ಮುದ್ರಾ ಚಿಕಿತ್ಸಾ ವಿಜ್ಞಾನ:
ಸಂ
|
ಹೆಸರು ಮತ್ತು ವಿಧಾನ
|
ಪ್ರಯೋಜನೆಗಳು ಮತ್ತು ವಿವರಣೆ
|
ಆಕೃತಿ
|
|
1
|
ಧ್ಯಾನ ಮುದ್ರೆ
(ಜ್ಞಾನ / ಚಿನ್ಮುದ್ರೆ): ತೋರು ಬೆರಳ ತುದಿಯನ್ನು ಒತ್ತಡವಿಲ್ಲದೆ ಹೆಬ್ಬೆರಳ ತುದಿಗೆ
ತಾಕಿಸುವುದು. ತುಂಬಾ ಮಹತ್ವದ ಮುದ್ರೆ, ಮುದ್ರೆಗಳ ರಾಜ ಎನ್ನು ತ್ತಾರೆ. ಇದ -ನ್ನು ಎಲ್ಲಿ ಬೇಕಾದರೂ, ಯಾವ ಆಸನದಲ್ಲಿ ಕುಳಿತಾದರೂ,
ಎಷ್ಟು ಹೊತ್ತು ಬೇಕಾದರೂ ಮಾಡಬಹುದು. ಪಯಣಿಸುವಾಗ, ಕೆಲಸ ಮಾಡುವಾಗ, ಓಡಾಡುವಾಗ, ಕುಳಿತು, ಮಲಗಿ,
ಯಾವುದೇ ಅವಸ್ಥೆಯಲ್ಲಿ ಮಾಡಬಹುದು. ಆದರೆ, ಕಣ್ಣು
ಮುಚ್ಚಿಕೊಂಡು ಸರಳ ಪ್ರಾಣಾಯಾಮ ದೊಂದಿಗೆ ಪದ್ಮಾಸನ ಅಥವ
|
ಮೆದುಳಿನ
ಶಕ್ತಿ, ಏಕಾಗ್ರತೆ, ಜ್ಞಾಪಕ ಶಕ್ತಿಗಳ ವೃದ್ಧಿ, ನಿದ್ರಾಹೀನತೆ, ಕೋಪತಾಪ, ಒತ್ತಡ, ಸರ್ವಪ್ರಕಾರದ ಮಾನಸಿಕ
ಖಿನ್ನತೆಗಳು ನಿವಾರಣೆ, ನೆಮ್ಮದಿ, ಮನಸ್ಸು ಶಾಂತ, ಧ್ಯಾನಕ್ಕೆ ಅತ್ಯುತ್ತಮ / ಅತ್ಯವಶ್ಯಕ ಸಾಧನ.
ಐದು ವರ್ಷ ದಾಟಿದ ಎಲ್ಲಾ ಮಕ್ಕಳಿಗೆ ಇದು ವರದಾನವೇ. ಮಕ್ಕಳ ಮಾನಸಿಕ, ಬೌದ್ಧಿಕ, ಸರ್ವತೋಮುಖ ಅಭಿವೃದ್ಧಿ
ಶತಸಿದ್ಧ.
| ||
2
|
ಪ್ರಾಣಮುದ್ರೆ: ಎರಡೂ ಕೈಗಳ
ಕಿರುಬೆರಳು ಮತ್ತು ಉಂಗುರ (ಅನಾಮಿಕಾ) ಬೆರಳುಗಳ ತುದಿಗಳನ್ನು ಒತ್ತಡವಿಲ್ಲದೆ ಹಬ್ಬೆರಳ ತುದಿಗೆ
ತಾಕಿಸಿಕೊಂಡಿರುವುದು. ಉಳಿದ ಬೆರಳುಗಳು ನೇರವಾಗಿ ಚಾಚಿಕೊಂಡಿರಲಿ. ಅಂಗೈ ಆಕಾಶ ನೋಡುತ್ತಿರಲಿ.
ಇದು ಕೂಡ ಮುಖ್ಯವಾದ ಮುದ್ರೆಯೆ. ದೇಹದ ರಕ್ತಪರಿಚಲನೆಯನ್ನು ತೀವ್ರಗೊಳಿಸಿ, ರಕ್ತನಾಳದ ಅಡೆತಡೆಗಳನ್ನು
ನಿವಾರಿಸುತ್ತದೆ. ಇದನ್ನು ಕೂಡ ಯಾವುದೇ ಸಮಯದಲ್ಲಿ (ಸಂಜೆಗೆ ಬೇಡ – ಇದು ತುಂಬ ತನ್ಯದಾಯಕವಾದ್ದರಿಂದ
ನಿದ್ರೆಗೆ ತೊಂದರೆ ಆಗಬಹುದು) ಯಾವುದೇ ಆಸನದಲ್ಲಿ,ಕೂತು, ನಿಂತು, ಅಡ್ಡಾಡುತ್ತ, ಮಲಗಿದಾಗ, ಓಡಾಡು-
|
ಓಡಾಡುವಾಗ, ಎಷ್ಟೊತ್ತು ಬೇಕಾದರೂ ಮಾಡಬಹುದು. ಮಾಡಿದಷ್ಟೂ ಲಾಭ.ಸುಪ್ತ
ಪ್ರಾಣಶಕ್ತಿಯ ಹೆಚ್ಚಳ, ನರದೌರ್ಬಲ್ಯ, ಆಯಾಸ (Fatigue) ಪರಿಹಾರ, ರೋಗನಿರೋಧಕ ಶಕ್ತಿ ಹೆಚ್ಚಳ,
ಕಣ್ಣಿನ ಶಕ್ತಿ ಹೆಚ್ಚಿಸಿ ಕನ್ನಡಕ ದೂರ, ಧ್ಯಾನಮುದ್ರೆಯೊಂದಿಗೆ ಮಾಡಿದರೆ ಅನಿದ್ರೆಯಲ್ಲಿ ಪ್ರಯೋಜನ.
ಇದರ ಅಭ್ಯಾಸದಿಂದ ದೈಹಿಕ ಮತ್ತು ಮಾನಸಿಕವಾಗಿ ದುರ್ಬಲನಾದ ವ್ಯಕ್ತಿಯು ಸಬಲನಾಗು ತ್ತಾನೆ. ವೀರ್ಯವೃದ್ಧಿಯಾಗಿ
ಸಮರ್ಥನಾಗುತ್ತಾನೆ. A, B, C, D, E ಇತ್ಯಾದಿಯಾಗಿ ಜೀವಸತ್ವಗಳ ಕೊರತೆ ನೀಗುತ್ತದೆ. (ವೀರ್ಯಕ್ಷೀಣತೆಯೆ
ದುರ್ಬಲತೆಗೆ, ಶೀಘ್ರ ರೋಗ ರುಜಿನ ಗಳಿಗೆ ಕಾರಣೀಭೂತವಾಗಿದೆ. ಚಿಕಿತ್ಸೆಯ ಯಾವುದೇ ಮುದ್ರೆಯನ್ನು
ಮಾಡಿದ ತಕ್ಷಣಕ್ಕೆ ಕನಿಷ್ಟ 10 ನಿಮಿಷಗಳಾ ದರೂ ಇದನ್ನು ಮಾಡಬೇಕು. ತುಂಬಾ ಪ್ರಯೋಜನಕಾರಿ.
|
ಇದರ ಸತತ ಅಭ್ಯಾಸದಿಂದ ಬಹಳ ಸಮಯದವರೆಗೆ ಆಹಾರ ನೀರಿಲ್ಲದೆ ಹಸಿವು ಬಾಯಾರಿಕೆಗಳಿಂದಲೂ ಮುಕ್ತರಾಗಿರಬಹುದು. |
|
3
|
ಆಕಾಶ ಮುದ್ರೆ: ಮಧ್ಯದ ಬೆರಳ ತುದಿಯನ್ನು ಹೆಬ್ಬೆರಳಿನ
ತುದಿಗೆ ತಾಕಿಸುವುದು. ಉಳಿದ ಬೆರಳುಗಳು ನೇರವಾಗಿರುವುದು. (ಎಚ್ಚರಿಕೆ: ಈ ಮುದ್ರೆಯನ್ನು ಅವಶ್ಯಕತೆ
ಯಿದ್ದಾಗ ಮಾತ್ರ, ಅಂದ್ರೆ, ತೊಂದರೆ ನಿವಾರಣೆ ಆಗುವವರೆಗೆ ಮಾತ್ರ ಮಾಡಬೇಕು ಕನಿಷ್ಟ 25 ನಿಮಿಷಗಳು) ಮಧ್ಯದ ಬೆರಳು ಹೃದಯಕ್ಕೆ
ಸಂಬಂಧಿಸಿದ್ದು, ಆ ಕಾರಣಕ್ಕಾಗಿ ಇದು ಹೃದಯದ ಸಮರ್ಥ ಕಾರ್ಯ ನಿರ್ವಹಣೆಗೂ ಸಹಾಯಕ. (ಜಪ ಮಾಡುವಾಗ
ಮಧ್ಯದ ಬೆರಳಿನ ಮೇಲೆ
|
ಮಣಿಗಳ
ಒತ್ತಡ ಬಿದ್ದು, ಮುದ್ರೆಯ ಪರಿಣಾಮ ಉಂಟಾಗಿ,
ಹೃದಯ ಬಲಗೊಳ್ಳುತ್ತದೆ) ಈ ಮುದ್ರೆಯಿಂದ ಮೂಳೆಗಳು ಬಲಗೊಳ್ಳುವವು ಮತ್ತು ಮೂಳೆ ಮಜ್ಜೆ (bone
marrow) ಯಿಂದಲೇ ರಕ್ತದ ಉತ್ಪತ್ತಿ ಆಗುವುದ ರಿಂದ
ಆರೋಗ್ಯ ಬಲಗೊಳ್ಳುತ್ತದೆ. ಆಕಾಶ ತತ್ವದ ಕೊರತೆಯಿಂದ ನಮ್ಮ ದೇಹದ ಎಲುಬುಗಳು ಸತ್ವಹೀನವಾಗುತ್ತವೆ ಮತ್ತು ಧ್ವನಿ ತರಂಗಗಳು ಪ್ರತಿಫಲಿಸಲಾರವು. ಅದರಿಂದಾಗಿ ಕಿವಿಯ ಸಮಸ್ಯೆಗಳು – ಕಿವಿ ನೋವು,
ಕಿವಿ ಸೋರುವುದು, ಕಿವುಡುತನ ಉಂಟಾಗುತ್ತವೆ.
