Monday, June 29, 2020

SHANTI KARMA as per age ಆಯುರ್ಮಾನ ಪರತ್ವೆ ಶಾಂತಿ ಕರ್ಮ

ವಯೋಮಾನಕ್ಕೆ ಅನುಸಾರವಾಗಿ 100 ವರ್ಷಗಳವರಗೆ ಆಚರಿಸಬೇಕಾಗುವ ಶಾಂತಿಗಳು


1) 50 ವರ್ಷಕ್ಕೆ ವೈಷ್ಣವೀಶಾಂತಿ
2) 55 ವರ್ಷಕ್ಕೆ ವಾರುಣೀಶಾಂತಿ
3) 60 ವರ್ಷಕ್ಕೆ ಉಗ್ರರತಿಶಾಂತಿ
4) 65 ವರ್ಷಕ್ಕೆ ಮಹಾಪಥಶಾಂತಿ
5) 70 ವರ್ಷಕ್ಕೆ ಭೀಮರತಿಶಾಂತಿ
6) 75 ವರ್ಷಕ್ಕೆ ಐಂಧ್ರಿಶಾಂತಿ
7) 78 -81 ವರ್ಷಕ್ಕೆ ವಿಜಯರಥಿಶಾಂತಿ
8) 82 -85 ವರ್ಷದ ಓಳಗೆ ಸಹಸ್ರಚಂದ್ರದರ್ಶನಶಾಂತಿ
9) 85 ವರ್ಷದ ಮೇಲೆ ರೌಧ್ರಿಶಾಂತಿ
10) 90 ವರ್ಷಕ್ಕೆ ಸೌರಿಶಾಂತಿ
11) 95 ವರ್ಷಕ್ಕೆ ಪರಿಶಿಷ್ಠಶಾಂತಿ
12) 100 ವರ್ಷಕ್ಕೆ ಶತಾಭಿಷೇಕಶಾಂತಿ

ಷಷ್ಟ್ಯಬ್ಧ ಅಥವಾ ಉಗ್ರರಥ ಶಾಂತಿ
ಮನುಷ್ಯನು ತನ್ನ ಜೀವನದ ಕಷ್ಟ-ಸುಖಗಳನ್ನು ಅನುಭವಿಸುತ್ತ ಸಕಾಲದಲ್ಲಿ ವಿವಾಹವಾಗಿ ಪತ್ನಿಯನ್ನೊಡಗೂಡಿ ಮಕ್ಕಳ ಆಗು ಹೋಗುಗಳನ್ನು ಪೂರೈಸುತ್ತ ತನ್ನ ಜೀವನದ ೬೦ನೇ ಸಂವತ್ಸರವನ್ನು ಪ್ರವೇಶಿಸಿದಾಗ ಜನ್ಮನಕ್ಷತ್ರದಲ್ಲಿ ಈ ಶಾಂತಿಯನ್ನು ಮಾಡಬೇಕು.
ಇದನ್ನು ಎಕೆ ಮಾಡಬೇಕು?
ಇದನ್ನು ಮುಂದಿನ ಜೀವನದಲ್ಲಿ ಬರುವಂತಹ ಅಪಮೃತ್ಯು, ದುಃಸ್ವಪ್ನ ದರ್ಶನ, ಗೃಹಪೀಡೆ, ವಿವಿಧ ರೋಗಬಾದೆ, ಛಾಯಾವಿಕೃತಿ. ಭೂತ-ಪ್ರೇತಾದಿ ಪೀಡಾರೂಪಕವಾದಂತಹ ನಾನಾವಿಧ ಅರಿಷ್ಟ ನಿವಾರಣೆಗಾಗಿ ಮಾಡುವಂತಹ ಶಾಂತಿಯನ್ನು ಉಗ್ರರಥ ಶಾಂತಿ ಎನ್ನುತ್ತೇವೆ.
ಈ ವಿಧಿಯಲ್ಲಿ ಗಣಪತಿ, ನವಗ್ರಹದೇವತೆಗಳನ್ನು, ಪೀಡಾಪರಿಹಾರಕನಾದ ಮೃತುಂಜಯನನ್ನು, ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು, ಮೃತ್ಯುವನ್ನೇ ಜಯಿಸಿದ ಮಾರ್ಕೆಂಡೆಯನನ್ನು, ಆಯುರ್ದೇವತೆ ನಕ್ಷತ್ರದೇವತೆಗಳನ್ನು ಆರಾಧಿಸಬೇಕು. ಜಪ, ಹೋಮ, ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನವನ್ನಾಚರಿಸಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ಈ ವಿಧಿಯಲ್ಲಿ ಉಗ್ರನೆಂಬ ಹೆಸರಿನ ಮೃತ್ಯುಂಜಯನು ಪ್ರಧಾನದೇವತೆಯಾದ್ದರಿಂದ ಉಗ್ರರಥ ಶಾಂತಿ ಎಂಬ ಹೆಸರು ಬಂತು.
ಈ ವಿಧಿಯ ಅಂತ್ಯದಲ್ಲಿ ಕಲಶ ತೀರ್ಥಸ್ನಾನ ಮತ್ತು ಮಂಗಳದೃವ್ಯ ದರ್ಶನ ಅಲ್ಲದೇ ಪುನಃ ಮಂಗಳ ಸೂತ್ರ ಕಟ್ಟುವುದು ಮುಖ್ಯವಾಗಿರುತ್ತದೆ.

