Wednesday, July 07, 2021

Immortal BRAHMANA Ashwatthama (ಚಿರಂಜೀವ ಅಶ್ವತ್ಥಾಮ)

  ಚಿರಂಜೀವ ಅಶ್ವತ್ಥಾಮ 

(ಹಲವಾರು ಮರಾಠಿ,ಹಿಂದಿ ಪುಸ್ತಕಗಳಿಂದ ಆಯ್ದ ಭಾಗಗಳ ಕನ್ನಡ ತರ್ಜುಮೆ ಮಾತ್ರ)

      ಅಶ್ವತ್ಥಾಮನು ಕೃಪಾಚಾರ್ಯರ ಸಹೊದರಿ ಕೃಪೀ ಮತ್ತು ದ್ರೋಣಾಚಾರ್ಯರ ಏಕೈಕ ಪುತ್ರ. ಅವನು ಕಪಾಲೀ, ಪಿಂಗಲ, ಭೀಮ, ಶಾಸ್ತಾ, ವಿರೂಪಾಕ್ಷ, ವಿಲೋಹಿತ, , ಅಜಪಾದ, ಅಹಿರ್ಬುಧ್ನ್ಯ, ಶಂಭು, ಚಣ ಮತ್ತು ಭವ ಈ  11 ರುದ್ರರಲ್ಲಿ ಯ ಅಂಶಾವತಾರ ಮತ್ತು  ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮ ಮತ್ತು ಮಾರ್ಕಂಡೇಯ ಈ ಎಂಟು ಜನ  ಚಿರಂಜೀವರಲ್ಲಿ ಓರ್ವ . ಈ ಕಲಿಯುಗದಲ್ಲಿಯೂ  ಅಶ್ವತ್ಥಾಮನು ತನ್ನ ಎಂದೆಂದಿಗೂ 

ಗುಣಮುಖವಾಗಲಾರದ ಹಣೆಯ ಹುಣ್ಣನ್ನೂ, ದುರ್ವಾಸನೆಯನ್ನೂ ಸಹಿಸಿಕೊಳ್ಳುತ್ತ ಸರ್ವಸಾಮಾನ್ಯ ಜನರಿಗೆ  ದರ್ಶನ ಕೊಡುತ್ತಲಿದ್ದಾನೆ ಎಂದು  ಹಲ ಕೆಲವರ ವಿಶ್ವಾಸ ವಿದೆ ಈ ಎಲ್ಲ ಘಟನೆಗಳ ಮೇಲೆ  ಆದ ಸಂಶೋಧನಗಳ ನಂತರ ಕೆಲವೊಂದು ವಿವರಣೆಗಳು ತಿಳಿದು ಬಂದವು ಇನ್ನೂ ಕೆಲವೊಂದನ್ನು ಸಂಶೋಧಕರಿಗೆ ಬಿಡಲಾಗಿದೆ. 

         ಮಹಾಭಾರತದ ನಂತರ ಅಶ್ವತ್ಥಾಮನು  ಜನಸಾಮಾನ್ಯರಿಗೆ ಭೆಟ್ಟಿಯಾದ ಮೊಟ್ಟ ಮೊದಲ ಉಲ್ಲೇಖವು 12ನೇ ಶತಮಾನದಲ್ಲಿ ಬರೆದ  ’ಪೃಥ್ವೀರಾಜ ರಸೋ’ ಈ ಪುಸ್ತಕದಿಂದ ತಿಳಿದು ಬರುತ್ತದೆ. 1192 ರಲ್ಲಿ ಪೃಥ್ವೀರಾಜ  ಚೌಹಾಣ  ಮತ್ತು  ಮಹಮ್ಮದ ಘೋರೀಯರ ನಡುವೆ ಆದ ಕಾಳಗದಲ್ಲಿ  ಹಳದಿಘಟ್ಟದ  ಪರಾಭವದ ಪರಿಣಾಮ ಪೃಥ್ವೀರಾಜ ಚೌಹಾಣನು ವನವಾಸಿಯಾದ . ಆ ಅರಣ್ಯ ಭಾಗದಲ್ಲಿ ಹಣೆಯ ದುರ್ವಾಸನೆಯ ಹುಣ್ಣನ್ನು ಹೊತ್ತ , ಒಬ್ಬ ಅತಿ ಎತ್ತರನಾದ ಮನುಷ್ಯನ ಭೆಟ್ಟಿ ಯಾಯಿತಂತೆ. ಪೃಥ್ವೀರಾಜನು ಸ್ವತಃ ಉತ್ತಮ ವೈದ್ಯನಾದುದರಿಂದ ತಾನೆ ಕನಿಕರದಿಂದ ಸುಮಾರುದಿನಗಳವರೆಗೆ ಗಾಯದಮೇಲೆ ಸೂಕ್ತ ಉಪಚಾರ ಮಾಡಿದ. ಆದರೆ ಗಾಯದಲ್ಲಿ ಸ್ವಲ್ಪವೂ ವಾಸಿಯಾಗುವ ಚಿಹ್ನೆ ಕಾಣ ಬರದಾದಾಗ ಪೌರಾಣಿಕ ಹಿನ್ನೆಲೆಯನ್ನು ತಿಳಿದಿದ್ದ ಪೃಥ್ವೀರಾಜನು  ಸಂಶಯಪಟ್ಟು ಆ ವ್ಯಕ್ತಿಯ ದೀರ್ಘಕಾಯ, ತೀಕ್ಷ್ಣ  ತೇಜಯುತ ದೃಷ್ಟಿ, ಬ್ರಾಹ್ಮಣ್ಯಯುಷ್ಟಿ ಎಲ್ಲವೂ ಕಂಡು ಭಯದಿಂದಲೆ ಆ ವ್ಯಕ್ತಿಯನ್ನುದ್ದೇಸಿಶಿ  ’ತಾವು ಮಹಾಯೋಧರಾದ  ಅಶ್ವತ್ಥಾಮರೇ ?’ ಎಂದು ಕೇಳಿದರು. ಪ್ರಶ್ನೆಗೆ ಹೂಂ ಗುಟ್ಟಿ ಪೃಥ್ವೀರಾಜ ನನ್ನು ಆಪಾದಮಸ್ತಕದವರೆಗೆ ನೋಡಿ  ಕ್ಷಣವೂನಿಲ್ಲದೆ ಅಶ್ವತ್ಥಾಮನು ಹೊರಟು ಹೋದನು.

