Thursday, July 29, 2021

BRAHMA GAYATRI MANTRA III ಗಾಯತ್ರಿ ಮಂತ್ರದ ಮಹತ್ವ


 ಗಾಯತ್ರೀ ಮಂತ್ರದ ಮಹತ್ವ

ಮಕ್ಕಳಿಗೆ ಬ್ರಹ್ಮೋಪದೇಶದಲ್ಲಿ ತಂದೆ ಗುರಸ್ಥಾನದಲ್ಲಿ ಗಾಯತ್ರೀ ಮಂತ್ರೋಪದೇಶವನ್ನು ಮಾಡುತ್ತಾರೆ. ಗಾಯತ್ರೀ ಮಂತ್ರೋಪದೇಶ ಪಡೆಯದಿದ್ದರೆ ಯಾವದೇ ಪೂಜೆ  ಪುನಸ್ಕಾರ , ಕರ್ಮ ಏನೂ ಮಾಡಲು ಅಧಿಕಾರವಿಲ್ಲ ಅದಕ್ಕಾಗಿಯೇ ಏಂಟು ವರ್ಷಕ್ಕೆ ಮಕ್ಕಳಿಗೆ ಬ್ರಹ್ಮೋಪದೇಶ ಮಾಡಬೇಕು. ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಏನು ಸಂಸ್ಕಾರ ಕೊಡಬೇಕೊ ಅದನ್ನು ಕೊಡಬೇಕು.... ಮಕ್ಕಳಿಗೆ ಸರಿ ವಯಸ್ಸಿಗೆ ಉಪನಯನ ಮಾಡುವದರಿಂದ ಮತ್ತು ಪ್ರತಿ ದಿನ ಗಾಯತ್ರೀ ಮಂತ್ರ ಪಠಣೆಯಿಂದ ದೈಹಿಕ ,ಮಾನಸಿಕ ವಿದ್ಯೆ ಬುದ್ಧಿ ಏಲ್ಲದರಲ್ಲೂ ತೇಜಸ್ಸನ್ನು ಪಡೆಯುತ್ತಾರೆ.

ವಿಶ್ವಾಮಿತ್ರ ಮಹರ್ಷಿಗಳ ವಿರಚಿತ ಈ ಮಂತ್ರ ಹೇಳುವಂತೆ ನಾಲ್ಕು ವೇದಗಳು ಹುಡುಕಿದರೂ ಈ ಮಂತ್ರಕ್ಕೆ ಸರಿ ಹೊಂದುವ ಬೇರೆ ಮಂತ್ರವಿಲ್ಲ , ಸಮಸ್ತ ವೇದಗಳು , ಯಜ್ಞಗಳೂ , ದಾನಗಳೂ, ವಿವಿಧ ತಪಸ್ಸುಗಳು ದಾನಗಳು ಸೇರಿಸಿದರೂ ಈ ಗಾಯತ್ರೀ ಮಂತ್ರದ ಮಹಾತ್ಮೆಗೆ ಸಮವಾಗಲಾರದು..

ಸ್ವತಃ ಬ್ರಹ್ಮನೇ ಗಾಯತ್ರೀ ಮಂತ್ರದ ಮಹಾತ್ಮೆ ಯನ್ನು ಹೀಗೆ ವರ್ಣಿಸಿದ್ದಾನೆ...

ಗಾಯತ್ರ್ಯಾಃ ನ ಪರಂಜಪ್ಯಂ | ಗಾಯತ್ರ್ಯಾಃ ನ ಪರಂ ತಪಃ l

ಗಾಯತ್ರ್ಯಾಃ ನ ಪರಂ ದ್ಯೇಯಂ | ಗಾಯತ್ರ್ಯಾಃ ನ ಪರಂ ಹುತಃ ll

ಗಾಯತ್ರೀ ಮಂತ್ರ ಜಪಕ್ಕಿಂತಲೂ ಹೆಚ್ಚಿನ ಮಂತ್ರ ಜಪ ಮತ್ತೊಂದಿಲ್ಲ, ಅದಕ್ಕಿಂತಲೂ ತಪಸ್ಸೂ ಬೇರೆ ಇಲ್ಲ . ಆ ಮಂತ್ರಕ್ಕಿಂತಲೂ ಧ್ಯೇಯವಾದುದು ಇನ್ನಿಲ್ಲ . ಗಾಯತ್ರೀ ಹೋಮಕ್ಕಿಂತಲೂ ಹಿರಿದಾದ ಬೇರೆ ಹೋಮವೇ ಇಲ್ಲ ..

