Saturday, April 23, 2022

MORADA BAAGINA ಮೊರದ ಬಾಗಿಣ

MORADA BAAGINA  ಮೊರದ ಬಾಗಿಣ

ಪಂಚಾಂಗದ ಪ್ರಕಾರ ಆರನೇ ಮಾಸ ಭಾದ್ರಪದ ಮಾಸ. ಈ ತಿಂಗಳಿನ ಹುಣ್ಣಿಮೆಯಂದು(ಸಾಮಾನ್ಯವಾಗಿ) ಪೂರ್ವ ಭಾದ್ರಪದ ಅಥವಾ ಉತ್ತರ ಭಾದ್ರಪದ ನಕ್ಷತ್ರ ಬರುವುದರಿಂದ ಈ ಮಾಸಕ್ಕೆ ಭಾದ್ರಪದ ಮಾಸ ಎಂದು ಹೆಸರು ಬಂದಿದೆ. ವೇದಗಳಲ್ಲಿ ಈಷ ಎಂಬ ಹೆಸರಿದೆ.

ಈ ಮಾಸದ ಅಧಿಪತಿ ದೇವತೆ ಹೃಷಿಕೇಶ. ಇವರ ರೂಪವನ್ನು ಶ್ರೀ ತತ್ವನಿಧಿಯಲ್ಲಿ ವರ್ಣಿಸಲಾಗಿದೆ. ನಾಲ್ಕುಮುಖ, ಎಂಟು ಭುಜಗಳನ್ನುಅಧಿಪತಿಯೂ ಹೊಂದಿರುತ್ತಾನೆ. ಶ್ರೇಷ್ಠವಾದ ಹಂಸದ ಮೇಲೆ ಕುಳಿತಿರುವ ಇವನು ಸುವರ್ಣವನ್ನು ಹೊಂದಿರುತ್ತಾನೆ ಎನ್ನುವು ವರ್ಣನೆ ಇದೆ. ಭಾದ್ರಪದಮಾಸ ದೇವತಾ ಕಾರ್ಯಗಳಿಗೆ ಮತ್ತು ಪಿತೃದೇವತೆಗಳಿಗೆ ಸಮರ್ಪಿತವಾದ ಅರ್ಥಪೂರ್ಣವಾದ ಮಾಸ.                                                          

ಪರ್ವತರಾಜನ ಮಗಳು ಗಿರಿಜಾ ಹಿಮಾಲಯದಲ್ಲಿ ಶಿವನನ್ನೇ ಪತಿಯಾಗಿ ಪಡೆಯುವುದಕ್ಕೆ ಘೋರ ತಪಸ್ಸು ಮಾಡುತ್ತಾಳೆ. ಗೌರಿಯ ಅದಮ್ಯ ಪ್ರೀತಿಗೆ ಒಲಿದ ಶಂಕರ ಭೂಲೋಕದಲ್ಲಿ ಗೌರಿಯನ್ನು ವರಿಸುತ್ತಾನೆ. ಗಿರಿಜಾ ಕಲ್ಯಾಣವಾದ ನಂತರ ಕೈಲಾಸದಲ್ಲಿ ನೆಲೆಗೊಳ್ಳುತ್ತಾಳೆ. ಇವಳಿಗೆ ‘ಭೂಲೊಕವೇ ತವರು ಮನೆ. ಹೀಗಾಗಿ ಅವರು ಮನೆಯಲ್ಲಿ ಪ್ರೀತಿಗಾಗಿ ವರ್ಷಕ್ಕೊಮ್ಮೆ ಪೂಜೆ ಸ್ವೀಕರಿಸಿ ಹೆಣ್ಣು ಮಕ್ಕಳಿಂದ ಬಾಗಿಣ ಪಡೆದು ಹೋಗುವ ನಂಬಿಕೆಯಾಗಿದೆ.

ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯದಂದು ಸ್ವರ್ಣಗೌರಿ ವ್ರತ, ಚೌತಿಯ ದಿನ ಗಣಪತಿ ಹಬ್ಬ ಮತ್ತು ಪಂಚಮಿ ದಿನ ಋಷಿ ಪಂಚಮಿ ವ್ರತವನ್ನು ಆಚರಿಸಲಾಗುತ್ತದೆ. ತೃತೀಯಾ ತಿಥಿಯೇ ಯಾಕೆ ಸ್ವರ್ಣಗೌರೀ ವ್ರತ?

ಈ ಪ್ರಶ್ನೆಗೆ ಶ್ರೀ ವರಾಹದೇವರು ವರಾಹ ಪುರಾಣದಲ್ಲಿ ನಮಗೆ ಉತ್ತರ ನೀಡಿದ್ದಾರೆ. ಪರಮಾತ್ಮ ಒಂದೊಂದು ತಿಥಿಯನ್ನು ಒಬ್ಬೊಬ್ಬ ದೇವತೆಗೆ ನೀಡಿದಾಗ ತನ್ನ ಪ್ರೀತಿಯ ತಂಗಿಯಾದ ಪಾರ್ವತಿಗೆ (ಪರಮಾತ್ಮನ ಯಜ್ಞ, ಕಪಿಲ ರೂಪಗಳಿಗೆ ಸತೀರೂಪದ ಗೌರೀ ದೇವಿ ತಂಗಿಯಾಗಬೇಕು. ಯಜ್ಞ ಮತ್ತು ಕಪಿಲನ ಅಮ್ಮಂದಿರು ಸತಿಯ ಅಮ್ಮ ಪ್ರಸೂತಿಯ ಅಕ್ಕಂದಿರು)

“ಪ್ರಾದಾಂ ತೃತೀಯಾಂ ಪಾರ್ವತ್ಯೈ ಗಣೇಶಾಯ ಚತುರ್ಥಿಕಾಮ್” ತನ್ನ ತಂಗಿಯಾದ ಪಾರ್ವತಿಗೆ ತೃತೀಯಾ ತಿಥಿ ನೀಡಿದ ಕಾರಣಕ್ಕೇ, ಕಾರ್ತೀಕ ಶುದ್ಧ ತೃತೀಯಾದಂದು (ದೀಪಾವಳಿಯ ನಂತರ) ಅಣ್ಣತಮ್ಮಂದಿರು ಅಕ್ಕತಂಗಿಯರ ಮನೆಗೆ ಹೋಗಿ ಅವರ ಕೈಯಿಂದ ಮಾಡಿದ ಅಡಿಗೆಯನ್ನು ಉಂಡು ಅವರಿಗೆ ಉಡುಗೊರೆ ನೀಡಿ ಬರುತ್ತಾರೆ. ಒಟ್ಟಾರೆ ತೃತೀಯಾ ತಿಥಿ ಪಾರ್ವತೀದೇವಿಯ ಅಧೀನ. ಪ್ರತೀಮಾಸದ ತೃತೀಯಾದಂದೂ ಗೌರಿಯ ಆರಾಧನೆಯನ್ನು ವಿಶೇಷವಾಗಿ ಮಾಡಬೇಕು. ಭಾದ್ರಪದ ಮಾಸದ ತೃತೀಯಾದಂದು ಸ್ವರ್ಣಗೌರೀವ್ರತವನ್ನು ಆಚರಿಸಬೇಕು.

ಗೌರಿ ಹಬ್ಬದಲ್ಲಿ ಮುತ್ತೈದೆಯರು ಮರದ ಬಾಗಿಣ ನೀಡುವ ಸಂಪ್ರಾಯವಿದೆ.

ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಮತ್ತು ಸುಮಂಗಲಿತನ ಯಾವಾಗಲೂ ಇರಲಿ ಅನ್ನುವ ಕಾರಣಕ್ಕೆ ೧೬ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ..