      ಅನಂತದ  ಉಲ್ಲೇಖ 15 ನೇ ಶತಮಾನ ದಲ್ಲಿ ಆದದ್ದು ಕಂಡುಬರುತ್ತದೆ. 15 ನೇ ಶತಮಾನದ ಮೊದಲಲ್ಲಿ  ಕರ್ನಾಟಕದಲ್ಲಿಯ  ’ಗದಗ’ ದಲ್ಲಿ ’ನಾರಾಯಣಪ್ಪ’ ಎಂಬವರ ಬ್ರಾಹ್ಮಣ ಕುಟುಂಬ ಒಂದಿದ್ದು ನಾರಣಪ್ಪನವರು ಕನ್ನಡ ಭಾಷೆಯಲ್ಲಿ ಬರೆದ  ’ಕರ್ನಾಟ ಭಾರತ ಕಥಾಮಂಜಿರೀ’ ಎಂಬ ಗ್ರಂಥದಿಂದಲೆ ಅವರನ್ನು ’ಕುಮಾರವ್ಯಾಸ’ ಎನ್ನುವ ನಾಮಾಂಕಿತದಿಂದ ಪ್ರಸಿದ್ಧರಾಗಿದ್ದಾರೆ. ಅವರಿಗೆ ಮಹಾಭಾರತವನ್ನು ’ನಡೆದಂತೆಯೇ’ ಬರೆಯಬೇಕೆಂಬ ಅಭಿಷ್ಟೆ ಇತ್ತು.  ಅದಕ್ಕಾಗಿ ಯಾರ ಕಣ್ಮುಂದೆ  ಮಹಾಭಾರತದ ಘಟನೆಗಳು ನಡೆದು ಹೋಗಿವೆಯೋ ಅವರನ್ನೆ ಭೆಟ್ಟಿಯಾಗುವ ತನ್ನ ಇಚ್ಚೆಯನ್ನು ತನ್ನ ಕುಲದೇವರಾದ  ’ಶ್ರೀ ವೀರ ನಾರಾಯಣ ’ ದೇವರ ಸನ್ನಿಧಿಯಲ್ಲಿ ವ್ಯಕ್ತಪಡಿಸಿದ ಅನೇಕ ವರ್ಷಗಳ ನಿರಂತರ ಬೇಡಿಕೆಗೆ ದೇವರು ಸುಪ್ರೀತನಾಗಿ ನಾರಣಪ್ಪನವರ ಸ್ವಪ್ನದಲ್ಲಿ ಬಂದು  ’  ಈ ದೇವಾಲಯದಲ್ಲಿ ಜರುಗುವ  ’ದ್ವಾದಶೀ ಪಾರಣ’ ಎಂಬ ಉತ್ಸವಕ್ಕೆ ನೀನು ಖುದ್ದಾಗಿ ಹಾಜರಿದ್ದು  ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರು . ಉತ್ಸವದ ಮುಕ್ತಾಯದ ಮೊದಲಲ್ಲಿ ಹೊರಟು ಹೋಗುವುದರಲ್ಲಿದ್ದ ಬ್ರಾಹ್ಮಣರ ಪಾದಗಳಲ್ಲಿ ಸಾಷ್ಟಾಂಗನಮಸ್ಕಾರ ಹಾಕಿ  ’ ನನ್ನ ಇಚ್ಚೆಯಂತೆ, ನನ್ನ ಕುಲದೇವರ ಅನುಗ್ರಹದಂತೆ ಮಹಾಭಾರತದ ಸಮಗ್ರ ಘಟನೆಗಳು ಹೇಗೆ ನಡೆದಿವೆಯೊ ಹಾಗೆ ಹೇಳುವ ಕೃಪೆಯಾಗಬೇಕು ’ ಎಂದು ವಿನಂತಿಸಿಕೊ . ಅವರು ಪ್ರತ್ಯಕ್ಷ ವೀರಾಗ್ರಣಿ  ಶ್ರೀ ದ್ರೋಣಾಚಾರ್ಯ ಪುತ್ರ ಅಶ್ವತ್ಥಾಮ ರಾಗಿದ್ದಾರೆ  ಅವರು ಹೇಳಿ ದಂತೆಯೇ ಬರೆಯುತ್ತ ಹೋಗು.’

                             ನಿಯೋಜಿಸಿದಂತೆಯೆ ನಾರಣಪ್ಪನವರು ಶ್ರೀ ವೀರ ನಾರಾಯಣ ದೇವರ ಸನ್ನಿಧಿಯಲ್ಲಿ ಬಂದ ವಿಪ್ರೋತ್ತಮರಿಗೆ ಸಾಷ್ಟಾಂಗವೆರಗಿ ತನ್ನ ಸಾಹಿತ್ಯ ಬೇಡಿಕೆಯನ್ನು ಅವರಿಗೆ ತಿಳಿಸಿ ವಿನಂತಿಸಿಕೊಂಡ  ಆಗ ಆ ಬ್ರಾಹ್ಮಣೋತ್ತಮರು ದೇವರ ಇಚ್ಚೆಯೇ ಇದೆಯೆಂದು ಕಾಣುತ್ತದೆ ಹಾಗೆ ಆಗಲಿ  ಆದರೆ ನನ್ನ ಎರಡು ಶರತ್ತುಗಳಿವೆ ಅವನ್ನು ತಪ್ಪದೆ ಪಾಲಿಸುವಿಯಾದರೆ ಒಪ್ಪಿಗೆ ಎಂದು ಹೇಳಿ ಮೊದಲ ಶರತ್ತಿನಂತೆ ಸ್ನಾನಾನಂತರ ಉಟ್ಟ ಒದ್ದೆ ಬಟ್ಟೆಯಿಂದಲೆ ನಿನ್ನ ಲೇಖನ ಪರಿಕರಗಳನ್ನೆಲ್ಲ ತೆಗೆದುಕೊಂಡು ಬಂದು ದೇವಾಲಯದ ಒಂದು ಕೊಠಡಿಯಲ್ಲಿ ಬಾಗಿಲು ಮುಚ್ಚಿ ನಾನು ಹೇಳಿದಂತೆ ಬರೆಯುತ್ತ ಹೋಗಬೇಕು  ಮೈಮೇಲಿನ ವಸ್ತ್ರ ಒಣಗಿದ ಕೂಡಲೇ  ಆ ದಿನದ ಬರೆಯುವ ಕೆಲಸ ಮುಕ್ತಾಯವಾಯಿತೆಂದೆ ಅರ್ಥ, ಹೀಗೆಯೆ ನಾನು ಹೇಳಿದಂತೆ ಬರೆಯುತ್ತ ಹೋಗುವುದು . ಎರಡನೇ ಶರತ್ತಿನಂತೆ  ನೀನು ಬರೆದ ಈ ಪ್ರತ್ಯಕ್ಷ ಕಂಡತೆ ಬರೆದ ಅದ್ಭುತ ಮಹಾಭಾರತ ಮೇರು ಸಾಹಿತ್ಯವನ್ನು ಯಾರು ಹೇಳಿದರು ಎಂಬುದನ್ನು ಗುಪ್ತವಾಗಿರಿಸುವದು. 