ಈ ಮುದ್ರೆಯಿಂದ ಆಕಾಶ ತತ್ವ ಹೆಚ್ಚುತ್ತದೆ. ತನ್ಮೂಲಕ ಈ ಎಲ್ಲ ದೋಷ ನಿವಾರಣೆಯಾಗುತ್ತವೆ.
|
||
4
|
ಖೇಚರಿ ಮುದ್ರೆ: ಇದು ಬಹಳ ಮುಖ್ಯವಾದ ಮುದ್ರೆ. ಇಲ್ಲಿ
ನಮ್ಮ ನಾಲಿಗೆಯ ತುದಿಯನ್ನು ಮೇಲಕ್ಕೆ ಮಡಿಸಿ ಅಂಗಳಕ್ಕೆ (ಗಂಟಲಿನ ಕಡೆಗೆ) ತಾಕಿಸಿಕೊಂಡರೆ ‘ಖೇಚರಿ
ಮುದ್ರೆ’ ಆಗುತ್ತದೆ. ಇದನ್ನು ದಿನಾಲು 15 ನಿಮಿಷ ಅಭ್ಯಾಸ ಮಾಡಬೇಕು. ಇದರಿಂದ ಬಿಂದುಚಕ್ರದ ಬಳಿ
ಇರುವ ಅಮೃತ ಗ್ರಂಥಿ ಉದ್ದೀಪನವಾಗಿ, ಅಮೃತದಂತಹ ಸಿಹಿಯಾದ ರಸವು ಸ್ರವಿಸಿ, ಸಾಧಕನಿಗೆ ಅಮೃತರಸಪಾನದ
ಅನುಭವ ಉಂಟಾಗುತ್ತದೆ ಮತ್ತು ಹಸಿವು, ಬಾಯಾರಿಕೆ, ರೋಗರುಜಿನ ದೂರವಾಗಿ ದೀರ್ಘಾಯುವಾಗಿ ಬಾಳುತ್ತಾರೆಂದು
ಪ್ರತೀತಿ.
|
|||
5
|
ಪೃಥ್ವಿ ಮುದ್ರೆ: ಅನಾಮಿಕಾ/ಉಂಗುರ ಬೆರಳಿನ ತುದಿಯನ್ನು
ಹೆಬ್ಬೆರಳಿನ ತುದಿಗೆ ಒತ್ತಡವಿಲ್ಲದೆ ತಾಕಿಸುವುದು. ಉಳಿದ ಬೆರಳುಗಳು ನೇರವಾಗಿರಲಿ. ಇದನ್ನು ಯಾವುದೇ
ಅನುಕೂಲಕರ ಆಸನದಲ್ಲಿ ಕುಳಿತು ಎಲ್ಲಿ ಬೇಕಾದರೂ, ಎಷ್ಟೊತ್ತು ಬೇಕಾದರೂ ಅಭ್ಯಸಿಸಬಹುದು. ಅವಶ್ಯ
ಕತೆಗೆ ತಕ್ಕಂತೆ ಕನಿಷ್ಟ 40 ನಿಮಿಷ ಆಚರಿಸಬಹುದು. [ಯೋಗವಿಧಾನದಲ್ಲಿ ತಿಳಿಸಿದಂತೆ, ನಮ್ಮ ಭ್ರೂಮಧ್ಯದಲ್ಲಿ
ಎರಡು ದಳ ಕಮಲದ ಆಜ್ಞಾ ಚಕ್ರ ಅಥವ ಪ್ರಜ್ಞಾ ಚಕ್ರವಿದೆ. ನಾವು ಅನಾಮಿಕಾ
|
ಇಲ್ಲವೆ
ಹೆಬ್ಬೆರಳಿನಿಂದ ಯಾರ ಹಣೆಯ ಭ್ರೂಮಧ್ಯವನ್ನು ಸ್ಪರ್ಶಿಸಿ ಕುಂಕುಮ/ ಗಂಧ ಇರಿಸಿದರೆ, ಅವರಲ್ಲಿರುವ
ಅದೃಶ್ಯ ಚೈತನ್ಯ ಪ್ರಜ್ವಲಿತವಾಗುತ್ತದೆ] ಮನೋದೈಹಿಕ ದೌರ್ಬಲ್ಯಗಳನ್ನು ದೂರಗೊಳಿಸಿ, ಲವಲವಿಕೆ,
ದೃಢತೆ (weight gain) ತೇಜಸ್ಸು ಮತ್ತು ಮಾನಸಿಕ ಶಾಂತಿ ನೀಡುತ್ತದೆ. ಅಭ್ಯಾಸಿಯ ಸಂಕುಚಿತ ಬುದ್ಧಿ
ದೂರವಾಗಿ ನ್ಯಾಯ, ನೀತಿ, ಉದಾರತೆ, ಸೇವಾಭಾವನೆ ಬೆಳೆಯು ತ್ತವೆ. A, B, C, D,
E ಇತ್ಯಾದಿಯಾಗಿ ಜೀವಸತ್ವಗಳ ಕೊರತೆಯನ್ನು, ಎಲುವಿನ ಸಮಸ್ಯೆ, ಉರಿತದ ಅನುಭ -ವ (burning sensation) ಗಾಯ,ಹುಣ್ಣು, ಇತ್ಯಾದಿಗಳ
ಬೇಗ ಮಾಯುವಿಕೆ, ಜೀವಕೋಶಗಳ ಪುನರುಜ್ಜೀವನ (Re-generation), ಪೋಲಿಯೊ, ದೃಷ್ಟಿದೋಷಗಳ
|
ಸರಿಪಡಿಸುವಿಕೆ ಆಗುತ್ತವೆ.
|
|
6
|
ವರುಣ ಮುದ್ರೆ (ಭುದಿ ಮುದ್ರೆ) : ಕಿರುಬೆರ ಳಿನ ತುದಿಯನ್ನು ಹೆಬ್ಬೆರಳಿ ತುದಿಗೆ ತಾಕಿಸುವುದು.
ಈ ಮುದ್ರೆಯನ್ನು ಅವಶ್ಯ ವಿದ್ದಾಗ, ಕನಿಷ್ಟ
20 ನಿಮಿಷ ಮಾತ್ರ ಮಾಡಬೇಕು. ಸಮಸ್ಯೆ ನಿವಾರಣೆ ಆಗುತ್ತ ಲೂ ಅಭ್ಯಾಸ ನಿಲ್ಲಿಸಬೇಕು. (ಕಫ ಪ್ರಕೃ
ತಿಯವರಿಗೆ ಇದು ನಿಷಿದ್ಧ) ಈ ಮುದ್ರೆಯ ಅಭ್ಯಾಸದಿಂದ ದೇಹದ ಶುಷ್ಕತ್ವಚೆ ನಿವಾ ರಣೆಯಾಗುತ್ತದೆ. ರಕ್ತಶುದ್ಧಿ, ಚರ್ಮರೋಗ ವಾಸಿ, ಚರ್ಮದ
ಸೋರಿಯಾಸಿಸ್
|
ಗ್ಯಾಸ್ಟ್ರಿಕ್,
ಉಷ್ಣತೆ, ಮತ್ತು ನಿರ್ಜಲೀಕರಣ ತೊಂದರೆ ದೂರ. ಚರ್ಮದಲ್ಲಿ ತುರಿಕೆಯಾದರೆ ಈ ಮುದ್ರೆಯಿಂದ ತುರಿಕೆ
ನಿಲ್ಲುತ್ತದೆ. ಚರ್ಮದ ಕಾಂತಿ ಹೆಚ್ಚುತ್ತದೆ. ಮಲಬದ್ಧತೆ ವಾಸಿ, ಸ್ನಾಯುಸೆಳೆತ (cramps) ಗಳಿಂದ
ಉಂಟಾಗುವ ನೋವು ನಿವಾರಣೆ. ರಕ್ತಶುದ್ಧಿ ಮತ್ತು ರಕ್ತಸಂಚಾರ ಸುಗಮ, ಅಯೋಡಿನ್ ಮತ್ತು ಪೊಟ್ಯಾಸಿಯಮ್ ಕೊರತೆ ದೂರ, ಕಣ್ಣಿನ ಉರಿ, ಒಣಕೆಮ್ಮು ತಕ್ಷಣ ನಿವಾರಣೆ, ಮೂರ್ಛಿತ ವ್ಯಕ್ತಿಯ ಹೆಬ್ಬೆರಳು
ಮತ್ತು ಕಿರುಬೆರಳು ಸೇರಿಸಿ ಉಜ್ಜಿದರೆ ತಕ್ಷಣ ಪ್ರಜ್ಞೆ ಬರುತ್ತದೆ. ಬಿಸಿಲಿನಲ್ಲಿ ಈ ಮುದ್ರೆಯಿಂದ
ಬಾಯಾರಿಕೆ
|
ಮತ್ತು ಆಯಾಸ ನೀಗುತ್ತದೆ. ಶುಷ್ಕತ್ವಚೆ ನಿವಾರಣೆ |
|
7
|
ವಾಯು ಮುದ್ರೆ: ತೋರುಬೆರಳ ತುದಿಯನ್ನು ಹೆಬ್ಬೆರಳ
ಬುಡದಲ್ಲಿರಿಸಿ ಹೆಬ್ಬೆರಳಿನಿಂದ ಹಗುರವಾಗಿ ಒತ್ತಡ ನೀಡಿ. ಉಳಿದ ಮೂರೂ ಬೆರಳು ನೇರವಾಗಿರಲಿ. ದೇಹದಲ್ಲಿನ
ಎಲ್ಲ ಪಂಚ ಪ್ರಾಣವಾಯುಗಳ ಮತ್ತು ಉಪಪ್ರಾಣ ವಾಯುಗಳ ಚಟುವಟಿಕೆಗಳನ್ನು ಈ ಮುದ್ರೆ ನಿಯಂತ್ರಿಸುತ್ತದೆ.ದೇಹದ
ಹೆಚ್ಚಿನ ವಾಯುವನ್ನು ಹೊರಹಾಕುತ್ತದೆ. ಮನದ ಏಕಾಗ್ರತೆ ಕೂಡ ಸಾಧನೆ ಆಗುತ್ತದೆ.
|
ವಾಯು
(ವಾತ = ಗ್ಯಾಸ್) ಸಂಬಂಧೀ ದೋಷಗಳು, ಅರ್ತ್ರಿಟಿಸ್,ರುಮ್ಯಾಟಿಜಮ್,ಸರ್ವಿಕಲ್ ಸ್ಪಾಂಡಿಲಸಿಸ್ ಕುತ್ತಿಗೆ-ಬೆನ್ನುನೋವುಗಳು,
ಕೆಳಬೆನ್ನುನೋವು, ಮಂಡಿ ನೋವು, ಎಲ್ಲ ಪ್ರಕಾರದ ಪಕ್ಷಾಘಾತಗಳು, ಸ್ನಾಯು ಸೆಳೆತ, ಪಾರ್ಕಿನ್ಸನ್
ರೋಗ ಮತ್ತು ರಕ್ತಪರಿಚಲನೆಯ ಸಮಸ್ಯೆಗಳಿಗೆ ಇದು ಉತ್ತಮ ಫಲಿತಾಂಶ ನೀಡುತ್ತದೆ. ದಿನಂಪ್ರತಿ 40-45
ನಿಮಿಷ ಗಳ ಸತತ ಅಭ್ಯಾಸ ಮಾಡುವುದರಿಂದ ಈ ಸಮಸ್ಯೆ ಗಳು ಖಂಡಿತ ವಾಸಿ ಯಾಗುತ್ತವೆ. ವಿ.ಸೂ: ಈ ಮುದ್ರೆ ಯನ್ನು ದೇಹದ ತೊಂದರೆಗಳು ವಾಸಿಯಾಗುವವರೆಗೆ
ಮಾತ್ರ
|
ಅಭ್ಯಸಿಸಬೇಕು. ನಂತರ ನಿಲ್ಲಿಸಬೇಕು. |
|
8
|
ಸಂಧಿ ಮುದ್ರೆ: ಇದು ಬಲಗೈಯಿಂದ ಪೃಥ್ವಿ
ಮುದ್ರೆ ಮತ್ತು ಎಡಗೈಯಿಂದ ಆಕಾಶ ಮುದ್ರೆಗಳ
ಸಂಯುಕ್ತ ಕ್ರಿಯೆಯಾಗಿದ್ದು, ಸಂಧಿವಾತದ ಕಾರಣಕ್ಕಾಗಿ ಬರುವ ಮಂಡಿನೋವು, ಕೀಲುನೋವು, ಬೆನ್ನು ನೋವು,
ಕಂಪ್ಯೂಟರದಲ್ಲಿ ಸತತ ಕೆಲಸಮಾಡಿದಾಗಿನ ಸಮಸ್ಯೆಗಳು ಇತ್ಯಾದಿಗಳಿಗೆ ರಾಮಬಾಣವಾಗಿದೆ. ಈ ಎರಡೂ ಮುದ್ರೆಗಳನ್ನು ಒಂದೆ ಹೊತ್ತಿಗೆ ಮಾಡಿದಾಗ, ಸಂಧಿಗಳಲ್ಲಿ
ಸ್ನಾಯುಗಳ ಕಾರ್ಯವನ್ನು ಬಲಗೊಳಿಸಿ ಶಕ್ತಿ ಹೆಚ್ಚಿಸುತ್ತದೆ. 15 ನಿಮಿಷ ಕಾಲ ಮಾಡಿ, ತಕ್ಷಣ 10
ನಿಮಿಷದ ಪ್ರಾಣಮುದ್ರೆ ಮಾಡಬೇಕು. ಜೊತೆಯಲ್ಲಿ ದೀರ್ಘ ಸ್ವಾಸೋಛ್ವಾಸದೊಂದಿಗೆ ಪ್ರಾಣಾಯಾಮ ಅತ್ಯಂತ
ಫಲಪ್ರದ. ತುಂಬಾ ದಿನಗಳ ಸಂಧಿವಾತದ ತೊಂದರೆಗೆ ಪ್ರಾರಂಭದಲ್ಲಿ ದಿನಂಪ್ರತಿ ಎರಡು ಹೊತ್ತು ಅಭ್ಯಾಸ
ಮಾಡಿದರೆ ಶೀಘ್ರ ಪರಿಣಾಮಕಾರಿ.