ಮರದ ಬಾಗಿನಲ್ಲಿ ಹಾಕುವ ಹದಿನಾರು ಪದಾರ್ಥಗಳು 16 ಮುತ್ತೈದೆಯರು ಅಂದರೆ ಷೋಡಷ ಲಕ್ಷ್ಮಿಯರನ್ನು ಸೂಚಿಸುತ್ತವೆ. ಅವುಗಳ ವಿವರ ಇಲ್ಲಿದೆ:

1. ಅರಿಶಿನ : ಗೌರಿದೇವಿ 2. ಕುಂಕುಮ: ಮಹಾಲಕ್ಷ್ಮಿ 3. ಸಿಂಧೂರ: ಸರಸ್ವತಿ 4. ಕನ್ನಡಿ: ರೂಪಲಕ್ಷ್ಮೀ 5. ಬಾಚಣಿಗೆ: ಶೃಂಗಾರಲಕ್ಷ್ಮೀ, 6. ಕಾಡಿಗೆ: ಲಜ್ಜಾಲಕ್ಷ್ಮೀ 7. ಅಕ್ಕಿ: ಶ್ರೀಲಕ್ಷ್ಮೀ 8. ತೊಗರಿಬೇಳೆ: ವರಲಕ್ಷ್ಮೀ 9. ಉದ್ದಿನಬೇಳೆ: ಸಿದ್ದಲಕ್ಷ್ಮೀ 10. ತೆಂಗಿನಕಾಯಿ: ಸಂತಾನಲಕ್ಷ್ಮೀ 11. ವೀಳ್ಯದ ಎಲೆ: ಧನಲಕ್ಷ್ಮೀ ,12. ಅಡಿಕೆ: ಇಷ್ಟಲಕ್ಷ್ಮೀ, 13. ಫಲ (ಹಣ್ಣು) : ಜ್ಞಾನಲಕ್ಷ್ಮೀ 14. ಬೆಲ್ಲ: ರಸಲಕ್ಷ್ಮೀ, 15. ವಸ್ತ್ರ: ವಸ್ತ್ರಲಕ್ಷ್ಮೀ, 16. ಹೆಸರುಬೇಳೆ: ವಿದ್ಯಾಲಕ್ಷ್ಮೀ .

ಷೋಡಶ ಲಕ್ಷ್ಮೀಯರು:

ಮುತ್ತ್ತೈದೆ ದೇವತೆಯರು ೧೬ ಜನರು. ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ.

1.ಗೌರಿ, 2,ಪದ್ಮ, 3. ಶುಚಿ, 4. ಮೇಧಾ, 5. ಸಾವಿತ್ರಿ, 6. ವಿಜಯಾ, 7. ಜಯಾ, 8. ದೇವಸೇನಾ, 9. ಸಾಹಾ, 10. ಮಾತರಲೋಕಾ 11. ಮಾತಾರಾ, 12. ಶಾಂತೀ, 13. ಪೃಥ್ವಿ, 14. ಧೃತೀ, 15. ತುಷ್ಟೀ, 16. ಸ್ವಧಾದೇವಿ..

ಈ ೧೬ ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು..ಮರದ ಬಾಗಿಣ ಕೊಡುವಾಗ ಈ ಕೆಳಕಂಡ ಮಂತ್ರವನ್ನು ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿಣ ಕೊಟ್ಟರೆ, ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು ಹೇಳಿಕೆಯಿದೆ.

 “ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತಿ ನಿರಾಮುಖಿ ಮಯಾದತ್ತಾಣಿ ಸೂರ್ಪಾಣಿ ಗೃಹಾಣಿ ಮಾನಿ ಜಾನಕಿ’.