ಎರಡೂ ಶರತ್ತುಗಳಿಗೆ ಒಪ್ಪಿದ ನಾರಣಪ್ಪನವರು ಆ ಬ್ರಾಹ್ಮಣ ಮಹಾಶಯರಾದ ಅಶ್ವತ್ಥಾಮನವರು ಹೇಳಿದಂತೆಯೆ ಬರೆಯುತ್ತ ಹೋದ. ದಿನ ನಿತ್ಯದ  ಈ ಕ್ರಿಯೆ ಸುಮಾರು ತಿಂಗಳುಗಳವರೆಗೆ ನಡೆಯುತ್ತಲಿದ್ದಂತೆ ಕುರುಕ್ಷೇತ್ರಯುದ್ಧದ ಕೊನೆಯ ಗಳಿಗೆಯಾದ ಭೀಮ ದುರ್ಯೋಧನರ ನಡುವೆ ನಿರ್ಣಾಯಕ ಕಾಳಗ  ’ ಗದಾಪರ್ವ ’ ದ ವರೆಗೆ ಬಂದು, ಕೊನೆಯ ಗಳಿಗೆಯಲ್ಲಿ ಭೀಮನು ತನ್ನ ಪತ್ನಿಯ ಅಪಮಾನದ ಘಟನೆ,  ತೊಡೆ ಒಡೆಯುವ ಪ್ರತಿಜ್ನೆ ನೆನಪಿಸಿಕೊಂಡು ಮಾಡಿದ  ದುರ್ಯೋಧನನ ಭೀಕರವಾದ ವಧೆಯ ಪ್ರಸಂಗದವರೆಗೆ ಕಥೆ ಬಂದು ನಿಂತಾಗ  ತನ್ನ ಮಿತ್ರನ ವಧೆ ಕಣ್ಮುಂದೆ ಬಂದು ಅಶ್ವತ್ಥಾಮರು ವ್ಯಥಿತರಾಗಿ ತಾಳಲಾಗದೆ ಅಳಲು ಆರಂಭಿಸಿದರು, ವ್ಯಥಿತ ಭಾವನೆಯ ಭರದಲ್ಲಿ ಬರೆಯುವುದನ್ನು ನಿಲ್ಲಿಸಿ ನಾರಣಪ್ಪನವರೂ ಅಳಲಾರಂಭಿಸಿದರು. ಇದೆಲ್ಲದರ ನಡುವೆ ಅಶ್ವತ್ಥಾಮರು ಯಾವಾಗ ಎದ್ದು ಹೋದರೋ ಗೊತ್ತಾಗಲಿಲ್ಲ,          

                ಆದರೆ ಇಲ್ಲಿಯವರೆಗೂ ಕಣ್ಮುಂದೆ ನಡೆದಂತೆ ಬರೆಯುವ  ಮಹಾಭಾರತದ ಕಥೆ ನಿಲ್ಲುವಂತಾಯಿತು. ಬ್ರಾಹ್ಮಣೊತ್ತಮ ಅಶ್ವತ್ಥಾಮರ ದಿನ ನಿತ್ಯದ ಸಹವಾಸ, ಅವರು ವಿವರಿಸುವ ಪ್ರಸಂಗಗಳ ಶೈಲಿ ಎಲ್ಲವೂ ನೆನಪಾಗಿ ಮತ್ತು ತನ್ನ ನಿಯೋಜಿತ ಕಥೆ ನಿಂತು ಹೋಯಿತು ಎಂದು ದುಃಖಿತನಾಗಿ  ತನ್ನೆಲ್ಲ ವ್ಯಥೆಯನ್ನು ನಾರಣಪ್ಪನವರು ತನ್ನ ಪತ್ನಿಯ ಮುಂದೆ ಹೇಳಿಕೊಂಡರು. ಅಶ್ವತ್ಥಾಮರು ವಿವರಿಸುವ ಕಥಾರುಚಿ ವಿಚಾರಸರಣಿಯ ಭಾವಗಳು ನಿರಂತರ ಸಹವಾಸ ಇದೆಲ್ಲದರ ಕಾರಣ ನಾರಣಪ್ಪನವರಲ್ಲಿ ಸ್ವಯಂಭು ತಾನಾಗಿಯೇ ಅವರದೆ ಆದ ಒಂದು ಶೈಲಿ ಹೊಮ್ಮಿಕೊಂಡಿತ್ತು.  ಅದೆ ಅವರಿಗೆ ಮುಂದೆ ದಾರಿ ದೀಪವಾಯಿತು. ಇನ್ನೂ ಅನೇಕರು ಬೇರೆ ಬೇರೆ ಗ್ರಂಥಕಾರರು  ಮಹಾಭಾರತದ ಪ್ರಸಂಗಗಳನ್ನು ಬರೆದಿದ್ದರೂ ಸಹಿತ  ಕುಮಾರವ್ಯಾಸನು ಬರೆದ  ಮಹಾಭಾರತವೇ ಎಲ್ಲವುಗಳಲ್ಲಿ ನಿಜವಾದ, ಪ್ರಗಲ್ಭವಾದ ಕಥಾಸಂಗ್ರಹವೆಂದು ಹೇಳಿಕೆಯಿದೆ, ಯಾಕೆಂದರೆ ಕುಮಾರವ್ಯಾಸನ ಮಹಾಭಾರತವನ್ನು ಪ್ರತ್ಯಕ್ಷವಾಗಿ ಅಶ್ವತ್ಠಾಮರೇ ಅದನ್ನು ವಿವರಿಸಿದ್ದು ಎಂದು ಹೇಳಿದರೆ ತಪ್ಪಾಗಲಾರದು. 

