ರತವನ್ನು 
ಆಚರಿಸಿ ಹನುಮಂತನ ದೋರವನ್ನು ಕೈಗೆ ಕಟ್ಟಿಕೊಂಡಿದ್ದಳು.                
ಅದನ್ನೊಮ್ಮೆ ಗಮನಿಸಿದ ಅರ್ಜುನನು ದ್ರೌಪದಿಯನ್ನು 
ಕುರಿತು ಯಾವ ದಾರವನ್ನು ಕಟ್ಟಿಕೊಂಡಿರುವೆ ಎಂದನು. 
ದ್ರೌಪದಿಯಾದರೂ ಸಕಲ ಸೌಭಾಗ್ಯಗಳನ್ನು ಕೊಡುವ 
ಹನುಮದ್ವ್ರತವನ್ನು ಮಾಡಿರುವೆನು. ವ್ರತದ ಪರಿಪೂರ್ಣ 
ಫಲಪ್ರಾಪ್ತಿಗಾಗಿ ಹದಿಮೂರು ಗಂಟುಗಳುಳ್ಳ ದೋರವನ್ನು ವ್ರತ ನಿಯಮದಂತೆ ಕಟ್ಟಿಕೊಂಡಿರುವೆನು ಎಂದಳು. 
ಈ ಮಾತನ್ನು ಕೇಳಿದ ಅರ್ಜುನನು ಕೋಪದಿಂದ ಹೀಗೆ ಹೇಳಿದನು "ನೀನು ಯಾವ ಕಪಿಯನ್ನು‌ ಪೂಜಿಸುತ್ತಿರುವೆಯೋ 
ಕಾಡಿನಲ್ಲಿ ಗೆಡ್ಡೆಗೆಣಸು ತಿಂದು ಬದುಕುವ, ಪರಾಧೀನವಾದ, ಚಂಚಲ ಬುದ್ಧಿಯುಳ್ಳ ಕಪಿಯನ್ನು ನನ್ನ ಧ್ವಜದಲ್ಲಿ ಬಂಧಿಸಿರುವೆನು. ಇಂತಹ ತಿರ್ಯಕ್ ಯೋನಿಯಲ್ಲಿ ಹುಟ್ಟಿರುವ ಕಪಿಯಿಂದ ನಮಗೆ ಏನಾಗಬೇಕು ? ಆ ದೋರವನ್ನು ಬಿಸಾಡು" ಎಂದನು.
ಧ್ವಜ ಏವ ನಿಬದ್ಧೋಽಯಮಯಿ ಶಾಖಾ ಮೃಗೋ ಮಯಾ | ಕಿಂ ದಾಸ್ಯತ್ಯಯಮಾಖ್ಯಾಹಿ ವಟುರ್ವನ್ಯಾಶನೋ ಮೃಗಃ*  ಭವಿಷ್ಯೋತ್ತರ ಪುರಾಣ
ಯಾವ ಹನುಮಂತನ ಸ್ಮರಣೆಯಿಂದ ಬುದ್ಧಿ, ಬಲ ಯಶಸ್ಸನ್ನು ಪಡೆಯಬಹುದೋ ಅಂತಹ ರಾಮಭಕ್ತನಾದ ಹನುಮಂತನ ಪ್ರತೀಕವಾದ ಹದಿಮೂರು ಗಂಟುಗಳುಳ್ಳ ದೋರವನ್ನು ಅಪಮಾನ ಮಾಡಿದ್ದರಿಂದ ಸಕಲ ಸಂಪತ್ತು ಶತ್ರುವಶವಾಗಿ ಹದಿಮೂರು ವರ್ಷಗಳ ಕಾಲ ವನವಾಸಾದಿಗಳನ್ನು ಮಾಡಬೇಕಾಯಿತು.