ಗಾಯತ್ರೀ ಮಹಾ ಮಂತ್ರ....

ಓಂ ಭೂರ್ಭುವಸ್ಸುವಃ  ತತ್ಸುವಿತುರ್ವರೇಣ್ಯಂ  ಭರ್ಗೋ ದೇವಸ್ಯ ಧೀಮಹಿ 

ಧೀಯೋ ಯೋ ನಃ ಪ್ರಚೋದಯಾತ್

ಇದು ಗಾಯತ್ರೀ ಮಹಾ ಮಂತ್ರ.....ಈ ಮಹಾಮಂತ್ರದಲ್ಲಿ ಮಹಾಶಕ್ತಿ ಅಡಗಿದೆ . ಹೇಗೆ ಅಂದರೆ ಆ ಮಂತ್ರದ ಪ್ರತಿಯೊಂದು ಅಕ್ಷರವೂ ಒಂದೊಂದು ದೇವರ ಬೀಜಾಕ್ಷರವೇ ಆಗಿದೆ . ಈ ಇಪ್ಪತ್ತನಾಲ್ಕು ಅಕ್ಷರಗಳ ಸಮಷ್ಟೀ ಗಾಯತ್ರೀ ಮಂತ್ರ ದಲ್ಲಿ ಗಾಯತ್ರೀ ,ಸಾವಿತ್ರೀ , ಸರಸ್ವತೀ , ಮತ್ತು ಸಂದ್ಯಾ ದೇವತೆಗಳಲ್ಲದೇ ಗಣಪತಿ ಯಿಂದ ಆರಂಭಿಸಿ ತುಲಸಿವರೆಗೆ ಇಪ್ಪತ್ತನಾಲ್ಕು ಪ್ರಮುಖ ದೇವತೆಗಳ ಮತ್ತು ದೈವಿ ಶಕ್ತಿಯ ಉಪಾಸನೆ ಇದೆ. ಆದುದರಿಂದ ಶ್ರದ್ಧಾ ಭಕ್ತಿಯಿಂದ ಮಾಡಿದ ಗಾಯತ್ರೀ ಜಪದ ಪರಿಣಾಮ ವಾಗಿ ಸಾಧಕನಿಗೆ ಇಪ್ಪತ್ತನಾಲ್ಕು ದೇವತೆಗಳನ್ನು ಆರಾಧಿಸಿದ ಶಕ್ತಿಯು ಸಮನ್ವಯವಾಗುತ್ತದೆ. ಗಾಯತ್ರೀ ಮಂತ್ರದ ಪ್ರತಿಯೊಂದು ಅಕ್ಷರವನ್ನು ಬಿಡಿಸಿ ನೋಡಿದಾಗ...‌

1) ತ 2) ತ್ಸ 3) ವಿ 4)ತು 5) ರ್ವ 6) ರೇ 7) ಣಿ 8) ಯಂ 9) ಭ 10) ರ್ಗೋ 11) ದೇ 12) ವ 13) ಸ್ಯ 14) ಧೀ 15) ಮ 16) ಹೀ 17) ಧೀ 18) ಯೋ 19) ಯೋ 20) ನಃ 21) ಪ್ರ 22) ಚೋ 23) ದ 24) ಯಾತ್....

ಹಾಗಾದರೆ ಈ ಇಪ್ಪತ್ತನಾಲ್ಕು ಅಕ್ಷಗಳಲ್ಲಿ ಇಪ್ಪತ್ತನಾಲ್ಕು ದೇವತೆಗಳ ಶಕ್ತಿ ಇರುವುದು 

ಮೊದಲನೇ ಅಕ್ಷರ "ತ" ಕಾರ ಇದು ಅಂಧಕಾರವನ್ನು ತೊಲಗಿಸುತ್ತದೆ. ಇದು ಗಣೇಶ ಗಾಯತ್ರೀ..

