ಯೋಗ -1
ನನ್ನ ಗೆಳೆಯನೊಬ್ಬನಿಗೆ 60 ದಾಟಿ 65 ಸಮೀಪಿಸಿದವು. ಏನು ಬದಲಾವಣೆಯಾಗ್ತಿದೆ ಎಂದು ನಾನವನಿಗೆ ಕೇಳಿದೆ. ಅದಕ್ಕವನು ಕೆಳಗಿನ ಸಾಲುಗಳನ್ನು ಕಳಿಸಿದ: ಹೌದು, ನಾನು ಬದಲಾಗುತ್ತಿದ್ದೇನೆ. *ನನ್ನ ತಂದೆ ತಾಯಿ ಗಳನ್ನು, ಒಡಹುಟ್ಟಿದವರನ್ನು, ಜೀವನಸಂಗಾತಿಯನ್ನು, ನನ್ನ ಮಕ್ಕಳನ್ನು, ನನ್ನ ಗೆಳೆಯರನ್ನು, ಪ್ರೀತಿಸಿದ ಮೇಲೆ, ಈಗ ನನ್ನನ್ನೇ ನಾನು ಪ್ರೀತಿಸಲು ಪ್ರಾರಂಭಿಸಿದ್ದೇನೆ. ನಾನು ಬದಲಾಗುತ್ತಿದ್ದೇನೆ. *ಈಗ ನಾನು ತರಕಾರಿ ಮತ್ತು ಹಣ್ಣು ಹಂಪಲು ಮಾರುವವರ ಜೊತೆ ಚೌಕಾಶಿ ಮಾಡುವುದನ್ನು ನಿಲ್ಲಿಸಿದ್ದೇನೆ. ಮಹಾ ಎಂದರೆ ಆ ಕೆಲವು ರೂಪಾಯಿಗಳು ನನ್ನ ಜೋಬಿಗೆ ತೂತು ಕೊರೆಯಲಾರವು, ಬದಲಾಗಿ, ಆಬಡಪಾಯಿಗೆ ತನ್ನ ಮಗಳ ಶಾಲಾ ಫೀಜು ಕೊಡಲು ಉಳಿತಾಯ ಮಾಡಲು ಸಹಾಯವಾದೀತು.
ಹೌದು, ನಾನು ಬದಲಾಗುತ್ತಿದ್ದೇನೆ. ಚಿಲ್ಲರೆ ಪಡೆಯಲು ಕಾಯದೆ, ಟ್ಯಾಕ್ಸಿ ಡ್ರೈವರ್ಗೆ ಹಣ ಕೊಡುವೆ. ಆ ಹೆಚ್ಚಿನ ಒಂದಿಷ್ಟು ಹಣ ಅವನ ಮುಖದಲ್ಲಿ ಮುಗುಳ್ನಗೆ ತರಿಸಬಹುದು. ಅದಲ್ಲದೆ ಜೀವನ ನಿಭಾಯಿಸಲು ಅವನು ನನಗಿಂತ ಹೆಚ್ಚಾಗಿ ಕಷ್ಟ ಪಡುತ್ತಿದ್ದಾನೆ.
ಹೌದು, ನಾನು ಬದಲಾಗುತ್ತಿದ್ದೇನೆ. ನನಗಿಂತ ಹಿರಿಯರು ಆ ಕಥೆಯನ್ನು ಈಗಾಗಲೇ ತುಂಬಾ ಸಲ ನನಗೆ ಹೇಳಿದ್ದಾರೆ ಎಂಬುದನ್ನು ಅವರಿಗೆ ಹೇಳುವುದನ್ನು ಬಿಟ್ಟು ಬಿಟ್ಟಿದ್ದೇನೆ. ಅಲ್ಲದೆ ಆ ಕಥೆ ಅವರಿಗೆ ನೆನಪಿನ ಬುತ್ತಿಯನ್ನು ಬಿಚ್ಚುತ್ತ ನಡೆದುಕೊಂಡು ಹೋಗಲು ಮತ್ತು ಭೂತಕಾಲದಿಂದ ಕಳಚಿಕೊಳ್ಳಲು ಸಹಾಯಮಾಡುತ್ತದೆ.