|
|||
9
|
ಶೂನ್ಯ ಮುದ್ರೆ: ಮಧ್ಯದ ಬೆರಳ ತುದಿ ಯನ್ನು ಹೆಬ್ಬೆರಳ
ಬುಡದಲ್ಲಿರಿಸಿ ಹೆಬ್ಬೆರಳಿ ನಿಂದ ಹಗುರವಾಗಿ ಒತ್ತಡನೀಡಿ. ಉಳಿದ ಬೆರಳು ನೇರವಾಗಿರಲಿ. ಇದನ್ನುಮಾಡಿದ
ತಕ್ಷಣಕ್ಕೆ ಪ್ರಾಣಮುದ್ರೆ ಕಡ್ಡಾಯವಿಲ್ಲ. ಕಿವಿಯ
ಸಮಸ್ಯೆಗಳು: ಕಿವಿನೋವು (ಶಬ್ದ ಕೇಳಿಸುವುದು) ಕಿವುಡುತನ, ತಲೆತಿರುಗು
|
ವಿಕೆ
(vertigo -ಚಕ್ರಬರುವುದು) ಇತ್ಯಾದಿಗಳಿಗೆ ಉತ್ತಮ ಹಲ್ಲುನೋವು, ವಸಡುಗಳು ಗಟ್ಟಿ, ಹೃದಯರೋಗ, ಮೂಳೆಗಳ ದೌರ್ಬಲ್ಯ,
ಕ್ಯಾಲ್ಸಿಯಮ್ ನ್ಯೂನತೆ ಸರಿ ಪಡಿಸುತ್ತದೆ. ಗಂಟಲು ರೋಗ-ಥಯ್ರಾಯಿಡ್ ಗಳಿಗೆ ಪ್ರಯೋಜನಕಾರಿ. ದೀರ್ಘಕಾಲಿಕ ಸಮಸ್ಯೆಗಳಿಗೆ
40-60 ನಿಮಿಷಗಳ ಅಭ್ಯಾಸ ಅವಶ್ಯ. ಆದರೆ ಜನ್ಮತಃ ಕಿವುಡರಿದ್ದವರಿಗೆ ಪ್ರಯೋಜನವಿಲ್ಲ.
|
||
10
|
ಸೂರ್ಯ ಮುದ್ರೆ: ಉಂಗುರ ಬೆರಳು ತುದಿಯನ್ನು ಹೆಬ್ಬೆರಳಿನ
ಬುಡದಲ್ಲಿರಿಸಿ ಹೆಬ್ಬೆರಳಿನಿಂದ ಹಗುರವಾಗಿ ಒತ್ತಡ ನೀಡಿ. ಯಾವುದೇ ಅನುಕೂಲಕರ ಆಸನದಲ್ಲಿ ಕುಳಿತು
ಎರಡೂ ಹೊತ್ತು 15-20 ನಿಮಿಷ ಮಾಡಬಹುದು. ಇದನ್ನು ಬೇಸಿಗೆಯಲ್ಲಿ ಜಾಸ್ತಿ ಮಾಡಕೂಡದು. ದೇಹದ ಉಷ್ಣತೆ
ಯಲ್ಲಿ ಹೆಚ್ಚಳ, ಉದ್ವೇಗ (anxiety), ಅಸ್ತಮಾ, ಅಲರ್ಜಿ, ಆಲಸ್ಯ,
|
ಶೀತ,
ಸೈನಸ್, ಕ್ಷಯ, ನ್ಯುಮೋನಿಯಾ ವಾಸಿ. ಮಾನ -ಸಿಕ ಒತ್ತಡ ಕಡಿಮೆ, ಮಲಬದ್ಧತೆ ದೂರ, ಜೀರ್ಣಕ್ರಿಯೆ
ಉತ್ತಮ, ಅತಿಯಾದ ಕೊಬ್ಬು ಕರಗುತ್ತದೆ (weight loss). ಬೆವರು ಬರಿಸುತ್ತದೆ. ಮಧುಮೇಹ, ಥೈರಾಯ್ಡ್,
ಕಡಿಮೆ ರಕ್ತದೊತ್ತಡ-ಲೋ ಬಿಪಿ, ಯಕೃತ್-ಲಿವರ್ ದೋಷಗಳು, ಒತ್ತಡ ಶಮನ, ರಕ್ತದಲ್ಲಿ ಅನಪೇಕ್ಷಿತವಾದ
ಕೊಲೆಸ್ಟಿರಾಲ್ ನಿವಾರಣೆ, (ವಿ.ಸೂ: ತೀರಾ
ದುರ್ಬಲರು ಒಂದೆರಡು ನಿಮಿಷ ಮಾಡಿನೋಡಿ ಬದಲಾವಣೆಗಳನ್ನು ಗಮನಿಸಿ ಸಾಧ್ಯ
|
ಎನ್ನಿಸಿದರೆ ಮಾತ್ರ ಮಾಡಿ. ಇಲ್ಲದಿದ್ದರೆ ಕೂಡದು) |
|
11
|
ಜಲೋದಂಶಕ (ಜಲೋದರ ನಾಶಕ) ಮುದ್ರೆ:
ಕಿರು ಬೆರಳ ತುದಿಯನ್ನು ಹೆಬ್ಬೆ -ರಳ ಮೂಲಕ್ಕಿಟ್ಟು, ಹೆಬ್ಬೆರಳಿನಿಂದ ಕಿರು ಬೆರಳನ್ನು
ಮೃದುವಾಗಿ ಒತ್ತಿಹಿಡಿಯೋದು ಇದನ್ನು ತೊಂದರೆ ನಿವಾರಣೆಯಾಗುವ -ವರೆಗೆ ಮಾತ್ರ, ಪ್ರತಿ ದಿನ 15 ರಿಂದ ಗರಿಷ್ಟ 25 ನಿಮಿಷ
ಮಾತ್ರ ಮಾಡ
|
ಬಹುದು.
ನಮ್ಮ ದೇಹದಲ್ಲಿ ಸುಮಾರು 70% ನೀರಿನ ಪ್ರಮಾಣ ಇರುತ್ತದೆ.
ಅದು ಹೆಚ್ಚಿದಲ್ಲಿ ಹಲವು ತೊಂದರೆ -ಗಳು ಆಗುತ್ತವೆ. ಈ ಮುದ್ರೆ ಅವನ್ನು ನಿವಾರಿಸುತ್ತದೆ. ಅಂದ್ರೆ,
ನೀರಿನ ಪ್ರಮಾಣವನ್ನು ನಿಯಂತ್ರಿಸುತ್ತದೆ. ನೀರು ತುಂಬಿದ ದೇಹದ ಕೊಬ್ಬು ಇಳಿದು ವ್ಯಕ್ತಿ ತೆಳ್ಳಗಾಗುತ್ತಾನೆ.
ಗಂಟಲುನೋವು, ಅತಿಮೂತ್ರ ದೋಷ, ಅತಿಶೀತಗಳನ್ನು ದೂರಗೊಳಿಸುತ್ತದೆ.
|
||
12
|
ಅಪಾನ ಮುದ್ರೆ: ನಡುಬೆರಳು ಮತ್ತು ಉಂಗುರ ಬೆರಳುಗಳ
ತುದಿಗಳನ್ನು ಹೆಬ್ಬೆ -ರಳ ತುದಿಗೆ ತಾಕಿಸಿ, ಉಳಿದ
ಬೆರಳು ನೇರವಾಗಿರಲಿ. ಅಗ್ನಿ,ಆಕಾಶ ಮತ್ತು ಭೂ ತತ್ವಗಳು ಸಂಲಗ್ನವಾಗಿ ಹೊಟ್ಟೆಯ ಸಮಸ್ತ ಅಂಗಾಂಗಗಳನ್ನು
ಸಕ್ರಿಯ ಗೊಳಿಸುತ್ತವೆ. ಈ ಮುದ್ರೆ ಹೃದಯದ ದೃಷ್ಟಿಯಿಂದ ಮುಖ್ಯವಾಗಿದ್ದು ಇಡೀ ದೇಹದ ನಿರ್ಮಲೀಕರಣಕ್ಕೆ
ಸಹಾಯ ಮಾಡುತ್ತದೆ. (ಮಲ, ಮೂತ್ರ, ಬೆವರು ಗಳನ್ನು ಬಹು ಸುಲಭವಾಗಿ ಶುದ್ಧಿಮಾಡು ತ್ತದೆ) ಸಾಧನೆ
ಮಾಡುವಾಗ ಪ್ರಾಣ ಮುದ್ರೆ ಮತ್ತು ಅಪಾನಮುದ್ರೆಗಳನ್ನು ಸರಿಸಮ ಪರಿವೆಯಿಂದ ಮಾಡುವುದೇ ಒಂದು ಯೋಗವು.
ಇದು ವಿಷವಸ್ತು-
|
-(toxins)
ಗಳನ್ನು ಹೊರಹಾಕುತ್ತದೆ. ಹೊಟ್ಟೆಗೆ ತುಂಬ ಉಪಯೋಗಿ, ಹೃದಯರೋಗ, (ನಿತ್ಯ 40-45 ನಿಮಿಷ ಗಳ ಅಭ್ಯಾಸ), ಮಲಬದ್ಧತೆ, ಮೂಲ ವ್ಯಾಧಿ, ಸಮಸ್ತ ವಾಯು ವಿಕಾರ,
ಮಧುಮೇಹ, ಮೂತ್ರಾವರೋಧ, ಮೂತ್ರಪಿಂಡಗಳ ದೋಷ, ದಂತ ವಿಕಾರ ದೂರ, (ಎಚ್ಚರಿಕೆ: ಈ ಮುದ್ರೆಯಿಂದ ಮೂತ್ರ ಅಧಿಕ) ಮೂತ್ರ ಕಟ್ಟಿದ್ದರೆ ಹಲವು ನಿಮಿಷಗಳ ಅಭ್ಯಾಸ
ದಿಂದ ಸರಳ ಮೂತ್ರವಿಸರ್ಜನೆ ಸಾಧ್ಯ. ಗರ್ಭಿಣೀ ಸ್ತ್ರೀಯರು 8 ನೇ ತಿಂಗಳಿನಿಂದ ನಿತ್ಯ 40-45 ನಿಮಿಷಗಳ
ಅಭ್ಯಾಸ ಮಾಡಿದರೆ ಸಹಜ ಸುಲಭ ಹೆರಿಗೆಯಾಗುತ್ತದೆ (ಇಂದಿನ
ಅನವಶ್ಯಕ ಶಸ್ತ್ರಕ್ರಿಯೆ ತಪ್ಪಿಸಬಹುದು) ಸಕ್ಕರೆ
ಕಾಯಿಲೆ ನಿಯಂತ್ರಣಕ್ಕೆ ಇದು ತುಂಬ ಸಹಾಯಕ. ಬೆಳಿಗ್ಗೆ 40-50 ನಿಮಿಷ ಮಾಡಿ ತಕ್ಷಣ ಪ್ರಾಣಮುದ್ರೆ
ಮಾಡಬೇಕು. ಸತತ ಅಭ್ಯಾಸದಿಂದ ಬಾಯಿ, ಮೂಗು, ಕಿವಿ, ಕಣ್ಣುಗಳ ಆರೋಗ್ಯಕ್ಕೆ ಸಹಕಾರಿ.