                        ಸುಮಾರು ೨೦೦ ವರ್ಷಗಳ ಮೊದಲು  " ಶ್ರೀ ಶತಾನಂದ ಮುನಿ " ಯವರ ಲಿಖಿತ ’ಸತ್ಸಂಗೀ ಜೀವನ’ ಎಂಬ ಗ್ರಂಥದಲ್ಲಿ ಅಶ್ವತ್ಥಾಮರ ಉಲ್ಲೇಖವಿರುವುದು ಕಂಡುಬರುತ್ತದೆ. ಭಗವಾನ ’ಸ್ವಾಮೀ ನಾರಾಯಣ’ ರ ತಾಯಿ  ’ಭಕ್ತೀಮಾತಾ’ ಮತ್ತು ತಂದೆ  ’ಧರ್ಮದೇವ’ ಈ ದಂಪತಿಗಳು ತಮ್ಮ ಕುಲದೇವರಾದ ಶ್ರೀ ಹನುಮಂತದೇವರನ್ನು  ಪುತ್ರ ಕಾಮನೆಗಾಗಿ ಪೂಜಿಸಿ ಆರಾಧನೆ ಗೈಯಲು ಅಯೋಧ್ಯಾದಲ್ಲಿಯ " ಹನುಮಾನ ಗಢೀ " ಎಂಬಲ್ಲಿಗೆ ಹೋದರು. ಘನತರ ಸಾಧನೆಯ ನಂತರ  ಕುಲದೆವರು ನೀಡಿದ ದೃಷ್ಟಾಂತದಂತೆ   ವೃಂದಾವನದಲ್ಲಿಯ  ಪೂರ್ಣಾವತಾರ ಶ್ರೀಕೃಷ್ಣ ದೇವರನ್ನು ಭಕ್ತಿಯಿಂದ ಪೂಜಿಸಿದನಂತರ ಭಗವಾನ ಶ್ರೀಕೃಷ್ಣನೆ ದೃಷ್ಟಾಂತ ಕೊಟ್ಟು " ನೀವಿಬ್ಬರು ದಂಪತಿಗಳು ಆದಷ್ಟುಬೇಗ ’ಶರಯೂ’ ನದಿದಂಡೆಯಮೇಲಿರುವ  ’ಚಪೈಯ್ಯಾ’ ಗ್ರಾಮವನ್ನು ತಲುಪಿರಿ ಯಾಕೆಂದರೆ ಸಾಕ್ಷಾತ್ ಶ್ರೀಕೃಷ್ಣನೆ ತಮ್ಮೀರ್ವರ ಪುತ್ರನಾಗಿ ಜನ್ಮಿಸುವವನಿದ್ದಾನೆ.  ಪತಿ-ಪತ್ನಿಯರು ಆನಂದಚಿತ್ತದಿಂದ ಹಿಂದಿರುಗಿ ತಮ್ಮ ಗ್ರಾಮದಕಡೆಗೆ ಹೊರಟಾಗ ರಾತ್ರಿಯಾಗಿದ್ದು ಅರಣ್ಯದ ದಾರಿಯುದ್ದಕ್ಕೂ ದೇವರ ಧ್ಯಾನದಲ್ಲಿದ್ದಾಗ ಎದುರಿಗೆ ಒಬ್ಬ ದೀರ್ಘಕಾಯದ ಅಂಗಸೌಷ್ಟವವನ್ನು ಹೊಂದಿದ ಕಾಷಾಯ ವಸ್ತ್ರ ಪರಿಧಾನ ಮಾಡಿದ  ಬ್ರಾಹ್ಮಣರನ್ನು ಕಂಡರು, ಅವರ ಕಣ್ಣುಗಳು ಸಿಟ್ಟಿಗೆ ಬಂದವರ ಹಾಗೆ ಕಡುಗೆಂಪಾಗಿದ್ದು ಹಣೆಯಮಧ್ಯಕ್ಕೆ ವಸ್ತ್ರವನ್ನು ಕಟ್ಟಿದ್ದರು. ಹತ್ತಿರ ಬಂದಹಾಗೆ ಆ ವ್ಯಕ್ತಿಯೇ ಈ ದಂಪತಿಗಳನ್ನುವಿಚಾರಿಸಿದಾಗ ಅತ್ಯಂತ ಭೀತಿಯಿಂದ ಮುಗ್ಧತೆಯಿಂದ ತಮ್ಮೆಲ್ಲ ಕಥೆಯನ್ನು ಹೇಳಿದರು ಮತ್ತು ಇಷ್ಟರಲ್ಲೆ ಭಗವಾನ ಶ್ರೀ ಕೃಷ್ಣನೇ ನಮ್ಮಲ್ಲಿ ಪುತ್ರನಾಗಿ ಅವತರಿಸಬಹುದು, ಎಂದುಹೇಳಿದ ಕೂಡಲೆ, ಅದಕ್ಕೆ ಆ ಬ್ರಾಹ್ಮಣ ಮಹಾಶಯರು ಕಿಂಚಿತ್ ಸ್ಮಿತ ಹಾಸ್ಯಮಾಡಿ ಶ್ರೀ ಕೃಷ್ನನೆಂದರೆ ನನ್ನ ಒಂದುಕಾಲದ ಎದುರಾಳಿ, ಅವನು ನಿಮ್ಮಲ್ಲಿ ಜನ್ಮಿಸುವನೇ ?  ನಿಮ್ಮ ಉದರದಲ್ಲಿ ಅವತರಿಸುವ ಆ ಮಗುವಿನಿಂದ ವಸುದೇವ ದೇವಕಿಯರಿಗೆ ಆದ ಕ್ಲೇಷವನ್ನೂ, ನನಗೆ ಇಲ್ಲಿಯವರೆಗೆ ಅವನಿಂದಾದ ಯಾತನೆ ಗಳನ್ನೂ  ನೀವೂ ಅನುಭವಿಸುವಿರಿ. ನಿಮಗೆ ಹುಟ್ಟುವ ಮಗು ಎಂದೆಂದಿಗೂ ಕೈಯಲ್ಲಿ ಶಸ್ತ್ರಧಾರಣೆ ಮಾಡಲಾರ ಮತ್ತು ತಾನು ಯಾವ ಯುದ್ಧದಲ್ಲಿಯೂ ವಿಜಯಿಯಾಗಲಾರ, ಆದರೆ ಚತುರ ವಾಗ್ಮಿಯಾಗಬಹುದು  ಎಂದು ಹೇಳಿ ಧರ್ಮದೇವನನ್ನು ನೂಕಿ ಜೋರಾಗಿ ಹೆಜ್ಜೆ ಹಾಕುತ್ತ ಬ್ರಹ್ಮ್ಮೋತ್ತಮ ಹೋರಟುಹೋದ. ಪತಿ ಪತ್ನಿಯರು ಒಂದು ಕಡೆ ದುಃಖಿತರಾದರು ವ್ಯಥೆಯಿಂದ ತತ್ತರಿಸಿದರು,ಇನ್ನೊಂದೆಡೆ ಹರ್ಷಿತರಾದರು. ಚಿಂತೆಯಲ್ಲಿರುವ ಅವರಿಗೆ ಆ ರಾತ್ರಿ ಕನಸಿನಲ್ಲಿ  " ದೇವರ ಅವತಾರಕ್ಕೆ ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿಯುವ, ಯುದ್ಧಮಾಡಿ ಗೆದೆಯುವ ಅವಶ್ಯಕತೆ ಏನಿದೆ, ಸ್ವತಃ ಶ್ರೀ ಕೃಷ್ಣನು ಕುರುಕ್ಷೇತ್ರ ರಣರಂಗದಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದನೇ ಆದರೂ ಯುದ್ಧದಲ್ಲಿ ವಿಜಯಿಯಾಗಲಿಲ್ಲವೇ ? ’ ಎಂದು ಧೈರ್ಯ ಕೊಟ್ಟ ಮಾರುತಿರಾಯನೇ ಮಾರ್ಗದರ್ಶಕನಾದ. ಅವರಲ್ಲಿ ಹುಟ್ಟಿದ ಮಗುವೆ ಮುಂದೆ ಪರಮ ಜ್ನ್ಯಾನಿಯಾಗಿ ಗುರ್ಜರ ಪ್ರಾಂತ ದಲ್ಲಿ ಜನ ಸಾಮಾನ್ಯರಿಂದ ಆರಾಧಿಸಲ್ಪಡುವ   ಶ್ರೀ ಸ್ವಾಮಿ ನಾರಾಯಣರೆಂದು ಹೆಸರಾಗಿ ಶ್ರೀ ಕೃಷ್ಣ ದೇವರ ಲೀಲೆಗಳ, ಕರ್ಮ ಸಿದ್ಧಾಂತದ  ಪ್ರಸಾರ ಮಾಡಿದರೆಂದು ಪ್ರಚೀತಿ. 