ಹೌದು, ನಾನು ಬದಲಾಗುತ್ತಿದ್ದೇನೆ. *ಅವರು ತಪ್ಪು ಮಾಡುತ್ತಿದ್ದಾರೆಂದು ಗೊತ್ತಿದ್ದರೂ, ಜನರನ್ನು ತಿದ್ದುವ ಕಾರ್ಯವನ್ನು ಮಾಡಬಾರದು ಎಂಬುದನ್ನು ಕಲಿತಿದ್ದೇನೆ. ಅದಲ್ಲದೆ ಪ್ರತಿಯೊಬ್ಬರನ್ನೂ ಪರಿಪೂರ್ಣರನ್ನಾಗಿ ಮಾಡುವ ಜವಾಬ್ದಾರಿ ನನ್ನ ಮೇಲಿಲ್ಲವಲ್ಲ. ಶಾಂತಿ-ನೆಮ್ಮದಿಯು ಪರಿಪೂರ್ಣತೆಗಿಂತ ಅಮೂಲ್ಯವಾದುದು.
ಹೌದು, ನಾನು ಬದಲಾಗುತ್ತಿದ್ದೇನೆ. ನಾನು ಉದಾರವಾಗಿ ಮತ್ತು ಧಾರಾಳವಾಗಿ ಸ್ತುತಿ, ಹೊಗಳಿಕೆಗಳ ಕೊಡುಗೆ ನೀಡುತ್ತೇನೆ. ಅದರಿಂದ "ಮೂಡ್" (ಮನೋಭಾವ) ವೃದ್ಧಿ- ಸ್ವೀಕರಿಸಿದವರಿಗೂ, ಕಳಿಸಿದ ನನಗೂ ಕೂಡಾ.
ಹೌದು, ನಾನು ಬದಲಾಗುತ್ತಿದ್ದೇನೆ. ನನ್ನ ಶರ್ಟಿನ ಸುಕ್ಕು, ಅಥವಾ ಕಲೆಗಳಿಗಾಗಿ ಚಿಂತಿಸದಿರುವುದನ್ನು ಕಲಿತಿದ್ದೇನೆ. ಅಷ್ಟಕ್ಕೂ, ತೋರಿಕೆಯ ಆಡಂಬರಕಿಂತಲೂ ವ್ಯಕ್ತಿತ್ವ ಮುಖ್ಯ ತಾನೇ
ಹೌದು, ನಾನು ಬದಲಾಗುತ್ತಿದ್ದೇನೆ. ಯಾರು ನನಗೆ ಮಹತ್ವ ಕೊಡುವುದಿಲ್ಲವೋ ಅಂಥವರಿಂದ ದೂರ ಸರಿಯುತ್ತೇನೆ. ಅಷ್ಟಕ್ಕೂ ಅವರಿಗೆ ನನ್ನ ಯೋಗ್ಯತೆ ಗೊತ್ತಿರಲಿಕ್ಕಿಲ್ಲ, ಆದರೆ ಅದು ನನಗೆ ಗೊತ್ತಿದೆ.
ಹೌದು, ನಾನು ಬದಲಾಗುತ್ತಿದ್ದೇನೆ. ಒಂದು ಸಂಬಂಧವನ್ನು ಮುರಿದುಕೊಳ್ಳುವುದಕ್ಕಿಂತ ನನ್ನ ಅಹಂಕಾರವನ್ನು ಬಿಡುವುದು ಒಳ್ಳೆಯದು ಎಂಬುದನ್ನು ನಾನು ಕಲಿತಿದ್ದೇನೆ. ಅಷ್ಟಕ್ಕೂ, ಸಂಬಂಧಗಳು ಒಂಟಿಯಾಗಿರಲು ಬಿಡುವುದಿಲ್ಲ, ಆದರೆ ಅಹಂಕಾರವು ಒಂಟಿಯಾಗಿ ಇರಿಸುವುದು