|
ಹಲವು ದಿನಗಳಿಂದ ಮೂತ್ರ ಕಟ್ಟಿದ್ದು
ಔಷಧಿ-ಇಂಜೆಕ್ಷನ್ ಗಳು ಕೂಡ ಪರಿಣಾಮವಾಗದಿದ್ದಾಗ 45-60 ನಿಮಿಷಗಳ ಅಭ್ಯಾಸ -ದಿಂದ ಮೂತ್ರವಿಸರ್ಜನೆಯಾದ ಉದಾಹರಣೆಗಳಿವೆ.
|
|
13
|
ಅಪಾನವಾಯು ಮುದ್ರೆ:
(ಹೃದಯ ಮುದ್ರೆ ಅಥವಾ ಮೃತಸಂಜೀವಿನೀ ಮುದ್ರೆ) ಇದು ಅಪಾನಮುದ್ರೆ ಮತ್ತು ವಾಯುಮುದ್ರೆಗಳ ಸಂಯುಕ್ತ
ಕ್ರಿಯೆ, ತೋರುಬೆರಳು ಮಡಿಸಿ ಹೆಬ್ಬೆರಳಿನಿಂದ ಒತ್ತಿರುವಂತೆಯೇ ನಡು ಬೆರಳು ಮತ್ತು ಉಂಗುರಬೆರಳ
ತುದಿಗಳನ್ನು ಹೆಬ್ಬೆರಳ ತುದಿಗೆ ತಾಕಿಸಿ, ಕಿರುಬೆರಳನ್ನು
ನೇರವಾಗಿ ಚಾಚುವುದು. ಇದು ಅತ್ಯಂತ ಸಂಕೀರ್ಣವಾದ ಮತ್ತು ಅಷ್ಟೇ ಪ್ರಬಲವಾದ ಮುದ್ರೆಯಾಗಿದೆ. ಜಠರದಲ್ಲಿ
ಸೇರುವ ವಾಯುವಿನ ಏರೊತ್ತಡದಿಂದಲೇ ಬಹುತೇಕ ಹೃದಯಾಘಾತಗಳು ಸಂಭವಿಸಿವೆಯೆಂಬುದು ಕಠೋರ ಸತ್ಯ. ಆ ಕಾರಣ
ಹೃದ್ರೋಗಿಗಳು ಕರಿದ ತಿಂಡಿ, ಜಿಡ್ಡು, ಎಣ್ಣೆಪದಾರ್ಥಗಳು, ಕೊಬ್ಬು ಇರುವ ಆಹಾರ ಪದಾರ್ಥಗಳಿಂದ ದೂರವಿರಬೇಕು.
ಸ್ವತಃ ನೀವೇ ಪರೀಕ್ಷಿಸಿನೋಡಿ:
ಬೆಟ್ಟ ಅಥವಾ ಬಹುಮಹಡಿ ಮೆಟ್ಟಿಲು ಹತ್ತುವ ಪೂರ್ವದಲ್ಲಿ 5 ರಿಂದ 10 ನಿಮಿಷ ಈ ಮುದ್ರೆಮಾಡಿ. ಆಗ
ತೀವ್ರ ಹೃದಯಬಡಿತವಿಲ್ಲದೆ ನಿರಾಯಾಸ-
|
-ವಾಗಿ, ಏದುಸಿರು ಬಿಡದೆ ಸರಾಗವಾಗಿ ಹತ್ತಬಲ್ಲಿರಿ!!
ವಿಶೇಷತಃ ಈ ಮುದ್ರೆ ಹೃದಯದ ಕಾರ್ಯಚಟುವಟಿಕೆಗಳಿಗೆ ಪ್ರಬಲ ಚೈತನ್ಯ ನೀಡುತ್ತದೆ.
ಹೃದಯಾಘಾತದ ಸೂಚನೆ ಕಂಡಾಗ, ಈ ಮುದ್ರೆಯು ತಕ್ಷಣವೇ ಇಂಜೆಕ್ಷನ್ ನೀಡಿದಂತೆ ಕೆಲಸಮಾಡಿ ವ್ಯಕ್ತಿ
ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಈ ಮುದ್ರೆಯನ್ನು
ದಿನದಲ್ಲಿ 5 ನಿಮಿಷಗಳ ಅವಧಿಯಂತೆ ಎಷ್ಟು ಬಾರಿ ಬೇಕಾದರೂ ಮಾಡಬಹುದು. ಹೃದ್ರೋಗಿಗಳು, ಹೆಚ್ಚು ರಕ್ತದೊತ್ತಡ
ಇರುವವರು, ಈಗಾಗಲೇ ಹೃದಯಾಘಾತದಿಂದ ಚೇತರಿಸಿಕೊಂಡವರು, ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ನಿಯಮಿತವಾಗಿ
20-25 ನಿಮಿಷಗಳ ಕಾಲ ಮಾಡುತ್ತಿದ್ದರೆ ಅವರು ಆ ರೋಗದಿಂದ ಮುಕ್ತರಾಗಬಹುದು. ಎದೆಯಲ್ಲಿ ಸ್ವಲ್ಪ
ಛಳುಕು, ನೋವು, ಒತ್ತಡ, ಆಯಾಸ, ತೀವ್ರವಾದ ಬೆವರುವಿಕೆ ಇತ್ಯಾದಿ ಹೃದಯಾಘಾತದ ಚಿಹ್ನೆ -ಗಳು ತೋರಿದೊಡನೆಯೇ ಈ ಮುದ್ರೆಯನ್ನು ಮಾಡಿದರೆ ತಕ್ಷಣ
ಚೇತರಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಹೃದಯಾಘಾತ -ವಾದಾಗ ಕೂಡ ತಕ್ಷಣ ಈ ಮುದ್ರೆಯನ್ನು ಮಾಡಿದರೆ, ಕೇವಲ
10–15 ನಿಮಿಷಗಳಲ್ಲಿ ಈ ಮುದ್ರೆಯು ಇಂಜೆಕ್ಷನ್ ಮತ್ತು ಮಾತ್ರೆ ಕೊಟ್ಟಂತೆ ಕೆಲಸ ಮಾಡಿ, ವ್ಯಕ್ತಿಯನ್ನು
ಸಾವಿನ ದವಡೆಯಿಂದ ರಕ್ಷಿಸುತ್ತದೆ. ನಿದ್ರಾನಾಶ ಮತ್ತು ಮಾನಸಿಕ ಒತ್ತಡಗಳಿಂದ, ಹೆಚ್ಚಿನ ದೇಹಾಯಾಸದಿಂದ
ಉಂಟಾದ,
|
ಮತ್ತು ರಕ್ತನಾಳಗಳಲ್ಲಿ ತೊಂದರೆ -ಯಾಗಿ ಬರುವ ತಲೆನೋವು, ಮೈಗ್ರೇನ್, ಹಲ್ಲುನೋವು, ಮೂಲ
-ವ್ಯಾಧಿ, ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ತೊಂದರೆಗಳನ್ನು ಕೂಡ ನಿವಾರಿಸುತ್ತದೆ.
( ವಾತರೋಗ ನಿವಾರಣೆ, ಆರೋಗ್ಯವೃದ್ಧಿ, ಉಬ್ಬ -ಸರೋಗ, ಅಧಿಕ ರಕ್ತದೊತ್ತಡದ -ವರಿಗೆ ವಿಶೇಷ ಪ್ರಯೋಜನಕಾರಿ )
|
|
14
|
ಲಿಂಗ ಮುದ್ರೆ (ಶಿವ ಮುದ್ರೆ): ಎರಡೂ ಕೈಗಳ ಎಲ್ಲ ಬೆರಳುಗಳನ್ನು
ಪರಸ್ಪರ ಹೆಣೆದು ಸೇರಿಸಿ, ಎಡಗೈ ಹೆಬ್ಬೆರಳನ್ನು ನೇರವಾಗಿಸಿ. ಬಲಗೈ ಹೆಬ್ಬೆರಳು ಮತ್ತು ತೋರುಬೆರಳಿಂದ
ಸುತ್ತುವರಿಯುವಂತೆ ಇರಿಸಿ [ ಇದೇ ರೀತಿ, ಬಲಗೈನಿಂದ ಸಹ ಈ ಮುದ್ರೆ ಮಾಡಬೇಕು.] ದೇಹಕ್ಕೆ ಶಾಖ ಬೇಕೆನ್ನಿಸಿದಾಗ ಮಾತ್ರ ಅದೂ ಗರಿಷ್ಟ
10 ರಿಂದ 15 ನಿಮಿಷ ಮಾತ್ರ ಮಾಢಬೇಕು. ಇದನ್ನು
ಮಾಡುವಾಗ ಹೆಚ್ಚಿನ ಉಷ್ಣತೆಯ -ನ್ನು ಸಮತೋಲನಗೊಳಿಸಲು
ನೀರು,
|
ಹಣ್ಣು
ಮತ್ತು ಸೊಪ್ಪಿನ ರಸಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ದೇಹದ ಉಷ್ಣತೆ ಹೆಚ್ಚಳ, ಶೀತ, ನೆಗಡಿ,
ಸೈನಸ್, ಶ್ವಾಸಕೋಶಗಳ ಸಮಸ್ಯೆಗಳು, ಕಫ ಮತ್ತು ಕೊಬ್ಬ / ಬೊಜ್ಜನ್ನು ಕರಗಿಸುತ್ತದೆ. ಲಕ್ವಾ, ಕ್ಷಯ,
ನ್ಯುಮೋನಿಯ ಗಂಟಲು ಮತ್ತು ಕತ್ತಿನ ನೋವು ವಾಸಿ. [ಅತ್ಯಂತ ಛಳಿ ಇದ್ದಾಗ ಈ ಮುದ್ರೆಯ ಕೇವಲ ಐದು
ನಿಮಿಷಗಳ ಅಭ್ಯಾಸ ಅದ್ಭುತ ಪರಿಣಾಮವನ್ನು ಉಂಟು ಮಾಡುವುದನ್ನು ಸ್ವತಃ ಪರೀಕ್ಷಿಸಬಹುದು.]
ಹೊಕ್ಕಳಿನಲ್ಲಿ
ಬಟ್ಟಿ ಸರಿದಾಗ, (Displacement of Solar Plexes), ಈ ಮುದ್ರೆಯನ್ನು, ದಿನಕ್ಕೆ 2 - 3 ಸಲ, 5 ರಿಂದ
10 ನಿಮಿಷಗಳ ಕಾಲ ಮಾಡಿದರೆ ಖಂಡಿತ
|
ವಾಸಿಯಾಗುತ್ತದೆ.
[ವಿ. ಸೂ : ಅಲ್ಸರ್, ಅಸಿಡಿಟಿ, ತಲೆಸುತ್ತು, ಮತ್ತು
ಪಿತ್ಥ ಪ್ರಕೃತಿ -ಯವರಿಗೆ ಇದು ನಿಷಿದ್ಧ].
|
|
15
|
ಶಂಖ ಮುದ್ರೆ: ಎಡಗೈ ಹೆಬ್ಬೆರಳನ್ನು ಬಲ ಅಂಗೈ ಮಧ್ಯದಲ್ಲಿರಿಸಿ
ಅದರ ಸುತ್ತ ಬಲ -ಗೈನ ನಾಲ್ಕೂ ಬೆರಳುಗಳನ್ನು ಮಡಿಸಿ
ಮೃದುವಾಗಿ ಅದುಮಿ ಎಡಗೈನ ತೋರು ಬೆರಳನ್ನು ಬಲ ಹೆಬ್ಬೆಟ್ಟಿನ ತುದಿಗೆ ಸ್ಪರ್ಶಿ -ಸಿ. ಉಳಿದ ಮೂರು ಬೆರಳುಗಳನ್ನು ಬಲಗೈನ ಮಡಿಸಿದ ಬೆರಳುಗಳ
ಮೇಲಿ -ಟ್ಟು ಮೃದು ವಾಗಿ ಅಮುಕಬೇಕು. ಕೈ ಶಂಖಾಕೃತಿಯ
ಹಾಗೆ ಕಾಣಿಸುತ್ತದೆ
|
[ಇದೇ ರೀತಿ, ಎಡಗೈನಿಂದ ಸಹ ಈ ಮುದ್ರೆ
ಮಾಡ ಬೇಕು.]