ತ್ರಯೋದಶಗ್ರಂಥಿಯುಕ್ತ ದೋರಸ್ಯೋಲ್ಲಂಘನೇನ ವೈ | ಭವದ್ಭಿರೀದೃಶಂ ಪ್ರಾಪ್ತಂ ವ್ಯಸನಂ ವಸನಂ ವನೇ* ||
ಈ ವಿಚಾರವನ್ನು ವೇದವ್ಯಾಸದೇವರಿಂದ ಕೇಳಿದ ಧರ್ಮರಾಜಾದಿಗಳು ದ್ರೌಪದಿಯನ್ನು ಈ ವಿಷಯವಾಗಿ ಕೇಳಿದಾಗ ಸತ್ಯವೆಂದು ತಿಳಿಸಿದಳು.
ಪೂರ್ವದಲ್ಲಿ ಹನುಮಂತನು ಇಂದ್ರದೇವರ ವಜ್ರಾಯುಧದ ಹೊಡೆತಕ್ಕೆ ಮೂರ್ಛೆ ಹೋದಂತೆ ನಟಿಸಿದರು. ಇಂದ್ರದೇವರ ವಜ್ರಾಯುಧದಿಂದ ಹನುವಿನ ಭಂಗದ ಪ್ರಸಕ್ತಿ ಇದ್ದರೂ ಭಂಗವಾಗದೇ ಪ್ರಶಸ್ತವಾದ ಹನುವುಳ್ಳವರಾದ್ದರಿಂದಲೇ ಹನುಮಾನ್ ಎನಿಸಿದನು.ಇಂದ್ರದೇವರು ವಜ್ರಾಯುಧದಿಂದ ತನ್ನ ಪುತ್ರನನ್ನು ಹೊಡೆದರೆಂದು ವಾಯುದೇವರು ಹನುಮಂತನನ್ನು ಎತ್ತಿಕೊಂಡು ಗುಹೆಯೊಳಗೆ ಪ್ರವೇಶಿಸಿದರು.
ಬ್ರಹ್ಮಾದಿದೇವತೆಗಳು ವಾಯುದೇವರನ್ನು ಸಂತೋಷಪಡಿಸಲೆಂದು ಪುತ್ರನಾದ ಹನುಮಂತನಿಗೆ ವರಗಳನ್ನು ನೀಡಿದರು. "ಹನುಮಂತನೇ, ನೀನು ಚಿರಂಜೀವಿಯಾಗು, ಪರಾಕ್ರಮಶಾಲಿಯಾಗಿ ರಾಮಕಾರ್ಯ ದುರಂಧರರಲ್ಲಿ ಅಗ್ರಗಣ್ಯನಾಗುವೆ. ಮಾರ್ಗಶಿರ ಮಾಸದ ತ್ರಯೋದಶಿಯಂದು ಯಾರು ನಿನ್ನ ವ್ರತವನ್ನು ಮಾಡುವರೋ ಅವರಿಗೆ ಸಮಸ್ತ ಕಾರ್ಯಗಳಲ್ಲಿ ಜಯವುಂಟಾಗುವುದು" ಎಂದು. ಹನುಮಂತದೇವನನ್ನು ತ್ರಯೋದಶಿಯಂದು ಜಯವೆಂಬ ಹೆಸರುಳ್ಳ ಅಭಿಜಿನ್ ಮುಹೂರ್ತದಲ್ಲಿ ಪೂಜಿಸುವವನು ವಿಶೇಷ ಫಲವನ್ನು ಹೊಂದುವನು.