ಗೌರಿಗೆ ಪೂಜೆಯ ನಂತರ ಮುತ್ತೈದೆಯರನ್ನು ಪೂರ್ವ ಅಥವ ಪಶ್ಚಿಮದ ಕಡೆಗೆ ಮುಖ ಮಾಡಿ ಕುಳ್ಳಿರಿಸಿ ಅವರ ಅಂಗೈ, ಅಂಗಾಲುಗಳಿಗೆ ಅರಿಶಿನದ ನೀರು ಹಚ್ಚಿ, ಕುಂಕುಮ ಹೂವು ಕೊಟ್ಟು ಬಾಗಿಣ ಮುಚ್ಚಿ ಒಂದು ಉದ್ದರಣೆ ನೀರು, ಅಕ್ಷತೆ ಹಾಕಿ ನಮ್ಮ ಸೆರಗನ್ನು ಅದರ ಮೇಲಿಟ್ಟು ಕೊಡಬೇಕು.

ಬಾಗಿಣ ತೆಗೆದುಕೊಳ್ಳುವ ಮುತ್ತೈದೆ ಸಹ ತಮ್ಮ ಸೀರೆಯ ಸೆರಗನ್ನು ಭುಜದ ಮೇಲಿಂದ ಮುಂದಕ್ಕೆ ತಂದು ಎರಡೂ ಕೈಗಳಿಂದ ಬಾಗಿಣವನ್ನು ಹಿಡಿದುಕೊಂಡು ಅಡ್ಡಡ್ಡ ಉದ್ದುದ್ದ ಅಲ್ಲಾಡಿಸಬೇಕು. ಮೇಲಿನ ಮುಚ್ಚಳವಿರುವ ಮೊರವನ್ನು ತುಂಬಿರುವ ಮೊರದ ಕೆಳಕ್ಕೆ ಇಟ್ಟು ಎರಡೂ ಮೊರಗಳನ್ನು ಮತ್ತೆ ಅಡ್ಡ ಉದ್ದ ಅಲ್ಲಾಡಿಸಿ ಕೊಡಬೇಕು.

ಸೀರೆ ಸೆರಗಿನಲ್ಲಿ_ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ..

ಮೊರದ ಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..

ದಾನಗಳು ಮತ್ತು ಫಲಗಳು

೧. ಅರಿಸಿನ ದಾನ :

ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ.. ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ.. ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

೨. ಕುಂಕುಮ ದಾನ : ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ.. ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ.. ದೃಷ್ಟಿದೋಷ ನಿವಾರಣೆ ಆಗುತ್ತದೆ..ಕೋಪ, ಹಠ,ಕಮ್ಮಿ ಆಗುತ್ತದೆ..

೩. ಸಿಂಧೂರ ದಾನ: ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ, ಋಣಭಾದೆ, ನಿವಾರಣೆ..ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

೪. ಕನ್ನಡೀ(ರೂಪಲಕ್ಷ್ಮೀ) : ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..

೫. ಬಾಚಣಿಗೆ : ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..

೬. ಕಾಡಿಗೆ : ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.

೭. ಅಕ್ಕಿ :ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌ ಆರೋಗ್ಯ ಭಾಗ್ಯವಾಗುತ್ತದೆ..ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..

೮. ತೊಗರಿಬೇಳೆ : ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌.ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು, ಸರ್ಪದೋಷಗಳು ನಿವಾರಣೆಯಾಗುತ್ತದೆ..ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..ರಕ್ತದೊತ್ತಡ (B.P) normal ಆಗಿ ಆರೋಗ್ಯವಂತರಾಗುತ್ತಾರೆ..ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..

೯. ಉದ್ದಿನ ಬೇಳೆ : ಪಿತೃಶಾಪ ನಿವಾರಣೆಯಾಗುತ್ತದೆ..ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..ಅಪಮೃತ್ಯುಗಳು ನಿವಾರಣೆಯಾಗುತ್ತದೆ..ಅಗೋಚರ ರೋಗಗಳು ನಿವಾರಣೆಯಾಗುತ್ತದೆ..

ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..

೧೦. ತೆಂಗಿನಕಾಯಿ : ಇಷ್ಟಾರ್ಥಸಿದ್ಧಿಯಾಗುತ್ತದೆ.. ,ತೆಂಗಿನಕಾಯಿಗೆ “ಇಷ್ಟಾರ್ಥ ಪ್ರದಾಯಿನಿ” ಅಂತನೂ ಹೆಸರಿದೆ..ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ ” ತೆಂಗಿನಕಾಯಿ ” ಮಾಡಲೇಬೇಕು..ಸರ್ವಕಾರ್ಯ ವಿಜಯವಾಗುತ್ತದೆ.. ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..