ಹೃದಯದ ಒತ್ತಡ, ಲಿವರ್, ಮೂತ್ರಪಿಂಡ ಗಳು, ಥೈರಾಯ್ಡ್
ಗ್ರಂಥಿಗಳ ಬಿಂದುಗಳಿಗೆ ಒತ್ತಡಬಿದ್ದು, ಬೊಜ್ಜು ಕರಗುತ್ತದೆ (weight loss). ಆರೋಗ್ಯವೃದ್ಧಿ
ಯಾಗುತ್ತದೆ. ನಾಡಿ ಶುದ್ಧಿಯಾಗುತ್ತದೆ (ಶರೀರದ ಒಟ್ಟು 72 ಸಾವಿರ ನಾಡಿಗಳು) ಕಾರಣ ಈ ಮುದ್ರೆಯನ್ನು
ಪ್ರಾರ್ಥನೆ ಮತ್ತು ಧ್ಯಾನ ಮಾಡುವಾಗ ಮಾಡುತ್ತಾರೆ. ಯಾವುದೇ ಸಮಯದಲ್ಲಿ 20 ರಿಂದ 25 ನಿಮಿಷ ಮಾಡಬಹುದು.
|
||
16
|
ಮಾತಂಗಮುದ್ರೆ:(ಮಾತಂಗ=ಗಂಡಾನೆ)
ಎರಡೂ
ಹಸ್ತಗಳ ಮಧ್ಯದ ಬೆರಳುಗಳ -ನ್ನು ಜೋಡಿಸಿ, ಉಳಿದ
ಬೆರಳುಗಳನ್ನು ಒಂದಕ್ಕೊಂದು ಹೆಣೆದುಕೊಂಡಿರುವುದು. 35-40 ನಿಮಿಷ ಮಾಡಬಹುದು.
|
ಇದು
ದೇಹದ ಪೃಥ್ವಿ ತತ್ವವನ್ನು ಚೇತನಗೊಳಿಸುತ್ತದೆ. ಜಠರದ ಜೀರ್ಣಕ್ರಿಯೆ, ಪಿತ್ಥಕೋಶ, ಡಿಯೋಡಿನಮ್,
ಗುಲ್ಮ, ಮೇದೋಜ್ಜೀರಕ ಗ್ರಂಥಿ, ಮೂತ್ರಪಿಂಡಗಳು ಮತ್ತು ಹೃದಯವನ್ನು ಬಲಪಡಿಸುತ್ತದೆ. ಮನಸ್ಸಿನ ಆಂತರಿಕ
ಒತ್ತಡ ನಿವಾರಿಸಿ ಶಾಂತಿಯನ್ನು ನೀಡುತ್ತದೆ.
|
||
17
|
ಶ್ವಾಸ ಮತ್ತು ಅಸ್ತಮ ಮುದ್ರೆಗಳು: ಕಿರು ಬೆರಳನ್ನು ಹೆಬ್ಬೆರಳಿನ ಮೂಲಕ್ಕೆ,
ಅನಾ -ಮಿಕಾವನ್ನು ಹೆಬ್ಬೆರಳಿನ ಮಧ್ಯದ ಸ್ಥಾನ -ದಲ್ಲಿಟ್ಟು, ಮಧ್ಯದ ಬೆರಳನ್ನು ಹೆಬ್ಬೆರಳಿನ ತುದಿಗೆ
ಸ್ಪರ್ಶಿಸುವುದು ಮತ್ತು ತೋರು ಬೆರಳು ನೇರವಾಗಿ ಚಾಚುವುದು. ಎರಡೂ ಕೈಗಳಿಂದ ಮಾಡಬೇಕು. ಇದು ಶ್ವಾಸ
ಮುದ್ರೆ. 20-35 ನಿಮಿಷ ಮಾಡಿ.
|
ಅಸ್ತಮ ಮುದ್ರೆ: ಎರಡೂ ಕೈಗಳನ್ನು ಒಟ್ಟಿಗೆ ಮಧ್ಯದ
ಬೆರಳುಗಳನ್ನು ಅಂಗೈಗಳಲ್ಲಿ ಒಳಗೆ ಮಡಿಸಿಕೊಂಡು ಎರಡೂ ಬೆರಳುಗಳ ಉಗುರಿನವರೆಗೆ ಸ್ಪರ್ಶಿಸಿ, ಉಳಿದ
ಬೆರಳುಗಳನ್ನು ನೇರವಾಗಿ ಚಾಚಿಕೊಂಡಿರುವುದು.
ಕ್ರಮವಾಗಿ ಇವೆರಡೂ ಮುದ್ರೆಗಳನ್ನು ಅಭ್ಯಸಿಸಿದರೆ ಅಸ್ತಮ
ಪೂರ್ತಿಯಾಗಿ ಗುಣವಾಗುತ್ತದೆ. ಶ್ವಾಸೋಛ್ವಾ -ಸದ (ಅಸ್ತಮಾ) ತೊಂದರೆಯಾದಾಗ 15-20 ನಿಮಿಷ ಈ ಮುದ್ರೆಗಳನ್ನು
ಎರಡೂ ಹೊತ್ತು ಮಾಡಬಹುದು
|
||
18
|
ವಜ್ರ ಮುದ್ರೆ: ಬಲ ಹೆಬ್ಬೆರಳ ತುದಿಯನ್ನು ಮಧ್ಯದ
ಬೆರಳ ಉಗುರಿನ ಬಲಪಕ್ಕೆಗೆ ಒತ್ತಿಹಿಡಿದು, ಉಂಗುರಬೆರಳಿನ ಬಲತುದಿ –ಯನ್ನು ಮಧ್ಯದ ಬೆರಳಿನ ಉಗುರಿನ
ಎಡತುದಿಗೆ ಮತ್ತು ಕಿರುಬೆರಳಿನ ಉಗುರಿ -ನ ಬಲತುದಿಯನ್ನು ಉಂಗುರಬೆರಳ ಎಡತುದಿಗೆ ಒತ್ತಿಕೊಂಡು ತೋರುಬೆರಳ
-ನ್ನು ನೇರವಾಗಿಸುವುದು.
|
(ಇದೇ
ರೀತಿ ಎಡಗೈಯಿಂದಲೂ ಮಾಡಬೇಕು.)
ಭೂತತ್ವ ಕಡಿಮೆಯಾದಾಗ ಕಡಿಮೆ ರಕ್ತದೊತ್ತಡ
(Low BP) ಉಂಟಾಗುತ್ತದೆ.
ಜಠರ, ಗುಲ್ಮ, ಹೃದಯ, ಮೇದೋಜ್ಜೀರಕ ಗ್ರಂಥಿಗಳು ಸಹ ಭೂತತ್ವಕ್ಕೆ ಸೇರಿವೆ. ಈ ಅಂಗಗಳಲ್ಲಿ ಸರಿಯಾಗಿ
ರಕ್ತಪರಿಚಲನೆ ಆಗದಿದ್ದಾಗ ನಿರುತ್ಸಾಹ, ಅನಾಸಕ್ತಿ, ಆಯಾಸ, ತಲೆಸುತ್ತು ಸ್ವಾಭಾ -ವಿಕ. ಈ ಮುದ್ರೆಯ
ನಿಯಮಿತ ಅಭ್ಯಾಸ ಅವೆಲ್ಲವನ್ನು ನಿವಾರಿಸುತ್ತದೆ.
|
||
19
|
ಭ್ರಮರ ಮುದ್ರೆ: ತೋರುಬೆರಳನ್ನು ಹೆಬ್ಬೆ -ರಳಿನ ಮೂಲಕ್ಕೆ
ಇಟ್ಟು, ಮಧ್ಯದ ಬೆರಳು ಹೆಬ್ಬೆರಳ ತುದಿಯನ್ನು ಸ್ಪರ್ಶಿಸಿ, ಉಳಿದೆರಡು ಬೆರಳುಗಳನ್ನು ನೇರವಾಗಿ
ಚಾಚುವುದು(ಎರಡೂಕೈಗಳಿಂದ)
|
ರೋಗ -ನಿರೋಧಕಶಕ್ತಿಯನ್ನು ಹೆಚ್ಚಿಸಲು ಇದು ತುಂಬ ಪ್ರಯೋಜನಕಾರಿ. ದಿನಕ್ಕೆ
30-35 ನಿಮಿಷಗಳ ಅಭ್ಯಾ-ಸ ಅಥವಾ ಎರಡೂ ಹೊತ್ತು
15-20 ನಿಮಿಷಗಳಂತೆ ಮಾಡಿದರೂ ಸರಿ. ಜೊತೆಗೆ ಪ್ರಾಣಮುದ್ರೆ ಅವಶ್ಯ.
|
||
20
|
ಕ್ಷೇಪನ ಮುದ್ರೆ: ಎರಡೂ ಕೈಗಳ ತೋರು -ಬೆರಳುಗಳನ್ನು
ಸ್ಪರ್ಶಿಸುತ್ತ, ಮಿಕ್ಕೆಲ್ಲ ಬೆರಳುಗಳನ್ನು ಪರಸ್ಪರ ಹೆಣೆದುಕೊಂಡು. ಮತ್ತು ಅಂಗೈ ಮಧ್ಯೆ ತುಸು
ಟೊಳ್ಳು ಬಿಟ್ಟು, ಕುಳಿತಾಗ ತೋರುಬೆರಳು
|
ಭೂಮಿಯ
ಕಡೆಗೆ, ಮಲಗಿದಾಗ ಪಾದಗಳ ಕಡೆಗಿರ -ಬೇಕು.ದೊಡ್ಡಕರುಳು,
ತ್ವಚೆ ಮತ್ತು ಶ್ವಾಸಕೋಶದ ಕ್ರಿಯೆಗಳನ್ನು ಬಲಪಡಿಸಿ, ಶುದ್ಧಿ ಕ್ರಿಯೆಯಲ್ಲಿ ಉತ್ತಮ ಪರಿಣಾಮ ಬೀರುತ್ತದೆ
ಮತ್ತು ಆಂತರಿಕ ಒತ್ತಡ ನಿವಾ -ರಿಸಿ, ಋಣಾತ್ಮಕ
(Negative) ಶಕ್ತಿಯನ್ನು ಹೊರದೂಡುತ್ತದೆ.
|
||
21
|
ಮೇರುದಂಡ ಮುದ್ರೆ:ಬಲಗೈಯ ಮಧ್ಯದ ಮತ್ತು ಕಿರುಬೆರಳ
ತುದಿಗಳನ್ನು ಹೆಬ್ಬೆರಳ ತುದಿಗೆ ಸ್ಪರ್ಶಿಸಿ ಉಳಿದೆರಡು ಬೆರಳು -ಗಳು ನೇರವಾಗಿ ಚಾಚಿಕೊಂಡಿರಬೇಕು ಮತ್ತು ಕುಳಿತಾಗ ಎಡಗೈಯಿಂದ
ಚಿನ್ಮುದ್ರೆ ಮಾಡಬೇಕು.
|
ಈ
ಮುದ್ರೆಯಿಂದ ಬೆನ್ನುಹುರಿ ಬಲಗೊಳ್ಳುತ್ತದೆ. ಇದನ್ನು ನಿತ್ಯ 30-35 ನಿಮಿಷ ಅಭ್ಯಸಿಸಿದರೆ ಯಾವುದೇ
ತರದ ಬೆನ್ನುನೋವು ನಿವಾರಣೆಯಾಗುತ್ತದೆ. ಅಥವಾ ಎರಡೂ ಹೊತ್ತು 15-20 ನಿಮಿಷಗಳಂತೆ ಮಾಡಿದರೂ ಸರಿ.