ಹೌದು, ನಾನು ಬದಲಾಗುತ್ತಿದ್ದೇನೆ. ಪ್ರತಿಯೊಂದು ದಿನವೂ ಜೀವನದ ಕೊನೆಯದಿನವೆಂದು ತಿಳಿದು ಇರುವುದನ್ನು ಕಲಿತಿದ್ದೇನೆ. ಅಷ್ಟಕ್ಕೂ ಅದುವೇ ಕೊನೆಯ ದಿನವಾಗಿರಲೂ ಬಹುದಲ್ಲವೇ
ಹೌದು, ನಾನು ಬದಲಾಗುತ್ತಿದ್ದೇನೆ. ಯಾವುದರಿಂದ ನನಗೆ ಸಂತೋಷವಾಗುವುದೋ, ಅದನ್ನು ಮಾಡುತ್ತಿರುವೆನು. ಅಷ್ಟಕ್ಕೂ, ನನ್ನ ಸಂತೋಷಕ್ಕೆ ನಾನೇ ತಾನೇ ಹೊಣೆಗಾರ, ಮತ್ತು ನನಗೆ ನಾನೇ ಬದ್ಧನು ನಾನು ಇದನ್ನು ನಿಮಗೆ ಕಳುಹಿಸಲು ನಿರ್ಧರಿಸಿದ್ದೇನೆ ಯಾಕೆಂದರೆ, ನಾವೆಲ್ಲರೂ ಉಳಿದವರನ್ನು ಹೆಚ್ಚಿನ ಕರುಣೆ, ಸಹಾನುಭೂತಿಯಿಂದ ನೋಡಲು ಮತ್ತು ನಿರ್ಣಾಯಕರಾಗಿರುವುದನ್ನು ಬಿಟ್ಟು ಇರಲು ಕಲಿಯಬಹುದು.
ಮತ್ತು ಇಂದಿನಿಂದ ನಾವು, ಅಂದ್ರೆ, ವಿಶೇಷವಾಗಿ ವೃದ್ಧರು, ಮನೆಯಲ್ಲಿಯೇ ಕುಳಿತು ಸಮಯ ಕಳೆಯಲು, ತನ್ಮೂಲಕ, ಆರೋಗ್ಯ ಕಾಪಾಡಿಕೊಳ್ಳಲು, ಸರಳವಾದ ಹಲವು ವಿಧಾನಗಳನ್ನು ನಿಮ್ಮೆಲ್ಲರೊಂದಿಗೆ, ಹಂತಹಂತವಾಗಿ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ಅಂತರ ರಾಷ್ಟ್ರೀಯ ಯೋಗದಿನವಾದ ಇಂದು ನಾವು ನಮ್ಮ ದಿನವಹಿ ಕಾರ್ಯಗಳಲ್ಲಿ ಯೋಗವನ್ನು ಸೇರಿಸಿಕೊಂಡು ಮುಂದುವರಿಯೋಣ.
ಈ ಮೊದಲು ನಾನು ಯೋಗವನ್ನು ಮಾಡಿಯೇ ಇಲ್ಲ ಅನ್ನುವವರಿಂದಲೇ ಶುರುವಾಗಲಿ.
ಅಂತಾರಾಷ್ಟ್ರೀಯ ಖ್ಯಾತಿಯ ಯೋಗಗುರು, ಕನ್ನಡಿಗ ದಿವಂಗತ ಶ್ರೀ ಬಿ.ಕೆ.ಎಸ್. ಅಯ್ಯಂಗಾರ್ ಅವರು ಬೋಧಿಸಿದ ಪ್ರಕಾರ, ವಯೋವೃದ್ಧರಾದ ನಾವು ಯೋಗ ಪ್ರಾರಂಭಿಸೋಣ.
ಅಷ್ಟಕ್ಕೂ, ಯೋಗವೆಂದರೆ, ಬರೀ ಆಸನಗಳಲ್ಲ, ಆಸನಗಳು ಕೂಡ ಯೋಗಾಭ್ಯಾಸದ ಒಂದು ಭಾಗಮಾತ್ರ ಅನ್ನೋದನ್ನ ಮೊದಲು ತಿಳಿಯೋಣ.