ವ್ರತದ ಕ್ರಮ
ಹನುಮಂತದೇವನನ್ನು ಹದಿಮೂರು ಗ್ರಂಥಿಗಳುಳ್ಳ ದಾರದಲ್ಲಿ ಓಂ ನಮೋ ವಾಯುನಂದನಾಯ ಓಂ ಎಂದು ಆವಾಹಿಸಬೇಕು. ಹನುಮಂತನ ಅಂತರ್ಯಾಮಿಯಾದ ಶ್ರೀರಾಮಚಂದ್ರನನ್ನು ಷೋಡಶೋಪಚಾರಗಳಿಂದ ಅರ್ಚಿಸಿ ನಂತರ ನೈವೇದ್ಯಾದಿಗಳಿಂದ ಪೂಜಿಸಿ ವಾಯನದಾನವನ್ನು ಮಾಡಬೇಕು. ಗೋಧೂಮ(ಗೋಧಿ) ಧಾನ್ಯವನ್ನು ಗಂಟಿನ ಸಂಖ್ಯೆಯಷ್ಟು ಅಂದರೆ ಹದಿಮೂರು ಸೇರು ವಾಯನದಲ್ಲಿ ಕೊಡಬೇಕು.
ಹನುಮಂತನ ಈ ವ್ರತಾಚರಣೆಯಿಂದ ಸುಗ್ರೀವನು ತನ್ನ ಇಷ್ಟಾರ್ಥವನ್ನು ಪಡೆದನು. ವಿಭೀಷಣನು ಲಂಕಾಸಾಮ್ಯಾಜ್ಯಕ್ಕೆ ಅಧಿಪತಿಯಾದನು. ಈ ವ್ರತವನ್ನು ಹದಿಮೂರು ವರ್ಷಗಳ ಕಾಲ ಮಾಡಿ ನಂತರ ಉದ್ಯಾಪನೆಯನ್ನು ಮಾಡಬೇಕು. ಈ ವ್ರತವನ್ನು ಮಾರ್ಗಶಿರ ಮಾಸ ಶುಕ್ಲ ತ್ರಯೋದಶಿಯಂದು ರೋಹಿಣೀ ನಕ್ಷತ್ರವಿರುವಾಗ ಆಚರಿಸಬೇಕು. ಈ ವ್ರತಾಚರಣೆಯನ್ನು ಪೂರ್ವವಿದ್ಧವಾದ (ದ್ವಾದಶಿಯುಕ್ತ) ತ್ರಯೋದಶಿಯಲ್ಲಿ ಮಾಡುವುದು ಪ್ರಶಸ್ತವಲ್ಲ.
ಪಂಪಾ ಪೂಜೆ
ಹನುಮಂತದೇವರು ಋಷ್ಯಮೂಕಪರ್ವತದಲ್ಲಿ ವಾಸವಾಗಿದ್ದರು. ಋಷ್ಯಮೂಕ ಪರ್ವತದ ಸಾನು ಪ್ರದೇಶವಾದರೂ ಪಂಪಾಪತಿಯಾದ ವಿರೂಪಾಕ್ಷನು ವಾಸವಾಗಿರುವ ಜಾಗೃತ ಸ್ಥಳವಾಗಿದೆ. ಪಂಪಾದೇವಿಯು ತನ್ನ ನಾಮೋಚ್ಛಾರಣ ಮಾತ್ರದಿಂದಲೇ ಪಾಪಗಳನ್ನು ತಿರುವು ಮುರುವು ಮಾಡುವವಳು (ಪಂಪಾ - ಪಾಪಂ)‌. ಹನುಮನ ಪೂಜೆಯನ್ನು ಮಾಡುವ ಪೂಜಕನು ಮೊದಲು ಪಂಪಾಸ್ಮರಣೆಯಿಂದ ಪಾಪಗಳನ್ನು ದೂರೀಕರಿಸಿ ನಂತರ ಚಿತ್ತಶುದ್ಧನಾಗಿ ಹನುಮನ ಪೂಜೆಯನ್ನು ಮಾಡಲೆಂದೇ ಪಂಪಾದೇವಿಯ ಪೂಜೆಯನ್ನು ವಿಧಿಸಲಾಗಿದೆ. ಹೀಗೆ ಆವಾಹಿತಳಾದ ಪಂಪಾದೇವಿಯನ್ನು ಷೋಡಶೋಪಚಾರಗಳಿಂದ ಅರ್ಚಿಸಬೇಕು.