ಜೊತೆಗೆ ಪ್ರಾಣಮುದ್ರೆ ಅವಶ್ಯ.
|
||
22
|
ಆದಿತಿ ಮುದ್ರೆ / ವಿಷಹರ ಮುದ್ರೆ: (De-toxification) ಎರಡೂ ಹಸ್ತಗಳಲ್ಲಿ
ಹೆಬ್ಬೆರ -ಳ ತುದಿಯನ್ನು ಅನಾಮಿಕಾ (ಉಂಗುರ ಬೆರಳ) ಬುಡಕ್ಕೆ ಇರಿಸುವುದು. ಉಂಗುರ ಬೆರಳು ಭೂಮಿ
ತತ್ವವನ್ನೊಳಗೊಂಡಿದ್ದ -ರೂ, ಅದರ ಬುಡದಲ್ಲಿ ಸೂರ್ಯಮಂಡ -ಲವಿದ್ದು, ಅದು ಸೂರ್ಯನ ಬೆರಳೆನಿಸಿದೆ.
|
ಹೆಬ್ಬೆಟ್ಟು ಅಗ್ನಿಯಿದ್ದು ಬುಡಕ್ಕೆ ತಾಗಿರುವುದರಿಂದ ಪೃಥ್ವಿ ತತ್ವ ಹೆಚ್ಚಾಗಿ, ಅಗ್ನಿಯ ಉಷ್ಣತೆಯೂ ಬೆಳೆಯುವುದು. ಅದರಿಂದ ಉಷ್ಣತೆ, ಶಕ್ತಿ ಬೆಳೆಯುತ್ತದೆ. ಶರೀರದ ತೂಕವನ್ನೂ ಹೆಚ್ಚಿಸಬಹುದು. ಅನ್ನಾಹಾರಗಳಿಂದ ವಿಷಬಾಧೆ
ಆದಾಗ ಈ ಮುದ್ರೆಯಿಂದ ಪರಿಹಾರ ಸಾಧ್ಯ ಬೆಳಿಗ್ಗೆ ಒಂದೆಸಮನೆ ಸೀನು ಬಂದಾಗ ಈ ಮುದ್ರೆ ಪರಿಹರಿಸುತ್ತದೆ.(ಇದು
ಆಕಳಿಕೆಗೂ ಸೈ)
|
||
23
|
ಕುಬೇರ ಮುದ್ರೆ (ವ್ಯಾನ ಮುದ್ರೆ): ತೋರು ಬೆರಳು ಮತ್ತು ಮಧ್ಯದ ಬೆರಳುಗಳನ್ನು
ಹೆಬ್ಬೆರಳ ತುದಿಗೆ ಸ್ಪರ್ಶಿಸುವುದು. ಕುಬೇ -ರನ ಕೃಪೆ-ಸಂಪದಭಿವೃದ್ಧಿ, ಧೈರ್ಯ-ಸ್ಥೈರ್ಯ ವೃದ್ಧಿ,
ರಕ್ತದೊತ್ತಡ ನಿಯಮಿತ,
|
ನಮ್ಮ
ಶರೀರಕ್ಕೆ ತುಂಬಾ ಶ್ರಮವಾದಾಗ, ನಿದ್ರೆಗೆಟ್ಟು ಮಾನಸಿಕ ಒತ್ತಡ ಉಂಟಾದಾಗ, ನೆಮ್ಮದಿಯಿಲ್ಲದೆ ಚಿಂತೆಯಾದಾಗ,
ಈ ತೊಂದರೆ ನಿವಾರಣೆಯಾಗುವ -ವರೆಗೆ ಸುಮಾರು
20-25 ನಿಮಿಷಗಳವರೆಗೆ ಯಾವುದೇ ಸಮಯದಲ್ಲಿ ಈ ಮುದ್ರೆ ಮಾಡಬಹುದು.
|
||
24
|
ಯೋನಿ ಮುದ್ರೆ: (ಸ್ತ್ರೀಯರಿಗೆ) ಎರಡೂ ಕೈಗಳ ಹೆಬ್ಬೆರಳು
ಮತ್ತು ತೋರುಬೆರಳು -ಗಳನ್ನು ಒಂದಕ್ಕೊಂದು ಸ್ಪರ್ಶಿಸಿ, ಮಿಕ್ಕ ಬೆರಳುಗಳನ್ನು ಒಂದರೊಳಗೊಂದು ಪರ
–ಸ್ಪರ ಸೇರಿಸಿ (Interlock) ಇಟ್ಟುಕೊಳ್ಳ -ಬೇಕು
ಮತ್ತು ಹೆಬ್ಬೆರಳು ಮೇಲ್ಮುಖವಾ -ಗಿ ತೋರುಬೆರಳು ಕೆಳಮುಖವಾಗಿರಲಿ, ಜೊತೆಗೆ ಕಿರುಬೆರಳು ಕಿಬ್ಬೊಟ್ಟೆಯ
ಕೆಳಗೆ ಯೋನಿಗೆ ತಾಕಿರಬೇಕು. 15-20 ನಿಮಿಷ. ತಕ್ಷಣ 10 ನಿಮಿಷ ಪ್ರಾಣಮುದ್ರೆ ಮಾಡಿ. ಗರ್ಭಾಶಯದ
ಸಮಸ್ತ ತೊಂದರೆ ವಾಸಿ.
|
ಜೊತೆಗೆ
ಶ್ವಾಸಕೋಶ ಮತ್ತು ದೊಡ್ಡಕರುಳಿನ ದೋಷ ಪರಿಹಾರ. ಮಾನಸಿಕ ಒತ್ತಡ ಹೆಚ್ಚಾಗಿ ಮಾಸಿಕ ಸ್ರಾವ ಜಾಸ್ತಿಯಾಗಿ
ತನ್ಮೂಲಕ ಆಯಾಸ, ಶಾರೀರಿಕ ನೋವುಂಟಾಗುತ್ತದೆ. ಕೆಲವರಿಗೆ ಮಾಸಿಕ ಸ್ರಾವಕ್ಕೆ ಮುನ್ನವೇ ಹೊಟ್ಟೆ
ನೋವು, ಸೆಳೆತ ಆರಂಭವಾಗು ವುದು. ಆಗ ತಕ್ಷಣ ಏಕಾಂತದಲ್ಲಿ ಕುಳಿತು ಈ ಮುದ್ರೆ ಮಾಡಿದರೆ ತಕ್ಷಣ ಪರಿಹಾರ
ಸಿಗುವುದು. ಇನ್ನು ಕೆಲವ -ರಿಗೆ ಮುಟ್ಟುನಿಲ್ಲುವ ಹಂತದಲ್ಲಿ ತೀವ್ರ ತೊಂದರೆ ಸಹಜ, ಆಗಲೂ ಕೂಡ ಈ
ಮುದ್ರೆ ಎಲ್ಲ ತೊಂದರೆ ಶಮನಮಾಡುತ್ತದೆ. ನಿತ್ಯ ಯಾವುದೆ ಸಮಯ 10 ನಿಮಿಷ ಈ ಮುದ್ರೆ ಮಾಡುತ್ತಿದ್ದರೆ
ಅಂಥವರಿಗೆ ಯಾವ
|
ಬಾಧೆಯೂ ಹತ್ತಿರ ಬರದೆ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯದಿಂದಿರುತ್ತಾರೆ. |
|
25
|
ಸಮಾನ ಮುದ್ರೆ: (ಮುಕುಲ ಮುದ್ರೆ): ನಾಲ್ಕೂ ಬೆರಳುಗಳ ತುದಿಗಳನ್ನು ಹೆಬ್ಬೆರಳ
ತುದಿಗೆ ಸ್ಪರ್ಶಿಸಿದಾಗ ಸಮಾನ ಮುದ್ರೆಯಾಗುತ್ತದೆ. ಪಂಚತತ್ವಗಳು ಒಂದೆಡೆ ಸಂತುಲನ ಹೊಂದಿ ಶರೀರದ
ಶಕ್ತಿ ಅಪರಿಮಿತವಾಗುತ್ತದೆ. ಜೊತೆಗೆ
|
ಇಷ್ಟದೈವದ
ಮಂತ್ರ ಸೇರಿದರೆ ಹೆಚ್ಚಿನಬಲ. ಪಚನಶಕ್ತಿ, ರೋಗ ನಿರೋಧಕ ಶಕ್ತಿ ವೃದ್ಧಿ. ಐದೂ ತತ್ವಗಳ ಸಮ -ತೋಲನವಾಗಿರುವುದರಿಂದ ಈ ಮುದ್ರೆ ಮಾಡಿದ ನಂತರ, ನೋವಿರುವ
ಶರೀರದ ಯಾವುದೇ ಭಾಗಕ್ಕೆ ಆ ಬೆರಳುಗಳಿಂದ ಸ್ಪರ್ಶಿಸಿ ಅರ್ಧ ತಾಸು ಕುಳಿತರೆ ನೋವು ವಾಸಿಯಾಗುತ್ತದೆಂದು
ಹೇಳಲಾಗುತ್ತದೆ.
|
||
26
|
ಶೂನ್ಯವಾಯು ಮುದ್ರೆ: ಇದು ಶೂನ್ಯ ಮುದ್ರೆ ಮತ್ತು ವಾಯುಮುದ್ರೆಗಳ
ಮಿಶ್ರ ಮುದ್ರೆಯಾಗಿದೆ. ಇದರಿಂದ ಆಕಾಶತತ್ವ ಮತ್ತು ವಾಯುತತ್ವಗಳು ಕಡಿಮೆಯಾಗಿ, ಸಕಲ ಪ್ರಕಾರದ ಅನಾರೋಗ್ಯ
ದೂರವಾ -ಗುತ್ತದೆ. ದಿನಂಪ್ರತಿ 15 ನಿಮಿಷ ಮಾಡಿ.
|
ತಲೆನೋವು,
ಕಿವಿನೋವು, ಶರೀರದ ಕಂಪನ, ಅನಿದ್ರೆ, ಚಲನೆಯ ಅಸ್ಥಿರತೆ, ಹಲ್ಲು/ಗಂಟಲು/ಬೆನ್ನು/ಹಿಮ್ಮಡಿ ನೋವುಗಳು,
ಸಂಧಿನೋವುಗಳೆಲ್ಲ ವಾಸಿ. ಸ್ವರದ ದೊರಗುತನ, ಮಾಸಿಕ ಸ್ರಾವ ಸರಿಯಾಗುತ್ತವೆ, ಚರ್ಮ, ಉಗುರು ಮತ್ತು
ಕೂದಲು ತುಂಡಾಗುವಿಕೆ ನಿಲ್ಲುತ್ತದೆ. ನಿಶ್ಯಕ್ತಿ, ಭಯ ನಿವಾರಣೆ,
|
||
27
|
ಅಶ್ವಿನಿ ಮುದ್ರೆ: ಪದ್ಮಾಸನ/ವಜ್ರಾಸನದಲ್ಲಿ ಕುಳಿತು,
ಖಾಲಿ ಹೊಟ್ಟೆಯಲ್ಲಿ, ರೇಚಕ ಮಾಡಿದ ಸ್ಥಿತಿಯಲ್ಲಿ, ಗುದದ್ವಾರವನ್ನು ಮೇಲಕ್ಕೆ ಸೆಳೆಯುವುದು ಮತ್ತು
ಸಡಿಲುಗೊಳಿಸುವುದು ಮಾಡಬೇಕು - ಆಕುಂಚನ, ಪ್ರಸರಣ ಮಾಡುವುದು. (20 ರಿಂದ 25 ಸಲ). ಪ್ರಾಣಶಕ್ತಿ
ವೃದ್ಧಿ, ವಾಯುಪ್ರಕೋಪ, ಮಲಬದ್ಧತೆ, ಮೂಲವ್ಯಾಧಿ ಮತ್ತು ಮೂತ್ರಸಂಬಂಧೀ ರೋಗಗಳು ದೂರ. ಗರ್ಭಿಣಿ
ಸ್ತ್ರೀಯರಿಗೆ ಸುಖಪ್ರಸವವಾಗುತ್ತದೆ, ಯೌವನೋತ್ಸಾಹ ಹೆಚ್ಚುತ್ತದೆ, ಮುಪ್ಪುದೂರ ಸರಿಯುತ್ತದೆ.
|
|||
28
|
ಮೂತ್ರಾಶಯ ಮುದ್ರೆ: (ಇದು ಜಲೋದರ ನಾಶಕ ಮತ್ತು ಸೂರ್ಯಮುದ್ರೆಗಳ
ಸಂ -ಯುಕ್ತ ಕ್ರಿಯೆ) ಕಿರುಬೆರಳು ಮತ್ತು ಉಂಗುರಬೆರಳುಗಳನ್ನು
ಹೆಬ್ಬೆರಳ ಬುಡಕ್ಕಿಟ್ಟು ಹೆಬ್ಬೆರಳಿನಿಂದ ಮೃದುವಾಗಿ
|
ಒತ್ತಬೇಕು.