೭೦ನೇ ವರ್ಷ ಪ್ರವೇಶದ ಭೀಮರಥ ಶಾಂತಿ
ಈ ಶಾಂತಿಯನ್ನು ಜನ್ಮಕಾಲ ಮೊದಲುಗೊಂಡು ೭೦ನೇ ವರ್ಷವನ್ನು ಪ್ರವೇಶಿಸಿದಾಗ ಜನ್ಮಮಾಸ, ಜನ್ಮ ನಕ್ಷತ್ರದಲ್ಲಿ ಸಕಲಪೀಡಾಪರಿಹಾರಕ್ಕಾಗಿ ಮಾಡಬೇಕು. ಈ ವಿಧಿಯನ್ನು ವರ್ತಮಾನದಲ್ಲಿ ದೇಹದಲ್ಲಿ ಅಡಕವಾಗಿರುವ ವಾತ, ಪಿತ್ತ, ಕಫಾದಿ ನಾನಾವಿಧಧ ರೋಗಪೀಡಾ ಪರಿಹಾರಕ್ಕಾಗಿ ಅಲ್ಲದೆ ಮುಂದೆ ಬರುವಂತಹ ನಾನಾವಿಧ ಘೋರ ವಿಪತ್ಯಾದಿ ಸರ್ವಾರಿಷ್ಟ ನಿವಾರಣೆಗಾಗಿ ಆಯುಷ್ಯ, ಆರೋಗ್ಯ, ಆನಂದ ಪ್ರಾಪ್ತಿಗಾಗಿ ಈ ಶಾಂತಿಯನ್ನು ವಿಧಿಯುಕ್ತವಾಗಿ ಆಚರಿಸಿಕೊಳ್ಳಬೇಕು. ಈ ಶಾಂತಿ ಕ್ರಮದಲ್ಲಿ ಭೀಮ ಎಂಬ ಮಹಾ ಮೃತ್ಯುಂಜಯನು ಪ್ರಧಾನ ದೇವತೆಯಾದ್ದರಿಂದ ಇದನ್ನು ಭೀಮರಥ ಶಾಂತಿ ಎನ್ನಲಾಗಿದೆ. ಈ ವಿಧಿಯಲ್ಲಿ ಭೀಮ ಮೃತ್ಯುಂಜಯ, ಬ್ರಹ್ಮ, ವಿಷ್ಣು, ಲೋಕಪಾಲ ದೇವತೆಗಳನ್ನು, ಸಪ್ತಮಿ ಚಿರಂಜೀವಿಗಳನ್ನು, ಗ್ರಹದೇವತೆಯನ್ನು, ಆಯುಷ್ಯ ನಕ್ಷತ್ರ ಆಯುರ್ದೇವತೆಯನ್ನು ವಿಶೇಷವಾಗಿ ಆರಾಧಿಸಿ ಜಪ, ಹೋಮ, ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನ ದಾನಾದಿಗಳನ್ನು ಮಾಡಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯಬೇಕು.

ಸಹಸ್ರಚಂದ್ರ ದರ್ಶನ ಅಥವಾ ಶತಾಭಿಷೇಕ
ಜನ್ಮ ಕಾಲ ಮೊದಲುಗೊಂಡು ಅಧಿಕಮಾಸಾದಿಗಳನ್ನು ಗಣನೆಗೆ ತೆಗೆದುಕೊಂಡು ೮೦ ವರ್ಷ ೮ ತಿಂಗಳು ಆದಾಗ ಮಾಡುವ ವಿಧಿಗೆ ಸಹಸ್ರಚಂದ್ರ ದರ್ಶನ ಎನ್ನುವರು. ಈ ವಿಧಿಯಲ್ಲಿ ಆದಿತ್ಯಾದಿ ನವಗ್ರಹ ದೇವತೆಗಳನ್ನು, ಆಯುರ್ದ್ಧಾ ಅಗ್ನಿಯನ್ನು, ಬ್ರಹ್ಮ, ಪ್ರಜಾಪತಿ, ಪರಮೇಷ್ಟಿ, ಚತುರ್ಮುಖ, ಹಿರಣ್ಯ ಗರ್ಭ, ಅಗ್ನಿ, ಸೋಮ ಯಜ್ಞ ಆದಿ ದೇವತೆಗಳನ್ನು ಆರಾಧಿಸಿ ಜಪ, ಹೋಮ,ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನ ದಾನಾದಿಗಳನ್ನಾಚರಿಸಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ಈ ಶಾಂತಿಯನ್ನು ವರ್ತಮಾನದಲ್ಲಿ ದೇಹ ಸ್ಥಿತ ಸಕಲ ಬಾಧೆ ನಿವಾರಣೆಗೊಳಿಸುವ ಪೂರ್ವಕ ಭವಿಷ್ಯತ್ತಿನಲ್ಲಿ ಬರುವ ರೋಗ ಪೀಡಾ, ಗ್ರಹ ಪೀಡೆ. ದೃಷ್ಟಿಮಾಂದ್ಯ, ಛಾಯಾವಿಕೃತಿ, ಭೂತ ಪ್ರೇತ ಪಿಶಾಚಾದಿ ಸಕಲ ಪೀಡೆ ನಿವಾರಣೆಗೋಸ್ಕರ ಅಕಾಲಬಾಧಾ ಪರಿಹಾರವಾಗಿ ಆಯುಷ್ಯ, ಆನಂದ, ಆರೋಗ್ಯ, ಸನ್ಮಂಗಲ, ಜ್ಞಾನ ವೈರಾಗ್ಯ ಪ್ರಾಪ್ತಿಗಾಗಿ ಈ ವಿಧಿಯನ್ನು ಆಚರಿಸುತ್ತಾರೆ.
(ಸಂಗ್ರಹಿತ )

No comments:

Post a Comment