ಹನೂಮತ್ಪೂಜಾ :— ಆಚಮ್ಯ - ಪ್ರಾಣಾನಾಯಮ್ಯ - ಶುಭತಿಥೌ, ಶ್ರೀಮದ್ಹನುಮದಂತರ್ಗತ ಸೀತಾಪತಿ ಶ್ರೀರಾಮಚಂದ್ರ ಪ್ರೀತ್ಯರ್ಥಂ ಜ್ಞಾನಭಕ್ತಿವೈರಾಗ್ಯಾದಿ ಸಿದ್ಧ್ಯರ್ಥಂ ಹನುಮದ್ವ್ರತಾಂಗ ಹನುಮತ್ಪೂಜಾಂ ಕರಿಷ್ಯೇ |
ಈ ಮೇಲಿನಂತೆ ಸಂಕಲ್ಪಿಸಿ ಕುಂಕುಮದ ನೀರಿನಲ್ಲಿ ಒದ್ದೆ ಮಾಡಿದ ನೂತನ ವಸ್ತ್ರವನ್ನು ಪಂಪಾಕಲಶದ ಮೇಲೆ ಇಟ್ಟು ಅರಿಶಿನದಿಂದ ಹಳದಿಬಣ್ಣವಾಗಿಸಿದ ಹದಿಮೂರು ಗ್ರಂಥಿಗಳುಳ್ಳ ದೋರವನ್ನು ಇಡಬೇಕು. ಅನಂತರ ಆವಾಹನಾದಿ ಷೋಡಶ ಉಪಚಾರ ಪೂಜೆಯನ್ನು ಮಾಡಬೇಕು.
ಪೂಜಾಂಗ ಅರ್ಘ್ಯಪ್ರದಾನ
ನಮಸ್ತೇ ವಾಯುಪುತ್ರಾಯ ಧ್ವಂಸಿತಾಮರವೈರಿಣೇ |
ಸುಜನಾಂಬುಧಿ ಚಂದ್ರಾಯ ಭವಿಷ್ಯದ್ ಬ್ರಹ್ಮಣೇ ನಮಃ ||
ದೋರಬಂಧನ ಮಂತ್ರ -
ಹನೂಮಾನ್ ದೋರರೂಪೇಣ ಸಂಸ್ಥಿತೋ ಮಯಿ ಸರ್ವದಾ |
ಸರ್ವಾಪದ್ಭ್ಯೋ ರಕ್ಷ ರಕ್ಷ ಪ್ರಸೀದ ಕಪಿಪುಂಗವ ||
ಪ್ರಾರ್ಥನೆ :—
ಬಳಿತ್ಥಾದಿತ್ರಯೀವೇದ್ಯ ತ್ರಿರೂಪಾಯ ಮಹಾತ್ಮನೇ |
ಭಕ್ತಾಭೀಷ್ಟಪ್ರದಾಯಾಸ್ತು ನಮಸ್ತೇ ಭಾರತೀಪತೇ ||
ವಾಯನದಾನಂ :—
ಹನೂಮಾನ್ ಪ್ರತಿಗೃಹ್ಣಾತಿ ಹನುಮಾನ್ ವೈ ದದಾತಿ ಚ |
ಹನೂಮಾನ್ ತಾರಕೋಭಾಭ್ಯಾಂ ನತೋಸ್ಮಿ ತ್ವಾಂ ಹನೂಮತೇ ||
ಇದಂ ವಾಯನದಾನಂ ಸದಕ್ಷಿಣಾಕಂ ಸತಾಂಬೂಲಂ ಹನೂಮತಃ ಪ್ರೀತಿಂ ಕಾಮಯಮಾನಃ ತುಭ್ಯಮಹಂ ಸಂಪ್ರದದೇ
ಹನುಮದ್ವ್ರತ
ಮೋಕ್ಷಪ್ರದನಾದ ಶ್ರೀ ಮುಕುಂದ ರೂಪಿ ಶ್ರೀ ಹರಿಯಲ್ಲಿ ಮಾಡಿದ ಭಕ್ತಿಯೇ ಮುಕ್ತಿಗೆ ಕಾರಣ. ಶ್ರೀ ಮುಕುಂದನಲ್ಲಿ ಮಾಡುವ ಭಕ್ತಿಯಾದರೋ ವಿಶ್ವಗುರುಗಳೂ, ಜೀವೋತ್ತಮರೂ ಆದ ಶ್ರೀ ವಾಯುದೇವರಲ್ಲಿ ಮಾಡಿದ ಭಕ್ತಿಯಿಂದ ಉತ್ಪಾದಿತವಾಗಿರಬೇಕು. ಹರಿಭಕ್ತಿಗೆ ಗುರುಭಕ್ತಿಯಿಂದ ಜನ್ಯತ್ವವಾದರೋ...