ಅಷ್ಟ ಅಂದ್ರೆ ಎಂಟು ಭಾಗಗಳನ್ನು ಸೇರಿಸಿರೋದು ಯೋಗ
ಅದರಲ್ಲಿ ಮೊದಲ ಎರಡು ಭಾಗಗಳಾದ 1) "ಯಮ" 2)"ನಿಯಮ"ಗಳನ್ನು ಈ ಭೂಮಿಯ ಮೇಲಿನ ಸಮಸ್ತರೂ ಒಂದಿಲ್ಲೊಂದು ರೀತಿಯಲ್ಲಿ ಆಚರಿಸುತ್ತಾರೆ
ಅರ್ಥಾತ್, ಯಮ ಎಂದರೆ,
ಸಹಬಾಳುವೆಯ ನೈತಿಕ ನಿಯಮಗಳಾದ,
ಅ) ಅಹಿಂಸೆ,
ಬ) ಸತ್ಯ,
ಕ) ಆಸ್ತೇಯ ಅಂದರೆ, ಕದಿಯದಿರುವುದು,
ಡ) ಬ್ರಹ್ಮಚರ್ಯ ಅಂದರೆ ಮದುವೆ ಆಗದೆ ಇರುವುದು ಅಂತ ಬಹಳ ಜನ ಅಂದ್ಕೋತಾರೆ, ಆದರೆ ಅದರರ್ಥ, ವೈಯಕ್ತಿಕ ನಡತೆಯಲ್ಲಿ ಶುಚಿತ್ವದಿಂದಿರುವುದು ಅಷ್ಟೇ ಮತ್ತು
ಇ) ಅಪರಿಗ್ರಹ ಅಂದರೆ, ಅನಗತ್ಯ ವಸ್ತುಗಳ ಸಂಗ್ರಹ ಮಾಡದಿರುವುದು.
ಇನ್ನು, ನಿಯಮ ಅಂದರೆ, ಆತ್ಮಶುದ್ಧಿಯ ಸೂತ್ರಗಳು
ಅ) ಶೌಚ (ಆಂತರಿಕ ಮತ್ತು ಬಾಹ್ಯ ಶುದ್ಧತೆ)
ಬ) ಸಂತೋಷ, ತೃಪ್ತಿ
ಕ) ತಪಃ, ತಪಸ್ಸು - ದೃಢಸಂಕಲ್ಪ ಮತ್ತು ಸಂಯಮದಿಂದ ನಿನ್ನ ಗುರಿ ತಲುಪುವುದು.
ಡ) ಸ್ವಾಧ್ಯಾಯ, ಸದ್ವಿಚಾರ ಸದ್ಭಾವನೆ ಬೆಳೆಸಿಕೊಳ್ಳುವುದು
ಇ) ಈಶ್ವರ ಪ್ರಣಿಧಾನ, ಎಲ್ಲ ಆಗುಹೋಗುಗಳನ್ನ ಭಗವಂತನಿಗೆ ಅರ್ಪಿಸುವದು.
ಈಗ, ವಯಸ್ಕರು ಸರಳವಾಗಿ ಮಾಡಬಹುದಾದ ಪ್ರಾಣಾಯಾಮದ ಬಗ್ಗೆ ತಿಳಿದು ಮಾಡೋಣ.
ಅಂಗಾತ ಮಲಗಿಕೊಳ್ಳಿ, ಫ್ರೀಯಾಗಿ, ಕೈಕಾಲು ಸಡಿಲಿಸಿ ತಲೆಯ ಬುಡದಲ್ಲಿ ಒಂದು ಅಥವಾ ಎರಡು ಇಂಚು ಎತ್ತರದ ಕಟ್ಟಿಗೆಯ ಮಣೆಯನ್ನು ತಲೆದಿಂಬಾಗಿ ಇಟ್ಟುಕೊಳ್ಳಿ, (ಮೆತ್ತನೆಯ ದಿಂಬು ಅಲ್ಲಾಡಬಹುದು, ಬೇಡ) ಈಗ ನಿಧಾನವಾಗಿ ದೀರ್ಘವಾಗಿ ಉಸಿರಾಟ ಮಾಡಬೇಕು, ಅಷ್ಟೇ.
ಇದು ಸಾಮಾನ್ಯ ಪ್ರಾಣಾಯಾಮ. ಆದರೆ ಇದನ್ನು ಮಾಡುವಾಗ ಪಾಲಿಸಬೇಕಾದ ಹಲವು ನಿಯಮಗಳಿವೆ, ಮೊದಲನೆಯದಾಗಿ, ನಿಮ್ಮ ಗಮನ ಉಸಿರಾಟದ ಮೇಲಿರಬೇಕು.