                  ಅನಂತರದಲ್ಲಿ  ಅಶ್ವತ್ಥಾಮರಬಗ್ಗೆ ಇರುವ ಬರವಣಿಗೆಯೆಂದರೆ  ಶ್ರೀವಾಸು ದೇವಾನಂದ ಸರಸ್ವತಿ ಎಂದರೆ  ’ಟೇಂಬೇ ಸ್ವಾಮೀ’ ಯವರ  ಜೀವನಚರಿತ್ರೆಯಲ್ಲಿ  ಕಾಣಸಿಗಬಹುದು . 1912 ರಲ್ಲಿ  ಶ್ರೀ ವಾಸುದೇವಾನಂದ ಸರಸ್ವತಿ ಯವರು ದೇಶಪರ್ಯಟನದಲ್ಲಿದ್ದಾಗ ’ಶೂಲಪಾಣೀಶ್ವರ’ ಎಂಬ ಅರಣ್ಯದಲ್ಲಿ ದಾರಿ ತಪ್ಪಿಸಿಕೊಂಡರು . ಆಗ ಆ ಅರಣ್ಯದಲ್ಲಿ ಹಣೆಗೆ   ರಕ್ತ ಕೀವಾ. ಗಿರುವ  ಗಾಯವಿರುವ ಎತ್ತರವಾಗಿರುವ ವ್ಯಕ್ತಿ ಕಂಡು ಬಂದ. ಮತ್ತು ಆ ವ್ಯಕ್ತಿಯೆ ಅರಣ್ಯದಿಂದ ಹೊರಬೀಳುವ ದಾರಿ ತೋರಿಸಿ ಮುಂದಿನ ಗ್ರಾಮದವರೆಗೂ ಕರೆತಂದು ಬಿಟ್ಟಾಗ  ಟೆಂಬೆ ಸ್ವಾಮಿಯವರೆ ಕೇಳಿದರು, ’ ನಿಮ್ಮ ದೇಹ ಯುಷ್ಟಿ,ಠೀವಿ ಎಲ್ಲವೂ ಕ್ಷತ್ರೀಯರಂತಿದ್ದು ಬ್ರಹ್ಮತೇಜಸ್ಸಿದೆ ತಾವು ಈಗಿನ ಸಾಮಾನ್ಯ ಮನುಷ್ಯರಂತಿಲ್ಲ. ನೀವು ಯಕ್ಷ ,ಗಂಧರ್ವ ಅಥವಾ ದೇವದೂತರೇ ಸರಿ, ನಿಜವಾಗಿ ತಾವ್ಯಾರೆಂಬುದನ್ನು ಹೇಳುತ್ತಿರಾ ?  ಎಂದಾಗ " ನೀವೆನ್ನುತ್ತಿರುವುದು ಸರಿ,  ನಾನು ಈ ಯುಗದಲ್ಲಿಯವನಲ್ಲ  ನಾನು ದ್ವಾಪರ ಯುಗದಲ್ಲಿಯ ಶಾಪಿತ ವ್ಯಕ್ತಿ ಅಶ್ವತ್ಥಾಮ’. ಎಂದು ಹೇಳಿದ ಕೂಡಲೆ ಶ್ರೀ ವಾಸುದೇವಾ ನಂದ ಸರಸ್ವತಿ ಯವರು ಗದ್ಗದಿತರಾಗಿ ಪಾದಕ್ಕೆರಗಿದರು ದೀರ್ಘಾಯುರ್ಭವ ಎಂದು ಆಶೀರ್ವದಿಸಿ ಅಶ್ವತ್ಥಾಮರು ಹೊರಟು ಹೋದರು.