ಓಂಏಕದಂತಾಯ ವಿದ್ಮಹೇ ವಕ್ರತುಂಡಾಯ ಧಿಮಹೀ ತನ್ನೋದಂತೀ ಪ್ರಚೋದಯಾತ್

ಎರಡನೇಯ ಅಕ್ಷರ "ತ್ಸ " ಇದು ಉಪಪಾತಕವನ್ನು ಹೋಗಲಾಡಿಸುತ್ತದೆ. ಇದು ನೃಸಿಂಹ ಗಾಯತ್ರೀ

ಓಂ ಉಗ್ರನೃಸಿಂಹಾಯ ವಿದ್ಮಹೇ ವಜ್ರನಖಾಯ ಧೀಮಹಿ ತನ್ನೋ ನೃಸಿಂಹ ಪ್ರಚೋದಯಾತ್

ಮೂರನೇಯ ಅಕ್ಷರ "ವಿ " ಇದು ವಿಕಾರ ವಿಪತ್ತನ್ನು ಹೋಗಲಾಡಿಸುತ್ತದೆ. ವಿಷ್ಣುರ್ಗಾಯತ್ರೀ

ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣುಃ ಪ್ರಚೋದಯಾತ್

ನಾಲ್ಕು " ತು " ಕಾರ ದುಷ್ಟ ಗ್ರಹ ದೋಷವನ್ನು ಹೋಗಲಾಡಿಸುತ್ತದೆ. ಶಿವ ಗಾಯತ್ರೀ

ಓಂ ತತ್ವುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್

ಐದು ಅಕ್ಷರ " ರ್ವ" ಕಾರ ಇದು ಭ್ರೂಣ ಹತ್ಯಾ ದೋಷ ಪರಿಹರಿಸುತ್ತದೆ. ಇದು ಕೃಷ್ಣ ಗಾಯತ್ರೀ.

ಓಂ ದೇವಕಿನಂದಾಯ ವಿದ್ಮಹೇ ವಸುದೇವಾಯ ಧೀಮಹಿ ತನ್ನೋ ಕೃಷ್ಣ ಪ್ರಚೋದಯಾತ್

ಆರು ಅಕ್ಷರ " ರೇ " ಕಾರ ಆಗಮ್ಯಾಗಮನ ದೋಷ ಪರಿಹಾರ ಇದು ರಾಧಾ ಗಾಯತ್ರೀ

ಓಂ ವೃಷಭಾನುಜಾಯ ವಿದ್ಮಹೇ ಕೃಷ್ಣಪ್ರೀಯಾಯ ಧೀಮಹಿ ತನ್ನೋ ರಾಧಾ ಪ್ರಚೋದಯಾತ್

ಏಳು ಅಕ್ಷರ " ಣಿ " ಕಾರ ಅಭಕ್ಷ್ಯಾಭಕ್ಷಣ ದೋಷ ಪರಿಹಾರ ... ಇದು ಲಕ್ಷೀ ಗಾಯತ್ರೀ.

ಓಂ ಮಹಾಲಕ್ಷೀ ಚ ವಿದ್ಮಹೇ ವಿಷ್ಣುಪತ್ನಿ ಚ ಧೀಮಹಿ ತನ್ನೋ ಲಕ್ಷೀ ಪ್ರಚೋದಯಾತ್

ಏಂಟು ಅಕ್ಷರ " ಯಂ." ಕಾರ ಇದು.ಬ್ರಹ್ಮ ಹತ್ಯಾಪಾತಕಗಳನ್ನು ಹೋಗಲಾಡಿಸುತ್ತದೆ ಇದು ಅಗ್ನಿ ಗಾಯತ್ರೀ