ನೆಗಡಿ,ಶೀತ ಮತ್ತು ಗಂಟಲು ಬೇನೆಗಳಿಗೆ. ಕೆಲವರಿಗೆ ಹುಳಿ ರಸದ ಹಣ್ಣುಗಳಾದ ಅನಾನಸು, ದ್ರಾಕ್ಷಿ,
ಕಿತ್ತಳೆ ಇತ್ಯಾದಿ ತಿಂದಾಗ ಗಂಟಲು ಕೆರೆತ / ನೋವು ಬರುತ್ತದೆ ತಿಂದತಕ್ಷಣ ಈ ಮುದ್ರೆ ಮಾಡಿದರೆ
ಅಂತಹ ತೊಂದರೆಗಳು ಆಗುವುದಿಲ್ಲ.
|
||
29
|
ಸುರಭಿ ಮುದ್ರೆ: ನಮಸ್ತೆ ಮಾಡುವ ಹಾಗೆ ಕೈಜೋಡಿಸಿ ಹೆಬ್ಬೆರಳು
ಬಿಟ್ಟು, ಪರಸ್ಪರ ವಿರುದ್ಧಕೈಗಳ ತೋರುಬೆರಳು, ಮಧ್ಯದ ಬೆರಳು ತುದಿ ಮತ್ತು ಉಳಿದ ಬೆರಳುಗಳ ತುದಿ
ಜೋಡಿಸಿ, ಕೆಳಗೆ ಅಂಗೈಗಳನ್ನು ಅಗಲಿಸಿ ಹಿಡಿದುಕೊಳ್ಳಿ.
ದನದ ಕೆಚ್ಚಲಿನ
|
ಹಾಗೆ
ಕಾಣುತ್ತದೆ. ಸುರಭಿ ಅಂದ್ರೆ ಕಾಮಧೇನು. (ಬೇಡಿ
ದ್ದನ್ನು ಕೊಡುವ) ವಾತ/ಪಿತ್ಥ/ಕಫ ಈ ತ್ರಿದೋಷಗಳ
-ನ್ನು ಸರಿ ಪಡಿಸುತ್ತದೆ.(8-10 ನಿಮಿಷ) ಎಸಿಡಿಟಿ ಮತ್ತು ಶರೀರದ ಅತಿ ಉಷ್ಣತೆ ಶಮನ, ಸೃಜನಶಕ್ತಿ
ಸಿದ್ಧಿ, ತಾಯ ಎದೆಹಾಲು ವೃದ್ಧಿ. ಅಡ್ರಿನಲ್, ಪಿಟ್ಯುಟರಿ, ಪೀನಿ -ಯಲ್, ಥೈರಾಯ್ಡ್ ಗ್ರಂಥಿಗಳ ಕಾರ್ಯ ಸಮರ್ಪಕ.
|
||
30
|
ಶಕ್ತಿ ಮುದ್ರೆ: ಇದು ಶರೀರ ಗಟ್ಟಿಮುಟ್ಟಾ -ಗಿಟ್ಟು ಶಕ್ತಿಸಂಚಾರ ಮಾಡುವ ಮುದ್ರೆ. ಹೆಬ್ಬೆರಳನ್ನು
ಅಂಗೈಯಲ್ಲಿಟ್ಟು ಅದರ ಮೇಲೆ ತೋರುಬೆರಳು ಮತ್ತು ಮಧ್ಯದ ಬೆರಳು ಮಡಿಸಿ, ಕಿರುಬೆರಳು ಮತ್ತು ಉಂಗುರಬೆರಳು
ಪರಸ್ಪರ ಜೋಡಿಸಿ.
|
ಇದರಲ್ಲಿ
ಅಗ್ನಿ,ವಾಯು, ಆಕಾಶಗಳ ಪ್ರಭಾವ ಕಡಿಮೆ ಮತ್ತು ಪೃಥ್ವಿತತ್ವ, ಜಲತತ್ವಗಳ ಶಕ್ತಿ ಹೆಚ್ಚು. ಅದರಿಂ -ದಾಗಿ ಕಿಬ್ಬೊಟ್ಟೆಯ ಮೇಲೆ ಪರಿಣಾಮ. ಗರ್ಭಾಶಯ, ಸಣ್ಣ
ಕರುಳು, ಮಾಸಿಕ ಸ್ರಾವ, ಮೂತ್ರದ ನಿಧಾನತೆ, ಪ್ರೊಸ್ಟೇಟ್ ಗ್ರಂಥಿಯ ತೊಂದರೆ ಶಮನ. ಸುಖನಿದ್ರೆ,
30 ನಿಮಿಷ ಮಾಡಿ ಪ್ರಾಣಮುದ್ರೆ ಮಾಡಬೇಕು.
|
||
31
|
ಗರುಡ ಮುದ್ರೆ: ಗರುಡನನ್ನು ಹೋಲುವ , ಬಹಳ ಶಕ್ತಿ
ನೀಡುವ ಮುದ್ರೆ. ಎರಡೂ ಕೈ ಬೆರಳುಗಳ ಹೆಬ್ಬೆರಳುಗಳನ್ನು ಒಂದರೊ -ಳಗೊಂದು ಹೊಗಿಸಿ, ಎಡಗೈಮೇಲೆ ಬಲಗೈ
ಬರುವಂತೆ ಇರಿಸಿ ಕಿಬ್ಬೊಟ್ಟೆಗೆ ಇರಿಸಿ 10 ಸಲ ಸ್ವಾಸೋಛ್ವಾಸ ಮಾಡಿರಿ ನಂತರ ನಾಭಿಯ ಬಳಿ ಇರಿಸಿ
10 ಸಲ
|
ಮತ್ತು
ಎದೆಯಮಧ್ಯಭಾಗದಲ್ಲಿರಿಸಿ 10 ಸಲ ಸ್ವಾಸೋ -ಛ್ವಾಸ
ಮಾಡಿರಿ. ನಂತರ ಎದೆಯ ಎದುರಿನಲ್ಲಿಯೇ ಕೈಗಳನ್ನು
ಅಗಲಿಸಿ ರೆಕ್ಕೆಗಳಂತೆ ಬೆರಳುಗಳ ಬಿಡಿಸಿ 5 ನಿಮಿಷ ಈ ಮುದ್ರೆ ಮಾಡಿರಿ. ಕಿಬ್ಬೊಟ್ಟೆ ಮತ್ತು
ಸಕಲ ಅಂಗಾಂಗಗಳು ಬಲಯುತ, ರಕ್ತಾಭಿಸರಣ, ಅಪಚನ, ಪ್ರೊಸ್ಟೇಟ್ ಗ್ರಂಥಿ ಸಮಸ್ಯೆಗಳು, ಸ್ವಾಸೋಛ್ವಾಸದ
ತೊಂದರೆಗಳು ಶಮನ ಮತ್ತು ಆಯಾಸ ಪರಿಹಾರ,
|
||
32
|
ನಾಗ ಮುದ್ರೆ: ಆದಿಶೇಷ ಶಕ್ತಿಸ್ವರೂಪಿ, ವಿವೇಕ,
ಸೂಕ್ಷ್ಮ ದೃಷ್ಟಿ ಮತ್ತು ಬಲದ ಪ್ರತೀಕನಾಗಿದ್ದಾನೆ. ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಈ ಮುದ್ರೆಯಿಂದ
ಪರಿಹಾ -ರ ಸಿಗುವದು. ಎಡಗೈಯ ನಾಲ್ಕು ಬೆರ -ಳುಗಳ ಕೆಳಗೆ ಬಲಗೈಯ ನಾಲ್ಕು ಬೆರಳು, ಮೇಲೆ ಹೆಬ್ಬೆರಳು
ಇರಿಸಿ, ಅದರ ಮೇಲೆ ಎಡಗೈ ಹೆಬ್ಬೆರಳು ಇರಿಸಿದಾಗ ನಾಗಮುದ್ರೆ ಆಗುತ್ತದೆ. ವಾಯು, ಆಕಾಶ
|
ಪೃಥ್ವಿ,
ಜಲಗಳು ವೃದ್ಧಿಸುತ್ತವೆ. ಅಗ್ನಿ ವೃದ್ಧಿಸುತ್ತದೆ. ಇದ -ರಿಂದ ಶಕ್ತಿ ಹೆಚ್ಚುತ್ತದೆ. ಬೆನ್ನುಹುರಿಗೆ
ಬಲ. ಈ ಮುದ್ರೆ ಇಡೀ ಶರೀರಕ್ಕೆ ಶಾಖ ನೀಡುತ್ತದೆ. ಮೆದುಳಿನ ಶಕ್ತಿ, ರಕ್ತಾಭಿಸರಣ, ಪಚನಕ್ರಿಯೆ,
ಪ್ರಜ್ಞೆ ಬೆಳೆಯುತ್ತದೆ. ಮಾ -ನಸಿಕ, ಶಾರೀರಿಕ
ಕ್ರಿಯೆಗಳು ಸರಿ ಹೊಂದಿ, ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಗರ್ಭಾಶಯ ನೋವು ಸೆಳೆತ, ಪ್ರೊಸ್ಟೇಟ್
ಗ್ರಂಥಿಯ, ಕೊಬ್ಬೊಟ್ಟೆಯ ಸಮಸ್ಯೆ -ಗಳು, ಮೂತ್ರನಿಧಾನತೆ ವಾಸಿ, ಇಡೀ ಶರೀರವು ಪ್ರಭೆಯಿಂದ ಕಂಗೊಳಿಸುತ್ತದೆ.
|
||
33
|
ರುದ್ರ ಮುದ್ರೆ: ರುದ್ರನು ಬೆಂಕಿಯ
ಪ್ರತೀಕ. ಈ ಮುದ್ರೆಯಿಂದ ಮಣಿಪುರ ಚಕ್ರ (ನಾಭಿ) ಉತ್ತೇಜಿಸಲ್ಪ -ಡುತ್ತದೆ. ಎರಡೂ ಕೈಗಳ ಉಂಗುರಬೆರಳು
ಮತ್ತು ತೋರುಬೆರಳ ತುದಿಗಳನ್ನು ಹೆಬ್ಬೆರಳ ತುದಿಗೆ ಸ್ಪರ್ಶಿಸಬೇಕು. ಉಳಿದ ಬೆರಳುಗಳು ನೇರವಾಗಿರಲಿ.