     ಮಾಲೂ ಕವಿ ಶ್ರೀ ಧುಂಡಿಸುತ ವಿರಚಿತ " ಶ್ರೀ ನವನಾಥ ಭಕ್ತಿಸಾರ "  ದೇವನಾಗರಿಯಲ್ಲಿ ಲಿಖಿತ ತ್ರಿಪದಿಗಳಲ್ಲಿರುವ ಪರಮ ಪ್ರಾಸಾದಿಕ ಶ್ರೇಷ್ಠ ಗ್ರಂಥದಲ್ಲಿಯೂ ದೊರೆಯುತ್ತದೆ ಗುಜರಾತದ ಗಿರಿನಾರ ಪರ್ವತದ ಅರಣ್ಯ ಪ್ರದೇಶದಲ್ಲಿ ಅಶ್ವತ್ಥಾಮ ಶಿವಾಲಯದ ಆವರಣದಲ್ಲಿ ತಿರುಗಾಡುತ್ತಿರುವುದರ ಬಗ್ಗೆ ಬರೆದಿದೆ, ಶಿವಾಲಯದ ಪ್ರಾಸಾದದಲ್ಲಿ ಮಹಾಬಲಿ ಹನುಮಂತದೇವರು ಕುಳಿತಿರುವ ವಿಷಯವನ್ನೂ ಬರೆಯಲಾಗಿದೆ.     

1968-69ರಲ್ಲಿ, ಪಂಜಾಬ್,ಲುಧಿಯಾನಾದಲ್ಲಿ ಒಬ್ಬ ಪ್ರಸಿದ್ಧ ವೈದ್ಯರಿದ್ದರು. ಅವರು ತುಂಬಾ ಸಮಯವನ್ನು ಧ್ಯಾನ ಮಾಡುತ್ತಿದ್ದರು. ಅವರು ಪಂಜಾಬ್‌ನಲ್ಲಿ ಚಿರಪರಿಚಿತ ಗುರುಗಳಾದ ದಾತಾ  ದಯಾಲ ಅವರ ಭಕ್ತರು . ಒಂದು ದಿನ ಮಧ್ಯಾಹ್ನದ ನಂತರ ಅವರು ಅಂಗಡಿಯನ್ನು ಮುಚ್ಚುತ್ತಿದ್ದಾಗ, ಅದು ಬೇಸಿಗೆಯ ಸಮಯ ಮತ್ತು ಬೇಸಿಗೆಯ ಕಾರಣದಿಂದ ಎಲ್ಲವನ್ನೂ ಮುಚ್ಚಲಾಗಿತ್ತು,  ಆಗ ಒಬ್ಬ ವಯಸ್ಸಾದ ವ್ಯಕ್ತಿಯು ಅವನ ಬಳಿಗೆ ಬಂದನು, ಅವರು ಮುಖವನ್ನು ಮುಚ್ಚಿ ಮಾತನಾಡುತ್ತಿದ್ದರು ಅವರು ಕಚ್ಚಾ ಪಂಜಾಬಿ ಮತ್ತು ಹಿಂದಿ ಮಿಶ್ರ, "ಬಡಾ ನಾಮ್ ಸುನಾ ಹೈ ತೆರಾ, ಭೌತ್ ಬಡಾ ವೈದ್ಯ ಹೈ? ಇಸಕಾ ಇಲಾಜ್ ಕರ್ ಸಕ್ತಾ ಹೈ ? ಗಾಯದಕಡೆಗೆ ತೋರಿಸಿ,  ಅದಕ್ಕೆ ವೈದ್ಯರು  - "ಸಮಸ್ಯೆ ಏನು ಎಂದು ಹೇಳಿ?" ಮತ್ತು ಅವನು ಪಗಡಿಯನ್ನು ತನ್ನ  ತಲೆಯಿಂದ ತೆಗೆದಾಗ, ಹಣೆಯ ಮೇಲೆ ಒಂದು ದೊಡ್ಡ ಆಳವಾದ ಗಾಯವಿತ್ತು. ಈ ಮೊದಲು ಅವನು ಅಂತಹ ಗಾಯವನ್ನು ನೋಡಿರಲಿಲ್ಲ, ಮೆದುಳನ್ನು ಮುಂಭಾಗದಿಂದ ತೆಗೆದುಕೊಂಡು ಹೊರ ಬಂದಂತೆ, ಆದರೂ ಏನೂ ಆಗಿಲ್ಲ ಎಂಬಂತೆ ಚರ್ಮವು ಬಿಗಿಯಾಗಿತ್ತು. ವೈದ್ಯರು ಸ್ವಲ್ಪ ಹೆದರಿದರು  ಆದರೆ ಇನ್ನೂ ಅವನತ್ತ  ನೋಡಲು ಬಯಸುತ್ತೇನೆ ಎಂದು ಹೇಳಿದರು. - "ತೆನು ಪಟಾ ಹೈ ,ಇಲಾಖೆ ಕಾರೂ ಬೈಠನಾ ಹೋಗಾ" ಮತ್ತು ಹೇಳಿದರು - "ನೀವು ಯಾರೆಂದು ನನಗೆ ತಿಳಿದಿದೆ ಆದರೆ  ವಿಷಯವನ್ನು ಪಡೆಯಲು ನನಗೆ ಅವಕಾಶ ಮಾಡಿಕೊಡಿ." ಅವನು ತನ್ನ ವಸ್ತುಗಳನ್ನು ಅಲ್ಮೈರಾದಿಂದ ತರುವ ಹೊತ್ತಿಗೆ, ಆ ಮನುಷ್ಯನು ಹೊರಟು ಹೋಗಿದ್ದನು, ಮತ್ತೆ ಎಂದಿಗೂ ಕಾಣ ಸಿಗಲಿಲ್ಲ. ಆದರೆ ಅವನ ಕಣ್ಣುಗಳು ಯಾವಾಗಲೂ ಏನನ್ನೋ ಹುಡುಕುವಂತಿದ್ದವು, ಅವನಿಗೆ ನೀಲಿ ಕಣ್ಣುಗಳಿವೆ, ಅವು ಅವನ ಮೆದುಳಿನೊಳಗೆ ನೆಟ್ಟಿರಬಹುದಾದ ಆಯುಧದಷ್ಟೇ ತೀಕ್ಷ್ಣವಾಗಿದ್ದವು .