ಓಂ ಮಹಾಜ್ವಾಲಾಯ ವಿದ್ಮಹೇ ಅಗ್ನಿಜ್ವಾಲಾಯಚ ಧೀಮಹಿ ತನ್ನೋ ಅಗ್ನಿ ಪ್ರಚೋದಯಾತ

ಒಂಬತ್ತು ಅಕ್ಷರ " ಭ " ಕಾರ ಇದು ಪುರುಷ ಹತ್ಯಾಪಾತಕವನ್ನು ನಾಶಮಾಡುತ್ತದೆ..ಇದು ಇಂದ್ರ ಗಾಯತ್ರೀ

 ಓಂ ಸಹಸ್ರನೇತ್ರಾಯ ವಿದ್ಮಹೇ ವಜ್ರನಖಾಯ ಧೀಮಹಿ ತನ್ನೋ ಇಂದ್ರಃ ಪ್ರಚೋದಯಾತ್

ಹತ್ತು ಅಕ್ಷರ "ರ್ಗೋ"ಕಾರ ಗೋಹತ್ಯಾ ದೋಷದಿಂದ ವಿಮುಕ್ತಿಗೊಳಿಸುತ್ತದೆ. ಇದು ಸರಸ್ವತೀ ಗಾಯತ್ರೀ

ಓಂ ಸರಸ್ವತ್ತೈ ಚ ವಿದ್ಮಹೇ ಬ್ರಹ್ಮಪತ್ನಿ ಚ ಧೀಮಹಿ ತನ್ನೋ ವಾಣಿ ಪ್ರಚೋದಯಾತ್

ಹನ್ನೊಂದು " ದೇ " ಕಾರ ಇದು ಸ್ತ್ರೀ ಹತ್ಯಾದೋಷವನ್ನು ನಿವಾರಿಸುತ್ತದೆ. ಇದು ದುರ್ಗಾ ಗಾಯತ್ರೀ..

ಓಂ ಗಿರಿಜಾಯೈಚ ವಿದ್ಮಹೇ ಶಿವಪ್ರೀಯಾಯೈಚ ಧೀಮಹಿ ತನ್ನೋ ದುರ್ಗಾ ಪ್ರಚೋದಯಾತ್

ಹನ್ನೆರಡು ಅಕ್ಷರ "ವ "ಕಾರ ಇದು ಕೂಡಾ ಸ್ತ್ರೀ ಹತ್ಯಾದೋಷವನ್ನು ಹೋಗಲಾಡಿಸುತ್ತದೆ. ಇದು ಹನುಮದ್ಗಾಯತ್ರೀ

ಓಂ ಅಂಜನೀಸುತಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ತನ್ನೋ ಆಂಜನೇಯ ಪ್ರಚೋದಯಾತ್

ಹದಿಮೂರು ಅಕ್ಷರ " ಸ " ಕಾರ ಇದು ಗುರುಹತ್ಯಾ ದೋಷದಿಂದ ಪಾರುಮಾಡುತ್ತದೆ. ಇದು ಪೃಥ್ವಿ ಗಾಯತ್ರೀ

ಓಂ ಪೃಥ್ವಿದೇವೈ ಚ ವಿದ್ಮಹೇ ಸಹಸ್ರಮೂರ್ತೈಚ ಧೀಮಹೆ ತನ್ನೋ ಪೃಥ್ವಿ ಪ್ರಚೋದಯಾತ್

ಹದಿನಾಲ್ಕು ಅಕ್ಷರ "ಧೀ " ಕಾರ ಮಾತೃ ಮತ್ತು ಪಿತೃ ನಿಂದಾ ಪಾಪವನ್ನು ನಾಶಮಾಡುತ್ತದೆ...ಇದು ಸೂರ್ಯ ಗಾಯತ್ರೀ

ಓಂಭಾಸ್ಕರಾಯವಿದ್ಮಹೇ ದಿವಾಕರಾಯಧೀಮಹಿ ತನ್ನೋಸೂರ್ಯಃ ಪ್ರಚೋದಯಾತ್

ಹದಿನೈದು ಅಕ್ಷರ " ಮ" ಕಾರ ಇದು ಪೂರ್ವ ಜನ್ಮಾರ್ಜಿತ ಪಾಪವನ್ನು ನಾಶಮಾಡುತ್ತದೆ. ಇದು ರಾಮ ಗಾಯತ್ರೀ....