ಗುರುದ್ವಾರಾ ಪ್ರಸಾದಕೃದಹಂ ।
ಯಸ್ಯ ದೇವೇಪರಾ ಭಕ್ತಿರ್ಯಥಾದೇವೇ ತಥಾ ಗುರೌ 
ಅಗಮ್ಯತ್ವಾದ್ಧರಿಸ್ತಸ್ಮಿನ್ನಾವಿಷ್ಟೋಮುಕ್ತಿದೋ ಭವೇತ್ ।
ಇತ್ಯಾದಿ ಪ್ರಮಾಣಗಳಿಂದ ಸಿದ್ಧವಾಗಿದೆ. 
ಶ್ರೀಮದಾಚಾರ್ಯರು ಬಲಿತ್ಥಾ ಸೂಕ್ತ* ದ ಅರ್ಥ ವಿವರಣೆಯಲ್ಲಿ...
" ಹನ ಶಬ್ದೋ ಜ್ಞಾನವಾಚೀ ಹನೂಮಾನ್ ಮತಿ ಶಬ್ದಿತಃ " ಯೆಂದು ಹೇಳಿದ್ದಾರೆ.
ತೈತ್ತಿರೀಯ* ದಲ್ಲಿ...
ನಮಸ್ತೇ ವಾಯೋ।
ತ್ವಮೇವ ಪ್ರತ್ಯಕ್ಷ೦ ಬ್ರಹ್ಮಾಸಿ ।।
ಮಹಾಭಾರತ ತಾತ್ಪರ್ಯ ನಿರ್ಣಯ ೨-೧೪೮ ದಲ್ಲಿ....
ವಾಯುರ್ಹಿ ಬ್ರಹ್ಮತಾಮೇತಿ ತಸ್ಮಾದ್ ಬ್ರಹ್ಮೈವ ಸ ಶ್ರುತಃ ।
ನ ಬ್ರಹ್ಮ ಸದೃಶಃ ಕಶ್ಚಿಚ್ಛಿವಾದಿಷು ಕಥಂಚನ ।।
ಎಂದು ತೈತ್ತೀರೇಯೋಪನಿಷತ್ತು ಶ್ರೀ ಮುಖ್ಯಪ್ರಾಣದೇವರನ್ನು ಅನುಭವಗೋಚರರಾದ ಶ್ರೀ ಬ್ರಹ್ಮದೇವರೆಂದೇ ಪರಾಮರ್ಶಿಸಿದೆ.
ಭಾವಿಸಮೀರ ವಾದಿರಾಜ ಕರುಣಿಸೋ ।।
ಪ್ರಮಾಣಗಳು
ಋಕ್ಸಂಹಿತಮ್* ವಚನದಂತೆ...