ಅನಂತರದ ಉಲ್ಲೇಖವು ’ಪಾಯಲಟಬಾಬಾ’ ರವರು ಬರೆದ ’ಹಿಮಾಲಯ ಕಹ ರಹಾ ಹೈ’ ಈ ಪುಸ್ತಕದ 9 ನೆ ಪ್ರಕರಣದಲ್ಲಿ ನೋಡಲು ಸಿಗುತ್ತದೆ. ಅಲ್ಲಿ ಅವರು ಬರೆದ ಘಟನೆಯಂತೆ ಅವರು ವಾಸಿಸುವ ಜೋಪಡಿಯಲ್ಲಿ ಮಳೆಯ ನೀರು ಆವರಿಸಿದ ಕಾರಣ ಸಮೀಪದ ಅರಣ್ಯದಲ್ಲಿ ಇರಲು ಹೋದದ್ದರಿಂದ ಅಲ್ಲಿಯೇ ಅಶ್ವತ್ತಾಮಾರವರ ಭೆಟ್ಟಿಯಾಯಿತಂತೆ.                   ಅನಂತರದ 2005 ರಲ್ಲಿ ಪ್ರಜಕ್ತಾ ಪ್ರಕಾಶನ ಪ್ರಕಟಿಸಿದ ಶ್ರೀ ಜಗನ್ನಾಥ ಕುಂಟೆ ರವರು ಬರೆದ ನರ್ಮದಾ ಹರ ಹರ ಪುಸ್ತಕದ 230 ನೇ ಪುಟದಲ್ಲಿ ನೋಡಲು ಸಿಗುತ್ತದೆ  ಅವರು ನರ್ಮದಾವನ್ನು ಸುತ್ತುತ್ತಿರುವಾಗ, ಶೂಲಪಾಣಿ  ಕಾಡಿನಲ್ಲಿ ಜಾರಿಬಿದ್ದು ಕಣಿವೆಯಲ್ಲಿ ಸಿಲುಕಿಕೊಂಡರು.ಆಗ ಅವರನ್ನು ಸ್ವತಃ ಅಶ್ವತ್ಥಾಮನೆ ಮೇಲೆಳೆದುಕೊಂಡನಂತೆ.

ಗುಜರಾತ್‌ನ ನವಸಾರಿ ಅರಣ್ಯದಲ್ಲಿ ರೈಲ್ವೆ ಅಧಿಕಾರಿಯೊಬ್ಬರು 12 ಅಡಿ ಎತ್ತರದ ಅಶ್ವತ್ಥಾಮವನ್ನು ಗುರುತಿಸಿದ್ದಾರೆ, ಮತ್ತು ಮಧ್ಯಪ್ರದೇಶದ ವೈದ್ಯರೊಬ್ಬರು ರೋಗಿಯನ್ನು ಅಶ್ವತ್ಥಾಮಾ  ಎಂದು ಗುರುತಿಸಿದ್ದಾರೆ, ಅವರು ಬಹಳ ಎತ್ತರದ ಮನುಷ್ಯನ ಹಣೆಯ ಮೇಲೆ ಆಗಿರುವ ಗಾಯಕ್ಕೆ  ಹಲವಾರು ದಿನಗಳ ಚಿಕಿತ್ಸೆಯನ್ನೂ ಮಾಡಿದ್ದಾರೆ ಆದರೂ ಗುಣ ಕಂಡುಬರಲಿಲ್ಲ.  ಮುಂದೆ ಆ ಘಟನೆಯ ಬಗ್ಗೆ ಹೆಚ್ಚು ತಿಳಿದುಬಂದಿಲ್ಲ. 

2015 ರಲ್ಲಿ ಪ್ರಕಟವಾದ ಸತೀಶ ಅನಂತ ಚುರಿ ರವರು ಬರೆದ 'ನಮಾಮಿ ನರ್ಮದೆ ' ಪುಸ್ತಕದಲ್ಲಿ ಇತ್ತೀಚಿನ ಉಲ್ಲೇಖವಿದೆ. ಅಶ್ವತ್ಥಮಾ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ್ದಲ್ಲದೆ, ಅವನ ಪಕ್ಕದಲ್ಲಿ ಮಧ್ಯಾಹ್ನದ ಊಟದ ವೇಳೆ ಬಳಿ ಕುಳಿತರು. ಅವನು ತನ್ನ ತಲೆಯ ಸುತ್ತಲೂ ಪ್ಲಾಸ್ಟಿಕ್ ಚೀಲವನ್ನು ಸುತ್ತಿ ಕೊಂಡಿದ್ದ  ಮತ್ತು ಹಣೆಯ ಮೇಲೆ ಆಗಿರುವ  ಕೊಳೆತ ಗಾಯದ ಮೇಲೆ ನೊಣಗಳು ಸುತ್ತುತ್ತಿದ್ದವು. ಸುತ್ತಮುತ್ತಲಿನ ಜನರಿಗೆ ದುರ್ವಾಸನೆ ಸಹಿಸಲು ಸಾಧ್ಯವಾಗದ ಕಾರಣ ಎಲ್ಲರೂ ಮೂಗಿನ ಮೇಲೆ ಕರವಸ್ತ್ರವನ್ನು ಹಾಕಿಕೊಂಡರಂತೆ .  