ಓಂ ದಾಶರಥ್ಯಾಯ ವಿದ್ಮಹೇ ಸೀತಾವಲ್ಲಭಾಯ ಧೀಮಹಿ ತನ್ನೋರಾಮಃ ಪ್ರಚೋದಯಾತ್

ಹದಿನಾರು ಅಕ್ಷರ " ಹಿ" ಕಾರ ಇದು ಅಶೇಷ ಪಾಪ ಸಮೂಹವನ್ನು ನಾಶಪಡಿಸುತ್ತದೆ.ಇದು ಸೀತಾ ಗಾಯತ್ರೀ

|| ಓಂ ಜನಕನಂದಿನ್ನೈಚ ವಿದ್ಮಹೇ ಭೂಮಿಜಾಯೈ ಚ ಧೀಮಹಿ ತನ್ನೋ ಸೀತಾ ಪ್ರಚೋದಯಾತ್ ||

ಹದಿನೇಳು ಅಕ್ಷರ " ಧೀ ' ಕಾರ . ಪ್ರಾಣಿ ವಧಾಪಾಪವನ್ನು ನಾಶಮಾಡುತ್ತದೆ. ಇದು ಚಂದ್ರ ಗಾಯತ್ರೀ

ಓಂ ಕ್ಷೀರಪುತ್ರಾಯ ವಿದ್ಮಹೇ ಅಮೃತತತ್ವಾಯ ಧೀಮಹಿ ತನ್ನೋ ಚಂದ್ರಃ ಪ್ರಚೋದಯಾತ್

ಹದಿನೆಂಟನೇಯ ಅಕ್ಷರ " ಯೋ" ಕಾರ ಇದು ಪ್ರತಿಗ್ರಹ ಪಾಪವನ್ನು ನಾಶಮಾಡುತ್ತದೆ...ಇದು ಯಮ ಗಾಯತ್ರೀ..

ಓಂ ಸೂರ್ಯಪುತ್ರಾಯ ವಿದ್ಮಹೇ ಮಹಾಕಾಲಾಯ ಧೀಮಹಿ ತನ್ನೋ ಯಮಃ'ಪ್ರಚೋದಯಾತ್

ಹತ್ತೊಂಬತ್ತು ಅಕ್ಷರ""  ಯೋ ' ಕಾರ ಸರ್ವಪಾಪ ನಿವಾರಕ. ಇದು ಬ್ರಹ್ಮ ಗಾಯತ್ರೀ

ಓಂ ಚತುರ್ಮುಖಾಯ ವಿದ್ಮಹೇ ಹಂಸರೂಢಾಯ ಧೀಮಹಿ ತನ್ನೋ ಬ್ರಹ್ಮ ಪ್ರಚೋದಯಾತ್

ಇಪ್ಪತ್ತನೇಯ ಅಕ್ಷರ " ನ "ಕಾರ , ಇದರಿಂದ ಈಶ್ವರ ಪ್ರಾಪ್ತಿ ಇದು ವರುಣ ಗಾಯತ್ರೀ

ಓಂ ಜಲಬಿಂಬಾಯ ವಿದ್ಮಹೇ ನೀಲಪುರುಷಾಯ ಧೀಮಹಿ ತನ್ನೋ ವರುಣ ಪ್ರಚೋದಯಾತ್

ಇಪ್ಪತ್ತೊಂದು ಅಕ್ಷರ " ಪ್ರ " ಕಾರ .ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ. ಇದು ನಾರಾಯಣ ಗಾಯತ್ರೀ

ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ನಾರಾಯಣ ಪ್ರಚೋದಯಾತ್

ಇಪ್ಪತ್ತೇರಡು ಅಕ್ಷರ "ಚೋ" ಕಾರ ವಿದ್ಯಾ ಬುದ್ಧಿ ಪ್ರಾಪ್ತಿಯಾಗುತ್ತದೆ. ಹಯಗ್ರೀವ ಗಾಯತ್ರಿ 

ಓಂ ವಾಗೀಶ್ವರಾಯ ವಿದ್ಮಹೇ ಹಯಗ್ರೀವಾಯ ಧೀಮಹಿ ತನ್ನೋ ಹಯಗ್ರೀವಃ ಪ್ರಚೋದಯಾತ್

ಇಪ್ಪತ್ತಮೂರು ಅಕ್ಷರ " ದ " ಕಾರ ಬ್ರಹ್ಮ ಪದ ಪ್ರಾಪ್ತಿಗೆ ಸಹಾಯಕ. ಇದು ಹಂಸ ಗಾಯತ್ರೀ

|| ಓಂ ಪರಮಹಂಸಾಯ ವಿದ್ಮಹೇ ಮಹಾಹಂಸಾಯ ಧೀಮಹಿ ತನ್ನೋ ಹಂಸಃ ಪ್ರಚೋದಯಾತ್||

ಇಪ್ಪತ್ತನಾಲ್ಕು ಅಕ್ಷರ " ಯಾತ್" ಕಾರ ತ್ರಿಮೂರ್ತಿಗಳ ಸಿಧ್ದಿಯಾಗಲು ಇದು ಉಪಯುಕ್ತ . ಇದು ತುಲಸೀ ಗಾಯತ್ರೀ.‌‌‌....