ಎರಡನೆಯದಾಗಿ, ಉಸಿರಾಡುವಾಗ ಎದೆ ಉಬ್ಬಿಸಬೇಕು, ಹೊಟ್ಟೆಯನ್ನಲ್ಲ.
ಈ ರೀತಿಯಾಗಿ ಮುಂಜಾನೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು, ಅಂದರೆ, ಊಟದ ನಂತರ ಕನಿಷ್ಟ ನಾಲ್ಕು ಗಂಟೆಗಳ ನಂತರ ಮಾಡಬೇಕು.
ಬ) ಸಂತೋಷ, ತೃಪ್ತಿ
ಕ) ತಪಃ, ತಪಸ್ಸು - ದೃಢಸಂಕಲ್ಪ ಮತ್ತು ಸಂಯಮದಿಂದ ನಿನ್ನ ಗುರಿ ತಲುಪುವುದು.
ಡ) ಸ್ವಾಧ್ಯಾಯ, ಸದ್ವಿಚಾರ ಸದ್ಭಾವನೆ ಬೆಳೆಸಿಕೊಳ್ಳುವುದು
ಇ) ಈಶ್ವರ ಪ್ರಣಿಧಾನ, ಎಲ್ಲ ಆಗುಹೋಗುಗಳನ್ನ ಭಗವಂತನಿಗೆ ಅರ್ಪಿಸುವದು.
ಈಗ, ವಯಸ್ಕರು ಸರಳವಾಗಿ ಮಾಡಬಹುದಾದ ಪ್ರಾಣಾಯಾಮದ ಬಗ್ಗೆ ತಿಳಿದು ಮಾಡೋಣ.
ಅಂಗಾತ ಮಲಗಿಕೊಳ್ಳಿ, ಫ್ರೀಯಾಗಿ, ಕೈಕಾಲು ಸಡಿಲಿಸಿ ತಲೆಯ ಬುಡದಲ್ಲಿ ಒಂದು ಅಥವಾ ಎರಡು ಇಂಚು ಎತ್ತರದ ಕಟ್ಟಿಗೆಯ ಮಣೆಯನ್ನು ತಲೆದಿಂಬಾಗಿ ಇಟ್ಟುಕೊಳ್ಳಿ, (ಮೆತ್ತನೆಯ ದಿಂಬು ಅಲ್ಲಾಡಬಹುದು, ಬೇಡ) ಈಗ ನಿಧಾನವಾಗಿ ದೀರ್ಘವಾಗಿ ಉಸಿರಾಟ ಮಾಡಬೇಕು, ಅಷ್ಟೇ.
ಇದು ಸಾಮಾನ್ಯ ಪ್ರಾಣಾಯಾಮ. ಆದರೆ ಇದನ್ನು ಮಾಡುವಾಗ ಪಾಲಿಸಬೇಕಾದ ಹಲವು ನಿಯಮಗಳಿವೆ, ಮೊದಲನೆಯದಾಗಿ, ನಿಮ್ಮ ಗಮನ ಉಸಿರಾಟದ ಮೇಲಿರಬೇಕು.
ಎರಡನೆಯದಾಗಿ, ಉಸಿರಾಡುವಾಗ ಎದೆ ಉಬ್ಬಿಸಬೇಕು, ಹೊಟ್ಟೆಯನ್ನಲ್ಲ.
ಈ ರೀತಿಯಾಗಿ ಮುಂಜಾನೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು, ಅಂದರೆ, ಊಟದ ನಂತರ ಕನಿಷ್ಟ ನಾಲ್ಕು ಗಂಟೆಗಳ ನಂತರ ಮಾಡಬೇಕು.
ಕೂತುಕೊಂಡು ಮಾಡಲು ಸಾಧ್ಯ ಇದ್ದವರು ಯಾವುದೇ ಅನುಕೂಲ ಆಸನದಲ್ಲಿ ಕುಳಿತು, ಮಾಡಬೇಕು. ಆಗ, ಬೆನ್ನು ನೇರವಾಗಿರಬೇಕು, ಉಳಿದಂತೆ ಮೇಲಿನ ನಿಯಮಳು ಅನ್ವಯವಾಗುತ್ತವೆ.
|| ಆರೋಗ್ಯವೇ ಭಾಗ್ಯ ||
No comments:
Post a Comment