ಊಟದ ಪಂಗತಿ  ಪ್ರಾರಂಭವಾಗುವ ಮೊದಲು, ಸತೀಶ  ಚುರಿ ಸಾಹೇಬರು  ಅವನನ್ನು ಅಶ್ವತ್ಥಮಾ ಎಂದು ಗುರುತಿಸಿ, ತನ್ನ ಸ್ನೇಹಿತ ಬಾಬಾ ರಾಮ  ಅವರೊಂದಿಗೆ ಕ್ಯಾಮೆರಾ ತೆಗೆದುಕೊಂಡು ಫೋಟೋ ತೆಗೆದುಕೊಳ್ಳುವಂತೆ ಕೇಳಿಕೊಂಡರು. ಆದರೆ ಊಟದ ಗಂಟೆ ಬಾರಿಸಿದ ಕಾರಣ ಅಶ್ವತ್ತಾಮ ಪಂಗತಿಗೆ  ಅವಸರದಿಂದ ನುಗ್ಗಿದನು. ತಟ್ಟೆ ಹಾಕಿ ಅನ್ನ  ಬಡಿಸಿದಾಗ ಎಲ್ಲರೂ ತಿನ್ನಲು ಕುಳಿತಾಗ, ಅಶ್ವತ್ಥಾಮನೆ  ಬಂದು ಚುರಿ ಸಾಹೇಬರ  ಪಕ್ಕದಲ್ಲಿ ಕುಳಿತು ಎಲ್ಲರ ಸಮ್ಮುಖವೆ ಊಟ ಮುಗಿಸಿ, ತಟ್ಟೆಯನ್ನು ಎಸೆದು ಹೊರಟುಹೋದನು. ಎಲ್ಲವೂ ತುಂಬಾ ವೇಗವಾಗಿ ಸಂಭವಿಸಿದವು, ಚುರಿ ಸಾಹೇಬ ಅವರಿಗೆ ಯಾವುದೇ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

         ಅಶ್ವತ್ಥಾಮನು ಶ್ರೀಕೃಷ್ಣನ ಶತ್ರುಗಳಿಗೆ ಯುದ್ಧದಲ್ಲಿ ಸಹಾಯ ಮಾಡಿದನೆಂದು ಎಲ್ಲರೂ ಅವನನ್ನು ಕೆಟ್ಟದಾಗಿ ಪರಿಗಣಿಸುತ್ತಾರೆ ಆದರೆ ಅವನನ್ನು ನೋಡಿದ ಮತ್ತು ಮಾತಾಡಿದ ಸತೀಶ್ ಚುರಿ ರವರು ಬರೆದ ಪುಸ್ತಕದ 213/14 ಪುಟದಲ್ಲಿ ದ್ರೋಣಾಚಾರ್ಯರು ಇಂದು ಉತ್ತರ ಪ್ರದೇಶದ ಕಾನ್ಪುರದ ಬಳಿಯ ಹಳ್ಳಿಯಲ್ಲಿರುವ ಶ್ರೀ ಖೈರೇಶ್ವರ ದೇವಸ್ಥಾನದ ಬಳಿ ವಾಸಿಸುತ್ತಿದ್ದರಂತೆ . ಈ ಸಾಮಾನ್ಯ ಹಳ್ಳಿಯಲ್ಲಿ ಜನಿಸಿದ ಈ ಅಸಾಮಾನ್ಯ ಅಶ್ವತ್ಥಾಮನು  ಶಸ್ತ್ರಾಸ್ತ್ರಗಳ ನಿಯೋಜನೆಯ ವಿಷಯದಲ್ಲಿ ಕರ್ಣನ ಸರಿಸಾಟಿಯಾಗಿದ್ದನು. 

      ವೇದವಿಜ್ಞಾನ, ಕ್ಷಾತ್ರ ಜ್ಞಾನದಲ್ಲಿ ಅವನು  ವಾಸ್ತವವಾಗಿ ವೇದಾಚೆತ್ಯ ವ್ಯಾಸರಂತಹ ವಿದ್ವಾಂಸನಾಗಿದ್ದನು , ವಾಸ್ತವವಾಗಿ ವ್ಯಾಸರು  ಅಶ್ವತ್ಥಾಮನ ಸಹಾಯದಿಂದಲೆ  ವೇದಗಳನ್ನು ವಿಂಗಡಿಸಿ ರಚಿಸಿದರು ಎಂದು ಹೇಳಿಕಗಳಿವೆ. ಶಕ್ತಿಯಿಂದ ಪರಿಪುರ್ಣತೆಯ ಸಂದರ್ಭದಲ್ಲಿ ಕಾರ್ತವೀರ್ಯ. ಭೀಷ್ಮಾಸಮ  ಭೀಷಣ, ಪರಶುರಾಮನ ಸಮ  ತೇಜಸ್ವಿ, ದ್ರೋಣಸಮಾನ ಅಸ್ತ್ರವಿದ್ಯಾ ವಿಶಾರದ , ಅರ್ಜುನಸಮ ಧನುರ್ಧರ್, ಭೀಮಸಮ ಗಧಾಧರ, ಯಮನ ಸಮ ಭೀಕರ, ಅಗ್ನಿಸಮ  ಜ್ವಲಂತ, ಸಾಗರಸಮ ಬಲಶಾಲಿ, ದುರ್ವಾಸರ ಸಮ ಕೋಪಾವಿಷ್ಟನಿರುವ ಅಶ್ವತ್ಥಾಮನು  ದುರ್ವಾಸಮುನಿಗಳ ವಿದ್ಯಾರ್ಥಿ, ಕೃಷ್ಣ ದ್ವೈಯಪಾಯನ ವ್ಯಾಸರ ಸೇವಕ, ಕೃಪಾಚಾರ್ಯರ ತಂಗಿಯ ಮಗ, ದ್ರೋಣಾಚಾರ್ಯರ ಮಗ-ಶಿಷ್ಯ ಮತ್ತು ಅಂತಿಮವಾಗಿ ಶಿವನ ಅಂಶ. ಹಾಗಾದರೆ ದುಷ್ಟರ ಸಂಗತಿಯಿಂದ ಕೆಟ್ಟವನಾಗಿ ಹೋದ.

         ಒಟ್ಟಾರೆಯಾಗಿ, ಅಶ್ವತ್ಥಾಮ ಇನ್ನೂ ಜೀವಂತವಾಗಿದ್ದಾನೆ ಮತ್ತು ಅವನನ್ನು ಅನೇಕರು ನೋಡಿದ್ದಾರೆ, ಆದರೂ ಅನೇಕ ಗಣ್ಯರು ನೋಡಿದ ಬಗ್ಗೆ ಪ್ರಮಾಣ ಸ್ವೀಕರಿಸಿದರೂ ಇಲ್ಲಿಯವರೆಗೆ ಯಾರೂ ಅವರ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಅಶ್ವತ್ಥಮಾ ಇನ್ನೂ ಒಡೆಯಲಾಗದ ಒಗಟೆ ಆಗಿದ್ದಾನೆ. 

                       .....ವಿವಿಧ ಮೂಲಗಳಿಂದ 


No comments:

Post a Comment