|| ಓಂ ತುಲಸ್ಮೈ ಚ ವಿದ್ಮಹೇ ವಿಷ್ಣುಪ್ರೀಯಾಯೈಚ ಧೀಮಹಿ ತನ್ನೋ ಬೃಂದಾ ಪ್ರಚೋದಯಾತ್ ||

ಇವು ಇಪ್ಪತ್ತನಾಲ್ಕು ಅಕ್ಷರ ಗಾಯತ್ರೀ ಮಂತ್ರದಲ್ಲಿ ಇಡೀ ದೇವ ಸಮೂಹವನ್ನೇ ಆರಾದಿಸಿದ ಪುಣ್ಯ ಪ್ರಾಪ್ತಿ ಈ ಒಂದು ಗಾಯತ್ರೀ ಮಂತ್ರದಿಂದ ಇಪ್ಪತ್ತನಾಲ್ಕು ದೇವತೆಗಳು ಅನುಗ್ರಹಿಸುವ ಶಕ್ತಿ ಯ ಪ್ರಾಪ್ತಿ ಗಾಯತ್ರೀ ಮಂತ್ರ ಜಪ ಮಾಡುವವನಿಗೆ ಲಬ್ಯ ವಾಗುತ್ತದೆ.....

ಇನ್ನು ಸಂದ್ಯಾವಂದನೆ ಸಮಯದ ಬಗ್ಗೆ ತಿಳಿಸಿ ಕೊಡುತ್ತೇನೆ

ಸಂಧ್ಯಾವಂದನೆ ಸಮಯ ಮತ್ತು ಮಹತ್ವ.....

ಶ್ಲೋಕ ll ಉತ್ತಮಾ ತಾರಕೋಪೇತಾ ಮಧ್ಯಮಾಲುಪ್ತತಾರಕಾಃ l

ಅಧಮಾ ಸೂರ್ಯಸಹಿತ ಪ್ರಾತಃ ಸಂಧ್ಯಾ ತ್ರಿಧಾಮತಾ ll ..

.ಅಂದರೆ ಪ್ರಾತಃಕಾಲದಲ್ಲಿ ಅರುಣೋದಯ ಮೊದಲು ನಕ್ಷತ್ರ ಗಳಿರುವಾಗಲೇ ಸಂಧ್ಯಾವಂದನೆ ಪ್ರಾರಂಭಮಾಡಿ ಸುರ್ಯೋದಯವಾಗುವವರೆಗೆ ಮುಗಿಸುವದು ಉತ್ತಮ ಪರ್ಯಾಯ . "ಸಂಧೌಭವಾಸಂಧ್ಯಾ" ಎಂಬ ಅವಯವಾರ್ಥದ ಪ್ರಕಾರ ‌ಸಂಧಿ ಕಾಲದಲ್ಲಿ ಉತ್ಪನ್ನವಾಗುವ ಪರಮೇಶ್ವರಿ ಶಕ್ತಿಯು "ಸಂಧ್ಯಾ"ಎನಿಸಿಕೊಳ್ಳುವದು. ಈ ಶಕ್ತಿಗೆ ವಂದನೆ ಮಾಡುವದಕ್ಕೆ ಸಂಧ್ಯಾವಂದನೆ ಎನ್ನುವರು.ಬೆಳಗಿನ ಝಾವ ನಾಲ್ಕು ಗಂಟೆಗಳ ಕಾಲ "ಸತ್ವಗುಣ"ಎನಿಸಿಕೊಳ್ಳುವದು. ಈ ಕಾಲದಲ್ಲಿ ನಕ್ಷತ್ರಗಳು ಮುಳುಗುವದರೊಳಗಾಗಿ ಪ್ರಾತಃಸಂಧ್ಯಾವಂದನೆಯನ್ನು ಮಾಡುವದು ಉತ್ತಮ. ನಕ್ಷತ್ರಗಳು ಮುಳುಗಿ ಸೂರ್ಯನು ಉದಯಿಸುವದರೊಳಗಾಗಿ ಸಂಧ್ಯಾವಂದನೆ ಯನ್ನು ಪುರೈಸುವದು ಮಧ್ಯಮ. ಸೂರ್ಯನು ಹುಟ್ಟಿದ ಮೇಲೆ ಸಂಧ್ಯಾವಂದನೆ ಯನ್ನು ಸತ್ವಗುಣಕಾಲವು ಮುಗಿಯುವದರೊಳಗಾಗಿ ಮುಗಿಸುವದು ಅಧಮ ಪರ್ಯಾಯ..