೧೧. ವೀಳ್ಯದೆಲೆ : ವೀಳ್ಯದೆಲೆಗೆ ದೇವತೆ “ಧನಲಕ್ಷ್ಮೀ”.!ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ.. ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌

೧೨. ಅಡಿಕೆ :ಅಡಿಕೆಗೆ ಸಂಸ್ಕೃತದಲ್ಲಿ ” ಪೂಗೀಫಲ” ಎಂದು ಹೆಸರು..ಅಡಿಕೆಗೆ ಅಭಿಮಾನ ದೇವತೆ “ಇಷ್ಟಲಕ್ಷ್ಮೀ”.!ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಹಾಕಿಕೊಳ್ಳುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತದೆ.. ಬರೀ ಅಡಿಕೆಯನ್ನು ತಿಂದರೆ ” ಬ್ರಹ್ಮಹತ್ಯಾ” ದೋಷ ಬರುವುದು.ಆದ್ದರಿಂದ ಬರೀ ಅಡಿಕೆ ತಿನ್ನಬಾರದು..

೧೩. ಫಲದಾನ : ಫಲದಾನಕ್ಕೆ ಜ್ಞನಲಕ್ಷ್ಮೀ ಅಧಿಪತಿ..ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭವಾಗಿ ನಡೆಯುತ್ತದೆ.‌.

ದೇವಿ ದೇವಾಲಯಗಳಲ್ಲಿ ಹಣ್ಣು ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ದಾನ ಮಾಡಿದರೆ , ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ..

೧೪. ಬೆಲ್ಲ (ರಸಲಕ್ಷ್ಮೀ) : ಬೆಲ್ಲದ ಅಭಿಮಾನ ದೇವತೆ “ರಸಲಕ್ಷ್ಮೀ”..

ಬೆಲ್ಲದಲ್ಲಿ ” ಬ್ರಹ್ಮದೇವರು” , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ..ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ..ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ..ಜೀವನದಲ್ಲಿ ಉತ್ತಮ ಮಟ್ಟಕ್ಕೆ ಅಭಿವೃದ್ಧಿ ಆಗುತ್ತಾರೆ..

೧೫. “ವಸ್ತ್ರಲಕ್ಷ್ಮೀ” : ಸುಮಂಗಲಿಯರು ಪ್ರತ್ಯಕ್ಷ “ಸ್ತ್ರೀದೇವತೆ” ಗಳ ಸ್ವರೂಪ ಹಾಗೂ ಕುಲದೇವತೆಯ ಸ್ವರೂಪ..ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿಣ ಕೊಡುವಾಗ ವಸ್ತ್ರದಾನ ಮಾಡಬೇಕು..ಹೀಗೆ ಮಾಡುವದರಿಂದ “ವಸ್ತ್ರ” ದಾರಿದ್ರ್ಯ ನಿವಾರಣೆಯಾಗುತ್ತದೆ..ಕುಲದೇವತೆ ತೃಪ್ತಿಯಾಗುತ್ತದೆ..ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ.. ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತದೆ..

೧೬. “ಹೆಸರುಬೇಳೆ” : ವಿದ್ಯಾಲಕ್ಷ್ಮೀ -ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ. ವಿದ್ಯೆ ಎಂದರೆ “ಸರಸ್ವತೀ”, ಲಕ್ಷ್ಮೀ ಎಂದರೆ ” ಶ್ರೀ ಮಹಾಲಕ್ಷ್ಮೀ” ಎಂದು ಅರ್ಥ..ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹವಾಗುತ್ತದೆ..ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ..

ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ..ದೇವಿಗೆ “ಹೆಸರುಬೇಳೆ” ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ..ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ.‌ Gastric, ಗರ್ಭಕೋಶದ ತೊಂದರೆಗಳು ಕಡಿಮೆಯಾಗುತ್ತವೆ.