ವಾದಿರಾಜಾಭಿದಂ ರೂಪಂ ದಶಪ್ರಮತಿ ಸಂಜ್ಞಿತಮ್ ।।
ಬ್ರಹ್ಮ ವೈವಸ್ವತ ಪುರಾಣ
ವ್ಯಾಸ ಸೇವಾರತೋ ನಿತ್ಯಂ ವಾದಿರಾಜ ಋಜುರ್ಯತಿಃ ।।
ಮಹಾಭಾರತ ತಾತ್ಪರ್ಯ ನಿರ್ಣಯಃ
ಬ್ರಹ್ಮಯೋಗ್ಯ ಋಜವೋ ನಾಮ ದೇವಾಃ ಪೃತಗ್ಗಣಾಃ ।
ತೈರೇವಾಪ್ಯಂ ತತ್ಪದಂ ತು ನೈವಾನ್ಯೈಃ ಸಾಧನೈರಪಿ ।।
ಪದ್ಮ ಪುರಾಣ
ತತ್ಪೂರ್ವಮಸ್ಯ ವಂಶೇ ತು ಋಜುಸ್ಥೋಹಿ ಸುರೇಶ್ವರಃ ।
ವಾದಿರಾಜಯತಿರ್ಭೂತ್ವಾ ಚೈತದ್ವಿಸ್ತಾರಯಿಶ್ಯತಿ ।।
ಸ್ಕಂದ ಪುರಾಣ
ಸಹೋರೂಪಸ್ಯ ದೇವಸ್ಯ ಲಾತವ್ಯಸ್ಯ ಬಲಾತ್ಮಕಮ್ ।
ರೂಪತ್ರಯಾವತಾರಯ ನಿಹಿತಂ ಹರಿಣಾ ಸ್ವಯಮ್ ।।
ಅಂಡಾದ್ಬಹಿಃ ಸ್ಥಿತಂ ಮೂಲಂ ಸತ್ಯಲೋಕಸ್ಥಿತಂ ಮಹತ್ ।
ಗೃಹೀತ್ವಾ ರುಕ್ಮಿಣೀಪತ್ರಂ ಕೃಷ್ಣಾ೦ತಿಕಮುಪಾಗತಮ್ ।
ವಾದಿರಾಜಭಿದು ಚೇತಿ ಮೂಲಭೇದ ವಿವರ್ಜಿತಮ್ ।।
ವಾಮನ ಪುರಾಣ
ವಾಯುಸ್ಥಾನ ಸಮಾರೋಪ ಯೋಗ್ಯೋಯಂ ಯತಿ ರೂಪವಾನ್। ಆಕಲ್ಪಂ ಬ್ರಹ್ಮಣ ಕೃಷ್ಣಾ ಪ್ರಸಾದೈಕ ಭಾಜನಂ
ಕೃಷ್ಣಾರ್ಚಕೋ ಯತಿರ್ಭೂತ್ವಾ ವಾದಿರಾಜೋವದಿಷ್ಯತಿ ।।
ಪ್ರಾಣಪ್ರಭ = ಜೀವರ ಒಡೆಯ
ಪ್ರಾಣಸುತ = ಹನುಮ - ಭೀಮ - ಮಧ್ವರು
ಪ್ರಾಜ್ಞ = ಎಲ್ಲವನ್ನು ಬಲ್ಲವರು = ಸರ್ವಜ್ಞರು
ಪ್ರಾಣ = ಜೀವ / ವಾಯು
ಪ್ರಾಣ ಪಂಚಕ ರೂಪ = ಪ್ರಾಣ - ಅಪಾನ - ವ್ಯಾನ - ಉದಾನ - ಸಮಾನಗಳೆಂಬ ಐದು ರೂಪಗಳು
ಪ್ರಾಣ ವಾಯುಗಳು = ಪ್ರಾಣ - ಅಪಾನ - ವ್ಯಾನ - ಉದಾನ - ಸಮಾನ ವಾಯುಗಳು.. 
ಸರ್ವಜನಾಃ ಸುಖಿನೋ ಭವಂತು
बुद्धिर्बलं यशो धैर्यं निर्भयत्वमरोगता।
अजाड्यं वाक्पटुत्वं च हनूमत्स्मरणाद्भवेत् ।।
 
ಶ್ರೀಕೃಷ್ಣಾರ್ಪಣಮಸ್ತು

No comments:

Post a Comment