ಮಧ್ಯಾಹ್ನಿಕ ಸಂಧ್ಯಾಕಾಲ

ಸೂರ್ಯನು ನೆತ್ತಿಯ ಮೇಲೆ ಇರುವ ಕಾಲವೇ ಮಧ್ಯಾಹ್ನಿಕಕ್ಕೆ ಮುಖ್ಯವಾದ ಕಾಲ .ಇದಕ್ಕಿಂತ ಮುಂಚಿತವಾಗಲೀ ಅಥವಾ ಅನಂತರ ವೇ ಆಗಲಿ ಶ್ರೇಷ್ಠವಲ್ಲ...

ಸಾಯಂ ಸಾಂಧ್ಯಾಕಾಲ

ಶ್ಲೋಕ ll ಉತ್ತಮ ಸೂರ್ಯ ಸಹಿತಾ ಮಧ್ಯಮಾಲುಪ್ತಸೂರ್ಯಕಾ l

ಅಧಮಾ ತಾರಕೋಪೇತಾ ಸಾಯಂಸಂಧ್ಯಾ ತ್ರಿಧಾಮತಾll

ಅಂದರೆ ಸೂರ್ಯನು ಅರ್ದ ಮುಳುಗುತ್ತಿರುವಾಗಲೇ ಸಂಧ್ಯಾವಂದನೆ ಮಾಡುವುದು ಉತ್ತಮ. ಸೂರ್ಯನು ಅಸ್ತಮಿತನಾಗಿ ನಕ್ಷತ್ರಗಳು ಹುಟ್ಟುವದಕ್ಕೆ ಮುಂಚೆಯೇ ಸಂಧ್ಯಾವಂದನೆ ಮಾಡುವದು ಮಧ್ಯಮ. ನಕ್ಷತ್ರಗಳು ಹುಟ್ಟಿದ ಮೇಲೆ ಮಾಡುವದು ಅಧಮ. ಮಧ್ಯಾಹ್ನ ನಾಲ್ಕು ಘಂಟೆ ಯಿಂದ ರಾತ್ರಿ ಎಂಟು ಘಂಟೆಯವರೆಗೆ "ಸಾತ್ವಿಕ ಕಾಲ" ಎನಿಸಿಕೊಳ್ಳುವದು. ನಿರ್ದಿಷ್ಟ ಕಾಲದಲ್ಲಿ ಪ್ರಾತಃ ಸಂಧ್ಯಾವಂದನೆ ಯನ್ನಾಗಲಿ, ಸಾಯಂಸಂಧ್ಯಾವಂದನೆಯನ್ನಾಗಲಿ ಸತ್ವಗುಣಕಾಲದ ಒಳಗಾಗಿ ಮಾಡಲು ಅಶಕ್ತರಾದ ಪಕ್ಷದಲ್ಲಿ ಕರ್ಮವನ್ನು ಖಂಡಿತ ವಾಗಿ ಬಿಡದೆ ಅಧಮ ಪಕ್ಷವಾದ ಸತ್ವಗುಣಕಾಲಾವಕಾಶ ನಂತರವಾದರೂ ಆಚರಿಸಬೇಕು. ಸಂಧ್ಯಾಕರ್ಮವನ್ನು ಆಚರಿಸದೆ ಇತರ ಯಾವ ದೇವತಾ ಪೂಜೆಯನ್ನಾಗಲೀ ,ದಾನ, ಧರ್ಮ ಪರೋಪಕಾರಗಳನ್ನಾಗಲಿ ಮಾಡಿದರೂ ಸಾರ್ಥಕವಾಗುವದಿಲ್ಲ . ಇಹಪರಗಳೆರಡಕ್ಕೂ ಸಾಧನವಾದ ಸಂಧ್ಯಾಕರ್ಮವನ್ನು ಪ್ರತಿ ನಿತ್ಯವೂ ಅವಶ್ಯಕವಾಗಿ ಆಚರಿಸಬೇಕು.

No comments:

Post a Comment