ಶರೀರ ದೃಢಕಾಯ, ಹೊಟ್ಟೆಯ ಗುಲ್ಮ, ಮೇದೋಜ್ಜೀರಕ ಗ್ರಂಥಿಗಳ ಕಾರ್ಯ ಸಮರ್ಪಕ. ಹೃದಯದ ಸಮರ್ಥತೆ ಹೆಚ್ಚಳ ಮತ್ತು ಅದರ
ತೊಂದರೆಗಳ ನಿವಾರಣೆ. ಈ ಮುದ್ರೆಯಿಂದ ಅಗ್ನಿ, ವಾಯು ಮತ್ತು ಪೃಥ್ವಿ ತತ್ವಗಳು ಒಟ್ಟಾಗಿ, ಶರೀರ
ಸಾಮರ್ಥ್ಯ ಹೆಚ್ಚಳ. ತಲೆಭಾರ, ತಲೆಸುತ್ತು, ಬಳಲಿಕೆ, ಆಯಾಸ ಪರಿಹಾರ.
|
|||
34
|
ಚಕ್ರ ಮುದ್ರೆ:(ವಿಷ್ಣು ಚಕ್ರ) ಇದನ್ನು ಪೂಜಾ ವೇಳೆಯಲ್ಲಿ
ಮಾಡಿ, ಅಡಚಣೆ ರಹಿತ ಕಾರ್ಯಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಎಡ ಅಂಗೈ ಮೇಲೆ ಬಲ ಅಂಗೈ ಇಟ್ಟು
ಬಲ ತೋರುಬೆರಳನ್ನು ಎಡಗೈ ಹೆಬ್ಬೆರಳಿನ ಮೇಲಿಟ್ಟು ಬಲ ಕಿರಿಬೆರಳನ್ನು ಎಡಗೈ ತೋರುಬೆರಳಿಗೆ ಸ್ಪರ್ಶಿಸಬೇಕು.
ಬಲ ಹೆಬ್ಬೆರಳನ್ನು ಮಣಿಗಂಟಿನ ಮೇಲಿರಿಸಿ, ಅಂಗೈಗಳನ್ನು ಒಂದಕ್ಕೊಂದು ಒತ್ತಬೇಕು
|
ಅಗ್ನಿ,
ವಾಯು, ಜಲಗಳು ಪ್ರಚಂಡ ಶಕ್ತಿ ತರಂಗಗಳನ್ನು ಉಂಟುಮಾಡುತ್ತವೆ. ಎಲ್ಲ ನಿರ್ನಾಳ ಗ್ರಂಥಿಗಳು ಉದ್ದೀ -ಪನಗೊಂಡು ಹೃದಯ, ಮೂತ್ರಪಿಂಡ, ಮೂತ್ರಕೋಶ, ಎಲ್ಲವೂ ಸಮರ್ಥವಾಗಿ
ಕಾರ್ಯ ನಿರ್ವಹಿಸುತ್ತವೆ. ಕೈಯ ಎಲ್ಲ ನಾಡಿಗಳು ಅಗ್ನಿಸ್ಪರ್ಶದಿಂದ ಶಕ್ತಿ ಪ್ರವಾಹ ಸಹಿತವಾಗಿ ಪ್ರಬಲವಾಗುತ್ತವೆ.
ದಿನದಲ್ಲಿ ಕೇವಲ 5 ನಿಮಿಷ ಮಾತ್ರ ಈ ಮುದ್ರೆ ಮಾಡಿದರೆ
ಸಾಕು. ಇದು ಅತ್ಯಂತ ಶಕ್ತಿಶಾಲಿಯಾದ ಮುದ್ರೆ.
|
||
35
|
ಅನಂತ ಪ್ರಜ್ಞಾ ಮುದ್ರೆ: ಆಕಾಶ ಅನಂತ -ವಾದ ತತ್ವ. ನಮ್ಮ ಪ್ರಜ್ಞೆಯ ಪರಿಧಿಯ -ನ್ನು ಅನಂತವಾಗಿ ಬೆಳೆಸುವ ಮುದ್ರೆ. ಎರಡೂ ಕೈಗಳಿಂದ,
ಆಕಾಶ ತತ್ವದ ಮಧ್ಯದ ಬೆರಳುಗಳ ಒಂದರೊಳಗೊಂದು ಉಂಗುರದಂತೆ ಹೆಣೆದು ಅಗ್ನಿತತ್ವದ ಹೆಬ್ಬೆರಳಿನೊಂದಿಗೆ
ವಿರುದ್ಧವಾಗಿ ಸ್ಪರ್ಶಿಸ -ಬೇಕು. ತೋರುಬೆರಳುಗಳ
ತುದಿಗಳ ಮೇಲೆತ್ತಿ ಜೋಡಿಸಬೇಕು. ಪರಸ್ಪರ
|
ಉಂಗುರ
ಮತ್ತು ಕಿರುಬೆರಳುಗಳನ್ನು ಹೆಣೆದುಕೊಳ್ಳ -ಬೇಕು.
ಅಗ್ನಿ ಮತ್ತು ಆಕಾಶ ತತ್ವದ ಪ್ರಜ್ಞೆ ಮತ್ತು ವಿಶಾ
-ಲತೆ ಅಪಾರವಾಗಿ ಬೆಳೆಯುತ್ತದೆ. ವಾಯುತತ್ವ ಪರಸ್ಪರ ಜೋಡಿಸಿದಾಗ ಯೋಚನೆ/ಯೋಜನೆಗಳನ್ನು
ಪ್ರದೀಪ್ತಗೊಳಿಸುತ್ತದೆ. ಹೀಗೆ ಪ್ರಜ್ಞೆಯ ಅಪಾರತೆ ಬೆಳೆ -ದು ದೂರಸಂಪರ್ಕ ಬೆಳೆಯುತ್ತದೆ (ಟೆಲಿಪತಿ) ಅನಂತ ಮತ್ತು
ಅಖಂಡ ಪ್ರಜ್ಞೆಯನ್ನು ಋಷಿಗಳು ಇದರಿಂದ ಪಡೆಯುತ್ತಿದ್ದರು ಎನ್ನಲಾಗುತ್ತದೆ (ದೂರಸಂಪರ್ಕಕ್ಕೆ ಮತ್ತು
ಚಿಕಿತ್ಸೆಗಾಗಿ ಪ್ರಯೋಗಿಸುತ್ತಿದ್ದರು)
|
||
36
|
ಪೂರ್ಣ ಪ್ರಜ್ಞಾ ಮುದ್ರೆ: ಧ್ಯಾನಕ್ಕೆ ನಮ್ಮ ಸಂಸ್ಕೃತಿಯಲ್ಲಿ
ಅತ್ಯುಚ್ಚ ಸ್ಥಾನ ನೀಡಲಾ -ಗಿದೆ. ಮನಸ್ಸನ್ನು ನಿಗ್ರಹಿಸಿ,
ಚಿತ್ತ, ಬುದ್ಧಿ ಮತ್ತು ಅಂತರಂಗ ಇವುಗಳ ಹೊಂದಾಣಿ
-ಕೆ ಮಾಡಲು ಈ ಮುದ್ರೆಯಿಂದ ಸಾಧ್ಯ. ಎರಡೂ ಕೈಗಳನ್ನು ಮೇಲ್ಮುಖವಾಗಿಟ್ಟು, ಬೆರಳುಗಳನ್ನು
ಹೊಮುಖವಾಗಿ ಹೆಣೆದು ಕೊಳ್ಳಬೇಕು. ಹೆಬ್ಬೆರಳುಗಳನ್ನು ಮೇಲೆ ಜೋಡಿಸಬೇಕು ತೋರುಬೆರಳುಗಳನ್ನು
|
ಉಂಗುರದಂತೆ
ಒಳಮುಖವಾಗಿ ಹೆಣೆದುಕೊಳ್ಳಬೇಕು. ಅಗ್ನಿ ಪ್ರದೀಪ್ತ, ವಾಯುಶಕ್ತಿ ವೃದ್ಧಿ, ಇವೆರಡೂ ತತ್ವಗಳು ಚಿತ್
ಶಕ್ತಿ (ಮನಸ್ಸು), ಜ್ಞಾನಶಕ್ತಿ (ವಿವೇಕ) ಮತ್ತು ಕ್ರಿಯಾಶಕ್ತಿ (ಗತಿ, ಚಲನೆ) ಇವುಗಳನ್ನ ಅಪಾರವಾಗಿ
ಬೆಳೆಸಿ, ಮನಸ್ಸಿನ ಶಕ್ತಿ/ಸಂಪರ್ಕ ವಿಶಾಲವಾಗುತ್ತದೆ. ಧ್ಯಾನ ಸ್ಥಿತಿಯಲ್ಲಿ ಈ ಮುದ್ರೆಮಾಡಿದರೆ
ಗುರು/ಆತ್ಮ/ ಇಷ್ಟದೈವದ ಸಂಪರ್ಕ ಸಾಧ್ಯವೆಂಬುದು ಋಷಿಗಳ ಅಭಿಪ್ರಾಯವಾಗಿದೆ. ಬೆನ್ನಹುರಿ ಮತ್ತು
ಶರೀರದ ಸಾಮ -ರ್ಥ್ಯ ಬೆಳೆದು ಶರೀರ ಸದೃಢವಾಗುವುದು.
|
ಒಟ್ಟು ತಾತ್ಪರ್ಯ: ಈ ಮುದ್ರೆ ಯಂತೆ ಅಮೋಘ ಪರಿಣಾಮ ಬೀರುವ ಕ್ರಿಯೆ ಮತ್ತೊಂದಿಲ್ಲ. |
|
37
|
ಪೂಷಾನ ಮುದ್ರೆ: ಇದು ಪುಷ್ಟಿ ನೀಡುವ ಸೂರ್ಯ ಮುದ್ರೆ. ಬಲಗೈ ಹೆಬ್ಬೆರಳ ತುದಿಗೆ ತೋರುಬೆರಳು ಮತ್ತು ಮಧ್ಯದ
ಬೆರಳ ತುದಿಗಳನ್ನು ಒಂದರ ಮೇಲೊಂದಿ -ಟ್ಟು ಜೋಡಿಸಬೇಕು.
ಎಡಗೈಯಲ್ಲಿ ಹೆಬ್ಬೆರಳ ತುದಿಗೆ ಮಧ್ಯಬೆರಳು,ಉಂಗುರ ಬೆರಳುಗಳನ್ನು ಒಂದರ ಮೇಲೊಂದು ಇಡಬೇಕು. ಉಳಿದ
ಬೆರಳುಗಳನ್ನು ನೇರ
|
-ವಾಗಿ
ಚಾಚಿರಿ. ಉದರದ ನಾಡಿಗಳು ಪ್ರಚೋದನೆ -ಗೊಂಡು, ಪಚನ
ಕ್ರಿಯೆ ಹಾಗು ವಿಸರ್ಜನ ಕ್ರಿಯೆಗಳು ಸಮರ್ಪಕ. ನಾಭಿಚಕ್ರದ ಮೇಲಿನ ಪರಿಣಾಮದಿಂದ ಲಿವರ್, ಸ್ಪ್ಲೀನ್
(ಗುಲ್ಮ) ಮತ್ತು ಗಾಲ್ ಬ್ಲ್ಯಾಡರ್ ಕಾರ್ಯ ಉತ್ತಮ. ಗಾಲ್ ಬ್ಲ್ಯಾಡರ್ ಸ್ಟೋನ್ (ಪಿತ್ಥ -ಕೋಶದಲ್ಲಿನ ಹರಳು / ಕಲ್ಲು) ನಿವಾರಣೆ, ಶರೀರದ -ಲ್ಲಿನ ವಿಷಪೂರಿತ ದ್ರವ್ಯಗಳನ್ನು ಹೊರ ಹಾಕುತ್ತದೆ,
ವಾಂತಿ ಮತ್ತು ವಾತ ಪ್ರಕೋಪ ದೂರ.
|
ಸಂಗ್ರಹ: ವಿವಿಧ ಮೂಲಗಳಿಂದ. ಗ್ರಂಥ ಋಣ: “ ಯೋಗ ಮುದ್ರಾ
ಪ್ರಪಂಚ “, “ ಮುದ್ರಾ ವಿಜ್ಞಾನ ಮತ್ತು ಆರೋಗ್ಯ “,
No comments:
Post a Comment