ಮರದ ಬಾಗಿಣ ಮತ್ತು ಮಹತ್ಬಗಳು..

ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು., Items to be put in the Bhagina.

೧. ಅರಿಸಿನ : ಗೌರಿದೇವೀ. Turmeric : Gowri Devi

೨. ಕುಂಕುಮ : ಮಹಾಲಕ್ಷ್ಮೀ Kumkum : Maha Lakshmi

೩. ಸಿಂಧೂರ : ಸರಸ್ವತೀ Sindoor : Saraswathi

೪. ಕನ್ನಡಿ : ರೂಪಲಕ್ಷ್ಮೀ. Mirror : Roopa Lakshmi

೫. ಬಾಚಣಿಗೆ : ಶೃಂಗಾರಲಕ್ಷ್ಮೀ. Comb: Sringara Lakshmi

೬. ಕಾಡಿಗೆ : ಲಜ್ಜಾಲಕ್ಷ್ಮೀ. : Kajal : Lajja Lakshmi

೭. ಅಕ್ಕಿ : ಶ್ರೀ ಲಕ್ಷ್ಮೀ. Rice : Shree Lakshmi

೮. ತೊಗರಿಬೇಳೆ : ವರಲಕ್ಷ್ಮೀ. Toor Dal : Vara Lakshmi

೯. ಉದ್ದಿನಬೇಳೆ : ಸಿದ್ದಲಕ್ಷ್ಮೀ. Urda Dal : Siddha Lakshmi

೧೦. ತೆಂಗಿನಕಾಯಿ : ಸಂತಾನಲಕ್ಷ್ಮೀ. Coconut: Santana Lakshmi

೧೧. ವೀಳ್ಯದ ಎಲೆ : ಧನಲಕ್ಷ್ಮೀ. Bettel Leaves : Dhana Lakshmi

೧೨. ಅಡಿಕೆ : ಇಷ್ಟಲಕ್ಷ್ಮೀ. Bettel Nut – Issta Lakshmi

೧೩. ಫಲ(ಹಣ್ಣು) : ಜ್ಞಾನಲಕ್ಷ್ಮೀ. Fruit – Gyana Lakshmi

೧೪. ಬೆಲ್ಲ : ರಸಲಕ್ಷ್ಮೀ. Jaggery : Rasa Lakshmi

೧೫. ವಸ್ತ್ರ : ವಸ್ತ್ರಲಕ್ಷ್ಮೀ. Cloth : Vasthra Lakshmi

೧೬. ಹೆಸರುಬೇಳೆ : ವಿದ್ಯಾಲಕ್ಷ್ಮೀ. Moong dal : Vidhya Lakshmi

ಮುತೈದೆ ದೇವತೆಯರು೧೬ ಜನರು. ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..

ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..

ಸೀರೆ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ..

ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಕರೆಯುತ್ತಾರೆ..

ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..

ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,

ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ೧೬ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ

ಈ ೧೬ ದೇವತೆಗಳು ನಿತ್ಯಸುಮಂಗಲಿಯರು..

ಈ ೧೬ ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು


ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ..

೧೬ ಅರಿಸಿನ ದಾರ, ೧೬ ಗಂಟುಗಳು, ೧೬ ಬಾಗಿನ, ೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ..

ದಾನಗಳು ಮತ್ತು ಫಲಗಳು..

ಅರಿಸಿನ ದಾನ : ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..

ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..

ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..

೨. ಕುಂಕುಮ ದಾನ : ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..

ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..

ದೃಷ್ಟಿದೋಷ ನಿವಾರಣೆ ಆಗುತ್ತದೆ..

ಕೋಪ, ಹಠ,ಕಮ್ಮಿ ಆಗುತ್ತದೆ..

೩. ಸಿಂಧೂರ ದಾನ ; ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..

ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..

ವಿವಿಧ ಮೂಲಗಳಿಂದ ಸಂಗ್ರಹ.


No comments:

Post a Comment